Homeಸಾಹಿತ್ಯ-ಸಂಸ್ಕೃತಿಕವನನ್ಯಾಯ "ಮಂದಿರ" : ಅಯೋಧ್ಯೆ ತೀರ್ಪು ಕುರಿತು ಚಿಂತಕ ಶಿವಸುಂದರ್ ಕವನ

ನ್ಯಾಯ “ಮಂದಿರ” : ಅಯೋಧ್ಯೆ ತೀರ್ಪು ಕುರಿತು ಚಿಂತಕ ಶಿವಸುಂದರ್ ಕವನ

- Advertisement -
- Advertisement -

ಆಹಾ! ಈಗ ಎಲ್ಲಾ ಸರಿಹೋಯಿತು..
ಮಂದಿರಕ್ಕೆ ಜಾಗವಾಯಿತು
ನ್ಯಾಯಕ್ಕೂ ಐದು ಎಕರೆ ಪರಿಹಾರ ಸಿಕ್ಕಿತು …
ಸರ್ವೇ ಜನಾ ಸುಖೀನೋ ಭವಂತು!

ಅವರಿರುವುದು ಹಾಗೆ!
ಕೇಳುತ್ತಾರೆ
ಕೊಡದಿದ್ದರೆ ಕೊಲ್ಲುತ್ತಾರೆ
ನಿಮಗೇನಾಗಿದೆ ಧಾಡಿ?
ಕೇಳಿದ್ದನ್ನು ಕೊಟ್ಟು ಶಾಂತಿ ಕಾಪಾಡಿ….

ಇನ್ನು ಚಿಂತೆ ಇಲ್ಲ,
ಸತ್ಯಕ್ಕೀಗ ಸಾಕ್ಷಿ ಪುರಾವೆಗಳ ಕಾವಲಿಲ್ಲ.
ಸತ್ಯಾಪಹರಣ ಈಗ ತುಂಬಾ ಸಲೀಸು,
ಕಾಯುವ ಲಕ್ಷಣ ರೇಖೆ ಮೊದಲಿಗಿಂತ ಮಸುಕು…

ಇನ್ನು ನಂಬಿಕೆಯೇ ಸಂವಿಧಾನ,
ರಣ ಘೋಷಗಳೇ ವೇದವಾಕ್ಯ
ನಂಬಿಕೆಯಂತೆ ನಡೆದರೆ ಮೋಕ್ಷ,
ಇಲ್ಲವೇ ನಿಜ ನಿರ್ವಾಣ..
ಪುರಾಣ ಮಂತ್ರ ತಂತ್ರ ಕವಡೆ
ಜನಸಂಖ್ಯೆಗೆ ಅನುಗುಣವಾಗಿ ನ್ಯಾಯದ ಬಟವಾಡೆ….

ರಾಮರಾಜ್ಯ ಸ್ವಾಮಿ…
ಶಂಬೂಕರಾದರೆ ನರಕ
ಸಹಿಸಿಕೊಂಡು ಬಾಳಿ…. ಸ್ವರ್ಗಸುಖ!

-ಶಿವಸುಂದರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸತ್ಯಕ್ಕೆ ಸೋಲಾದರೂ ಪರವಾಗಿಲ್ಲ. ಆದರೆ ಪುರಾಣಕ್ಕೆ ಗೆಲುವಾಗಬೇಕು. ಇದು ಇಂದಿನ ನಮ್ಮ ನ್ಯಾಯ.

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...