Homeಕರ್ನಾಟಕಜಂತರ್‌ಮಂತರ್‌‌ನಲ್ಲಿ ಹೋರಾಟ ನಡೆಸಲು ಕುಸ್ತಿಪಟುಗಳಿಗೆ ಅವಕಾಶ ನೀಡುವುದಿಲ್ಲ: ದೆಹಲಿ ಪೊಲೀಸ್

ಜಂತರ್‌ಮಂತರ್‌‌ನಲ್ಲಿ ಹೋರಾಟ ನಡೆಸಲು ಕುಸ್ತಿಪಟುಗಳಿಗೆ ಅವಕಾಶ ನೀಡುವುದಿಲ್ಲ: ದೆಹಲಿ ಪೊಲೀಸ್

- Advertisement -
- Advertisement -

ಗಲಭೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾನಿರತ ಕುಸ್ತಿಪಟುಗಳ ಮೇಲೆ ಪ್ರಕರಣಗಳನ್ನು ದಾಖಲಿಸಿದ ಒಂದು ದಿನದ ನಂತರ ದೆಹಲಿ ಪೊಲೀಸರು ಪ್ರತಿಕ್ರಿಯಿಸಿದ್ದು, “ಜಂತರ್‌ ಮಂತರ್‌ನಲ್ಲಿ ಕುಸ್ತಿಪಟುಗಳು ಹೋರಾಟ ನಡೆಸಲು ಅವಕಾಶ ನೀಡುವುದಿಲ್ಲ” ಎಂದಿದ್ದಾರೆ.

ಪೊಲೀಸರು ನಿನ್ನೆ ಮತ್ತೆ ಮತ್ತೆ ಕೇಳಿಕೊಂಡರೂ ಪ್ರತಿಭಟನಾಕಾರರು ಉನ್ಮಾದದಲ್ಲಿ ಕಾನೂನನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಪ್ರತಿಭಟನೆಗಾಗಿ ನಿಯೋಜಿತವಾದ ದೆಹಲಿಯ ಜಂತರ್‌ ಮಂತರ್‌ನಲ್ಲಿ ಅವರ ಹೋರಾಟವನ್ನು ತಡೆಯಬೇಕಾಯಿತು.

“ನಮ್ಮ ಸತ್ಯಾಗ್ರಹ ಇಲ್ಲಿಯವರೆಗೆ ಸುಗಮವಾಗಿ ನಡೆಯುತ್ತಿದೆ” ಎಂದಿರುವ ಕುಸ್ತಿಪಟುಗಳು, ಗಲಭೆ ಮತ್ತು ಹಿಂಸಾಚಾರದ ಆರೋಪಗಳನ್ನು ನಿರಾಕರಿಸಿದ್ದಾರೆ.

“ಕುಸ್ತಿಪಟುಗಳು ಮುಂದೇನಾದರೂ ಮತ್ತೆ ಧರಣಿ ನಡೆಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿದರೆ, ಜಂತರ್ ಮಂತರ್ ಹೊರತುಪಡಿಸಿ ಯಾವುದೇ ಸೂಕ್ತ, ಅಧಿಸೂಚಿತ ಸ್ಥಳಗಳಲ್ಲಿ ಅವರನ್ನು ಅನುಮತಿಸಲಾಗುವುದು” ಎಂದು ನವದೆಹಲಿಯ ಉಪ ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ದಾರೆ.

ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಅವರನ್ನು ಪ್ರತಿಭಟನೆ ವೇಳೆ ಭಾನುವಾರ ದೆಹಲಿ ಪೊಲೀಸರು ಬಂಧಿಸಿದ್ದರು. ಕುಸ್ತಿಪಟುಗಳು ಹೊಸ ಸಂಸತ್ ಭವನದತ್ತ ಮೆರವಣಿಗೆ ನಡೆಸಲು ಪ್ರಯತ್ನಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಪೊಲೀಸರು ಮತ್ತು ಕುಸ್ತಿಪಟುಗಳ ನಡುವೆ ನೂಕಾಟ ನಡೆದಿತ್ತು. ಕುಸ್ತಿಪಟುಗಳನ್ನು ಬಲವಂತವಾಗಿ ಪೊಲೀಸರು ಬಂಧನ ಮಾಡಿದ್ದರು. ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಹಾಕಿದ್ದ ತಾತ್ಕಾಲಿಕ ಟೆಂಟ್‌ಗಳನ್ನೂ ತೆರವು ಮಾಡಿದರು.

ಐಪಿಸಿ ಸೆಕ್ಷನ್ 147 (ಗಲಭೆ), 149 (ಕಾನೂನುಬಾಹಿರ ಸಭೆ), 186 (ಕರ್ತವ್ಯನಿರತ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು), 188 (ಸಾರ್ವಜನಿಕ ಸೇವಕರು ಘೋಷಿಸಿದ ಆದೇಶಕ್ಕೆ ಅಸಹಕಾರ), 332 (ಸಾರ್ವಜನಿಕ ಸೇವಕರ ಕರ್ತವ್ಯ ತಡೆದು ಸ್ವಯಂಪ್ರೇರಣೆಯಿಂದ ಅಡ್ಡಿ) ಮತ್ತು ಪಿಡಿಪಿಪಿ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಕುಸ್ತಿಪಟುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿರಿ: ಕುಸ್ತಿಪಟುಗಳಿಗೆ ಸವಾಲಾಗಿರುವ ‘ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌’ ಯಾರು? ಆತನ ಹಿನ್ನಲೆ, ಪ್ರಭಾವವೇನು?

ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಪ್ರತಿಕ್ರಿಯಿಸಿ, “ವೀಡಿಯೊದಲ್ಲಿ ಎಲ್ಲವೂ ದಾಖಲಾಗಿದೆ. ಒಬ್ಬ ಕುಸ್ತಿಪಟುವನ್ನು ತಡೆಯಲು 20-30 ಮಂದಿ ಕಾನ್‌ಸ್ಟೆಬಲ್‌ಗಳು ಇರುವಾಗ, ನಾವು ಯಾವುದೇ ರೀತಿಯ ಗಲಭೆಗಳನ್ನು ಹೇಗೆ ಮಾಡಬಹುದು?” ಎಂದು ಪ್ರಶ್ನಿಸಿದ್ದಾರೆ.

“ದಯವಿಟ್ಟು ನಮ್ಮನ್ನು ಕರೆದುಕೊಂಡು ಹೋಗಬೇಡಿ ಎಂದು ನಾವು ಅವರಿಗೆ ಹೇಳಲು ಪ್ರಯತ್ನಿಸುತ್ತಿದ್ದೇವೆ. ನಾವು ಹಾಗೆಯೇ ನಡೆದುಕೊಳ್ಳಲು ಬಯಸುತ್ತೇವೆ. ಶಾಂತಿಯುತ ಮೆರವಣಿಗೆಯ ವೇಳೆ ಯಾರೂ ನಮ್ಮ ಮಾತು ಕೇಳಲಿಲ್ಲ. ನಮ್ಮನ್ನು ಬಲವಂತವಾಗಿ ಬಸ್ಸಿನೊಳಗೆ ಎಳೆದೊಯ್ದರು, ಅದರಿಂದಾಗಿ ನಮಗೆ ಗಾಯಗಳಾದವು. ನಾವು ಯಾವುದೇ ಗಲಭೆ ಮಾಡಿಲ್ಲ, ಯಾವುದೇ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿಲ್ಲ, ನಾವು ಬ್ಯಾರಿಕೇಡಿಂಗ್ ಅನ್ನು ಎಳೆದಿಲ್ಲ ಅಥವಾ ತಳ್ಳಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ನಾವು ಮೊದಲ ದಿನದಿಂದಲೂ ಶಾಂತಿಯುತ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಹೊಸ ಸಂಸತ್ ಭವನದ ಎದುರು ಹಮ್ಮಿಕೊಳ್ಳಲಾಗಿದ್ದ ಹೋರಾಟಕ್ಕೆ ಹೋಗಲು ಬಿಡುವಂತೆ ಅವರಲ್ಲಿ ಮನವಿ ಮಾಡಿದೆವು. ಆದರೆ ನಮಗೆ ಹೋಗಲು ಅವಕಾಶ ನೀಡಲಿಲ್ಲ” ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...