Homeಮುಖಪುಟ14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ: ಖಾಸಗೀ ಶಾಲಾ ಶಿಕ್ಷಕನ ಬಂಧನ!

14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ: ಖಾಸಗೀ ಶಾಲಾ ಶಿಕ್ಷಕನ ಬಂಧನ!

ತನ್ನ ಮಗನಿಗೆ ಅಧ್ಯಯನ ಮಾಡಲು ಸಹಾಯ ಮಾಡಿ ಎಂದು ಬಾಲಕನ ತಾಯಿ ಶಿಕ್ಷಕನನ್ನು ಕೇಳಿಕೊಂಡಿದ್ದರು. ನಂತರ ಬಾಲಕ ತನ್ನ ಮನೆಗೆ ಬರಲು ಆರಂಭಿಸಿದಾಗ ಶಿಕ್ಷಕ ಆಗಾಗ್ಗೆ ಅವನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.

- Advertisement -
- Advertisement -

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 26 ವರ್ಷದ ಖಾಸಗೀ ಶಾಲಾ ಶಿಕ್ಷಕನನ್ನು ಸೋಮವಾರ ಬಂಧಿಸಿದ್ದು, ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನೆಲೆಸಿರುವ ಕಾರ್ತಿಕ್ ಎಂದು ಗುರುತಿಸಲ್ಪಟ್ಟ ಆರೋಪಿ ಚೆನ್ನೈನ ಖಾಸಗೀ ಶಾಲಾ ಶಿಕ್ಷಕ ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.

“ಲಾಕ್‌ಡೌನ್ ನಂತರ ಕಾರ್ತಿಕ್ ಚೆಂಗಲ್‌ಪಟ್ಟಿಯಲ್ಲಿ ಉಳಿದುಕೊಂಡೇ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಆತ ಏಕಾಂಗಿಯಾಗಿ ವಾಸಿಸುತ್ತಿದ್ದಾನೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಅದೇ ಊರಿನ 9 ನೇ ತರಗತಿಯ ಹುಡುಗನ ತಾಯಿ, ತನ್ನ ಮಗನಿಗೆ ಅಧ್ಯಯನ ಮಾಡಲು ಸಹಾಯ ಮಾಡಿ ಎಂದು ಶಿಕ್ಷಕನನ್ನು ಕೇಳಿಕೊಂಡಿದ್ದರು. ನಂತರ ಬಾಲಕ ತನ್ನ ಮನೆಗೆ ಬರಲು ಆರಂಭಿಸಿದಾಗ ಶಿಕ್ಷಕ ಆಗಾಗ್ಗೆ ಅವನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ” ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಪ್ರವಾಹ: ತೆಲುಗು ಚಿತ್ರ ರಂಗದಿಂದ ನೆರವಿನ ’ಮಹಾಮಳೆ’!

“ಕಾರ್ತಿಕ್ ತನ್ನ ಮೊಬೈಲ್ ಫೋನ್‌ನಲ್ಲಿ ಇದರ ವೀಡಿಯೊವನ್ನು ರೆಕಾರ್ಡ್ ಮಾಡಿಕೊಂಡು ಆಗಾಗ್ಗೆ ಹುಡುಗನಿಗೆ ಬೆದರಿಕೆ ಹಾಕುತ್ತಿದ್ದನು. ಇತ್ತೀಚೆಗೆ ಹುಡುಗನಿಗೆ ಪ್ಯಾನಿಕ್ ಅಟ್ಯಾಕ್ ಇದ್ದದ್ದರಿಂದ ಮಲಗಲು ತೊಂದರೆಯಾಗಿದೆ. ಇದರ ಕುರಿತು ಅವನ ತಾಯಿ ಪ್ರಶ್ನಿಸಿದಾಗ, ಹುಡುಗ ಶಿಕ್ಷಕನ ವರ್ತನೆಯ ಬಗ್ಗೆ ಬಾಯಿಬಿಟ್ಟಿದ್ದಾನೆ” ಎಂದು ಅವರು ಹೇಳಿದರು.

ಬಾಲಕನ ತಾಯಿಯಿಂದ ಬಂದ ದೂರಿನ ಆಧಾರದ ಮೇಲೆ ಚೆಂಗಲ್ಪಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ತಿಕ್ ಅವರನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


ಇದನ್ನೂ ಓದಿ: ಲಡಾಖ್‌ನಲ್ಲಿ ಸೆರೆಹಿಡಿದ ಚೀನಾ ಸೈನಿಕನ ಬಿಡುಗಡೆ ಸದ್ಯಕ್ಕಿಲ್ಲ: ವರದಿಯ ಮೂಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...