Homeಕರ್ನಾಟಕಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು: ಕನ್ನಡಿಗರನ್ನು ಬಂಧಿಸಿ ನಾಮಕರಣಕ್ಕೆ ಮುಂದಾದ ಸರ್ಕಾರ

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು: ಕನ್ನಡಿಗರನ್ನು ಬಂಧಿಸಿ ನಾಮಕರಣಕ್ಕೆ ಮುಂದಾದ ಸರ್ಕಾರ

ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ ಹರೀಶ್‌ ಕುಮಾರ್‌ ಮತ್ತು ಬೆಂಗಳೂರು JDS ಯೂತ್‌ ವಿಂಗ್‌ ಅಧ್ಯಕ್ಷ ಪ್ರವೀಣ್ ಕುಮಾರ್‌ರನ್ನು ಸರ್ಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧಿಸಿದೆ.

- Advertisement -
- Advertisement -

ವಿವಾದಿತ ವ್ಯಕ್ತಿ ವಿ.ಡಿ.ಸಾವರ್ಕರ್ ಹೆಸರನ್ನು ಯಲಹಂಕ ಮೇಲ್ಸೇತುವೆಗೆ ನಾಮಕರಣ ಮಾಡುವ ಕಾರ್ಯಕ್ರಮವನ್ನು ಇಂದು ಮಧ್ಯಾಹ್ನ 12:30 ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಉಧ್ಘಾಟನೆ ಮಾಡಲಿದ್ದಾರೆ. ಅದರೆ ಮೇತ್ಸೇತುವೆಗೆ ಸಾವರ್ಕರ್‌ ಹೆಸರಿಡುವುದನ್ನು ವಿರೋಧಿಸಿದ ಹಲವು ಕನ್ನಡಿಗರನ್ನು ಬಂಧಿಸಿ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ವ್ಯಾಪಕ ವಿರೋಧ ಕೇಳಿಬಂದಿದೆ.

ಮೇ ತಿಂಗಳಲ್ಲೇ ಸೇತುವೆಗೆ ವಿವಾದಿತ ವ್ಯಕ್ತಿ ಸಾವರ್ಕರ್ ಹೆಸರನ್ನು ಇಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತಾದರೂ, ಅದಕ್ಕೆ ಕರ್ನಾಟಕದ ಪ್ರಜ್ಞಾವಂತರು, ಕನ್ನಡಪರ ಹೋರಾಟಗಾರರು, ವಿರೋಧ ಪಕ್ಷಗಳು ಸೇರಿದಂತೆ ಹಲವಾರು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿರೋಧಕ್ಕೆ ಮಣಿದ ಸರ್ಕಾರ ಸಾವರ್ಕರ್ ಹೆಸರು ತೆಗೆದು ಆಮಂತ್ರಣ ಪತ್ರಿಕೆಯಲ್ಲಿ ಕೇವಲ “ಮೇಲ್ಸುತುವೆ ಉದ್ಘಾಟನೆ” ಎಂದು ಮುದ್ರಣ ಮಾಡಿತ್ತು.

ಇದನ್ನೂ ಓದಿ: ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ

ಪ್ರಸ್ತುತ ಮೇಲ್ಸೇತುವೆಯನ್ನು ಇಂದು ಉದ್ಘಾಟಿಸುವುದಾಗಿ ರಾಜ್ಯ ಸರ್ಕಾರ ಪತ್ರಿಕೆಗಳಲ್ಲಿ ಜಾಹಿರಾತನ್ನು ನೀಡಿದ್ದು, ಮೇಲ್ಸೇತುವೆಯನ್ನು ’ವೀರ ಸಾವರ್ಕರ್‌ ಮೇಲ್ಸೇತುವೆ’ ಎಂದು ಕರೆದಿದೆ. ಈ ನಡುವೆ ಸಾವರ್ಕರ್‌ ಹೆಸರನ್ನು ನಾಮಕರಣ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿದೆ.

ಈ ಬಗ್ಗೆ ಜಾತ್ಯಾತೀತ ಜನತಾದಳ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದು, “ಬೆಂಗಳೂರು JDS ಯೂತ್‌ ವಿಂಗ್‌
ಅಧ್ಯಕ್ಷ ಪ್ರವೀಣ್ ಕುಮಾರ್ ಅವರನ್ನು ಪ್ರತಿಭಟನೆಯ ಭಯದಿಂದ ಸರ್ಕಾರ ಬಂಧಿಸಿದ್ದು, ಯಲಹಂಕ ಮೇಲ್ಸೇತುವೆಗೆ ಮಹಾರಾಷ್ಟ್ರದ ಸಾವರ್ಕರ್ ಹೆಸರಿಡುವುದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡದ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಇದು ಜನವಿರೋಧಿ ಸರ್ಕಾರದ ಭಂಡ ನಡೆ” ಎಂದು ಹೇಳಿದೆ.

ಇದನ್ನೂ ಓದಿ: ಮೇಲ್ಸೇತುವೆಗೆ ಸಾವರ್ಕರ್‌ ಹೆಸರು : ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ‌ ಮಾಡುವ ಅವಮಾನ.

ಇದನ್ನೂ ಓದಿ: ‘ಅತ್ಯುನ್ನತ ಭಾರತ ರತ್ನವನ್ನು ಸಾವರ್ಕರ್‌ಗೆ ಅಷ್ಟೇ ಯಾಕೆ, ಗೋಡ್ಸೆಗೂ ಕೊಟ್ಟಬಿಡಿ’..!

ಮೇಲ್ಸೇತುವೆಗೆ ವಿವಾದಿತ ವ್ಯಕ್ತಿ ಸಾವರ್ಕರ್‌ ಹೆಸರು ಇಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ ಹರೀಶ್‌ ಕುಮಾರ್‌ ಅವರನ್ನು ಬಂಧಿಸಿದ್ದಾರೆ ಎಂದು ಅವರು ತನ್ನ ಫೇಸ್‌ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ.

ಯಲಹಂಕ ಮೇಲ್ಸೇತುವೆಗೆ ವಿಚಾರದಲ್ಲಿಬೆಳಗ್ಗೆ ನನ್ನ ಮನೆಯಲ್ಲಿಪೋಲೀಸರು ನನ್ನನ್ನು ಬಂಧಿಸಿದ್ದಾರೆ …

Posted by ಭೈರಪ್ಪ ಹರೀಶ್ ಕುಮಾರ್ on Monday, September 7, 2020

ಈ ನಡುವೆ ಸೇತುವೆಗೆ ಸಾವರ್ಕರ್ ಹೆಸರಿಡುವುದನ್ನು ಹಲವಾರು ಜನರು ವಿರೋಧಿಸಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾ ರೆಡ್ಡಿಯವರು ಟ್ವೀಟ್ ಮಾಡಿದ್ದು, “ಯಲಹಂಕದ ಮೇಲ್ಸೇತುವೆಗೆ ಹೆಸರಿಡುವ ವಿಚಾರದಲ್ಲಿ ಕರ್ನಾಟಕದ ಜನತೆಯಿಂದ ಗಂಭೀರವಾದ, ಸಕಾರಣವಾದ ವಿರೋಧ ಇದ್ದರೂ  ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆ ಜನಾಭಿಪ್ರಾಯವನ್ನು ಕಡೆಗಣಿಸಿ ಮುಂದುವರೆಯುತ್ತಿರುವುದು ಅಕ್ಷಮ್ಯ. ಕನ್ನಡಿಗರ ಭಾವನೆಗಳಿಗೆ ಬೆಲೆ ನೀಡದ ಸರ್ಕಾರದ ನಡೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಂಡಿಸುತ್ತದೆ. ಹೇರಿಕೆ ಸಲ್ಲದು. ಒಪ್ಪಿತ ಹೆಸರು ಇಡಿ” ಎಂದು ಆಗ್ರಹಿಸಿದ್ದಾರೆ.

ಜನಾಂದೋಲನ ಆಗುವವರೆಗೆ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯ ವಿಷಯದಲ್ಲಿ ಆಸಕ್ತಿ ತೋರದ ರಾಜ್ಯ ಬಿಜೆಪಿ ಸರ್ಕಾರ ಸರ್ಕಾರ, ಗಾಂಧಿ ಹತ್ಯಾ ಆರೋಪಿಯಾದ ಸಾವರ್ಕರ್ ಹೆಸರನ್ನು ಯಲಹಂಕ ಮೇಲು ಸೇತುವೆಗೆ ನಾಮಕರಣ ಮಾಡಲು ಹೊರಟಿರುವುದು ನಿಜಕ್ಕೂ ನಾಚಿಕೆಗೇಡಿನ ತನದ ಮತ್ತು ದೇಶದ್ರೋಹಿ ಕೆಲಸ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.


ಇದನ್ನೂ ಓದಿ: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಡಿಗೆ ಮಾಡಿದ ಅಪಮಾನ: ಎಚ್‌ಡಿಕೆ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪೂಂಚ್‌ನ ನ್ಯಾಷನಲ್ ಕಾನ್ಫರೆನ್ಸ್‌ ರ‍್ಯಾಲಿಯಲ್ಲಿ ಚಾಕುವಿನಿಂದ ದಾಳಿ; 3 ಮಂದಿಗೆ ಗಾಯ

0
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾನುವಾರ ನ್ಯಾಚನಲ್ ಕಾನ್ಫರೆನ್ಸ್‌ ಪಕ್ಷದ ರೋಡ್ ಶೋ ವೇಳೆ ಅಪರಿಚಿತ ದುಷ್ಕರ್ಮಿಗಳ ಚಾಕು ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಮೆಂಧರ್ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ...