Homeಮುಖಪುಟಗುಡ್‌ ನ್ಯೂಸ್‌: ಹಿಂದೂ ಯುವಕನಿಗೆ ರಕ್ತದಾನ ಮಾಡಲು ಉಪವಾಸ ವ್ರತ ಮುರಿದ ಮುಸ್ಲಿಂ ಮಹಿಳೆ..

ಗುಡ್‌ ನ್ಯೂಸ್‌: ಹಿಂದೂ ಯುವಕನಿಗೆ ರಕ್ತದಾನ ಮಾಡಲು ಉಪವಾಸ ವ್ರತ ಮುರಿದ ಮುಸ್ಲಿಂ ಮಹಿಳೆ..

- Advertisement -
- Advertisement -

ಹಿಂದೂ ಯುವಕನಿಗೆ ರಕ್ತದಾನ ಮಾಡಲು ಮುಸ್ಲಿಂ ಮಹಿಳೆಯೊಬ್ಬರು ರಂಜಾನ್‌ ಉಪವಾಸ ವ್ರತ ಮುರಿದ ಅಪರೂಪದ ಘಟನೆ ಜರುಗಿದೆ.

ಭಾರತದಲ್ಲಿ ಕೋಮು ಸಾಮರಸ್ಯಕ್ಕೆ ದೊಡ್ಡ ಅಪಾಯ ಎದರಾಗಿರುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಖೇರಿ ಜಿಲ್ಲೆಯ ಈ ಒಂದು ಉದಾಹರಣೆ ಭರವಸೆಯ ಸಂದೇಶವನ್ನು ನೀಡುತ್ತಿದೆ.

ಉತ್ತರ ಪ್ರದೇಶದ ಪಿಹಾನಿ ಪಟ್ಟಣದಲ್ಲಿ ಮಿಶ್ರಾನ ಸಮುದಾಯದಲ್ಲಿ ವಾಸಿಸುವ ವಿಜಯ್ ಕುಮಾರ್ ರಾಸ್ತೋಗಿ ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದಾಗ ಅವರಿಗೆ ರಕ್ತದ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಓ-ಪಾಸಿಟಿವ್ ರಕ್ತ ಅಗತ್ಯಬಿದ್ದಿದ್ದು ಕೂಡಲೇ ಯಾರ ಬಳಿಯೂ ಆ ಗುಂಪಿನ ರಕ್ತ ಲಭ್ಯವಾಗಿಲ್ಲಿ. ಬ್ಲಡ್‌ ಬ್ಯಾಂಕ್‌ನಲ್ಲಿಯೂ ಸಹ ಸಿಗದೇ ಹೋಗಿದೆ.

ಈ ವಿಷಯವನ್ನು ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಮನವಿ ಮಾಡಲಾಯಿತು. ಆಗ ಲಖಿಂಪುರ ಖೇರಿ ಜಿಲ್ಲೆಯ ಹಿದಾಯತ್ ನಗರದ ನಿವಾಸಿ ಅಲಿಶಾ ಖಾನ್ ಓ-ಪಾಸಿಟಿವ್ ರಕ್ತ ಗುಂಪನ್ನು ಹೊಂದಿದ್ದು, ಸಮಸ್ಯೆಯನ್ನು ಕೇಳಿದ ಖಾನ್ ತಕ್ಷಣ ರಕ್ತದಾನ ಮಾಡಲು ಒಪ್ಪಿದ್ದಾರೆ.

ಈ ಸಂದರ್ಭದಲ್ಲಿ ಅವರು ರಂಜಾನ್‌ ಉಪವಾಸ ವ್ರತದಲ್ಲಿದ್ದರು. ಆದರೆ ರಕ್ತದಾನ ಮಾಡಬೇಕಾದರೆ ಆಹಾರವನ್ನು ಸೇವಿಸಿರುವುದು ಕಡ್ಡಾಯವಾಗಿರುವುದರಿಂದ ಅವರು ವ್ರತ ಮುರಿದು ಆಹಾರ ಸೇವಿಸಿ ಸ್ವಲ್ಪ ಸಮಯದ ನಂತರ ರಾಸ್ತೋಗಿಗೆ ರಕ್ತದಾನ ಮಾಡಿದ್ದಾರೆ. ಈಗ ರಾಸ್ತೋಗಿಯವರ ಆರೋಗ್ಯವು ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈಗ ಅಲಿಶಾ ಖಾನ್ ಅವರ ನಿಸ್ವಾರ್ಥ ಕೃತ್ಯಕ್ಕಾಗಿ ಆನ್‌ಲೈನ್‌ನಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಹಲವಾರು ಜನರು ಇದು “ಭಾರತದ ನಿಜವಾದ ಮುಖ” ಎಂದು ಕರೆಯುತ್ತಿದ್ದಾರೆ. ಬಹಳಷ್ಟು ಟ್ವಿಟ್ಟರ್‌ ಬಳಕೆದಾರರು ಅಲಿಶಾ ಖಾನ್ ರಕ್ತ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ. ಜೈ ಹಿಂದ್‌ ಎಂದು ಉಲ್ಲೇಖ ಮಾಡಿದ್ದಾರೆ.


ಇದನ್ನೂ ಓದಿ: 10 ಸಾವಿರ ವೆಚ್ಚದಲ್ಲಿ ವೆಂಟಿಲೇಟರ್‌ ತಯಾರಿಸಿದ ಕಾಶ್ಮೀರಿ ಯುವಕರ ತಂಡ! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. O+ve blood ಎಲ್ಲೂ ಸಿಗಲಿಲ್ಲ ಅನ್ನೋದು ಮೊದಲ ಸುಳ್ಳು. ಪ್ರಚಾರ priyate ಅಷ್ಟೇ.
    ಸುಳ್ಯದ ಕಾಂಗ್ರೆಸ್ ನಾಯಕಿ ವಹೀದಾ ಇಸ್ಮಾಯಿಲ್ ಗೆ ಅವರದೇ ಸಮುದಾಯದ ವ್ಯಕ್ತಿ ಚೂರಿ ಹಾಕಿದಾಗ ತುರ್ತು ab + ವೇ ರಕ್ತ ನೀಡಿದ್ದು ಭಜರಂಗ್ ದಳದ ವಿನಯ್ ಕುಮಾರ್ ಮತ್ತು ಮಹೇಶ್ ಕುಮಾರ್. ಆದರೆ ಪ್ರಚಾರ ಪಡೆಯ ಲಿಲ್ಲ.

  2. ಇದರಲ್ಲಿ ಜಾತಿ ಭೆದ ಬೇಡ ನಾಲೆ ದಿವಸ ನಮಗೆ ಏನ್ ಅಗ್ಬಹುದು ಯಾರಿಗು ಎಲಲಿಕ್ಕೆ ಸಾದ್ಯ ವಿಲ್ಲ

LEAVE A REPLY

Please enter your comment!
Please enter your name here

- Advertisment -

Must Read

ಬುಲ್ಡೋಝರ್ ಬಳಸಿ ಮನೆ ಧ್ವಂಸ ಪ್ರಕರಣ : ಐದು ಕುಟುಂಬಗಳಿಗೆ 30 ಲಕ್ಷ ರೂ....

0
ನಾಗಾಂವ್‌ ಜಿಲ್ಲೆಯಲ್ಲಿ 2022ರಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಐದು ಮುಸ್ಲಿಂ ಕುಟುಂಬಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಸರ್ಕಾರ ಧ್ವಂಸಗೊಳಿಸಿತ್ತು. ಇದೀಗ ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿಗಳನ್ನು...