Homeಮುಖಪುಟಇದು ರೈತರ ಸಂಸ್ಕೃತಿ: ಲಾಠೀ ಚಾರ್ಜ್ ಮಾಡಿದ ಪೊಲೀಸ್‌ಗೆ ನೀರು ಕೊಟ್ಟ ರೈತನ ಫೋಟೊ ವೈರಲ್!

ಇದು ರೈತರ ಸಂಸ್ಕೃತಿ: ಲಾಠೀ ಚಾರ್ಜ್ ಮಾಡಿದ ಪೊಲೀಸ್‌ಗೆ ನೀರು ಕೊಟ್ಟ ರೈತನ ಫೋಟೊ ವೈರಲ್!

ಬಿತ್ತಬಹುದು ನೀವು ದ್ವೇಷದ ಬೀಜವನ್ನ, ಬೆಳೆಸುತ್ತೇವೆ ನಾವು ಪ್ರೀತಿಯ ಮರವನ್ನು...

- Advertisement -
- Advertisement -

ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಸಿಡಿದೆದ್ದು ದೆಹಲಿ ಚಲೋ ನಡೆಸುತ್ತಿದ್ದಾರೆ. 25 ರ ರಾತ್ರಿಯಿಂದಲೇ ದೆಹಲಿಯತ್ತ ಹೊರಟಿದ್ದ ಸಾವಿರಾರು ಸಂಖ್ಯೆಯ ರೈತರನ್ನು ತಡೆದ ದೆಹಲಿ ಪೊಲೀಸರು ಲಾಠೀ ಚಾರ್ಜ್ ಮಾಡಿ ಅಶ್ರವಾಯು, ಜಲಫಿರಂಗಿ ಸಿಡಿಸುತ್ತಿದ್ದಾರೆ. ರೈತರ ಮೇಲಿನ ದೌರ್ಜನ್ಯದ ವರದಿ, ಫೋಟೊ, ವಿಡಿಯೋಗಳು ಎಲ್ಲಡೆ ಹರಿದಾಡುತ್ತಿವೆ. ಅದೇ ಸಮಯದಲ್ಲಿ ಪೊಲೀಸರಿಂದ ಏಟು ತಿಂದರೂ ಸಹ ಅದೇ ಪೊಲೀಸ್ ಒಬ್ಬರಿಗೆ ರೈತನೊಬ್ಬ ಬಾಟಲಿಯಲ್ಲಿ ನೀರು ಕುಡಿಸುತ್ತಿರುವ ಫೋಟೊವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ. ಆ ಫೋಟೊವನ್ನು ಹಲವಾರು ಜನ ಹಲವಾರು ಶೀರ್ಷಿಕೆ ನೀಡಿ ಹಂಚಿಕೊಂಡಿದ್ದಾರೆ.

ಇದು ರೈತರ ಸಂಸ್ಕೃತಿ ಎಂದು ಕೆಲವರು ಬರೆಯುವ ಮೂಲಕ “ನೀವು ಅನ್ನದಾತನ ಮೇಲೆ ಹಲ್ಲೆ ನಡೆಸುತ್ತೀರಿ. ಆದರೆ ಆತ ಮಾತ್ರ ನಿಮಗೆ ಜೀವಜಲವನ್ನು ನೀಡುತ್ತಾನೆ. ಇದು ರೈತರ ಸಂಸ್ಕೃತಿ” ಎಂದು ಹಂಚಿಕೊಳ್ಳಲಾಗಿದೆ.

ಬಿತ್ತಬಹುದು ನೀವು ದ್ವೇಷದ ಬೀಜವನ್ನ, ಬೆಳೆಸುತ್ತೇವೆ ನಾವು ಪ್ರೀತಿಯ ಮರವನ್ನು ಎಂದು ಗುರುಬಸವ ಎನ್ನುವವರು ಫೇಸ್‌ಬುಕ್‌ನಲ್ಲಿ ಈ ಚಿತ್ರವನ್ನು ಷೇರ್ ಮಾಡಿದ್ದಾರೆ.


ಇದನ್ನೂ ಓದಿ: ಪ್ರತಿಭಟನೆ ಅಂತ್ಯಗೊಳಿಸಿ ಮಾತುಕತೆಗೆ ಬನ್ನಿ: ರೈತರಲ್ಲಿ ಕೇಂದ್ರ ಕೃಷಿ ಸಚಿವರ ಮನವಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read