ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ನಡೆಸಿದ ’ದೆಹಲಿ ಚಲೋ’ ಪ್ರತಿಭಟನಾ ಜಾಥಾದಲ್ಲಿ ರೈತರ ಮೇಲೆ ದಾಳಿ ಮಾಡುತ್ತಿದ್ದ ವಾಟರ್ ಜೆಟ್ ಅನ್ನು ಅತ್ಯಂತ ಸಾಹಸಿಕವಾಗಿ ನಿಲ್ಲಿಸಿದ ಹರಿಯಾಣದ ಅಂಬಾಲದ ಯುವ ರೈತನ ಮೇಲೆ ಪೊಲೀಸರು ಕೊಲೆ ಯತ್ನ ಕೇಸು ದಾಖಲಿಸಿದ್ದಾರೆ.
ಘಟನೆಯ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, 26 ವರ್ಷದ ನವದೀಪ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ’ಹೀರೋ’ ಆಗಿ ಮಿಂಚಿದರು. ಉತ್ತರ ಭಾರತದ ಕಠಿಣ ಚಳಿಯನ್ನು ಲೆಕ್ಕಿಸದೆ ದೆಹಲಿ ಚಲೋಗೆ ಹೊರಟಿದ್ದ ರೈತರ ಜಾಥಾದ ಮೇಲೆ ಪೊಲೀಸರು ವಾಟರ್ ಜೆಟ್ ದಾಳಿ ಮಾಡಿದ್ದರು. ಇದನ್ನು ನಿಲ್ಲಿಸಲು ವಾಟರ್ ಜೆಟ್ ವಾಹನವನ್ನು ಹತ್ತಿದೆ ಯುವ ರೈತ ಅದನ್ನು ನಿಲ್ಲಿಸಿ ವಾಪಾಸು ತಮ್ಮ ವಾಹನಕ್ಕೆ ಹಾರಿ ಜಾಥಾವನ್ನು ಸೇರಿಕೊಂಡಿದ್ದರು.
ಇದನ್ನೂ ಓದಿ: ದೆಹಲಿ ಚಲೋ: ತಾತ್ಕಾಲಿಕ ಜೈಲು ಮಾಡಲು ಕ್ರೀಡಾಂಗಣ ನೀಡುವುದಿಲ್ಲ ಎಂದ AAP ಸರ್ಕಾರ
How a young farmer from Ambala Navdeep Singh braved police lathis to climb and turn off the water cannon tap and jump back on to a tractor trolley #farmersprotest pic.twitter.com/Kzr1WJggQI
— Ranjan Mistry (@mistryofficial) November 27, 2020
ರೈತ ಸಂಘದ ಮುಖಂಡ ಜೈ ಸಿಂಗ್ ಅವರ ಪುತ್ರನಾಗಿರುವ ನವದೀಪ್ ವಿರುದ್ಧ ಜೀವಾವಧಿವರೆಗೆ ಶಿಕ್ಷೆ ನೀಡಬಹುದಾದ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಅಲ್ಲದೆ ಗಲಭೆ ಮತ್ತು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಕೇಸುಗಳನ್ನು ಕೂಡಾ ದಾಖಲಿಸಲಾಗಿದೆ.
“ನನ್ನ ಓದಿನ ನಂತರ ನನ್ನ ತಂದೆಯೊಂದಿಗೆ ಕೃಷಿ ಮಾಡಲು ಪ್ರಾರಂಭಿಸಿದೆ. ನಾನು ಯಾವತ್ತೂ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿಲ್ಲ. ಪ್ರತಿಭಟನಾ ನಿರತ ರೈತರಿಗೆ ವಾಹನ ಹತ್ತಲು ಮತ್ತು ಅವರ ವಿರುದ್ದ ದಾಳಿ ಮಾಡುತ್ತಿದ್ದ ಪಿರಂಗಿಯ ಟ್ಯಾಪ್ ಆಫ್ ಮಾಡಿದ್ದೇನೆ” ಎಂದು ನವದೀಪ್ ಸಿಂಗ್ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ತಿಳಿಸಿದ್ದಾರೆ.
“ಶಾಂತಿಯುತವಾಗಿ ಪ್ರತಿಭಟಿಸಲು ನಾವು ದೆಹಲಿಗೆ ಹೋಗಬೇಕೆಂದು ಹೊರಟಿದ್ದೆವು ಆದರೆ ಪೊಲೀಸರು ನಮ್ಮನ್ನು ನಿರ್ಬಂಧಿಸಿದರು. ಸರ್ಕಾರವನ್ನು ಪ್ರಶ್ನಿಸಲು ಮತ್ತು ಯಾವುದೇ ಜನ ವಿರೋಧಿ ಕಾನೂನುಗಳು ಜಾರಿಗೆ ಬಂದರೆ ಪ್ರತಿಭಟಿಸಲು ನಮಗೆ ಹಕ್ಕಿದೆ” ಎಂದು ಅವರು ಹೇಳಿದ್ದಾರೆ.
ಬಿಜೆಪಿ ಆಳ್ವಿಕೆಯ ಹರಿಯಾಣದ ಮತ್ತು ದೆಹಲಿಯ ಪೊಲೀಸರು ಕೃಷಿ ನೀತಿಗಳ ವಿರುದ್ದ ಜಾಥಾ ಹೊರಟಿದ್ದ ರೈತರ ಮೇಲೆ ಭಾರೀ ಪ್ರಮಾಣದ ದಬ್ಬಾಳಿಕೆ ನಡೆಸಿದ್ದಾರೆ ಎಂದು ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ. ಕಾನೂನುಗಳನ್ನು ವಿರೋಧಿಸಿ ಅಂತಿಮವಾಗಿ ದೆಹಲಿ ತಲುಪಲು ಯಶಸ್ವಿಯಾದ ರೈತರ ಮೇಲೆ ಮೂರನೇ ದಿನವು ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಯನ್ನು ಹಾರಿಸಿದರು.
ಇದನ್ನೂ ಓದಿ: ಬಿಜೆಪಿಯಿಂದ ಪ್ರಜಾಪ್ರಭುತ್ವದ ಕೊಲೆ: ರೈತರ ಮೇಲಿನ ಹಲ್ಲೆ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ
ಅಷ್ಟೇ ಅಲ್ಲದೆ ಪೊಲೀಸರು ದೆಹಲಿಗೆ ಪ್ರವೇಶಿಸುವ ವಿವಿಧ ಕೇಂದ್ರಗಳಲ್ಲಿ ಮರಳು ತುಂಬಿದ ಲಾರಿ, ಮುಳ್ಳುತಂತಿ ಮತ್ತು ಕಾಂಕ್ರೀಟ್ ಬ್ಲಾಕ್ಗಳು ಸೇರಿದಂತೆ ಕೆಲವೆಡೆ ರಸ್ತೆಯನ್ನೇ ಅಗೆದು ಹಾಕಿದ್ದರು.
National Highway has been dug up just to stop farmers from reaching Delhi.
दिल्ली इतनी घमंडी कभी ना थीpic.twitter.com/CoKJ7ezLbs
— Dushyant (@atti_cus) November 26, 2020
“Ye inquilab hai sir.” pic.twitter.com/9IfhR9K6OA
— Dushyant (@atti_cus) November 27, 2020
BREAK- Tear gas shells fired at farmers at the Delhi-Haryana Singhu border.
I’ve seen atleast 8 rounds of tear gas shells being fired.
Police have moved forward to push farmers back. #FarmersProtest #Watch #दिल्ली_चलो pic.twitter.com/hRt1iTytxM
— Zeba Warsi (@Zebaism) November 27, 2020
ಇದನ್ನೂ ಓದಿ: ದೇಶವ್ಯಾಪಿ ಕಾರ್ಮಿಕ ಮುಷ್ಕರ: ಕರ್ನಾಟಕದಲ್ಲೂ ಯಶಸ್ವಿ – ಒಂದು ಝಲಕ್!
