Homeಕರ್ನಾಟಕಎನ್​ಐಎ ತನಿಖೆಗೆ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪ್ರಕರಣ

ಎನ್​ಐಎ ತನಿಖೆಗೆ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪ್ರಕರಣ

ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಹಾಗೂ ಕರ್ನಾಟಕ ಆಸ್ತಿಪಾಸ್ತಿ ನಾಶ ಮತ್ತು ನಷ್ಟ ತಡೆ ಕಾಯ್ದೆಯ ವಿವಿಧ ಸೆಕ್ಷನ್​​ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದೆ.

- Advertisement -
- Advertisement -

ಬೆಂಗಳೂರಿನಲ್ಲಿ ಆಗಸ್ಟ್ 11ರಂದು ನಡೆದಿದ್ದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ವಹಿಸಿಕೊಂಡಿದೆ. ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಹಾಗೂ ಕರ್ನಾಟಕ ಆಸ್ತಿಪಾಸ್ತಿ ನಾಶ ಮತ್ತು ನಷ್ಟ ತಡೆ ಕಾಯ್ದೆಯ ವಿವಿಧ ಸೆಕ್ಷನ್​​ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದೆ.

ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಎನ್‌ಐಎ, ಮೊದಲ ಪ್ರಕರಣವನ್ನು ಆಗಸ್ಟ್ 12 ರಂದು ದೇವರ ಜೀವನ ಹಳ್ಳಿ  ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ 195/2020ರ ಆಧಾರದಲ್ಲಿ ದಾಖಲಿಸಿದೆ. ಎರಡನೇ ಪ್ರಕರಣವನ್ನು ಆಗಸ್ಟ್ 12ರಂದು ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ 229/2020 ಆಧರಿಸಿದೆ.

ಇದನ್ನೂ ಓದಿ: ಡಿಜೆ ಹಳ್ಳಿ ಫೇಸ್‌‌ಬುಕ್ ಪ್ರಚೋದನೆ ಮತ್ತು ಗುಂಪು ಗಲಭೆ: ನವೀನ್ ಮತ್ತು 110 ಜನರ ಬಂಧನ 

ಆಗಸ್ಟ್​ 11ರಂದು ಫೇಸ್​​ಬುಕ್​ ಪೋಸ್ಟ್​ವೊಂದರ ವಿಚಾರವಾಗಿ ಕಾವಲ್‌ಭೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಸಂಬಂಧಿ ನವೀನ್ ಮನೆ ಮೇಲೆ ಸಾವಿರಕ್ಕೂ ಹೆಚ್ಚು ಜನರ ಉದ್ರಿಕ್ತರ ಗುಂಪು ದಾಳಿ ನಡೆಸಿತ್ತು. ಈ ವೇಳೆ ಡಿ.ಜೆ ಹಳ್ಳಿ ಪೊಲೀಸ್​ ಠಾಣೆ ಧ್ವಂಸ ಮಾಡಲಾಗಿತ್ತು. ಜೊತೆಗೆ ಸಾರ್ವಜನಿಕರ ಆಸ್ತಿ ಪಾಸ್ತಿಗೂ ಹಾನಿಯಾಗಿತ್ತು.

ಈ ಗಲಭೆ ಸಂದರ್ಭದಲ್ಲಿ ನಡೆಸಲಾದ ಗೋಲಿಬಾರ್‌ನಲ್ಲಿ 4 ಜನ ಯುವಕರು ಬಲಿಯಾಗಿದ್ದರು. ಇನ್ನೂ ಹಲವರು ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಕಷ್ಟು ಆಸ್ತಿಪಾಸ್ತಿಗಳು ನಷ್ಟವಾಗಿದೆ. ನೂರಾರು ಜನರನ್ನು ಬಂಧಿಸಲಾಗಿದೆ. ಸದ್ಯ ಎನ್​ಐಎ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ.


ಇದನ್ನೂ ಓದಿ: ಎಸ್‌ಡಿಪಿಐಗೆ ನೇರ ಪ್ರಶ್ನೆಗಳು: ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆಯವರ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಲ್ಗಾರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾ ಬಿಡುಗಡೆ; ಇನ್ನೆಷ್ಟು ಮಂದಿ ಜೈಲಿನಲ್ಲಿದ್ದಾರೆ?

0
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ನವಿ ಮುಂಬೈನಲ್ಲಿ ಗೃಹಬಂಧನದಲ್ಲಿದ್ದ ಗೌತಮ್ ನವ್ಲಾಖಾ ಅವರನ್ನು ಶನಿವಾರ ತಡರಾತ್ರಿ 8:30ರ ಸುಮಾರಿಗೆ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ...