Homeಮುಖಪುಟತಿರುವಳ್ಳೂರು:ಸರಕಾರಿ ಶಾಲೆಯಲ್ಲಿ ಶಿಕ್ಷಕನಿಗೆ ಥಳಿತ

ತಿರುವಳ್ಳೂರು:ಸರಕಾರಿ ಶಾಲೆಯಲ್ಲಿ ಶಿಕ್ಷಕನಿಗೆ ಥಳಿತ

- Advertisement -
- Advertisement -

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನನ್ನು 6ನೇ ತರಗತಿಯ ವಿದ್ಯಾರ್ಥಿಯ ಪೋಷಕರು ಮತ್ತು ಸಂಬಂಧಿಕರು ಥಳಿಸಿರುವ ಘಟನೆ ನಡೆದಿದೆ.

ಹಂಗಾಮಿ ಶಿಕ್ಷಕ ಮೋಹನ್ ಬಾಬು ಮೇಲೆ ಹಲ್ಲೆ ನಡೆಸಲಾಗಿದೆ.ವಿದ್ಯಾರ್ಥಿಗೆ ಹಲ್ಲೆ ಮಾಡಿ ಘಟನೆಯನ್ನು ಮನೆಯಲ್ಲಿ ಹೇಳಿದರೆ ಶಾಲೆಯಿಂದ  ಹೊರಹಾಕುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಶಿಕ್ಷಕನ ಮೇಲೆ ಹಲ್ಲೆ ನಡೆಸಲಾಗಿದೆ.

ಗುರುವರಾಜನ ಕಂಡಿಗೈ ಸರಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಹರಿಹರನ್ ರಾತ್ರಿ 8 ಗಂಟೆಗೆ ಕೈಕಾಲುಗಳು ಊದಿಕೊಂಡು ಮನೆಗೆ ಮರಳಿದ್ದಾನೆ.

ಮರುದಿನ ಶಾಲೆಗೆ ಬಂದ ಹರಿಹರನ್ ಪೋಷಕರು ಮತ್ತು ಸಂಬಂಧಿಕರು, ಬಾಲಕನ ಕೈಕಾಲು ಊದಿಕೊಂಡಿದ್ದು ತಡವಾಗಿ ಮನೆಗೆ ಬಂದಿದ್ದಾನೆ.ಮಗುವಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಬದಲು ಸಂಜೆಯವರೆಗೂ ಶಾಲೆಯ ಆವರಣದಲ್ಲಿ ಕೂರಿಸಲಾಗಿದೆ ಎಂದು ಆರೋಪಿಸಿದರು.

ಊತವನ್ನು ಕಡಿಮೆ ಮಾಡಲು  ಹರಿಹರನ್ ಅವರಿಗೆ ಐಸ್ ತುಂಡನ್ನು ನೀಡಲಾಯಿತು ಮತ್ತು ಗಾಯಕ್ಕೆ ಹಲ್ಲೆ ಕಾರಣ ಎಂದು ಹೇಳಿದರೆ ಶಾಲೆಯಿಂದ ಹೊರ ಹಾಕುವುದಾಗಿ  ಶಿಕ್ಷಕ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಶಾಲೆಯ ಪ್ರಾಂಶುಪಾಲರು ಮೋಹನ್ ಬಾಬು ಅವರನ್ನು ಈ ಕುರಿತು ವಿಚಾರಣೆ  ನಡೆಸಿದಾಗ, ವಿದ್ಯಾರ್ಥಿಯ ಸಂಬಂಧಿಕರು ಅವರನ್ನು ಸುತ್ತುವರೆದು ಅಮಾನುಷವಾಗಿ ಥಳಿಸಿದರು ಮತ್ತು ಚಪ್ಪಲಿಯಿಂದ  ಹಲ್ಲೆ ನಡೆಸಿದ್ದಾರೆ. ಮೋಹನ್ ಬಾಬು ಮೇಲಿನ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೋಹನ್ ಬಾಬು ಅವರನ್ನು ರಕ್ಷಿಸಿ ಜನರನ್ನು ಚದುರಿಸಿದ್ದಾರೆ.

ಇದನ್ನು ಓದಿ: ಮಹಾರಾಷ್ಟ್ರ:ಪತ್ರಕರ್ತನ ಮೇಲೆ ಶಾಸಕನ ಬೆಂಬಲಿಗರಿಂದ ಹಲ್ಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...