Homeಮುಖಪುಟಸ್ಮಾರ್ಟ್‌ ಸಿಟಿ ನಿರ್ಮಾಣ, ನದಿಗಳನ್ನು ಸ್ವಚ್ಚಗೊಳಿಸುವುದು ಯಾವಾಗ? ಬಿಜೆಪಿ ಉತ್ತರಿಸಲಿ: ಅಖಿಲೇಶ್

ಸ್ಮಾರ್ಟ್‌ ಸಿಟಿ ನಿರ್ಮಾಣ, ನದಿಗಳನ್ನು ಸ್ವಚ್ಚಗೊಳಿಸುವುದು ಯಾವಾಗ? ಬಿಜೆಪಿ ಉತ್ತರಿಸಲಿ: ಅಖಿಲೇಶ್

- Advertisement -
- Advertisement -

“ಸ್ಮಾರ್ಟ್‌ ಸಿಟಿಯನ್ನು ಯಾವಾಗ ನಿರ್ಮಿಸುತ್ತೀರಿ, ನದಿಗಳನ್ನು ಯಾವಾಗ ಸ್ವಚ್ಛಗೊಳಿಸುತ್ತೀರಿ” ಎಂಬುದನ್ನು ಜನರಿಗೆ ತಿಳಿಸಿ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, “ಬಿಜೆಪಿ ತನ್ನ ‘ಸಂಕಲ್ಪ ಪತ್ರ’ (ರೆಸಲ್ಯೂಶನ್)ದಂತೆ ಕೆಲಸ ಮಾಡಲು ಉತ್ತರ ಪ್ರದೇಶದ ಜನರು ಅವರಿಗೆ ಬಹುಮತ ನೀಡಿದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರಿಗೆ ನೀಡಿದ ಸಂಕಲ್ಪ ಪತ್ರದ ಭರವಸೆಯನ್ನು ಮರೆತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ದಲಿತ ಕಾರ್ಮಿಕ ಮುಖಂಡ ಶಿವಕುಮಾರ್‌ಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ: ವೈದ್ಯರ ವರದಿ

“ಸ್ಮಾರ್ಟ್ ಸಿಟಿಗಳನ್ನು ಯಾವಾಗ ನಿರ್ಮಿಸಲಾಗುವುದು ಎಂದು ಬಿಜೆಪಿಯು ಜನರಿಗೆ ಉತ್ತರ ನೀಡಬೇಕು. ಅವರು ಗಂಗಾ ನದಿಯನ್ನು ಸ್ವಚ್ಛಗೊಳಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದರು. ಆದರೆ ನದಿ ಇನ್ನೂ ಸ್ವಚ್ಛವಾಗಿಲ್ಲ” ಎಂದು ಅಖಿಲೇಶ್ ಯಾದವ್ ಹೇಳಿದರು.

“ಸರ್ಕಾರವು 2.5 ಲಕ್ಷ ಕೋಟಿ ರೂ. ಸಂಗ್ರಹಿಸಬೇಕು ಎಂದು ಹೇಳುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿರುವುದರಿಂದ 2.5 ಲಕ್ಷ ಕೋಟಿ ರೂ.ಗಳನ್ನು ಸರ್ಕಾರವು ಬಹಳ ಹಿಂದೆಯೇ ಸಂಗ್ರಹಿಸಿದೆ ಎನಿಸುತ್ತದೆ. ಅಲ್ಲದೆ, ಸರ್ಕಾರಿ ಉದ್ಯಮಗಳನ್ನು ಖಾಸಗಿಯವರಿಗೆ ಮಾರಲಾಗುತ್ತಿದೆ. ಸಂವಿಧಾನ ಖಾತರಿಪಡಿಸಿದ ಉದ್ಯೋಗಗಳು ಮತ್ತು ಮೀಸಲಾತಿ ಹಕ್ಕುಗಳ ಪರಿಸ್ಥಿತಿ ಏನು?” ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಹರಿಯಾಣ: ರೈತರಿಗೆ ಬೆಂಬಲ ನೀಡಿದ ಪಕ್ಷೇತರ ಶಾಸಕನ ಮನೆ, ಕಛೇರಿ ಮೇಲೆ ಐಟಿ ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಂಧ್ರಪ್ರದೇಶ: 7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ

0
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು...