Homeಕರ್ನಾಟಕ‘ಬಿಜೆಪಿಗೆ ಮತ ಹಾಕಲ್ಲ’: ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಪ್ರತಿಜ್ಞೆ

‘ಬಿಜೆಪಿಗೆ ಮತ ಹಾಕಲ್ಲ’: ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಪ್ರತಿಜ್ಞೆ

- Advertisement -
- Advertisement -

“ಬಿಜೆಪಿಗೆ ಧಿಕ್ಕಾರ, ಬಿಜೆಪಿಗೆ ನಮ್ಮ ಮತ ಇಲ್ಲ, ಈ ಸಲ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರುವುದಿಲ್ಲ” ಎಂದು ನ್ಯಾಷನಲ್‌ ಹೆಲ್ತ್‌ ಮಿಷನ್‌ (ಎಂಎಚ್‌ಎಂ) ಒಳಗುತ್ತಿಗೆ ನೌಕರರು ಗುಡುಗಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌‌ನಲ್ಲಿ ಕಳೆದ ನಲವತ್ತು ದಿನಗಳಿಂದ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಳಗುತ್ತಿಗೆ ನೌಕರರ ಸಂಘದ ವತಿಯಿಂದ ನಡೆಯುತ್ತಿದ್ದ ಹೋರಾಟವನ್ನು ಕೈಬಿಟ್ಟ ನೌಕರರು, “ನಮ್ಮ ಹೋರಾಟ ಹಾಗೂ ಮನವಿ ಮನವಿಗೆ ಸಕಾರಾತ್ಮಕವಾಗಿ ಬಿಜೆಪಿ ಸರ್ಕಾರ ಸ್ಪಂದಿಸಲಿಲ್ಲ, ಎಸ್ಮಾ ಕಾಯ್ದೆಯನ್ನು ಜಾರಿಗೊಳಿಸುತ್ತೇನೆ ಎಂದಿತು, ಕಾನೂನಿನ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕಲು ಭ್ರಷ್ಟ ಸರ್ಕಾರ ಪ್ರಯತ್ನಿಸಿತು” ಎಂದು ಆರೋಪಿಸಿದ್ದಾರೆ.

“ಎನ್‌ಎಚ್‌ಎಂ ಒಳಗುತ್ತಿಗೆ ನೌಕರರು 26,937 ಜನರಿದ್ದೇವೆ. ನಮ್ಮ ಕುಟುಂಬಗಳು ಹಾಗೂ ನೆರೆಹೊರೆಯವರು ಬಿಜೆಪಿಗೆ ಮತವನ್ನು ಹಾಕುವುದಿಲ್ಲ. ಯಾವುದೇ ಕಾರಣಕ್ಕೂ ಮತವನ್ನು ಇವರಿಗೆ ಹಾಕುವುದಿಲ್ಲ” ಎಂದು ಪ್ರತಿಜ್ಞೆಯನ್ನು ಸ್ವೀಕರಿಸಿದ್ದಾರೆ.

“ಎನ್‌ಎಚ್‌ಎಂ ಒಳಗುತ್ತಿಗೆ ನೌಕರರನ್ನು ಖಾಯಮಾತಿ ಮಾಡುವುದಾಗಿ ಭರವಸೆಯನ್ನು ನೀಡಿ, ತಮ್ಮ ಪ್ರಣಾಳಿಕೆಯಲ್ಲಿ ಹಾಕಿಕೊಳ್ಳುವ ಪಕ್ಷಕ್ಕೆ ಮಾತ್ರ ನಮ್ಮ ಮತವನ್ನು ಹಾಕುತ್ತೇವೆ. ಪ್ರಜ್ಞಾವಂತರಾಗಿ ಮತ ಚಲಾವಣೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.

“ನಮ್ಮನ್ನು ಉಳಿಸದ ಸರ್ಕಾರವನ್ನು, ಉಳಿಸದ ಪಕ್ಷವನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ. ನಮ್ಮ ಮನೆ ಬಾಗಿಲಿಗೆ ಮತ ಕೇಳಲು ಬರುವ ಪ್ರತಿಯೊಬ್ಬ ಬಿಜೆಪಿ ಅಭ್ಯರ್ಥಿಗೂ ಪ್ರಶ್ನೆಗಳನ್ನು ಕೇಳೋಣ. ನಾವು ಹೋರಾಟಕ್ಕೆ ಕುಳಿತ್ತಿದ್ದಾಗ ಎಲ್ಲಿ ಹೋಗಿದ್ದೀರಿ ಎಂದು ಪ್ರಶ್ನಿಸುತ್ತೇವೆ” ಎಂದು ಶಪಥ ಮಾಡಿದ್ದಾರೆ. ಆರೋಗ್ಯ ಸಚಿವ ಡಾ.ಸುಧಾಕರ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಬಿಫೆಸ್‌ 2023: ಗೊಂದಲದ ಗೂಡಾದ ಡೇ ಪಾಸ್‌; ಕ್ಯೂಆರ್‌ ಕೋಡ್ ಸ್ಕ್ಯಾನ್‌ ಆಗದೆ ಪರದಾಟ

ರಾಮನಗರ ಜಿಲ್ಲೆಯ ಎನ್‌ಎಚ್‌ಎಂ ಉದ್ಯೋಗಿ ಪದ್ಮರೇಖಾ ಮಾತನಾಡಿ, “ಫೆಬ್ರುವರಿ 13ನೇ ತಾರೀನಿಂದ ಹೋರಾಟ ನಡೆಯಿತು. ಈ ಮುಷ್ಕರಕ್ಕೆ ನಿರೀಕ್ಷಿತ ಫಲ ದೊರೆತ್ತಿಲ್ಲ. ಮುಷ್ಕರವನ್ನು ನಿಲ್ಲಿಸುತ್ತಿದ್ದೇವೆ ಹೊರತು, ಹೋರಾಟವನ್ನಲ್ಲ” ಎಂದು ಎಚ್ಚರಿಸಿದ್ದಾರೆ.

“ರಾಜ್ಯದ ಮೂಲೆಮೂಲೆಯಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ಗೆ ಬಂದ ನೌಕರರು ಸರ್ಕಾರದ ಮನವೊಲಿಸುವ ಪ್ರಯತ್ನವನ್ನು ಮಾಡಿದರು. ನಮ್ಮ ಮನವಿಗೆ ಸ್ಪಂದಿಸುವುದಿರಲಿ, ಕನಿಷ್ಠ ಸಾಂತ್ವನವನ್ನೂ ನೀಡಲಿಲ್ಲ. ನಮಗೆ ನೀಡಿರುವ ನೋವಿಗೆ ಬಿಜೆಪಿ ಪಶ್ಚಾತ್ತಾಪಪಡಲಿದೆ” ಎಂದಿದ್ದಾರೆ.

“ಕನಿಷ್ಠ ಹೇಳಿಕೆಯನ್ನು ನೀಡದ ಆರೋಗ್ಯ ಸಚಿವರಿಗೆ, ಗಂಟೆಗೊಂದು ಗಳಿಗೆಗೊಂದು ಮಾತನಾಡಿದ ಮುಖ್ಯಮಂತ್ರಿಯವರಿಗೆ ಧಿಕ್ಕಾರ” ಎಂದು ಕೂಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...