Homeರಂಜನೆಕ್ರೀಡೆಬ್ರಿಜ್‌ಭೂಷಣ್ ಆಪ್ತ WFI ಅಧ್ಯಕ್ಷರಾಗದಂತೆ ತಡೆಯಲು ಶಾ ಭೇಟಿಗೆ ಮುಂದಾದ ಕುಸ್ತಿಪಟುಗಳು

ಬ್ರಿಜ್‌ಭೂಷಣ್ ಆಪ್ತ WFI ಅಧ್ಯಕ್ಷರಾಗದಂತೆ ತಡೆಯಲು ಶಾ ಭೇಟಿಗೆ ಮುಂದಾದ ಕುಸ್ತಿಪಟುಗಳು

- Advertisement -
- Advertisement -

ಲೈಂಗಿಕ ಕಿರುಕುಳದ ಆರೋಪಿ, ಬಿಜೆಪಿ ಸಂಸದ ಬ್ರಿಜ್‌ಭೂಷಣ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರು ಭಾರತೀಯ ಕುಸ್ತಿ ಫೆಡರೇಶನ್‌ನ (WFI) ಅಧ್ಯಕ್ಷರಾಗದಂತೆ ಮಾಡಲು ಕುಸ್ತಿಪಟುಗಳಾದ ಬಜರಂಗ್ ಫೆಡರೇಷನ್‌ನ ಬಜರಂಗ್ ಪೂನಿಯಾ, ವಿನೇಶಾ ಫೋಗಟ್ ಹಾಗೂ ಸಾಕ್ಷಿ ಮಲಿಕ್‌ ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

WFI ಅಧ್ಯಕ್ಷ ಸ್ಥಾನಕ್ಕೆ ಶನಿವಾರ (ಆಗಸ್ಟ್ 12ರಂದು) ಚುನಾವಣೆ ನಡೆಯಲಿದ್ದು, ಸಂಜಯ್ ಸಿಂಗ್ ಮತ್ತು 2010ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೊರಾಣ್ ನಡುವೆ ನೇರ ಪೈಪೋಟಿ ಇದೆ.

ಬಿಜೆಪಿ ಸಂಸದ ಹಾಗೂ WFIನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಎರಡು ತಿಂಗಳು ಪ್ರತಿಭಟನೆ ನಡೆಸಿದ್ದರು. ಆರೋಪ ಮಾಡಿರುವ ಆರು ಮಹಿಳಾ ಕುಸ್ತಿಪಟುಗಳು, ಅನಿತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅನಿತಾ ಅವರು ಬ್ರಿಜ್‌ ಭೂಷಣ್‌ ವಿರುದ್ಧದ ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಾಗಿದ್ದಾರೆ.

ಕುಸ್ತಿಪಟುಗಳು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಗುರುವಾರ ಬೆಳಿಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗೃಹ ಸಚಿವ ಅಮಿತ್‌ ಶಾ ಅವರನ್ನೂ ಭೇಟಿ ಮಾಡುವ ವಿಶ್ವಾಸದಲ್ಲಿದ್ದಾರೆ ಎಂದು ಬಜರಂಗ್, ವಿನೇಶಾ ಮತ್ತು ಸಾಕ್ಷಿ ಅವರ ನಿಕಟವರ್ತಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

”ಅಮಿತ್ ಶಾ ಅವರು ಕುಸ್ತಿಪಟುಗಳಿಗೆ ಇಂದು ಸಮಯ ನೀಡುವ ವಿಶ್ವಾಸವಿದೆ. ಸಂಸತ್ ಅಧಿವೇಶನದ ಬಳಿಕ ಗ್ರಹ ಸಚಿವರು ಕುಸ್ತಿಪಟುಗಳನ್ನು ಭೇಟಿ ಮಾಡಲಿದ್ದಾರೆ. ಬಿಜ್‌ಭೂಷಣ್ ಬಣದ ಸಂಜಯ್ ಸಿಂಗ್ WFI ಅಧ್ಯಕ್ಷರಾಗುವ ಬಗ್ಗೆ ಕುಸ್ತಿಪಟುಗಳು ತಮ್ಮ ಕಳವಳವನ್ನು ಮನವರಿಕೆ ಮಾಡಿಕೊಡಲಿದ್ದಾರೆ ಬ್ರಿಜ್‌ಭೂಷಣ್ ಸಂಬಂಧಿಕರು, ಆಪ್ತರು WFI ಅಧ್ಯಕ್ಷ ಸ್ಥಾನದ  ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಬೇಡಿಕೆ ಇಡಲಿದ್ದಾರೆ” ಎಂದು ತಿಳಿಸಿದ್ದಾರೆ.

”ಸಂಜಯ್ ಸಿಂಗ್ ಅವರು ಬಿಜೆಪಿ ನಾಯಕ ಬ್ರಿಜ್‌ಭೂಷಣ್ ಆಪ್ತರು ಮಾತ್ರವಲ್ಲ. ಅವರ ಉದ್ಯಮದಲ್ಲಿ ಪಾಲುದಾರರೂ ಆಗಿದ್ದಾರೆ. ಹಾಗಾಗಿ ಸಂಜಯ ಅಧ್ಯಕ್ಷರಾದರೆ ಬ್ರಿಜ್‌ಭೂ‍ಣ್ ವಿರುದ್ಧ ಪ್ರತಿಭಟನೆ ನಡೆಸಿದ, ಕುಸ್ತಿಪಟುಗಳಿಗೆ ಹಿನ್ನಡೆಯಾಗಲಿದೆ. ಸಂಜಯ್ ಸಿಂಗ್‌ ಚುನಾವಣೆಗೆ ಸ್ಪರ್ಧಿಸುವುದು ಬ್ರಿಜ್ ಭೂಷಣ್ ಅವರ ಪುತ್ರನೇ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಮ” ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿ ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...