Homeಮುಖಪುಟಬಾಲಿವುಡ್ ಅಂಗಳದ ಲೈಂಗಿಕ ಶೋಷಣೆ ಮತ್ತು #ಮಿಟೂ ಚಳವಳಿ

ಬಾಲಿವುಡ್ ಅಂಗಳದ ಲೈಂಗಿಕ ಶೋಷಣೆ ಮತ್ತು #ಮಿಟೂ ಚಳವಳಿ

- Advertisement -
- Advertisement -

“ಸೀರೇನೇ ಮುಳ್ಳಿನ ಮೇಲೆ ಬಿದ್ರೂ, ಮುಳ್ಳೇ ಸೀರೇ ಮೇಲೆ ಬಿದ್ರೂ ಹರಿಯೋದು ಸೀರೇನೇ”
ಯಾವುದೇ ಪುಟ್ಟ ಹುಡುಗಿ ‘ಆ ಹುಡುಗ ನಂಗೆ ಹಿಂಗಂದಾ, ಹಾಗ್ ಮಾಡಿದ’ ಎಂದು ತನ್ನ ಅಮ್ಮನಿಗೆ ದೂರುಕೊಟ್ಟರೆ ಸಿಗುವ ಉತ್ತರ ‘ನೀನ್ ಅಲ್ಯಾಕೆ ಹೋಗಿದ್ದೆ/ ನೀನೇ ಏನಾದ್ರೂ ಮಾಡಿರಬೇಕು/ ಸುಮ್ನಿರು, ಅಂತದ್ದೆಲ್ಲಾ ಮಾತಾಡಬರದು’ ಎನ್ನುವಂತ ಉತ್ತರ ಅಥವಾ ಪ್ರತ್ಯಾರೋಪಗಳನ್ನು ಎದುರಿಸಬೇಕುಗುವ ಸಾಧ್ಯತೆಗಳೇ ಹೆಚ್ಚು. ಒಂದೆರಡು ಸಲ ಕಂಪ್ಲೇಂಟ್ ಮಾಡಿ ಬೈಸಿಕೊಂಡ ಆ ಪುಟ್ಟ ಹುಡುಗಿ ಮುಂದೆಂದೂ ಮಾತನಾಡದಂತಹ ಸ್ಥಿತಿಗೆ ತಲುಪುತ್ತಾಳೆ. ಬಾಲ್ಯದಲ್ಲಿ ಆಗುವ ಲೈಂಗಿಕ ಕಿರುಕುಳ ಯಾವುದೋ ಒಬ್ಬರು ಅನುಭವಿಸುವಂತಹದ್ದಲ್ಲ, ಅರ್ಧಕ್ಕಿಂತ ಹೆಚ್ಚು ಮಕ್ಕಳು ಅನುಭವಿಸಿರುತ್ತಾರೆ (ಇದು ಹೆಣ್ಣುಮಕ್ಕಳಿಗಷ್ಟೇ ಸಿಮಿತವಾಗಿರುವುದಿಲ್ಲ). ಲೈಂಗಿಕ ವಿಷಯಗಳ ಬಗ್ಗೆಯೇ ಎಂದೂ ಮಾತನಾಡಲೂ ಅವಕಾಶವಿಲ್ಲದಾಗ ಲೈಂಗಿಕ ಕಿರುಕುಳದ ಬಗ್ಗೆ ಹೇಗೆ ಮಾತನಾಡಬೇಕು?
ಬಾಲಿವುಡ್ ಎನ್ನುವ ದೈತ್ಯ ಚಿತ್ರರಂಗ ವರ್ಷಕ್ಕೆ ಸಾವಿರಾರು ಸಿನಿಮಾಗಳನ್ನು ತಯಾರಿಸುವ, ನೂರಾರು ಸಿನಿಮಾಗಳನ್ನು ಬಿಡುಗಡೆ ಮಾಡುವ ಒಂದು ಕನಸಿನ ಕಾರ್ಖಾನೆ. ಹೀರೋ, ಹೀರೋಯಿನ್ ಆಗುವ ಕನಸು ಕಾಣುತ್ತ ಪ್ರತಿನಿತ್ಯ ನೂರಾರು ಯುವಕ. ಯುವತಿಯರು ಮುಂಬಯಿ ಶಹರಕ್ಕೆ ಬಂದು ಸೇರುತ್ತಾರೆ.
ಕಾಸ್ಟಿಂಗ್ ಕೌಚ್- ಎಂದರೆ, ಒಬ್ಬ ಯುವತಿಗೆ ಒಂದು ಸಿನಿಮಾದಲ್ಲಿ ಪಾತ್ರ ಮಾಡಬೇಕಾದರೆ ಆ ಚಿತ್ರದ ನಿರ್ದೇಶಕ ಅಥವಾ ನಿರ್ಮಾಪಕ ಅಥವಾ ನಾಯಕನಟನೊಂದಿಗೆ ಲೈಂಗಿಕ ಸಂಪರ್ಕ ಮಾಡಲು ಒಪ್ಪಿಕೊಳ್ಳುವುದು. ಇದು ಇಲ್ಲಿ ನಾರ್ಮಲ್. ಎಲ್ಲರಿಗೂ ಇದರ ಬಗ್ಗೆ ಅರಿವಿದ್ದರೂ ಇದನ್ನು ಸಾಮಾನ್ಯೀಕರಿಸಲಾಗಿತ್ತು. ಯಾರೂ ಇದರ ಬಗ್ಗೆ ಮಾತನಾಡುವಂತಿದ್ದಿಲ್ಲ. ಇದನ್ನು ಅವರವರ ಆಯ್ಕೆ ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ ಇದು ಬರೀ ಆಯ್ಕೆಯ ಪ್ರಶ್ನೆಯೇ? ಖಂಡಿತ ಇಲ್ಲ ಹಾಗೂ ಇದರ ಪ್ರಕ್ರಿಯೆ ಕೂಡ ಅಷ್ಟು ಸರಳವಾಗಿರುವುದಿಲ್ಲ. ಸಲೋನಿ ಚೋಪ್ರ ಎನ್ನುವ ಬಾಲಿವುಡ್ ನಟಿಯ ಅನುಭವಗಳನ್ನು ಓದಿದರೆ ಲೈಂಗಿಕ ಕಿರುಕುಳ ಯಾವ ರೀತಿಯ ಸ್ವರೂಪ ಪಡೆದುಕೊಳ್ಳುತ್ತೇ ಎನ್ನುವುದು ಅರ್ಥವಾಗುತ್ತದೆ. ಅವಳಿಗೆ ಕಿರುಕುಳ ನೀಡಿದವ ಸಾಜಿದ್ ಖಾನ್ ಎನ್ನುವ ಖ್ಯಾತ ನಿರ್ದೇಶಕ. ಇನಿಬ್ಬರು ಯುವತಿಯರೂ ಅವನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಬಾಲಿವುಡ್‍ನ ಖ್ಯಾತನಾಮರನೇಕರು ಅವನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಂದರೆ ಸಾಜಿದ್ ಖಾನ್ ಮಾಡಿದ ಕುಕರ್ಮಗಳ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ಗೊತ್ತಿತ್ತು. ಈತನಷ್ಟೇ ಅಲ್ಲ ಇನ್ನಿತರ ನೂರಾರು ಬಾಲಿವುಡ್ ಖ್ಯಾತನಾಮರು ಮಾಡುತ್ತಿದ್ದ ಇಂತಹ ಕೃತ್ಯಗಳ ಬಗ್ಗೆ ಇಂಡಸ್ಟ್ರಿಯ ಎಲ್ಲರಿಗೂ ಯಾವಾಗಲೂ ಗೊತ್ತಿತ್ತು. ಆದರೆ ಯಾರೂ ಮಾತನಾಡುವಂತಿರಲಿಲ್ಲ. ಯಾರಾದರೂ ಮಾತನಾಡಿದರೆ ಅವರನ್ನು ಇಂಡಸ್ಟ್ರಿಯಿಂದ ಬಹಿಷ್ಕಾರ ಹಾಕಲಾಗುತ್ತಿತ್ತು.
ಬಾಲಿವುಡ್ ವಿಷಯದಿಂದ ಕೆಲಸಮಯದವರೆಗೆ ಹೊರಬರುವ. ಯಾವುದೇ ಮಹಿಳೆ, ಅವಳು ‘ಗಣ್ಯೆ’ಯಾಗಿರಲಿ ಅಥವಾ ಒಂದು ಹಳ್ಳಿಯ ದಲಿತ ಮಹಿಳೆಯಾಗಿರಲಿ ತನ್ನ ಮೇಲೆ ಆದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲು ನಮ್ಮ ಸಮಾಜ ಅವಕಾಶ ಕಲ್ಪಿಸಿದೆಯೇ? ಇತರರಿಗೆ ಹೇಳುವುದಕ್ಕೂ ಮುಂಚೆಯೇ ಆಂತರಿಕವಾದ ಒಂದು ದೊಡ್ಡ ಹೋರಾಟವನ್ನು ಜಯಸಬೇಕಾಗುತ್ತದೆ. ಒಂದು, ‘ನನ್ನದೇ ಏನಾದರೂ ತಪ್ಪಿರಬಹುದು’, ಎರಡು, ‘ಜನರು ನನ್ನನ್ನು ನಂಬುತ್ತಾರೆಯೇ?’, ಮೂರು, ಲೈಂಗಿಕ ಕಿರುಕುಳ ತನ್ನ ಕಾರ್ಯಕ್ಷೇತ್ರದಲ್ಲಿ ಆದಾಗ ಆಗುವ ಆತಂಕ ‘ನನ್ನನ್ನು ಕೆಲಸದಿಂದ ತೆಗೆದುಹಾಕುತ್ತಾರೆಯೇ, ಇದರ ಬಗ್ಗೆ ಮಾತನಾಡಿ ಇಲ್ಲಿಂದ ಹೋದರೆ ಬೇರೆಡೆ ಕೆಲಸ ಸಿಗುವುದೇ?’. ಹೆಚ್ಚು ಇತ್ಯಾದಿ ಪ್ರಶ್ನೆ, ತೊಳಲಾಟಗಳನ್ನು ಯಶಸ್ವಿಯಾಗಿ ಜಯಿಸಿದ ನಂತರವೂ ಸಾರ್ವಜನಿಕವಾಗಿ ಮಾತನಾಡುವುದು ಖಂಡಿತ ಸುಲಭವಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವ ಬಗ್ಗೆ ಇಲ್ಲಿ ಹೆಚ್ಚು ಬರೆಯುವ ಅವಶ್ಯಕತೆ ಇಲ್ಲ; ಪ್ರಕ್ರಿಯೆ ಎಷ್ಟು ಹಿಂಸಾತ್ಮಕವಾಗಿರುತ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಯಾವುದೇ seಡಿiಚಿಟ oಜಿಜಿeಟಿಜeಡಿ ಅನ್ನು ಮಾತನಾಡಿಸಿ, ಮೇಲೆ ಹೇಳಿದ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಅವನು ತನ್ನ ಕುಕೃತ್ಯಗಳನ್ನು ಅವ್ಯಾಹತವಾಗಿ ಮುಂದುವರೆಸುತ್ತಿರುತ್ತಾನೆ. ಈ ಮೇಲೆ ಹೇಳಿದ ಮತ್ತು ಇನ್ನಿತರ ಕಾರಣಗಳಿಂದ ಅನೇಕ ಪ್ರಕರಣಗಳು ಹೊರಗೆ ಬರುವುದೇ ಇಲ್ಲ.
ಇಂತಹ ಸಂದರ್ಭದಲ್ಲಿ ಇಷ್ಟು ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಮೇಲೆ ಆದ ದೌರ್ಜನ್ಯ, ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವದು ಸಾಹಸವಲ್ಲವೇ? ಯಾರಾದರೂ ತಮ್ಮ ಸೇಡು ತೀರಿಸಲೆಂದೇ ಸಾರ್ವಜನಿಕವಾಗಿ ಹೇಳಿಕೊಂಡರೆ? ಈ #ಮಿಟೂ ಚಳವಳಿ ಬರೀ ‘ಗಣ್ಯೆ’ಯರಿಗೆ ಮಾತ್ರ ಸೀಮಿತವಾಗಿದೆಯೇ? ದೇಶದಾದ್ಯಂತ ನಡೆಯುತ್ತಿರುವ ಮಹಿಳಾ ಚಳವಳಿಯ ಮೇಲೆ ಯಾವ ಪರಿಣಾಮ ಬಿರುವುದು? ಸಕಾರಾತ್ಮಕ ಪರಿಣಾಮ ಬೀರುವುದೇ? ನಕಾರಾತ್ಮಕವಾಗಿರುವುದೇ?
#ಮಿಟೂ ಶುರುವಾದಾಗಿನಿಂದ ಮಹಿಳೆಯರು ಸಾರ್ವಜನಿಕವಾಗಿ ಬರೆದ ಬರಹಗಳನ್ನು ಓದಿದರೇ ಸಾಕು ನಮಗೆ ಗೊತ್ತಾಗುವುದು ಅವರು ಎಂತಹ ಕಷ್ಟಕರ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ ಎಂದು. ಆ ಎಲ್ಲಾ ಪರಿಸ್ಥಿತಿಗಳಲ್ಲೂ ಮಹಿಳೆಯಯರು ತಮ್ಮ ದೌರ್ಬಲ್ಯದ ಬಗ್ಗೆಯೂ ಬರೆದಿದ್ದಾರೆ. ಆ ಪರಿಸ್ಥಿತಿಯನ್ನು ಎದುರಿಸಲು ತಮಗೆ ಶಕ್ತಿಯಿರಲಿಲ್ಲ ಎಂದೂ ಬರೆದುಕೊಂಡಿದ್ದಾರೆ. ತಾವು ಅನುಭವಿಸಿದ ಇಂತಹ ನೋವಿನ, ದೌರ್ಬಲ್ಯದ, ಅಸಹಾಕತೆಯ ಕತೆಗಳನ್ನು ಎಲ್ಲರ ಮುಂದೆ ಬಿಚ್ಚಿಡಬೇಕಾದರೆ ಅದು ಧೈರ್ಯದ ಕೆಲಸವೇ ಸರಿ. ಈ ಕತೆಗಳನ್ನು ಓದಿದರೆ ಇವುಗಳ ಪ್ರಾಮಾಣಿಕತೆ ಬಗ್ಗೆಯೂ ಯಾರೂ ಸಂದೇಹಪಡುವಂತಿಲ್ಲ. ಪ್ರಾಮಾಣಿಕವಾಗಿಲ್ಲದೇ ಬರೀ ಸೇಡಿಗಾಗಿ ಬರೆದಿದ್ದರೆ ಅದರ ವಾಸನೆ ಖಂಡಿತವಾಗಿಯೂ ರಾಚುತ್ತಿತ್ತು. ಇನ್ನೊಂದು ಗಂಭೀರ ಪ್ರಶ್ನೆ, ಈ ಚಳವಳಿ ಬರೀ eಟiಣe ಸಮುದಾಯಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಇದರಿಂದ ಯಾವುದೇ ಸಮಗ್ರ ಬದಲಾವಣೆ ಆಗಲು ಸಾಧ್ಯವಿಲ್ಲ. ಹೌದು, ಸದ್ಯಕ್ಕೆ ಇಲ್ಲಿಯವರೆಗೆ ತಮ್ಮ ಕಿರುಕುಳದ ಕತೆಯನ್ನು ಬಿಚ್ಚಿಟ್ಟವರು ಇಂಗ್ಲಿಷ್ ಮಾತನಾಡುವ ಮೇಲ್ವರ್ಗದ ಮಹಿಳೆಯರು. ಆದರೆ ಇದರ ಪರಿಣಾಮ ಅನೇಕಕಡೆ ಆಗುತ್ತಿರುವುದೂ ಅಷ್ಟೇ ಸತ್ಯ. ಹಾಗೂ ಈ ‘ಗಣ್ಯೆ’ಯರೂ ನಮ್ಮ ಸಮಾಜದ ಅಂಗವೇ ಆಗಿದ್ದಾರೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಯಾವ ಒಂದು ವರ್ಗಕ್ಕೂ ಸೀಮಿತವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವರುಗಳು ‘ಗಣ್ಯೆ’ಯರಾಗಿದ್ದೂ ಇಂತಹ ಕಿರುಕುಳ ಅನುಭವಿಸಬೇಕಾದರೆ ನಮ್ಮ ಸಮಾಜದಲ್ಲಿ ಮಹಿಳೆಯರು ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ. ಹಾಗೂ ಇವರುಗಳು ತೋರಿಸಿದ ಧರ್ಯ, ಸಾಹಸ ಬೇರೆಯವರಿಗೂ ಧೈರ್ಯತಂದುಕೊಡುತ್ತೆ ಎನ್ನುವ ನಂಬಿಕೆ ನನ್ನದು. ಹಾಗೂ ಈ #ಮಿಟೂ ಚಳವಳಿಯಿಂದಾಗಿ ಅನೇಕ ಪುರುಷರಿಗೆ ತಮಗಿರುವ ಠಿಡಿiviಟege ಅರ್ಥವಾಗುತ್ತಿದೆ; ಅನೇಕರು ತಮ್ಮ ಚಿಛಿಣioಟಿs ಗಳನ್ನು ಪ್ರಶ್ನಿಸುತ್ತಿದ್ದಾರೆ. ಒಂದು ರೀತಿಯ ಆತ್ಮಾವಲೋಕನ ಆಗುತ್ತಿರುವುದು ಸ್ಪಷ್ಟ. ಈ ಆತ್ಮಾವಲೋಕ ಈ ಚಳವಳಿಯ ಸಾಧನೆಯಲ್ಲವೇ? ಇನ್ನೊಂದು, ಎಮ್.ಜೆ. ಅಕ್ಬರ್‍ನಂತಹ ಹಿರಿಯ ಪತ್ರಕರ್ತ ಹಾಗೂ ರಾಜಕಾರಿಣಿಗೆ ಲೈಂಗಿಕ ಕಿರುಕುಳದ ಇತಿಹಾಸವೇ ಇದೆ. ಪತ್ರಿಕೋದ್ಯಮದಲ್ಲಿ ಒಂದೆರಡು ದಿನಗಳ ಕಾಲ ಕೆಲಸ ಮಾಡಿದ ಎಲ್ಲರಿಗೂ ಅವನೊಬ್ಬ ‘ಚಮಡಿ’ ಎಂದು ಗೊತ್ತು. ಆದರೂ ಅವನ ಕುಕರ್ಮಗಳು, ಅವನಂತಹ ಇನ್ನಿತರರ ಕುಕರ್ಮಗಳು ಅವ್ಯಾಹತವಾಗಿ ನಡೆಯುತ್ತಲೇ ಇದ್ದವು. ಈ ಚಳವಳಿಯ ನಂತರ ಅವೆಲ್ಲವೂ ನಿಂತಿಬಿಡುತ್ತವೆ ಎನ್ನುವುದು ಸತ್ಯವಲ್ಲ ಆದರೆ ಖಂಡಿತವಾಗಿಯೂ ಅವರೆಲ್ಲರೂ ಮುಂದಾಗಬಹುದಾದ ಪರಿಣಾಮಗಳ ಬಗ್ಗೆ ವಿಚಾರ ಮಾಡಿಯೇ ಮಾಡುತ್ತಾರೆ.
ಇನ್ನು ಇತರ ಮಹಿಳಾ ಚಳವಳಿಗಳ ಮೇಲೆ ಇದರ ಪರಿಣಾಮ. ಇದು ಮೇಲ್ವರ್ಗದ ಮಹಿಳೆಯರ ಚಳವಳಿಯಾದರೂ ಆ ಮಹಿಳೆಯರೂ ದೌರ್ಜನ್ಯಕ್ಕೊಳಗಾದವರು, ಅವರೂ ಆ ಪರಿಸ್ಥಿತಿಯಲ್ಲಿ ದುರ್ಬಲರೇ ಆಗಿದ್ದವರು ಹಾಗೂ ಇಂತಹ ವರ್ಗಗಳು ಪ್ರಾರಂಭಿಸಿದ್ದ ಚಳವಳಿಗಳು ಎಲ್ಲೆಡೆಗೂ ಪಸರಿಸಿದ ಉದಾಹರಣೆಗಳೂ ಇವೆ. ಇವರು ಮಾಡಿದ ಸಾಹಸದಿಂದ ಇತರ ವರ್ಗದ ಮಹಿಳೆಯರಿಗೆ ಧರ್ಯವನ್ನೇ ತಂದುಕೊಡುವುದು ಎನ್ನುವುದು ನನ್ನ ಬಲವಾದ ನಂಬಿಕೆ ಹಾಗೂ ಯಾವ ವರ್ಗದವರೇ ಆಗಿರಲಿ ಅವರೊಂದಿಗೆ ನಿಲ್ಲುವುದು ಸಮಾಜದ ಕರ್ತವ್ಯ. ಈ ಚಳವಳಿ ಮೇಲ್ವರ್ಗಕ್ಕೆ ಸೀಮಿತವಾಗುವುದೇ ಎನ್ನುವ ಪ್ರಶ್ನೆಗೆ ನನ್ನ ಉತ್ತರ- ಇಲ್ಲ, ಈಗಾಗಲೇ ಇದರ ಬಗ್ಗೆ ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳಲ್ಲೂ ಬಹಳಷ್ಟು ಚರ್ಚೆಯಾಗುತ್ತಿದೆ. ಹಾಗಾಗಿ ಇದರ ಪರಿಣಾಮ ಎಲ್ಲೆಡೆ ಆಗಬಹುದು. ಒಂದು ವೇಳೆ ಅಷ್ಟಕ್ಕೇ ಸೀಮಿತಗೊಂಡರೂ ಮತ್ತು ಇದೊಂದು ಅದ್ಭುತ ಪರಿಣಾಮ ಬೀರಿದ ಚಳವಳಿಯಲ್ಲವೇ? ಇನ್ನೆಷ್ಟು ದಿನ ಮುಂದುವರೆಯಬಹುದು? ಮುಂದುವರೆಯದಿದ್ದರೂ ಇದರಿಂದ ಈಗಾಗಲೇ ಆದ ಪರಿಣಾಮ ಕಡಿಮೆಯೇನಿಲ್ಲ. ಇದು ಹೀಗೆ ಮುಂದುವರೆಯಲಿ, ಸೀರೆ ಮತ್ತು ಮುಳ್ಳಿನ ಸಮೀಕರಣ ಸುಳ್ಳಾಗಲಿ.

– ರಾಜಶೇಖರ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...