Homeಕರ್ನಾಟಕಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 4 ಜನ ಆಯ್ಕೆ

ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 4 ಜನ ಆಯ್ಕೆ

ಸಮಾಜದ ಮುಖ್ಯವಾನಿಗೆ ಬಂದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮಂಗಳಮುಖಿಯರಿಗಿರುವ ಅವಕಾಶ ವಿರಳ. ಆದರೆ ಇತ್ತೀಚೆಗೆ ಈ ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಕೆಲವರು ಬಹುತೇಕ ಕ್ಷೇತ್ರಗಳಲ್ಲಿ ಮುನ್ನೆಲೆಗೆ ಬರುತ್ತಿದ್ದಾರೆ.

- Advertisement -
- Advertisement -

ಡಿಸಂಬರ್‌ನಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಈ ಬಾರಿಯ ವಿಶೇಷವೆಂದರೆ ಮಂಗಳಮುಖಿ ಸಮುದಾಯಕ್ಕೆ ಸೇರಿದ ನಾಲ್ಕು ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.

ಸಮಾಜದ ಮುಖ್ಯವಾಹಿನಿಗೆ ಬಂದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮಂಗಳಮುಖಿಯರಿಗಿರುವ ಅವಕಾಶ ತೀರಾ ವಿರಳ. ಆದರೆ ಇತ್ತೀಚೆಗೆ ಈ ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಕೆಲವರು ಬಹುತೇಕ ಕ್ಷೇತ್ರಗಳಲ್ಲಿ ಮುನ್ನೆಲೆಗೆ ಬರುತ್ತಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಮತ್ತು ರಾಜಪುರ ಗ್ರಾಮದಿಂದ ಮಮತಾ, ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಿಂದ ಸುಧಾ.ಎಂ, ಕೆ.ಆರ್‌.ನಗರದ ಸಾಲಿಗ್ರಾಮದಿಂದ ದೇವಿಕಾ ಮತ್ತು ಬೆಂಗಳೂರು ಗ್ರಾಮಾಂತರ ದೊಡ್ಡಬೊಮ್ಮಸಂದ್ರದಿಂದ ಆರತಿ ಜವರೇಗೌಡ ಎಂಬುವವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ತಿರುಚ್ಚಿ: ಮಂಗಳಮುಖಿಗೆ ಪ್ರವೇಶಾತಿ ನೀಡಿ ಲಿಂಗಾಧಾರಿತ ಕಳಂಕ ಬದಿಗೊತ್ತಿದ ‘ಶಿವಾನಂದ’ ಶಾಲೆ

ಇದನ್ನೂ ಓದಿ: ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ; ಇತರೆ ಅಭ್ಯರ್ಥಿಗಳಿಗೆ ಸವಾಲು ಹಾಕಿದ ಮಂಗಳಮುಖಿಯರು!

ಇದನ್ನೂ ಓದಿ: ಕೇರಳ: ಸಾಕ್ಷರತಾ ಮಿಷನ್ ಅಡಿಯಲ್ಲಿ 18 ಮಂಗಳಮುಖಿಯರು ಉನ್ನತ ವ್ಯಾಸಾಂಗಕ್ಕೆ ಆಯ್ಕೆ!

ಕರ್ನಾಟಕದ ಇತಿಹಾಸದಲ್ಲಿ ಮಂಗಳಮುಖಿಯರು ಚುನಾವಣೆಯಲ್ಲಿ ಆಯ್ಕೆಯಾಗಿರುವುದು ಇದು ಮೊದಲಬಾರಿ. ಹಾಗಾಗಿ ಈ ಸಮುದಾಯದ ಪ್ರತಿಯೊಬ್ಬರಲ್ಲೂ ಸಂಭ್ರಮ ಮನೆಮಾಡಿದೆ.

ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಂಗಳಮುಖಿ ಅಕೈ ಪದ್ಮಶಾಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಕೆಲವು ಮಂಗಳಮುಖಿಯರು ಸ್ಪರ್ಧಿಸಿದ್ದರು. ಒಟ್ಟಿನಲ್ಲಿ ದೇಶದಲ್ಲಿ ಇಂತಹ ಆಶಾದಾಯಕ ಬೆಳವಣಿಗೆಯಾಗುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ.


ಇದನ್ನೂ ಓದಿ: ಇವರ ಹೋರಾಟದ ಬದುಕಿಗೆ ನಮ್ಮದೊಂದು ಸಲಾಮ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read