Homeಅಂತರಾಷ್ಟ್ರೀಯಝಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ನಿಧನ

ಝಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ನಿಧನ

- Advertisement -
- Advertisement -

ಝಿಂಬಾಬ್ವೆಯ ಶ್ರೇಷ್ಠ ಕ್ರಿಕೆಟಿಗ, ಝಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ.

49ನೇ ವಯಸ್ಸಿನ ಹೀತ್ ಸ್ಟ್ರೀಕ್ ಅವರು ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರ ಸಾವಿನ ಸುದ್ದಿಯನ್ನು ಪತ್ನಿ ನಾಡಿನ್ ಸ್ಟ್ರೀಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ನಾಡಿನ್ ಸ್ಟ್ರೀಕ್,  ಸೆಪ್ಟೆಂಬರ್ 3, 2023ರ ಭಾನುವಾರ ಮುಂಜಾನೆ, ನನ್ನ ಜೀವನದ ಅತ್ಯಂತ ದೊಡ್ಡ ಪ್ರೀತಿ ಮತ್ತು ನನ್ನ ಸುಂದರ ಮಕ್ಕಳ ತಂದೆ ನಿಧನರಾದರು. ಅವರು ತಮ್ಮ ಕೊನೆಯ ದಿನಗಳನ್ನು ಕುಟುಂಬ ಹಾಗೂ ಅವರ ಹತ್ತಿರದ ಪ್ರೀತಿಪಾತ್ರರೊಂದಿಗೆ ಕಳೆಯಲು ಬಯಸಿದ್ದರು ಎಂದು ಬರೆದಿದ್ದಾರೆ.

ಕೆಲ ದಿನಗಳ ಹಿಂದೆ  ಸ್ಟ್ರೀಕ್ ಅವರ ಸಾವಿನ ಬಗ್ಗೆ ಊಹಾಪೋಹ ಹರಿದಾಡಿತ್ತು. ಸ್ಟ್ರೀಕ್ ಅವರ ಮಾಜಿ ಸಹೋದ್ಯೋಗಿ ಹೆನ್ರಿ ಒಲಾಂಗಾ ಅವರು ಸ್ಟ್ರೀಕ್ ಸಾವಿನ ಬಗ್ಗೆ ಘೋಷಿಸಿದ್ದರು. ಬಳಿಕ ಸುದ್ದಿ ಸುಳ್ಳು ಎಂದು ಬಹಿರಂಗವಾಗಿತ್ತು.

ಹೀತ್ ಸ್ಟ್ರೀಕ್ 1999-2000ದ ಸಮಯದಲ್ಲಿ ಝಿಂಬಾಬ್ವೆ ಕ್ರಿಕೆಟ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಸ್ಟ್ರೀಕ್, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ 100 ವಿಕೆಟ್‌ಗಳನ್ನು ಪಡೆದ ಮೊದಲ ಝಿಂಬಾಬ್ವೆ ಕ್ರಿಕೆಟಿಗರಾಗಿದ್ದರು. 100 ಟೆಸ್ಟ್ ವಿಕೆಟ್‌ಗಳು ಹಾಗೂ 1,000 ಟೆಸ್ಟ್ ರನ್‌ಗಳ ಸಾಧನೆ ಮಾಡಿರುವ ದೇಶದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ  ಕೂಡ ಪಾತ್ರರಾಗಿದ್ದರು.

ಇದನ್ನು ಓದಿ: ನವದೆಹಲಿ: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಬೆತ್ತಲೆ ಮೆರವಣಿಗೆ: ಗಲಭೆಕೋರರ ಗುಂಪಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು, ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು...

0
ಮಣಿಪುರ ಹಿಂಸಾಚಾರದ ಸಮಯದಲ್ಲಿ ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳ ಉಲ್ಲೇಖವಾಗಿದ್ದು, ಮಹಿಳೆಯರನ್ನು ಗಲಭೆಕೋರರ ಗುಂಪಿಗೆ ಪೊಲೀಸರೇ ಒಪ್ಪಿಸಿದ್ದಾರೆ ಎಂದು ತಿಳಿಸಿದೆ. ಪೊಲೀಸರ...