Homeಮುಖಪುಟಯೋಗಿಯ ರಾಮರಾಜ್ಯ ದಲಿತರ ಪಾಲಿಗೆ ಸ್ಮಶಾನವಾಗಿದೆ : ಚಂದ್ರಶೇಖರ್‌ ರಾವಣ್‌

ಯೋಗಿಯ ರಾಮರಾಜ್ಯ ದಲಿತರ ಪಾಲಿಗೆ ಸ್ಮಶಾನವಾಗಿದೆ : ಚಂದ್ರಶೇಖರ್‌ ರಾವಣ್‌

- Advertisement -
- Advertisement -

ಯೋಗಿಯ ರಾಮರಾಜ್ಯ ದಲಿತರ ಪಾಲಿಗೆ ಸ್ಮಶಾನವಾಗಿದೆ ಎಂದು ಭೀಮ್‌ ಆರ್ಮಿ ಸಂಸ್ಥಾಪಕ ಚಂದ್ರಶೇಖರ್‌ ಅಜಾದ್‌ ರಾವಣ್‌ ಆರೋಪಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ದಲಿತ ಯುವಕರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡುತ್ತಿರುವ ಅಮಾನವೀಯ ವಿಡಿಯೋವನ್ನು ಹಾಕಿ ಕಿಡಿಕಾರಿರುವ ಅವರು, ಉತ್ತರ ಪ್ರದೇಶದ ಲಖನೌದ ಪಿಜಿಐ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ಉನಾ ಘಟನೆಯನ್ನು ಬ್ರಾಹ್ಮಣರು ಪುನರಾವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದಲಿತ ಯುವಕರ ಮೆರವಣಗೆ ಘಟನೆಯು ಲಖನೌದಲ್ಲಿ ನಡೆದಿದೆ ಎನ್ನಲಾಗಿದ್ದು ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ.

21 ನೇ ಶತಮಾನದಲ್ಲಿಯೂ ಸಹ, ಮನುಸ್ಮೃತಿಯ ಬಗ್ಗೆ ಹೆಮ್ಮೆಪಡುವ ಈ ಜನರು ಅಧಿಕಾರದಲ್ಲಿ ಕೂತಿದ್ದಾರೆ. ಭೀಮ್ ಆರ್ಮಿ ತಂಡ ಘಟನೆ ನಡೆದ ಸ್ಥಳವನ್ನು ತಲುಪಿದೆ, ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಿದೆ. ನೆನಪಿಡಿ .. ಒಂದು ದಿನ ಈ ಸರ್ಕಾರವೂ ಬದಲಾಗುತ್ತದೆ ಎಂದು ಚಂದ್ರಶೇಖರ್‌ರವರು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.

ಈ ವಿಡಿಯೋಗೆ ಪೊಲೀಸ್‌ ಕಮಿಷನರೇಟ್‌ ಲಕ್ನೋ ಎಂಬ ಟ್ವಿಟ್ಟರ್‌ ಖಾತೆಯಿಂದ ಪ್ರತಿಕ್ರಿಯೆ ನೀಡಲಾಗಿದ್ದು, “ಈ ಪ್ರಕರಣದಲ್ಲಿ ಪೊಲೀಸ್ ಠಾಣೆ ವಿರುದ್ಧ ದೋಷಾರೋಪಣೆ ದಾಖಲಿಸಲಾಗಿದೆ ಮತ್ತು ಸಂಬಂಧಿತ ಸಂಗತಿಗಳ ಆಧಾರದ ಮೇಲೆ ಅಗತ್ಯ ಶಾಸನಬದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಿಜಿಐ ಮಾಹಿತಿ ನೀಡಿದೆ.” ಎಂದು ಬರೆದಿದೆ.

ಈ ವಿಷಯದ ಬಗ್ಗೆ ಆದಷ್ಟು ಬೇಗ ಕ್ರಮಕೈಗೊಳ್ಳಿ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ. ಪ್ರಕರಣದಲ್ಲಿ ಬಂಧಿತರಾಗಿರುವ ನಿರಪರಾಧಿಗಳನ್ನು ಬಿಡುಗಡೆ ಮಾಡಬೇಕು. ಇದು ಜವಾಬ್ದಾರಿಯುತ ಆಡಳಿತದ ಕರ್ತವ್ಯ. ಇಲ್ಲದಿದ್ದರೆ ಭೀಮಾ ಆರ್ಮಿ ಲಕ್ನೋ ಶೀಘ್ರದಲ್ಲೇ ಆಂದೋಲನ ನಡೆಸುತ್ತದೆ ಎಂದು ಭೀಮ್‌ ಆರ್ಮಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶ: ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದಕ್ಕೆ ದಲಿತ ಬಾಲಕನನ್ನು ಗುಂಡಿಕ್ಕೆ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...