Homeಮುಖಪುಟಕ್ಯಾಂಪಸ್‌ನಲ್ಲಿ ಧರಣಿ, ಪ್ರತಿಭಟನೆ ನಿಷೇಧಿಸಿದ ಜೆಎನ್‌ಯು

ಕ್ಯಾಂಪಸ್‌ನಲ್ಲಿ ಧರಣಿ, ಪ್ರತಿಭಟನೆ ನಿಷೇಧಿಸಿದ ಜೆಎನ್‌ಯು

- Advertisement -
- Advertisement -

ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದ ಶೈಕ್ಷಣಿಕ ಕಟ್ಟಡಗಳ (ಅಕಾಡೆಮಿಕ್ ಬಿಲ್ಡಿಂಗ್) 100 ಮೀಟರ್‌ ವ್ಯಾಪ್ತಿಯಲ್ಲಿ ವಾಲ್ ಪೋಸ್ಟರ್‌ ಹಾಕುವುದು, ಧರಣಿ, ಪ್ರತಿಭಟನೆ ನಡೆಸುವುದನ್ನು ನಿಷೇಧಿಸಲಾಗಿದೆ.

ತರಗತಿ ಕೊಠಡಿಗಳು, ಲ್ಯಾಬ್‌, ಅಧ್ಯಕ್ಷರು, ಡೀನ್‌ಗಳು ಮತ್ತು ಇತರ ಪ್ರಮುಖ ಪದಾಧಿಕಾರಿಗಳ ಕಚೇರಿಗಳನ್ನು ಶೈಕ್ಷಣಿಕ ಕಟ್ಟಡಗಳು ಎನ್ನಲಾಗುತ್ತದೆ. ಇಲ್ಲಿ ಪ್ರತಿಭಟಿಸಿದರೆ 20,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಯಾವುದೇ ‘ದೇಶ ವಿರೋಧಿ’ ಕೃತ್ಯ ನಡೆಸಿದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ವಿವಿಯ ಪರಿಷ್ಕೃತ ಮುಖ್ಯ ಪ್ರಾಕ್ಟರ್ ಆಫೀಸ್ (ಸಿಪಿಒ) ಹೊಸ ಕೈಪಿಡಿ ಹೇಳಿದೆ.

ಈ ಹಿಂದೆ, ಹೈಕೋರ್ಟ್ ಆದೇಶದಂತೆ ಉಪಕುಲಪತಿ, ರಿಜಿಸ್ಟ್ರಾರ್ ಮತ್ತು ಪ್ರೊಕ್ಟರ್‌ ಕಚೇರಿಗಳನ್ನು ಹೊಂದಿರುವ ಆಡಳಿತಾತ್ಮಕ ಬ್ಲಾಕ್‌ಗಳ 100 ಮೀಟರ್‌ಗಳ ವ್ಯಾಪ್ತಿಯಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿತ್ತು. ಇದೀಗ ಹೊಸ ಕೈಪಿಡಿಯ ಪ್ರಕಾರ, ಶೈಕ್ಷಣಿಕ ಕಟ್ಟಡಗಳ 100 ಮೀಟರ್‌ ವ್ಯಾಪ್ತಿಯಲ್ಲಿ ಪ್ರತಿಭಟನೆ ನಿರ್ಬಂಧಿಸಲಾಗಿದೆ.

ಅಕ್ಟೋಬರ್‌ನಲ್ಲಿ ಜೆಎನ್‌ಯು ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಕಟ್ಟಡದ ಗೋಡೆಯ ಮೇಲೆ ‘ದೇಶ ವಿರೋಧಿ ಘೋಷಣೆ ಬರೆದ ಘಟನೆ ನಡೆದ ಬಳಿಕ ಹೊಸ ನಿಯಮ ಬಂದಿದೆ. ಕ್ಯಾಂಪಸ್‌ನಲ್ಲಿ ಇಂತಹ ಘಟನೆಗಳ ಪುನರಾವರ್ತಿತವಾಗದಂತೆ ನೋಡಿಕೊಳ್ಳಲು ಸಮಿತಿ ಸ್ಥಾಪಿಸುವುದಾಗಿ ಜೆಎನ್‌ಯು ಆಡಳಿತ ತಿಳಿಸಿದೆ.

ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ (ಜೆಎನ್‌ಯುಎಸ್‌ಯು) ಈ ಹೊಸ ನಿಯಮಗಳನ್ನು ವಿರೋಧಿಸಿದ್ದು, ಇದು ಕ್ಯಾಂಪಸ್‌ನಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಹೊಸ ನಿಯಮ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ.

“ಕೈಪಿಡಿಯಲ್ಲಿ ವಿವರಿಸಿರುವ ಕಟ್ಟುನಿಟ್ಟಿನ ಕ್ರಮಗಳು ದಶಕಗಳಿಂದ ಜೆಎನ್‌ಯು ಅನ್ನು ವ್ಯಾಖ್ಯಾನಿಸಿರುವ ರೋಮಾಂಚಕ ಕ್ಯಾಂಪಸ್ ಸಂಸ್ಕೃತಿಯನ್ನು ಹತ್ತಿಕ್ಕುವ ಗುರಿಯನ್ನು ಹೊಂದಿವೆ. ವಿವಿ ಆಡಳಿತವು ಚೀಫ್ ಪ್ರೊಕ್ಟರ್ ಮ್ಯಾನ್ಯುಯಲ್‌ ಕಚೇರಿಯ ಹೊಸ ಕೈಪಿಡಿಯನ್ನು ತಕ್ಷಣ ಹಿಂಪಡೆಯಬೇಕು” ಜೆಎನ್‌ಯುಎಸ್‌ಯು ಎಂದು ಆಗ್ರಹಿಸಿದೆ.

ಈ ಕುರಿತು ಪ್ರತಿಕ್ರಿಯಿಸಲು ಜೆಎನ್‌ಯು ಕುಲಸಚಿವ ರವಿಕೇಶ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದಿ ಎಕನಾಮಿಕ್‌ ಟೈಮ್ಸ್‌ ಹೇಳಿದೆ.

ಇದನ್ನೂ ಓದಿ: ಕ್ರಿಮಿನಲ್ ವ್ಯಾಪ್ತಿಗೆ ಸಲಿಂಗಕಾಮ, ಸೆಕ್ಸ್‌ ವರ್ಕ್‌? ಸಂಸದೀಯ ಸಮಿತಿ ಸಲಹೆ ತಿರಸ್ಕರಿಸಿದ ಪಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...