Homeಮುಖಪುಟಜನವರಿ ಮೊದಲ ವಾರದಲ್ಲಿ ‘ಕೈ’ ಹಿಡಿಯಲಿರುವ ವೈಎಸ್ಆರ್ ಪುತ್ರಿ! ದೆಹಲಿ ರಾಜಕಾರಣಕ್ಕೆ ಶರ್ಮಿಳಾ?

ಜನವರಿ ಮೊದಲ ವಾರದಲ್ಲಿ ‘ಕೈ’ ಹಿಡಿಯಲಿರುವ ವೈಎಸ್ಆರ್ ಪುತ್ರಿ! ದೆಹಲಿ ರಾಜಕಾರಣಕ್ಕೆ ಶರ್ಮಿಳಾ?

- Advertisement -
- Advertisement -

‘ವೈಎಸ್ಆರ್ ತೆಲಂಗಾಣ’ ಪಕ್ಷದ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರು 2024ರ ಜನವರಿ ಮೊದಲ ವಾರದಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿದೆ ಇದೆ ಎಂದು ಬಲವಾಗಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ, ಶರ್ಮಿಳಾ ಅವರಿಗೆ ಪಕ್ಷದ ಕೇಂದ್ರ ನಾಯಕತ್ವದಲ್ಲಿ ಪ್ರಮುಖ ಸ್ಥಾನ ನೀಡಿ, ಆಂಧ್ರಪ್ರದೇಶದಲ್ಲಿ ನಡೆಯುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುವಂತೆ ಹೇಳಲಾಗಿದೆ ಎಂದು ತಿಳಿದುಬಂದಿದೆ.

ಮುಂದಿನ ವರ್ಷ ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಶರ್ಮಿಳಾ ಕಾಂಗ್ರೆಸ್ ಸೇರಿದರೆ ಅವರು ನೇರವಾಗಿ ತನ್ನ ಸಹೋದರ, ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಎದುರಿಸಬೇಕಾಗುತ್ತದೆ.

2009ರಲ್ಲಿ ಅಂದಿನ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಮರಣದ ನಂತರ, ಅವರ ಮಗ ಜಗನ್ ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ವೈಎಸ್ ಆರ್ ಪತ್ನಿ ವಿಜಯಮ್ಮ ಮತ್ತು ಪುತ್ರಿ ಶರ್ಮಿಳಾ ಆಗ ಜಗನ್ ಪರ ನಿಂತಿದ್ದರು. ತೆಲಂಗಾಣವನ್ನು ಗಮನದಲ್ಲಿಟ್ಟುಕೊಂಡು ಶರ್ಮಿಳಾ ಪಕ್ಷ ಸ್ಥಾಪನೆ ಮಾಡಿದ್ದರು. ವಿಧಾನಸಭಾ ಚುನಾವಣೆಯಿಂದಾಗಿ ಸ್ಥಗಿತಗೊಂಡಿರುವ ಕಾಂಗ್ರೆಸ್‌ನೊಂದಿಗೆ ಆರಂಭಿಕ ವಿಲೀನ ಮಾತುಕತೆ ಡಿಸೆಂಬರ್ ಮೂರನೇ ವಾರದಲ್ಲಿ ಪುನರಾರಂಭವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶರ್ಮಿಳಾ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಧಾನ ಕಾರ್ಯದರ್ಶಿಯಾಗಿ ಅವರನ್ನು ಉತ್ತರದ ಒಂದು ರಾಜ್ಯದ ಉಸ್ತುವಾರಿಯನ್ನಾಗಿ ಮಾಡಲಾಗುವುದು. ಅದರಂತೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಶರ್ಮಿಳಾ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ. ಮುಂಬರುವ ಚುನಾವಣೆಯ ಸಮಯದಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ವಿಜಯವಾಡದಲ್ಲಿ ಎರಡು ಚುನಾವಣಾ ಸಭೆಗಳನ್ನು ನಡೆಸುವಂತೆ ಅವರಿಗೆ ತಿಳಿಸಲಾಗಿದೆ.

ಶರ್ಮಿಳಾ ಅವರಿಗೆ ವಿಶಾಖಪಟ್ಟಣದಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ವಿಜಯವಾಡದಲ್ಲಿ ರಾಹುಲ್ ಗಾಂಧಿ ಸಾಥ್ ನೀಡಲಿದ್ದು, ರಾಯಲಸೀಮಾದಲ್ಲಿ ಮತ್ತೊಂದು ಸಭೆಯನ್ನು ಉದ್ದೇಶಿಸಿ ಮಾತನಾಡಲು ಪಕ್ಷವು ಅವರಿಗೆ ಮನವಿ ಮಾಡಿದ್ದರೂ, ಶರ್ಮಿಳಾ ಇನ್ನೂ ಅಂತಿಮಗೊಳಿಸಿಲ್ಲ ಎನ್ನಲಾಗಿದೆ. ರಾಯಲಸೀಮಾ ಪ್ರದೇಶದಲ್ಲಿರುವ ತನ್ನ ಸಹೋದರ ಜಗನ್ ಅವರ ವೋಟ್ ಬ್ಯಾಂಕ್‌ಗೆ ಧಕ್ಕೆ ತರಲು ಬಯಸುವುದಿಲ್ಲ ಎಂದು ಅವರು ಕಾಂಗ್ರೆಸ್ಸಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಶರ್ಮಿಳಾ ಅವರನ್ನು ತೆಲಂಗಾಣದ ಖಮ್ಮಂ ಕ್ಷೇತ್ರದಿಂದ ಲೋಕಸಭೆಗೆ ಅಥವಾ ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುವ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ; ‘ಮುಟ್ಟು ಅಂಗವೈಕಲ್ಯವಲ್ಲ…’; ವೇತನ ಸಹಿತ ರಜೆಗೆ ವಿರೋಧ ವ್ಯಕ್ತಪಡಿಸಿದ ಸಚಿವೆ ಸ್ಮೃತಿ ಇರಾನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...