Homeಮುಖಪುಟಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

- Advertisement -
- Advertisement -

ಬನ್ನಿ ನಮ್ಮೆದುರಿಗಿರುವ ವಾಸ್ತವವನ್ನು ಎದುರಿಸುವ. ಶಬರಿಮಲದಲ್ಲಿ ನಮ್ಮ ಸಂವಿಧಾನಾತ್ಮಕ ಆದೇಶ ಸೋತಿದೆ. ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.
ಸುಲಭವಾದ, ನಮಗೆ ಅನುಕೂಲಕರವಾದ ಉತ್ತರಗಳನ್ನು ಹುಡುಕುವುದನ್ನು ಬಿಟ್ಟುಬಿಡುವ. ಹೌದು, ಬಿಜೆಪಿಯ ಬೆಂಬಲದೊಂದಿಗೆ, ಈ ಜನಪ್ರಿಯ ಪ್ರತಿಭಟನೆಯನ್ನು ಹಿಂದುತ್ವದ ಕಟ್ಟಾ ಬೆಂಬಲಿಗರಿಂದ ಆಯೋಜಿಸಲಾಗಿತ್ತು. ಹೌದು, ಕಾಂಗ್ರೆಸ್ ಮೃದು ಹಿಂದುತ್ವದ ನೀತಿಯನ್ನನುಸರಿಸಿತು, ಮೊದಲ ಬಾರಿಗೇನೂ ಅಲ್ಲ. ಹೌದು, ಆಡಳಿತ ಪಕ್ಷ ಸಿಪಿಐ(ಎಮ್) ಜನಪ್ರಿಯ ಭಾವನೆಗಳ ಎದುರಿಗೆ ಓಲಾಡುವಂತಾಯಿತು. ಆದರೆ, ಇವರ ಬಾಗಿಲಿಗೇ ಎಲ್ಲಾ ಅಸಮಾಧಾನವನ್ನು ತೂರುವುದು ನಿರರ್ಥಕ. ದಯವಿಟ್ಟು ಜನರ ಮನಃಸ್ಥಿತಿ ಮತ್ತು ಅವರ ವೋಟುಗಳನ್ನು ಹಿಂಬಾಲಿಸಿ. ನಿಜವಾದ ಪ್ರಶ್ನೆಯೇನೆಂದರೆ: ಜನರ ಮನಃಸ್ಥಿತಿ ಸಂವಿಧಾನಾತ್ಮಕ ಆದೇಶಕ್ಕೆ ತದ್ವಿರುದ್ಧವೇಕಿತ್ತು?
ತಮಾಷೆ ಮಾಡೋದನ್ನು ಬಿಟ್ಟುಬಿಡುವ: ನ್ಯಾಯಾಲಯದ ಒಂದು ‘ಶ್ರದ್ಧೆ ವಿರೋಧಿ’ ಆದೇಶವನ್ನು ಕೇರಳದಲ್ಲಿ, ಅದೂ ಜಗತ್ತಿನಲ್ಲಿ ಉಳಿದುಕೊಂಡಿರುವ ಕೆಲವೇ ಕಲವು ಸ್ಟಾö್ಯಲಿನಿಸ್ಟ್ ಪಕ್ಷದ ಆಡಳಿತದಲ್ಲಿಯೇ ಇಂತಹ ಆದೇಶವನ್ನು ಜಾರಿಗೊಳಿಸಲು ಆಗಲಿಲ್ಲ ಎಂದಲ್ಲಿ ಬೇರೆಡೆಯಂತೂ ಸಾಧ್ಯವೇ ಇಲ್ಲ. ನಿಜ, ಇಂಥದ್ದೆÃ ಆದೇಶವನ್ನು ಹಾಜಿ ಅಲಿ ದರ್ಗಾ ಪ್ರಕರಣದಲ್ಲಿ ಸಮುದಾಯದ ಭಾವನೆಗಳ ವಿರುದ್ಧವಾಗಿದ್ದರೂ ಜಾರಿಗೊಳಿಸಲಾಗಿತ್ತು. ಆದರೆ ಒಂದು ‘ಜಾತ್ಯತೀತ’ ಆಡಳಿತವಿದ್ದಾಗ ಹಾಗೆ ಆಗಲು ಸಾಧ್ಯವಿತ್ತೆ? ಶಾ ಬಾನೊ ಪ್ರಕರಣವನ್ನು ನಾವು ಮರತಿದ್ದೆÃವೆಯೇ? ಸಿಖ್ ಮತಶ್ರದ್ಧೆಯ ಹೆಸರಿನಲ್ಲಿ ಎಸ್‌ಜಿಪಿಸಿ ತನ್ನ ನ್ಯಾಯಬಾಹಿರ ಕ್ರಮಗಳನ್ನು ಮುಂದುವರೆಸಿರಲಿಲ್ಲವೇ?
ಇದನ್ನು ನೈತಿಕತೆಯ ಪ್ರಶ್ನೆಯಾಗಿಸಿ ನಮ್ಮ ಶಕ್ತಿಗಳನ್ನು ವ್ಯಯಿಸುವುದು ಬೇಡ. ಹೌದು ಈ ವೈಫಲ್ಯಗಳನ್ನು ಖಂಡಿತವಾಗಿಯೂ ಖಂಡಿಸುವ. ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನೆÃ ಉಲ್ಲಂಘಿಸುವಂತಾದರೆ ಒಂದು ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ನಡೆಸುವ ಹಕ್ಕನ್ನೆÃ ಕಳೆದುಕೊಂಡಂತೆ. ಆದರೆ, ಗೋಳಾಟ, ಅಸಮಾಧಾನ ಮತ್ತು ಕಟು ವಿರೋಧ ಇವ್ಯಾವುಗಳೂ ಆತ್ಮಾವಲೋಕನ ಮತ್ತು ಚಿಂತನೆಗೆ ಪರ್ಯಾಯಗಳಲ್ಲ. ಖಂಡನೆಗಿಂತ ಈ ಸನ್ನಿವೇಶ ಆಳವಾದ ಚಿಂತನೆಗೆ ಕರೆನೀಡುತ್ತದೆ. ಸಂವಿಧಾನಾತ್ಮಕ ನೈತಿಕತೆ ಮತ್ತು ಜನಾಭಿಪ್ರಾಯದ ನಡುವಿನ ಒಂದು ಸಂಘರ್ಷವನ್ನು ನಾವು ಹೇಗೆ ಸಮಾಲೋಚಿಸುತ್ತೆÃವೆ?
ಶೇಖರ್ ಗುಪ್ತ ಮಾಡಿದಂತೆ, ನ್ಯಾಯಾಲಯಕ್ಕೆ ಹೊಣೆ ಹೊರೆಸಿ ಈ ಕಠಿಣ ಪ್ರಶ್ನೆಯನ್ನು ಪಕ್ಕಕ್ಕೆ ಸರಿಸುವುದು ಬೇಡ. ಹೌದು ನ್ಯಾಯಾಂಗದ ಓವರ್‌ರೀಚ್ ನಮ್ಮ ವ್ಯವಸ್ಥೆಯ ಒಂದು ಸಮಸ್ಯೆ, ಆದರೆ ಈ ಪ್ರಕರಣದಲ್ಲಿ ಹಾಗನ್ನಲು ಆಗುವುದಿಲ್ಲ. ಪೂಜೆ ಆಗುವ ಒಂದು ಸಾರ್ವಜನಿಕ ಸ್ಥಳದಲ್ಲಿ ಸಮಾನವಾದ ಅವಕಾಶವನ್ನು ಕೋರಿ ಒಬ್ಬ ವ್ಯಕ್ತಿ ನ್ಯಾಯಾಲಯಕ್ಕೆ ತಲುಪಿದರೆ, ನ್ಯಾಯಾಧೀಶರು ಅಸಹಾಯಕತೆಯನ್ನು ತೋಡಿಕೊಳ್ಳಲಾಗುವುದಿಲ್ಲ, ಅದೂ ನಮ್ಮ ಸಂವಿಧಾನದಲ್ಲಿ ದೇವಸ್ಥಾನದ ಪ್ರವೇಶದ ಬಗ್ಗೆ ಸ್ಪಷ್ಟವಾಗಿ ನಮೂದಿಸಿರುವಾಗ. ಭಾರತೀಯ ಜಾತ್ಯತೀತತೆ ಫ್ರಾನ್ಸಿನ ಕಟ್ಟುನಿಟ್ಟಾದ ತಟಸ್ಥ ಧೋರಣೆಯನ್ನು ಅನುಸರಿಸುವುದಿಲ್ಲ. ಧಾರ್ಮಿಕ ವಿಷಯಗಳಲ್ಲಿ ತತ್ವಾಧಾರಿತ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮತ್ತು ಅಪೇಕ್ಷಿಸುವ ‘ತತ್ವಾಧಾರಿತ ಅಂತರ’ಕ್ಕೆ ನಮ್ಮ ಸಂವಿಧಾನ ಅನುವು ಮಾಡಿಕೊಡುತ್ತದೆ ಎಂದು ರಾಜೀವ್ ಭಾರ್ಗವ್ ಹೇಳಿದ್ದು ಸರಿಯಾಗಿದೆ.
ಈಗ ನೇರವಾಗಿ ವಿಷಯಕ್ಕೆ ಬರುವ. ದುಃಖಕರ ಮತ್ತು ಅಪ್ರಿಯವಾದ ವಾಸ್ತವವೇನೆಂದರೆ, ಈ ಲಿಬರಲ್ ಆದ ಸಂವಿಧಾನಾತ್ಮಕ ಆದೇಶ ಜನಾಭಿಪ್ರಾಯದೊಂದಿಗೆ ಮೇಳೆ ಆಗಿರಲಿಲ್ಲ, ಆಗಿಲ್ಲ. ಸುಪ್ರಿÃಮ್ ಕೋರ್ಟಿನ ನ್ಯಾಯಾಧೀಶರ ಮತ್ತು ಭಾರತದ ಲಿಬರಲ್ ಚಿಂತಕರ ನೈತಿಕ ಸಂವೇದನಗಳಿಗೂ ಹಾಗೂ ಒಬ್ಬ ಅಂiÀÄ್ಯಪ್ಪ ಸ್ವಾಮಿಯ ಸಾಮಾನ್ಯ ಭಕ್ತನ ನೈತಿಕ ಸಂವೇದನೆಗಳೊಂದಿಗೆ ಸಂಬಂಧವಿಲ್ಲದಿರುವುದು ಸ್ಪಷ್ಟ. ಸಾಮಾನ್ಯ ಭಾರತೀಯರಿಗೆ ನಮ್ಮ ಸಂವಿಧಾನಕ್ಕೆ ಅತಿ ಹಚ್ಚಿನ ಆದರೆ ಅಮೂರ್ತವಾದ ಮನ್ನಣೆಯಿದೆ. ಆದರೆ ಸಂವಿಧಾನಾತ್ಮಕ ತತ್ವಗಳನ್ನು ನಿರ್ದಿಷ್ಟವಾಗಿ ಸ್ಪಷ್ಟಪಡಿಸಿದ ಸಂದರ್ಭಗಳಲ್ಲಿ ಅನೇಕ ಸಲ ಜನರು ಅದರ ವಿರುದ್ಧ ಹೋಗುವ ಸಾಧ್ಯತೆಗಳಿವೆ.
ಈ ಕಟುಸತ್ಯದಿಂದ ಪಲಾಯನ ಮಾಡುವುದು ಬೇಡ. ಇದನ್ನು ನಾನು 1992ರಲ್ಲಿ ಬಾಬರಿ ಮಸೀದಿಯ ಧ್ವಂಸವಾದ ಸಮಯದಲ್ಲಿ ಅರಿತೆ. ಆಗ ನಾನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದೆ, ಚಂಡೀಗಡದ ಒಂದು ದುಡಿಯುವ ಜನರ ವಸತಿಪ್ರದೇಶದಲ್ಲಿ ನಾನು ವಾಸಿಸುತ್ತಿದ್ದೆ. ಅಂiÉÆÃಧ್ಯೆಯ ಪ್ರಕರಣದಲ್ಲಿ ಸುಪ್ರಿÃಮ್ ಕೋರ್ಟಿನ ಆದೇಶವನ್ನು ಉಲ್ಲಂಘಿಸಿದರ ಬಗ್ಗೆ ನಾನು ನನ್ನ ನೈತಿಕ ಅಸಮಾಧಾನವನ್ನು ವ್ಯಕ್ತಪಡಿಸಿದಾಗ, ನನ್ನ ನೆರೆಯವರೊಬ್ಬರು ಕೇಳಿದ್ದು ‘ಪ್ರೊಫೆಸರ್ ಸಾಬ್, ರಾಮನ ಮಂದಿರ ಅಂiÉÆÃಧ್ಯೆಯಲ್ಲೆÃ ಕಟ್ಟಬೇಕಲ್ವಾ, ಮತ್ತೆÃನು ಇಂಗ್ಲೆಂಡಿನಲ್ಲಿ ಕಟ್ಟಬೇಕೇ?” ಆಗ ನಾನು ನನ್ನ ಪಾಠ ಕಲಿತೆ. ಆದರೆ ಭಾರತದ ಲಿಬರಲ್, ಪ್ರಗತಿಪರರು ಇನ್ನೂ ಆ ಪಾಠ ಕಲಿತಂತಿಲ್ಲ.
ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವ ಧೈರ್ಯವನ್ನು ಬೆಳೆಸಿಕೊಳ್ಳುವ: ಇಂಗ್ಲಿÃಷ್ ಮಾತನಾಡುವ ನೆಲದೊಂದಿಗಿನ ಬೇರನ್ನು ಕಳಚಿಕೊಂಡಿರುವ ಭಾರತದ ಎಲೀಟ್ ಜನರ ಬಗ್ಗೆ ಇರುವ ಸ್ಟಿರಿಯೋಟೈಪ್‌ನಲ್ಲಿ ಸತ್ಯಾಂಶವಿದೆ. ಭಾರತದ ಲಿಬರಲ್ ಜನಗಳು ಒಂದು ಪರಕೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಮುಂಚೂಣಿಯಲ್ಲಿರುವ ಯಾವುದೇ ಭಾರತೀಯ ಚಿಂತಕನಿಗೆ ಕೇಳಿ : ಇಂಗ್ಲಿÃಷಿನಲ್ಲಿರಿದ, ಯಾವುದೇ ಒಂದು ಭಾರತೀಯ ಭಾಷೆಯಲ್ಲಿಯ ಪುಸ್ತಕವನ್ನು ಕೊನೆಯ ಸಲ ಓದಿದ್ದು ಯಾವಾಗ ಅಥವಾ ಇಂಗ್ಲಿÃಷ್ ಬಿಟ್ಟು ಯಾವುದೇ ಒಂದು ಭಾರತೀಯ ಭಾಷೆಯಲ್ಲಿ ಏ4 ಸೈಜಿನ ಒಂದು ಪುಟದ ಎರಡೂ ಬದಿಗಳಲ್ಲಿ ಕೊನೆಯ ಸಲ ಬರೆದಿದ್ದು ಯಾವಾಗ? ಭಾರತದ ಧಾರ್ಮಿಕ ಪರಂಪರೆಗಳ ವಿಷಯ ಬಂದಾಗ ಇವರುಗಳು ಕೆಲವು ಸಲ ತಾತ್ಸಾರ ಹೊಂದಿದವರಾಗಿದ್ದರೆ ಅನೇಕ ಸಲ ಅನಕ್ಷರಸ್ಥರಾಗಿರುತ್ತಾರೆ. ಉಪನಿಷತ್ತುಗಳು ಮತ್ತು ಪುರಾಣಗಳ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಎಷ್ಟು ಜನ ವಿದ್ಯಾವಂತ ಭಾರತೀಯರು ಹೇಳಬಲ್ಲರು? ಅಥವಾ ಶರಿಯತ್ ಮತ್ತು ಹದೀಸ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ. ಹಾಗಾಗಿ ಇವರಿಂದ ಭಾರತೀಯರು ನೈತಿಕ ಪಾಠಗಳನ್ನು ತೆಗೆದುಕೊಳ್ಳಲು ನಿರಾಕರಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇವರುಗಳು ವಿಮರ್ಶೆ ಮತ್ತು ಸುಧಾರಣೆಯನ್ನು ಸಂಪೂರ್ಣವಾಗಿ ನಿರಾಕರಿಸದಿದ್ದರೂ ಅದು ಒಂದು ತೀರ ಭಿನ್ನವಾದ ಮತ್ತು ಪ್ರತಿಕೂಲವಾದ ನುಡಿಗಟ್ಟಿನಲ್ಲಿ ಬಂದಾಗ ಅದನ್ನು ಒಪ್ಪಿಕೊಳ್ಳುವುದಿಲ್ಲ. ಲ್ಯಾಟಿನ್ ಅಮೇರಿಕದಲ್ಲಿ ಕ್ರಾಂತಿಯನ್ನು ಪ್ರತಿಪಾದಿಸಲು ಬೈಬಲ್ ಉದಾಹರಿಸಿ ಅಲ್ಲಿನ ವಿಮೋಚನೆಯ ಧರ್ಮಶಾಸ್ತçವನ್ನು ಬಳಸಲಾಗುತ್ತದೆ. ಆದರೆ, ಹೊಸ ನೈತಿಕ (ಎಥಿಕಲ್) ಚೌಕಟ್ಟುಗಳನ್ನು ಎಳೆಯಲು ಮರ್ಯಾದಾ ಪುರುಷೋತ್ತಮನನ್ನು ಅರ್ಥೈಸಿಕೊಳ್ಳುವ ಹಾಗೂ ಉದಾಹರಿಸುವ ಲಿಬರಲ್ ಚಿಂತಕರು ನಮ್ಮಲ್ಲೆÃಕಿಲ್ಲ?
ಹೆಚ್ಚಿನ ಸೂಕ್ಷö್ಮತೆಗೆ ಹೋಗುವ ಅಗತ್ಯವಿಲ್ಲ. ಭಾರತದಲ್ಲಿ ಲಿಬರಲಿಸಂಗಾಗಿ ಯಾವುದೇ ರಾಜಕೀಯ ಕ್ಷೆÃತ್ರವಿಲ್ಲ; ಮೆಟ್ರೊÃಪಾಲಿಟನ್ ಎಂದು ಕರೆದುಕೊಳ್ಳುವ ಭಾರತದ ದ್ವಿÃಪದ ಹೃದಯದಲ್ಲೂ ಇಲ್ಲ. ಲಿಬರಲ್ ಮತ್ತು ಸಂವಿಧಾನಾತ್ಮಕ ಆದೇಶವನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೇಲೆಯೇ ಅವಲಂಬಿಸುವುದು ಸರಿಯಲ್ಲ. ಕಟು ವಾಸ್ತವವೇನೆಂದರೆ, ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳು ಜನಾಭಿಪ್ರಾಯವನ್ನು ಲೆಕ್ಕಿಸದೇ ತಮ್ಮ ತೀರ್ಪನ್ನು ಕೆಲವು ಸಲ ನೀಡಬಹುದು. ಆದರೆ ತುಲನಾತ್ಮಕವಾಗಿ ನೋಡಿದಾಗ, ಜನಪ್ರಿಯ ಭಾವನೆಗಳ ಹರವಿನೊಂದಿಗೇ ನ್ಯಾಯಾಲಯಗಳು ಹೋಗುವ ಸಾಧ್ಯತೆಗಳೇ ಹೆಚ್ಚು. ಸದ್ಯದ ಇದೇ ಪ್ರವೃತ್ತಿ ಮುಂದುವರೆದಲ್ಲಿ, ನಮ್ಮ ಗಣರಾಜ್ಯವನ್ನು ಇದೇ ಗಣರಾಜ್ಯದಿಂದಲೇ ವಿಫಲವಾಗಿಸಬಹುದಾದ ನಿಜವಾದ ಆತಂಕ ನಮ್ಮೆದುರಿಗಿದೆ.
ನಮ್ಮೆದುರಿಗಿರುವ ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳುವ. ಒಂದು, ಜನಾಭಿಪ್ರಾಯದ ಹರವಿನೊಂದಿಗೆ ಹೋಗುವುದು, ಅದು ನಮ್ಮನ್ನೆಲ್ಲಿಗೆ ಕೊಂಡೊಯ್ಯುತ್ತದೋ ಅಲ್ಲಿಗೆ ಹೋಗುವುದು ಒಂದು ಆಯ್ಕೆ. ಅದು ಒಂದು ಅಪಾಯಕಾರಿ ಜಾರುಬಂಡೆ. ಇನ್ನೊಂದು ಆಯ್ಕೆ; ಜನಾಭಿಪ್ರಾಯವನ್ನು ಬದಲಿಸುವಂತೆ ಜನರೊಂದಿಗೆ ಮಾತುಕತೆಗೆ ಇಳಿಯುವುದು. ಈ ಮಾತುಕತೆ ಮೋನೋಲಾಗ್ ಅಥವಾ ಸ್ವಗತವಾಗಿರಬಾರದು. ನಾವುಗಳು ಹೊಸದೊಂದು ಭಾಷೆಯನ್ನು ಕಲಿಯಲು ಮುಕ್ತರಾಗಿರಬೇಕು, ಹೊಸದೊಂದು ಸಂವೇದನೆಯನ್ನು ಅನುಭವಿಸಲು ಇಚ್ಛುಕರಾಗಿರಬೇಕು ಹಾಗೂ ಜ್ಞಾನದ ಇತರೆ ಸ್ವರೂಪಗಳ ಬಗ್ಗೆ ಗೌರವ ಹೊಂದಿರಬೇಕು. ಇದುವೇ ಗಾಂಧಿಯ ಮಾರ್ಗ, ಒಬ್ಬ ವಿಮರ್ಶಾತ್ಮಕ ಆಂತರ್ಯದವಳ/ನ ಮಾರ್ಗ. ಮೂರನೇಯ ಆಯ್ಕೆಯೂ ಒಂದಿದೆ: ಹೊಸ ಜನರನ್ನು ಆಯ್ಕೆ ಮಾಡುವುದು.
ಬನ್ನಿ, ಆಯ್ಕೆ ಮಾಡುವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...