Homeಕರ್ನಾಟಕತುಮಕೂರಿನ ಅಮಾನಿಕೆರೆ ನುಂಗುತ್ತಿದೆ ಅಭಿವೃದ್ಧಿಭೂತ; ಕೆರೆಯಲ್ಲಿ ಸಂತೆ ನಿರ್ಮಾಣಕ್ಕೆ ವ್ಯಾಪಕ ವಿರೋಧ

ತುಮಕೂರಿನ ಅಮಾನಿಕೆರೆ ನುಂಗುತ್ತಿದೆ ಅಭಿವೃದ್ಧಿಭೂತ; ಕೆರೆಯಲ್ಲಿ ಸಂತೆ ನಿರ್ಮಾಣಕ್ಕೆ ವ್ಯಾಪಕ ವಿರೋಧ

ಕೆರೆಯನ್ನು ಅಭಿವೃದ್ದಿ ಹೆಸರಿನಲ್ಲಿ ನುಂಗುತ್ತಾ ಬರಲಾಗುತ್ತಿದೆ. ಇದು ಕೆರೆಯ ಮೂಲಸ್ವರೂಪಕ್ಕೆ ಧಕ್ಕೆ ತರುವಂತಹ ಕೆಲಸ. ಇಂತಹ ಅವೈಜ್ಞಾನಿಕ ಮತ್ತು ಕಾನೂನುಬಾಹಿರ ಕೃತ್ಯವನ್ನು ಜನಪ್ರತಿನಿಧಿಗಳು ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

- Advertisement -
- Advertisement -

ಅಭಿವೃದ್ಧಿಯೆಂಬ ಭೂತ ತುಮಕೂರು ಅಮಾನಿಕೆರೆಯನ್ನು ನುಂಗುತ್ತಲೇ ಹೋಗುತ್ತಿದೆ. 950 ಎಕರೆ ಇದ್ದ ಕೆರೆಯ ವಿಸ್ತೀರ್ಣ ಇಂದು 500 ಎಕರೆಗೆ ಕುಗ್ಗಿದೆ. ರಸ್ತೆ, ಗ್ಲಾಸ್ ಹೌಸ್ ನಿರ್ಮಾಣ, ಉದ್ಯಾನಕ್ಕೆಂದು ಕೆರೆಯನ್ನು ಮತ್ತಷ್ಟು ಒತ್ತುವರಿ ಮಾಡಲಾಗಿದೆ. ಕೆರೆಯ ಮೂಲಸ್ವರೂಪಕ್ಕೆ ಧಕ್ಕೆಯಾಗಬಾರದೆಂಬ ಸುಪ್ರೀಂ, ಹೈಕೋರ್ಟ್‌ಗಳ ಅದೇಶಗಳ ಉಲ್ಲಂಘನೆ ಎಗ್ಗಿಲ್ಲದೆ ಸಾಗಿದೆ. ಸರ್ಕಾರಗಳು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಂತಹ ಉಲ್ಲಂಘನೆಯಲ್ಲಿ ತೊಡಗಿ ನ್ಯಾಯಾಂಗ ನಿಂದನೆ ಆಗುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ನಗರದ ನಾಗರಿಕರಿಂದ ವ್ಯಕ್ತವಾಗುತ್ತಿದೆ.

ತುಮಕೂರು ಅಮಾನಿಕೆರೆಯನ್ನು ಸಣ್ಣ ನೀರಾವರಿ ಇಲಾಖೆಗೆ ವರ್ಗಾಯಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಕೆರೆಯ ಜವಾಬ್ದಾರಿ ವಹಿಸಿಕೊಂಡ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಆಡಳಿತಯಂತ್ರ ಕೆರೆಯನ್ನು ಕಿರಿದು ಮಾಡುತ್ತಲೇ ಹೋಗುತ್ತಿದೆ. ಈಗ ಮತ್ತೆ ಮುಕ್ಕಾಲು ಎಕರೆಯಲ್ಲಿ “ತುಮಕೂರು ಸಂತೆ” ಮಾಡಲು ಹೊರಟಿರುವುದು ಜನರ ಕೋಪಕ್ಕೆ ಗುರಿಯಾಗಿದೆ. ಗ್ಲಾಸ್ ಹೌಸ್ ಪಕ್ಕದ ಮುಕ್ಕಾಲು ಎಕರೆಯಲ್ಲಿ 1.75 ಕೋಟಿ ವೆಚ್ಚದಲ್ಲಿ ತುಮಕೂರು ಸಂತೆ ನಿರ್ಮಾಣಕ್ಕೆ ಸಿದ್ದತೆ ನಡೆಯುತ್ತಿದೆ. ಕೆರೆಯ ಅಂಗಳದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಾರದೆಂಬ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ಕೈಗೊಳ್ಳುವ ತಯಾರಿ ನಡೆಸಲಾಗುತ್ತಿದೆ.

ಭೂ ಸುಧಾರಣಾ
ಇದನ್ನೂ ಓದಿ: ಐದು ವರ್ಷದಲ್ಲಿ ಎಲ್ಲಾ ಬಡವರ ಭೂಮಿ ಕಿತ್ತುಕೊಳ್ಳುತ್ತಾರೆ: ಸಸಿಕಾಂತ್ ಸೆಂಥಿಲ್ ಆತಂಕ

ಕೆರೆಯ ಅಭಿವೃದ್ದಿಗೆಂದು ಈವರೆಗೆ ಸುಮಾರು 159 ಕೋಟಿ ರೂ ಸುರಿಯಲಾಗಿದೆ. ಕೆರೆಯ ಹೂಳೆತ್ತುವ ನೆಪದಲ್ಲಿ ಹಣ ಫೋಲು ಮಾಡಲಾಯಿತು. ಈಗ 102 ಕೋಟಿ ರೂಪಾಯಿಗಳನ್ನು ಅಭಿವೃದ್ಧಿಗೆಂದು ಮೀಸಲು ಇಡಲಾಗಿದೆ. ಸೆಪ್ಟೆಂಬರ್ 15 ರಂದು ಕೆರೆಯ ಅಂಗಳಕ್ಕೆ ಭೇಟಿ ನೀಡಿರುವ ಶಾಸಕ ಜ್ಯೋತಿಗಣೇಶ್ ಈ ಮಾಹಿತಿ ಹೊರಗೆಡಹಿದ್ದು ಕೆರೆಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಅಮಾನಿಕೆರೆ ಇರುವ ಪ್ರದೇಶದಲ್ಲಿ ಜಿಲ್ಲಾ ನ್ಯಾಯಾಲಯದ ಕಟ್ಟಡಗಳು ಇವೆ. ಜಿಲ್ಲಾಧಿಕಾರಿ ಕಚೇರಿ ಇದೆ.  ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ವೃತ್ತ ಹಲವು ಭಾಗಗಳಿಂದ ಸಂಪರ್ಕವನ್ನು ಕಲ್ಪಿಸುತ್ತದೆ. ಪಾವಗಡ, ಶಿರಾದ ಕಡೆ ಹೋಗುವ ವಾಹನಗಳು ಇದೇ ವೃತ್ತದ ಮೂಲಕ ಹಾದುಹೋಗುತ್ತವೆ. ನಿತ್ಯವೂ ನೂರಾರು-ಸಾವಿರಾರು ಬಸ್, ಲಾರಿ, ಕಾರು, ಟೆಂಪೋ, ದ್ವಿಚಕ್ರವಾಹನಗಳು, ಆಟೋಗಳು ಓಡಾಡುತ್ತವೆ. ಉತ್ತರ ಕರ್ನಾಟಕದ 17 ಜಿಲ್ಲೆಗಳಿಂದ ನಗರದೊಳಗೆ ಖಾಸಗಿ-ಸರ್ಕಾರಿ ಬಸ್ ಗಳು ಬಂದು ಹೋಗುತ್ತವೆ. ವಾಹನಗಳ ದಟ್ಟಣೆ ವಿಪರೀತವಾಗಿದೆ. ಇದ್ಯಾವುದನ್ನೂ ಪಗಿರಣಿಸದೆ ಅವೈಜ್ಞಾನಿಕವಾಗಿ ಕೆರೆಯ ಅಂಗಳದಲ್ಲಿ ಸಂತೆ ನಿರ್ಮಾಣ ಮಾಡುವುದರಿಂದ ಮತ್ತಷ್ಟು ವಾಹನ ದಟ್ಟಣೆ ಅಧಿಕವಾಗುತ್ತದೆ.

ವಿಶೇಷವೆಂದರೆ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳ ವಸತಿಗಳು ಶಿರಾಗೇಟ್ ನಲ್ಲಿವೆ. ಇವರೂ ಕೂಡ ಈ ವೃತ್ತದ ಮೂಲಕವೇ ಹೋಗಬೇಕು. ಅಂತರಸನಹಳ್ಳಿ, ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೋಗುವ ಕಾರ್ಮಿಕರು, ಶಿರಾ ಗೇಟ್‌ನಲ್ಲಿರುವ ಬಡಾವಣೆಗಳಿಗೆ ಹೋಗುವ ಸಾರ್ವಜನಿಕರು ಕೋಟೆ ಆಂಜನೇಯ ವೃತ್ತದಿಂದಲೇ ಹೋಗಬೇಕು. ಈ ರಸ್ತೆ ಬಿಟ್ಟು ಪರ್ಯಾಯ ಮಾರ್ಗವಿಲ್ಲ. ಈಗ ಉದ್ದೇಶಿಸಿರುವ ಹಾಗೆ ಗ್ಲಾಸ್ ಹೌಸ್ ಹಿಂಭಾಗದ ಮುಕ್ಕಾಲು ಎಕರೆ ಜಾಗದಲ್ಲಿ ತುಮಕೂರು ಸಂತೆ ಮಳಿಗೆಗಳನ್ನು ನಿರ್ಮಾಣ ಮಾಡಿದರೆ ಮತ್ತಷ್ಟು ವಾಹನ ದಟ್ಟಣೆಯಾಗುತ್ತದೆ. ಜನರಿಗೆ ತೊಂದರೆಯಾಗಲಿದೆ. ಇದನ್ನು ಜನಪ್ರತಿನಿಧಿಗಳು ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ.

ಇದನ್ನೂ ಓದಿ: ಕನ್ನಡ್ ಸುದ್ದಿಗ್ ಏನ್ರಾ ಬಂದ್ರೆ ಮಾನಾ ಉಳ್ಸಾಕಿಲ್ಲ; ‘ರಸೋಕಿನ’ ತಂಡದಿಂದ ವಿಶಿಷ್ಟ ಪ್ರತಿರೋಧ

ರೈತ ಮುಖಂಡ ಬಿ.ಉಮೇಶ್ ನಾನುಗೌರಿ ಜೊತೆ ಮಾತನಾಡಿ “ಕೆರೆಯಲ್ಲಿ ಸಂತೆ ಮಾಡುವುದು. ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳುವುದು ಅವೈಜ್ಞಾನಿಕ ಮತ್ತು ಕಾನೂನುಬಾಹಿರ. ಕೆರೆಯಲ್ಲಿ ತುಮಕೂರು ಸಂತೆ ಮಾಡುವ ಬದಲು ನಗರದ ಎಂಟು ದಿಕ್ಕಿನಲ್ಲಿ ಕಿರುಮಾರುಕಟ್ಟೆಗಳನ್ನು ನಿರ್ಮಿಸಲಿದೆ. ಭೀಮಸಂದ್ರ, ಶೆಟ್ಟಿಹಳ್ಳಿ ಮುಖ್ಯರಸ್ತೆ, ಕ್ಯಾತ್ಸಂದ್ರ, ಕುಣಿಗಲ್ ರಸ್ತೆ, ವರ್ತುಲ(ರಿಂಗ್) ರಸ್ತೆಯಲ್ಲಿ ನಡೆಯುತ್ತಿರುವ ತರಕಾರಿ ಸಂತೆಗಳನ್ನು ಅಬಿವೃದ್ಧಿಪಡಿಸಲಿ. ಅದು ಬಿಟ್ಟು ಕೆರೆಯಲ್ಲಿ ಸಂತೆ ಮಾಡುವುದು ಬೇಡ. ಇದರಿಂದ ವಾಹನ ದಟ್ಟನೆ ಹೆಚ್ಚಾಗುತ್ತದೆ. ಪರಿಸರ ಮಾಲಿನ್ಯವಾಗುತ್ತದೆ. ಜನದಟ್ಟಣೆ ಆಗುತ್ತದೆ. ಜನರು ವಿನಾಕಾರಣ ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ ಈ ಯೋಜನೆಯನ್ನು ಕೈಬಿಡಬೇಕು” ಎಂದು ಆಗ್ರಹಿಸಿದರು.

ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ 10 ಮಳಿಗೆಗಳನ್ನು ನಿರ್ಮಿಸಲಾಗಿದೆ. ಅಲ್ಲಿ ತರಕಾರಿ ಸಂತೆಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದರು. ಅದನ್ನು ಕೈಬಿಟ್ಟರು. ಈಗ ಆ ಮಳಿಗೆಗಳು ಖಾಲಿ ಬಿದ್ದಿವೆ. ಜೊತೆಗೆ ಅಂತರಸನ ಹಳ್ಳಿಯಲ್ಲಿರುವ ಎಪಿಎಂಸಿ ಮಾರುಕಟ್ಟೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿದರೆ ಒಳ್ಳೆಯದಾಗುತ್ತದೆ. ಜನ-ವಾಹನ ದಟ್ಟಣೆಯೂ ಕಡಿಮೆಯಾಗುತ್ತದೆ. ಕೆರೆ ಸಂರಕ್ಷಣೆ ಮಾಡಬೇಕು. ಜನರ ವಾಯುವಿವಾಹಕ್ಕೆ ಅವಕಾಶ ಕೊಟ್ಟು ಜನರ ಆರೋಗ್ಯ ಕಾಪಾಡಲು ಮುಂದಾಗಬೇಕು. ಕೆರೆಯ ಸುತ್ತಲೂ ಗಿಡಮರಗಳನ್ನು ನೆಟ್ಟು ಶುದ್ದವಾದ ಗಾಳಿ ಸೇವನೆಗೆ ದಾರಿ ಮಾಡಲಿ. ಅದುಬಿಟ್ಟು ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಆದಾಯ ಹೆಚ್ಚಳಕ್ಕೆ ಮಾರ್ಗ ಮಾಡುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆರೆಯನ್ನು ಅಭಿವೃದ್ದಿ ಹೆಸರಿನಲ್ಲಿ ನುಂಗುತ್ತಾ ಬರಲಾಗುತ್ತಿದೆ. ಇದು ಕೆರೆಯ ಮೂಲಸ್ವರೂಪಕ್ಕೆ ಧಕ್ಕೆ ತರುವಂತಹ ಕೆಲಸ. ಇಂತಹ ಅವೈಜ್ಞಾನಿಕ ಮತ್ತು ಕಾನೂನುಬಾಹಿರ ಕೃತ್ಯವನ್ನು ಜನಪ್ರತಿನಿಧಿಗಳು ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಹಿರಿಯ ಪರಿಸರ ಹೋರಾಟಗಾರ ಸಿ.ಯತಿರಾಜು ಮಾತನಾಡಿ, “ಸ್ಮಾರ್ಟ್ ಸಿಟಿಯ ಅಭಿವೃದ್ಧಿ ನೆಪದಲ್ಲಿ ಈಗಾಗಲೆ 13 ಎಕರೆ ಪ್ರದೇಶದಲ್ಲಿ ಪಾರ್ಕ್ ಮಾಡಲಾಗಿದೆ. ಗ್ಲಾಸ್ ಹೌಸ್ ನಿರ್ಮಿಸಿದೆ. ಇದು ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕೋರ್ಟ್ ಆದೇಶ ಉಲ್ಲಂಘಿಸುತ್ತಲೇ ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮೌನವಾಗಿದ್ದಾರೆ. ಈ ಬಗ್ಗೆ ಲೋಕ ಅದಾಲತ್‌ಗೆ ಹೋಗುವ ಮೂಲಕ ಅಮಾನಿಕೆರೆ  ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಕೆರೆಯನ್ನು ಸಂರಕ್ಷಿಸಬೇಕಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಮದಲೂರು ಕೆರೆಗೆ ಹೇಮಾವತಿ ನೀರು; ಬಿಜೆಪಿಗೆ ತಿರುಗುಬಾಣವಾದ ಹಿಂದಿನ ಪತ್ರ!

ವಿಜ್ಞಾನ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಎಚ್.ಎಸ್.ನಿರಂಜನಾರಾಧ್ಯ ಮಾತನಾಡಿ “ಕೆರೆಯಲ್ಲಿ ಸಂತೆ ನಿರ್ಮಾಣ ಅಗತ್ಯವಿಲ್ಲ. ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಿ, ನಗರ ತಂಪಾಗಿರುವಂಥ ವಾತಾವರಣ ನಿರ್ಮಿಸಬೇಕು. ಅಮಾನಿಕೆರೆ ಸಂರಕ್ಷಣೆ ಹೋರಾಟ ಸಮಿತಿಯ ಉದ್ದೇಶವೇ ಅದು. ಇತ್ತೀಚೆಗೆ ಕೆರೆಯನ್ನು ಕಬಳಿಸುವ ಮೂಲಕ ಮೂಲ ಉದ್ದೇಶಕ್ಕೆ ಧಕ್ಕೆ ತರುವಂತಹ ಕೆಲಸ ನಡೆಯುತ್ತಿರುವುದನ್ನು ಪ್ರತಿಯೊಬ್ಬ ನಾಗರಿಕರೂ ವಿರೋಧಿಸಬೇಕು. ಹಿಂದಿನಿಂದಲೂ ಕೆರೆಯನ್ನು ಉಳಿಸಿಕೊಂಡು ಹೋಗುವ ಕುರಿತು ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಜನರು ಇದನ್ನು ಮನಗಾಣಬೇಕು. ಕೆರೆ ಇದ್ದರೆ ನಗರದ ಸೌಂದರ್ಯ ಹೆಚ್ಚಿಸುತ್ತದೆ. ಅಭಿವೃದ್ಧಿ ಹೆಸರಲ್ಲಿ ಕೆರೆ ಒತ್ತುವರಿಯಾಗಬಾರದು”ಎಂದು ತಿಳಿಸಿದರು.

ತುಮಕೂರು ನಗರದ ಹೊರವಲಯದಲ್ಲಿ ಬರುವ ಶಿರಾ ರಸ್ತೆಯ ಕೋರಾ, ದೇವರಾಯನದುರ್ಗದ ಊರ್ಡಿಗೆರೆ, ಗುಬ್ಬಿ ರಸ್ತೆಯ ಮಲ್ಲಸಂದ್ರ, ಕುಣಿಗಲ್ ರಸ್ತೆ ನಾಗವಲ್ಲಿ, ಬುಗುಡನಹಳ್ಳಿ ರಸ್ತೆಯ ಬೆಳ್ಳಾವಿಯಲ್ಲಿ ಮಾರುಕಟ್ಟೆಗಳು, ಸಂತೆಗಳನ್ನು ನಿರ್ಮಿಸಬೇಕು. ಜನರೇ ರೈತರ ಬಳಿಗೆ ಹೋಗುವಂತಹ ವ್ಯವಸ್ಥೆ ಕಲ್ಪಿಸಬೇಕು. ಚಿತ್ರದುರ್ಗದ ತುರುವನೂರು ಪಟ್ಟಣದಲ್ಲಿ, ವ್ಯವಸ್ಥಿತ ಮಾರುಕಟ್ಟೆ ನಿರ್ಮಿಸಲಾಗಿದೆ ಅದನ್ನು ಮಾದರಿಯಾಗಿಟ್ಟುಕೊಂಡು ತುಮಕೂರಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬೇಕು. ಪರಿಸರ ಉಳಿಯಬೇಕು ಎಂದು ಹೇಳುತ್ತಲೇ ಕೆರೆಗಳನ್ನು ಸಂಪೂರ್ಣವಾಗಿ ನಾಶ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.

 

ಇದನ್ನೂ ಓದಿ: ಬ್ಲೂಫಿಲ್ಮ್ ನೋಡುವುದು ಕೂಡಾ ಡ್ರಗ್ಸ್‌ನಂತೆಯೆ ವ್ಯಸನ: ಡಿಸಿಎಂ ಸವದಿ ಕಾಲೆಳೆದ ಸಾ.ರಾ. ಮಹೇಶ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...