Homeಮುಖಪುಟ'ಕರಾಚಿ ಸ್ವೀಟ್ಸ್'‌ ಅಂಗಡಿ ಹೆಸರು ಬದಲಿಸುವಂತೆ ಶಿವಸೇನೆ ಮುಖಂಡನ ಧಮಕಿ!

‘ಕರಾಚಿ ಸ್ವೀಟ್ಸ್’‌ ಅಂಗಡಿ ಹೆಸರು ಬದಲಿಸುವಂತೆ ಶಿವಸೇನೆ ಮುಖಂಡನ ಧಮಕಿ!

ಘಟನೆ ನಡೆದ ಬಳಿಕ ಬೆದರಿಕೆ ಮಣಿದ ಅಂಗಡಿ ಮಾಲೀಕ 'ಕರಾಚಿ' ಎನ್ನುವ ಅಕ್ಷರಗಳು ಕಾಣಿಸದಂತೆ ಪೇಪರ್‌ನಿಂದ ಮುಚ್ಚಿದ್ದಾರೆ.

- Advertisement -
- Advertisement -

‘ಕರಾಚಿ ಸ್ವೀಟ್ಸ್‌ ಅಂಗಡಿ’ಯ ಹೆಸರನ್ನು ಬದಲಾಯಿಸುವಂತೆ ಶಿವಸೇನೆಯ ಮುಖಂಡ ನಿತಿನ್ ನಂದಗಾಂವ್ಕರ್ ಅಂಗಡಿ ಮಾಲೀಕನನ್ನು ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕರಾಚಿ ಎನ್ನುವುದು ಪಾಕಿಸ್ತಾನದ ಒಂದು ಸ್ಥಳದ ಹೆಸರಾಗಿದೆ. ಹಾಗಾಗಿ ಇದನ್ನು ಬದಲಾಯಿಸಿ, ಮರಾಠಿಯಲ್ಲಿ ಯಾವುದಾದರೂ ಹೆಸರಿಡುವಂತೆ ಶಿವಸೇನೆ ಮುಖಂಡ ಒತ್ತಾಯಿಸುತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಎನ್‌ಐ, “ಶಿವಸೇನೆಯ ಮುಖಂಡ ನಿತಿನ್ ನಂದಗಾಂವ್ಕರ್ ಅವರ ವೀಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಕರಾಚಿ ಎನ್ನುವ ಪದವನ್ನು ಬದಲಾಯಿಸುವಂತೆ ಪಶ್ಚಿಮ ಬಾಂದ್ರಾದಲ್ಲಿರುವ ಸ್ವೀಟ್ಸ್‌ ಅಂಗಡಿಯ ಮಾಲೀಕರನ್ನು ಒತ್ತಾಯಿಸುತ್ತಿದ್ದಾರೆ. ‘ನೀವು ಇದನ್ನು ಮಾಡಲೆಬೇಕು. ನಾವು ನಿಮಗೆ ಕಾಲಾವಕಾಶ ನೀಡುತ್ತೇವೆ. ‘ಕರಾಚಿ’ಗೆ ಬದಲಾಗಿ ಮರಾಠಿಯಲ್ಲಿ ಬೇರೆ ಯಾವುದಾದರೂ ಹೆಸರಿಡಿ’ ಎಂದು ನಿತಿನ್ ವೀಡಿಯೋದಲ್ಲಿ ಹೇಳುತ್ತಿರುವುದು ದಾಖಲಾಗಿದೆ” ಎಂದು ವರದಿ ಮಾಡಿದೆ.

ಇದನ್ನೂ ಓದಿ: ಡಿಸೆಂಬರ್ 7 ರಿಂದ 15 ರವರೆಗೆ ಚಳಿಗಾಲದ ಅಧಿವೇಶನ; ಈ ಬಾರಿಯೂ ರಾಜಧಾನಿಯಲ್ಲೇ ನಡೆಸಲು…


ಈ ಕುರಿತು ಮುಂಬೈ ಮಿರರ್ ವರದಿ ಮಾಡಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ “ನಿಮಗೆ ಬೇಕಾದ ಹೆಸರಿಗೆ ಅದನ್ನು ಬದಲಾಯಿಸಿ, ಆದರೆ ಅದರಿಂದ ‘ಕರಾಚಿ’ ಪದವನ್ನು ತೆಗೆದುಹಾಕಿ. ನಾನು ಆ ಪದವನ್ನು ದ್ವೇಷಿಸುತ್ತೇನೆ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಯಾವುದೇ ಹೆಸರನ್ನು ಮುಂಬೈನಲ್ಲಿ ಬಳಸಲು ಅನುಮತಿಸುವುದಿಲ್ಲ. ಏಕೆಂದರೆ ಅದು ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶ” ಎಂದು ನಂದಗಾಂವ್ಕರ್ ಹೇಳುವುದನ್ನು ಕೇಳಬಹುದು.

ಘಟನೆ ನಡೆದ ಬಳಿಕ ಬೆದರಿಕೆ ಮಣಿದ ಅಂಗಡಿ ಮಾಲೀಕ ‘ಕರಾಚಿ’ ಎನ್ನುವ ಅಕ್ಷರಗಳು ಕಾಣಿಸದಂತೆ ಪೇಪರ್‌ನಿಂದ ಮುಚ್ಚಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಪಾಕ್ ಹೆಸರುಗಳನ್ನು ದ್ವೇಷಿಸುವ ಪರಿಪಾಠ ಆರಂಭವಾಗಿರುವುದರಿ ಸೂಚನೆ ಇದಾಗಿದೆ. ಪ್ರಸಿದ್ದ ತಿನಿಸು ಮೈಸೂರ್ ಪಾಕ್‌ ನಲ್ಲಿಯೂ ಸಹ ಸದ್ಯದಲ್ಲಿಯೇ ಪಾಕ್ ತೆಗೆಸಲಿದ್ದಾರೆ ಎಂದು ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದನ್ನು ನಾವಿಲ್ಲ ಸ್ಮರಿಸಬಹುದು.


ಇದನ್ನೂ ಓದಿ: 10 ಕೊಟಿ ದಂಡ ಪಾವತಿಸಿದ ಜಯಲಲಿತ ಆಪ್ತೆ ಶಶಿಕಲಾ; ಜನವರಿಯಲ್ಲಿ ಬಿಡುಗಡೆ ಸಾಧ್ಯತೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...