Homeಕರ್ನಾಟಕಬಿಫೆಸ್‌ 2023: ಗೊಂದಲದ ಗೂಡಾದ ಡೇ ಪಾಸ್‌; ಕ್ಯೂಆರ್‌ ಕೋಡ್ ಸ್ಕ್ಯಾನ್‌ ಆಗದೆ ಪರದಾಟ

ಬಿಫೆಸ್‌ 2023: ಗೊಂದಲದ ಗೂಡಾದ ಡೇ ಪಾಸ್‌; ಕ್ಯೂಆರ್‌ ಕೋಡ್ ಸ್ಕ್ಯಾನ್‌ ಆಗದೆ ಪರದಾಟ

- Advertisement -
- Advertisement -

14ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫೆಸ್‌) ಮಾರ್ಚ್ 23ರಿಂದ 30ರವರೆಗೆ ನಡೆಯುತ್ತಿದ್ದು, ಬೆಳಗಿನ ಪಾಸ್‌ ಪಡೆಯಲು ಸಿನಿಮಾಸಕ್ತರು ಪರದಾಡುವಂತಾಗಿದೆ. ಪಾಸ್‌ ಪಡೆಯಲು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಲಾಗದೆ ಒದ್ದಾಡುತ್ತಿದ್ದಾರೆ.

ಪಾಸ್ ಪಡೆದವರ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಆಗುತ್ತಿಲ್ಲ. ಹಣವನ್ನೂ ತೆಗೆದುಕೊಳ್ಳುತ್ತಿಲ್ಲ.ಕ್ಯೂಆರ್‌ ಕೋಡ್ಅನ್ನು ಲೆನ್ಸ್ ಎನ್ನುವ ಆಪ್‌ ಮೂಲಕವೇ ಸ್ಕ್ಯಾನ್‌ ಮಾಡಬೇಕಾಗುತ್ತಿದೆ. ಈ ಕುರಿತು ಆಯೋಜಕರಿಗೂ ಸರಿಯಾದ ತಿಳಿವಳಿಕೆ ಇಲ್ಲ ಎಂದು ಬಿಫೆಸ್‌ಗೆ ಹೋಗಿ ವಾಪಸ್‌ ಬಂದವರು ಬೇಸರ ವ್ಯಕ್ತಪಡಿಸಿದ್ದಾರೆ.

“ಪ್ರವೇಶ ಪಡೆಯಲು ಸಾಧ್ಯವಾಗದೆ ಅನೇಕರು ವಾಪಸ್ ಹೋಗಿದ್ದಾರೆ. ಇಪ್ಪತ್ತು ನಿಮಿಷಕ್ಕೊಬ್ಬನಿಗೆ ಸ್ಕ್ಯಾನ್ ಆಗುತ್ತಿದೆ. ನೋಂದಣಿಯಾದವರು ಹಣ ಕಟ್ಟಲಾಗದೆ, ಪಾಸ್‌ ಪಡೆಯದ ಸ್ಥಿತಿಯೂ ನಿರ್ಮಾಣವಾಗಿದೆ” ಎಂದು ಟಿಕೆಟ್ ಪಡೆಯಲು ಸಾಧ್ಯವಾಗದ ಸಿನಿಮಾಸಕ್ತರೊಬ್ಬರು ‘ನಾನುಗೌರಿ.ಕಾಂ’ಗೆ ತಿಳಿಸಿದರು.

“ಬಿಫೆಸ್‌ನಲ್ಲಿ ಸಿನಿಮಾ ನೋಡಲು ಆಸಕ್ತಿ ಇರುವವರು ಬಿಫೆಸ್ ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಆಧಾರ್‌ ನಂಬರ್‌ ಹಾಗೂ ಫೋಟೋ ಪ್ರತಿಯನ್ನು ನೋಂದಣಿಗೆ ಲಗತ್ತಿಸಬೇಕಾಗಿರುತ್ತದೆ. ಆನಂತರ ಪೇಮೆಂಟ್ ಕೇಳುತ್ತದೆ. ಹಣ ಕಟ್ಟಿದ ಮೇಲೆ ಕನ್ಫರ್ಮ್‌‌ಮೇಷನ್‌‌ ಸಂದೇಶ ಬರುತ್ತದೆ. ಅದರ ಆಧಾರದಲ್ಲಿ ಷೋ ನಡೆಯುವಲ್ಲಿಗೆ ಹೋದಾಗ ಪಾಸ್ ದೊರಕುತ್ತದೆ. ವಿವಿಧ ಪಾಸ್‌ಗಳಿದ್ದು,  ಬೇರೆ ಬೇರೆ ಶುಲ್ಕವಿರುತ್ತದೆ” ಎಂದು ನೋಂದಣಿ ಪ್ರಕ್ರಿಯೆಯ ಕುರಿತು ವಿವರಿಸಿದರು.

ಇದನ್ನೂ ಓದಿರಿ: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಪಾಲಾರ್, ಗಾಂಧಿ ಮತ್ತು ನೋಟು ಸಿನಿಮಾ ಆಯ್ಕೆ ಮಾಡದಿರುವುದಕ್ಕೆ ಆಕ್ರೋಶ

“ಫೇಮೆಂಟ್ ಮಾಡಲು ಸಾಧ್ಯವಾಗದೆಯೂ, ಕನ್ಫರ್ಮೆಷನ್ ಬಂದಿರುವ ಉದಾಹರಣೆಗಳಿವೆ. ಹೀಗಾದಾಗ ಪಾಸ್ ಕೊಡುವುದಿಲ್ಲ. ಎರಡು ದಿನ ಮಾತ್ರ ಪೇಮೆಂಟ್ ಲಿಂಕ್‌ ಸರಿಯಾಗಿತ್ತು. ಅನೇಕ ಸಲ ಪ್ರಯತ್ನ ಮಾಡಿದ್ದರಿಂದ ಲಿಂಕ್ ಒಪನ್‌ ಆಗದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ನೋಂದಣಿಯಾಗಿದ್ದರೂ ಪೇಮೆಂಟ್ ಲಿಂಕ್ ತೆರೆದುಕೊಳ್ಳುತ್ತಿರಲಿಲ್ಲ. ಮತ್ತೆ ಪ್ರಯತ್ನಿಸಿದರೆ ಈಗಾಗಲೇ ನೋಂದಣಿಯಾಗಿದೆ ಎಂದು ಬರುತ್ತಿತ್ತು. ಇಂಥವರಿಗೆ ಬೆಳಗಿನ ಪಾಸ್‌ ನೀಡುತ್ತೇವೆ ಎಂದು ತಿಳಿಸಿದರು. ಈಗ ಕ್ಯೂಆರ್‌ ಕೋಡ್ ಸ್ಕ್ಯಾನ್‌ ಆಗುತ್ತಿಲ್ಲ. ಗೂಗಲ್‌ ಪೇ, ಪೋನ್‌ ಪೇ ಮೂಲಕ ಹಣ ಕಟ್ಟಲು ಆಗಲ್ಲ. ಲೆನ್ಸ್‌ ಎನ್ನುವ ಆಪ್‌ ಮೂಲಕ ಕಟ್ಟಬೇಕು ಎನ್ನುತ್ತಿದ್ದಾರೆ. ಅದು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಅಶೋಕ್ ಕಶ್ಯಪ್‌ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ ಅವರು ನಮ್ಮ ಕರೆಗೆ ಲಭ್ಯವಾಗಿಲ್ಲ. (ಪ್ರತಿಕ್ರಿಯೆ ಸಿಕ್ಕಲ್ಲಿ ಸುದ್ದಿಯನ್ನು ನವೀಕರಿಸಲಾಗುವುದು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...