Homeಕರ್ನಾಟಕಮದಲೂರು ಕೆರೆಗೆ ಹೇಮಾವತಿ ನೀರು; ಬಿಜೆಪಿಗೆ ತಿರುಗುಬಾಣವಾದ ಹಿಂದಿನ ಪತ್ರ!

ಮದಲೂರು ಕೆರೆಗೆ ಹೇಮಾವತಿ ನೀರು; ಬಿಜೆಪಿಗೆ ತಿರುಗುಬಾಣವಾದ ಹಿಂದಿನ ಪತ್ರ!

ಈ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮತಿ ನೀಡಿತ್ತು. ಆದರೆ, ಇದರ ವಿರುದ್ದ 2010ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ, ಅಂದಿನ ಶಾಸಕರಾಗಿದ್ದ ಸೊಗಡು ಶಿವಣ್ಣ, ಬಿ.ಸುರೇಶ್ ಗೌಡ ಮತ್ತು ಬಿ.ಸಿ.ನಾಗೇಶ್ ಪತ್ರ ಬರೆದು ಅನುಮತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದರು.

- Advertisement -
- Advertisement -

ತುಮಕೂರು ಜಿಲ್ಲೆಯ ಶಿರಾದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಬೇಕೆಂಬ ಬಿಜೆಪಿ ಮುಖಂಡರ ಮನವಿಗೆ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಲಾಗಿದೆ. 2010ರಲ್ಲಿ ಕೆರೆಗೆ ನೀರು ಹರಿಸಬಾರದೆಂದು ಮಾಜಿ ಸಚಿವ ಸೊಗಡು ಶಿವಣ್ಣ ಬರೆದಿದ್ದ ಪತ್ರವನ್ನು ಟ್ಯಾಗ್ ಮಾಡಿರುವ ಜಾಲತಾಣಿಗರು ಬಿಜೆಪಿ ಮುಖಂಡರ ದ್ವಂದ್ವಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ.

ಶಿರಾದ ಕಳ್ಳಂಬೆಳ್ಳ ಕೆರೆಗೆ ಬ್ಯಾರೇಜ್ ನಿರ್ಮಿಸಿ ಮದಲೂರು ಹಾಗೂ ಇತರೆ 24 ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮತಿ ನೀಡಿತ್ತು. ಆದರೆ, ಇದರ ವಿರುದ್ದ 2010ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ, ಅಂದಿನ ಶಾಸಕರಾಗಿದ್ದ ಸೊಗಡು ಶಿವಣ್ಣ, ಬಿ.ಸುರೇಶ್ ಗೌಡ ಮತ್ತು ಬಿ.ಸಿ.ನಾಗೇಶ್ ಪತ್ರ ಬರೆದು ಅನುಮತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದರು.

ಅದಕ್ಕೆ ತದ್ವಿರುದ್ದವಾಗಿ ಇತ್ತೀಚೆಗಷ್ಟೆ ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ನೇತೃತ್ವದಲ್ಲಿ ಶಿರಾದ ಬಿ.ಕೆ.ಮಂಜುನಾಥ ಎಸ್.ಆರ್.ಗೌಡ ಸೇರಿದಂತೆ ಹಲವರ ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. “ಮದಲೂರು ಕೆರೆಗೆ ನೀರು ಹರಿಸುವುದರಿಂದ ದನಕರುಗಳಿಗೆ ಮತ್ತು ಜನರಿಗೆ ಶುದ್ದ ಕುಡಿಯುವ ನೀರು ದೊರೆಯುತ್ತದೆ. ಈ ಭಾಗದಲ್ಲಿ ನೀರಿಗೆ ತೊಂದರೆ ಇದೆ. ಹಾಗಾಗಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವಂತೆ” ಮನವಿ ಮಾಡಿದ್ದರು.

ಈ ಪತ್ರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಶಿರಾ ತಾಲೂಕಿನ ಹಲವರು ಮಾಜಿ ಸಚಿವ ಸೊಗಡು ಶಿವಣ್ಣ ಬರೆದಿದ್ದ ಪತ್ರವನ್ನು ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಹರಿಯಬಿಟ್ಟಿದ್ದಾರೆ. ಆ ಪತ್ರದಲ್ಲಿ ಶಿರಾ ತಾಲೂಕು ಕೃಷ್ಣ ಕೊಳ್ಳದ ವ್ಯಾಪ್ತಿಗೆ ಬರುತ್ತದೆ. ಕಾವೇರಿ ಕೊಳ್ಳದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಆ ಯೋಜನೆಯನ್ನು ರದ್ದುಮಾಡಬೇಕೆಂಬ ವಿಚಾರವನ್ನು ಮುಂದಿಟ್ಟು ನೀರು ಹರಿಸಬಾರದೆಂದು ವಾದಿಸಲಾಗಿತ್ತು.

ಇದನ್ನೂ ಓದಿ: ಶಿರಾ ಉಪಚುನಾವಣೆ: ಅಭಿವೃದ್ದಿ ಮಂತ್ರ ಜಪಿಸಿದ ಕಾಂಗ್ರೆಸ್

“ಇದು ಅಚ್ಚರಿ ಅಲ್ಲ ರಾಜಕಾರಣ..!! ಮದಲೂರು ಕೆರೆ ಕೃಷ್ಣ ಕೊಳ್ಳ ವ್ಯಾಪ್ತಿಗೆ ಬರುತ್ತದೆ. ಹೇಮಾವತಿ ಕಾವೇರಿ ಕಣಿವೆ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಮದಲೂರು ಕೆರೆಗೆ ಹೇಮಾವತಿ ನೀರು ಬೇಡ ಎಂದು ಪತ್ರ ಬರೆದ ಮಾನ್ಯ ಸುರೇಶ್ ಗೌಡರಿಗೆ, ‘ಸಿರಾ ಉಪಚುನಾವಣೆ ನೇತೃತ್ವ ನನಗೆ ಬರುತ್ತೆ ಅಂತ ಗೊತ್ತಿರಲಿಲ್ಲ ಅನ್ಸುತ್ತೆ. ಕದ ತೆಗೆಯಲು ಹೋಗಿ ಏನೊ ಸಿಗಾಕ್ಕಂಡಂಗೆ ಆಗೈತೆ ಸು ಗೌಡರ ಸ್ಥಿತಿ. ಇದಕ್ಕೆ ಸ್ಪಷ್ಟೀಕರಣ ಕೊಟ್ಟು ಸಿರಾ ಕಡೆ ಬನ್ನಿ ಸಾ…!!” ಎಂದು ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟಾ ಶಂಕರ್ ವ್ಯಂಗ್ಯವಾಡಿದ್ದಾರೆ.

ಅಂದು ಹೇಮಾವತಿ ನೀರನ್ನು ಶಿರಾ ತಾಲೂಕಿನ ಕೆರೆಗಳಿಗೆ ಹರಿಸುವುದನ್ನು ಬಿಜೆಪಿಯ ಸೊಗಡು ಶಿವಣ್ಣ, ಬಿ.ಸುರೇಶ್ ಗೌಡ, ಈಗಿನ ಶಾಸಕ ಬಿ.ಸಿ.ನಾಗೇಶ್ ವಿರೋಧಿಸಿದ್ದರು. ಕಳ್ಳಂಬೆಳ್ಳದ ಹಳ್ಳಕ್ಕೆ ಅನಗತ್ಯವಾಗಿ  ಬ್ಯಾರೇಜ್ ನಿರ್ಮಾಣ ಮಾಡಿದ್ದು ಆ ಮೂಲಕ ಶಿರಾ ತಾಲೂಕಿನ ಕೆರೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು.  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಯೋಜನೆ ಕೈಬಿಡುವಂತೆ ಆದೇಶಿಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದರು.

“ಹೇಮಾವತಿ ನಾಲಾ ವಲಯದ ಮೂಲ ಯೋಜನೆಯಲ್ಲಿ ತುಮಕೂರು ಶಾಖಾ ನಾಲೆ ಹಾಗೂ ನಾಗಮಂಗಲ ಶಾಖಾ ನಾಲೆಗಳ ಸುಮಾರು 1,60,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಸುವುದು ಮತ್ತು ತುಮಕೂರು, ತಿಪಟೂರು, ಅರಸೀಕೆರೆ ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವುದು ಸೇರಿದಂತೆ ಸುಮಾರು 31 ಟಿಎಂಸಿ ನೀರನ್ನು ಮಾತ್ರ ಹಂಚಿಕೆ ಮಾಡಿದೆ. ಉಳಿದ ಯೋಜನೆಗಳನ್ನು ಪರಿಗಣಿಸಿಲ್ಲ” ಎಂಬ ಬಗ್ಗೆ  ತುಮಕೂರು ಬಿಜೆಪಿ ಮುಖಂಡರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು.

ಈ ಪತ್ರದ ಮೇಲೆ ಆರ್.ಡಿ.ಪಿ.ಆರ್ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿ “ಕೂಡಲೇ ಕಡತ ಮಾಡಿಸಿ, ಅಂತಿಮ ತೀರ್ಮಾನಕ್ಕೆ ಮುಂಚೆ ಕಾಮಗಾರಿ ಮುಂದುವರಿಸಬಾರದು” ಎಂದು ಫುಟ್ ನೋಟ್ ಬರೆದಿದ್ದು, ಅದರ ಕೆಳಗೆ ಬಿಎಸ್.(ಬಿ.ಎಸ್.ಯಡಿಯೂರಪ್ಪ) ಎಂದು ಮುಖ್ಯಮಂತ್ರಿಗಳು ಕಿರು ಸಹಿ ಮಾಡಿದ್ದಾರೆ.

ಶಿರಾ ಉಪಚುನಾವಣೆಯ ಹಿನ್ನೆಲೆಯಲ್ಲಿ 2010ರ ಪತ್ರ ಬಿಡುಗಡೆ ಮಾಡಿರುವ ಜಾಲತಾಣಿಗರು, ಇದೇ ಬಿಜೆಪಿ ಮುಖಂಡರ ದ್ವಂದ್ವಕ್ಕೆ ಉದಾಹರಣಗೆ ಎಂದು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಶಿರಾ ಉಪಚುನಾವಣೆ: ಉದ್ಘಾಟನೆ ಹೆಸರಲ್ಲಿ ಬಿಜೆಪಿ ಪ್ರಚಾರ ಶುರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...