Homeಅಂತರಾಷ್ಟ್ರೀಯಟ್ರಂಪ್ ‌ಟವರ್‌ ಮುಂದೆ ’ಬ್ಲ್ಯಾಕ್ ಲೈವ್ಸ್ ಮ್ಯಾಟರ್‌’ ಎಂದು ಬರೆದ ಚಳವಳಿಗಾರರು!

ಟ್ರಂಪ್ ‌ಟವರ್‌ ಮುಂದೆ ’ಬ್ಲ್ಯಾಕ್ ಲೈವ್ಸ್ ಮ್ಯಾಟರ್‌’ ಎಂದು ಬರೆದ ಚಳವಳಿಗಾರರು!

ಸೆಂಟ್ರಲ್ ಪಾರ್ಕ್ ಬಳಿಯ ಐಷಾರಾಮಿ ಗಗನಚುಂಬಿ ಕಟ್ಟಡವಾದ ಟ್ರಂಪ್ ಟವರ್‌‌ನಲ್ಲಿ 2017 ಕ್ಕಿಂತ ಮೊದಲು ಟ್ರಂಪ್ ವಾಸಿಸುತ್ತಿದ್ದರು.

- Advertisement -
- Advertisement -

ಮ್ಯಾನ್‌‌ಹಟನ್ ಫಿಫ್ತ್ ಅವೆನ್ಯೂದ ಟ್ರಂಪ್‌ಟವರ್ ಹೊರಗಿನ ಪಾದಚಾರಿ ಮಾರ್ಗದಲ್ಲಿ ಗುರುವಾರ ಬೃಹತ್ ಗಾತ್ರದಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಎಂದು ಬರೆಯಲಾಗಿದೆ. ಅಮೆರಿಕದ ಇತರೆಡೆ ಕೂಡಾ ಚಳವಳಿಯನ್ನು ಬೆಂಬಲಿಸುವ ಇದೇ ರೀತಿಯ ಭಿತ್ತಿಚಿತ್ರಗಳ ಪ್ರದರ್ಶನ ಮುಂದುವರಿದಿದೆ.

ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನದ ವಿರುದ್ಧ ಪದೇ ಪದೇ ವಾಗ್ಧಾಳಿ ನಡೆಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟ್ರಂಪ್‌ಟವರ್ ಪಾದಚಾರಿ ಮಾರ್ಗದಲ್ಲಿ ತುಂಬಿ ಹೋಗಿರುವ ಹಳದಿ ಬಣ್ಣದ ಅಕ್ಷರಗಳಲ್ಲಿ ಮೂಡಿದ ಬರಹದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ ಕಳೆದ ತಿಂಗಳು ಈ ಯೋಜನೆಯನ್ನು ರೂಪಿಸಿದಾಗ, “ಡೆಮಾಕ್ರಟಿಕ್ ನಾಯಕರು ನಗರದ ಪ್ರಸಿದ್ಧ ಬೀದಿಯನ್ನು ದ್ವೇಷದ ಸಂಕೇತದೊಂದಿಗೆ ಅವಹೇಳನ ಮಾಡಿದ್ದಾರೆ” ಎಂದು ಟ್ರಂಪ್ ಆರೋಪಿಸಿದ್ದರು.

ವಿವಿಧ ಸಂಸ್ಥೆಗಳ ಹಲವಾರು ಸ್ವಯಂಸೇವಕರು ಘೋಷಣೆಯನ್ನು ಬರೆದರು. ನಾಗರಿಕ ಹಕ್ಕುಗಳ ನಾಯಕ ಅಲ್ ಶಾರ್ಪ್ಟನ್ ಮತ್ತು ನ್ಯೂಯಾರ್ಕ್ ಮೇಯರ್ ಬಿಲ್ ಡೆ ಬ್ಲಾಸಿಯೊ ಕೂಡಾ ಅದರಲ್ಲಿ ಭಾಗವಹಿಸಿದರು.

ಮಿನ್ನಿಯಾಪೋಲಿಸ್‌ನಲ್ಲಿ ನಿರಾಯುಧದಾರಿ ಕಪ್ಪು ವ್ಯಕ್ತಿ ಜಾರ್ಜ್ ಫ್ಲಾಯ್ಡ್‌ ಎಂಬವರನ್ನು ಪೊಲೀಸರು ಹತ್ಯೆ ಮಾಡಿದ ನಂತರ ಪ್ರತಿಭಟನೆಗಳು ಭುಗಿಲೆದ್ದಿವೆ. ಅಲ್ಲದೆ ವಿಶ್ವದಾದ್ಯಂತ ಬೆಂಬಲ ಗಳಿಸಿವೆ.

ವಾಷಿಂಗ್ಟನ್ ಮೇಯರ್ ಮುರಿಯಲ್ ಬೌಸರ್ ತನ್ನ ನಗರದ 16 ನೇ ಬೀದಿಯಲ್ಲಿರುವ ಪ್ರದೇಶ ವೈಟ್‌ಹೌಸ್‌ ಬ್ಲಾಕ್ ಅನ್ನು ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಪ್ಲಾಜಾ ಎಂದು ಮರುನಾಮಕರಣ ಮಾಡಿದ್ದಾರೆ. ಪ್ರಸ್ತುತ ಈ ಪ್ರದೇಶವು ಜನಾಂಗೀಯ ವಿರೋಧಿ ಪ್ರತಿಭಟನೆಯ ಕೇಂದ್ರಬಿಂದುವಾಗಿದೆ.

ಸೆಂಟ್ರಲ್ ಪಾರ್ಕ್ ಬಳಿಯ ಐಷಾರಾಮಿ ಗಗನಚುಂಬಿ ಕಟ್ಟಡವಾದ ಟ್ರಂಪ್ ಟವರ್‌‌ನಲ್ಲಿ 2017 ಕ್ಕಿಂತ ಮೊದಲು ಟ್ರಂಪ್ ವಾಸಿಸುತ್ತಿದ್ದರು.


ಓದಿ: ವರ್ಣಭೇದ ನೀತಿ, ಫೇರ್‌ನೆಸ್ ಕ್ರೀಮ್‌ಗಳು, ಮತ್ತು ಬ್ಲಾಕ್ ಲೈವ್ಸ್‌ ಮ್ಯಾಟರ್‌ ಎನ್ನುವ ನಟಿಯರು!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬುಲ್ಡೋಝರ್ ಬಳಸಿ ಮನೆ ಧ್ವಂಸ ಪ್ರಕರಣ : ಐದು ಕುಟುಂಬಗಳಿಗೆ 30 ಲಕ್ಷ ರೂ....

0
ನಾಗಾಂವ್‌ ಜಿಲ್ಲೆಯಲ್ಲಿ 2022ರಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಐದು ಮುಸ್ಲಿಂ ಕುಟುಂಬಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಸರ್ಕಾರ ಧ್ವಂಸಗೊಳಿಸಿತ್ತು. ಇದೀಗ ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿಗಳನ್ನು...