- Advertisement -
ಸ್ವಿಸ್ ಬ್ಯಾಂಕ್‍ನಿಂದ ಕಪ್ಪು ಹಣ ತರದಿದ್ದಾಗ
ಪಾಕಿಸ್ತಾನ ಯೋಧರು ಭಾರತೀಯ ಯೋಧರ ತಲೆ ಕತ್ತರಿಸಿದಾಗ
ಚೀನಾ ಡೋಕ್ಲಾಮ್ ಮೇಲೆ ದಾಳಿ ಮಾಡಿದಾಗ, ವೀರಾವೇಶ ಬದಿಗಿಟ್ಟು ಸಂಧಾನಕ್ಕೆ ಹೋದಾಗ
ಗೋಮಾಂಸ ರಫ್ತಿನ ಪ್ರಮಾಣ ಹೆಚ್ಚಾದಾಗ
ಲೋಕಪಾಲ ಮಸೂದೆಯನ್ನು ಮೂಲೆಗೆಸೆದಾಗ
ಬ್ಯಾಂಕ್ ಲೂಟಿ ಮಾಡಿದವರು ವಿದೇಶಕ್ಕೆ ಓಡಿಹೋದಾಗ
ಬಿಜೆಪಿಗರು ಮಾನವ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದಾಗ
ಉತ್ತರ ಪ್ರದೇಶದಲ್ಲಿ ಮಕ್ಕಳ ಸರಣಿ ಸಾವು ಸಂಭವಿಸಿದಾಗ
ಬಿಜೆಪಿಗರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಗೈದಾಗ
ಗುಜರಾತ್‍ನ ಊನಾದಲ್ಲಿ ಗೋರಕ್ಷಕರಿಂದ ದಲಿತರ ಕೊಲೆ, ದೌರ್ಜನ್ಯಗಳಾದಾಗ

ಹೇಳ್ತಾಹೋದರೆ ಇದು ಮುಗಿಯದ ಕಥೆ…..ಈ ಯಾವ ಸಂದರ್ಭಗಳಲ್ಲೂ ಪ್ರಧಾನಿಯವರ ಮನಸ್ಸಿಗೆ ನೋವಾಗಲಿಲ್ಲ. ಆಗ ಉಪವಾಸ ಕೂರಲಿಲ್ಲ. ಸಂಸತ್‍ನಲ್ಲಿ ವಿರೋಧ ಪಕ್ಷಗಳು ಅಡ್ಡಿಪಡಿಸಿದ ಕಾರಣಕ್ಕೆ ಉಪವಾಸವಂತೆ. ವಿರೋಧ ಪಕ್ಷಗಳು ಸಭಾತ್ಯಾಗ ಮಾಡುವುದು ಇದೇ ಮೊದಲೇನಲ್ಲ. ಬಿಜೆಪಿಗರು ವಿರೋಧ ಪಕ್ಷದಲ್ಲಿದ್ದಾಗಲೂ ಇದು ನಡೆದಿರುವಂತಹುದೆ. ಜನರಲ್ಲಿ ಭ್ರಮೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಪಕ್ಷವು, ಯಾವ ಭರವಸೆಯನ್ನು ಈಡೇರಿಸದೇ, ತನ್ನ ಸೋಲನ್ನು ಮರೆಮಾಚಿಕೊಳ್ಳಲು, ದೇಶದ ಜನರ ಗಮನವನ್ನು ಬೇರೆಡೆ ತಿರುಗಿಸಲು ಇದುವರೆಗೆ ಬಿಜೆಪಿ ಹಲವು ನಾಟಕಗಳನ್ನು ಆಡುತ್ತಾ ಬಂದಿದೆ. ಅದರ ಮುಂದಿನ ಭಾಗ ಉಪವಾಸ. ನಾಚಿಕೆಯಾಗಬೇಕು ಈ “ಲೋಕಲ್ ಗುರು” ವಿಗೆ!!
ದಿ.ಗುರುರಾಜುಲು ನಾಯ್ಡು ಅವರ ಹರಿಕಥೆಯೊಂದರಲ್ಲಿ ಉಪವಾಸದ ಬಗ್ಗೆ ಮಾತಾಡುತ್ತ “……ಹಿಂದೆ ವ್ರತ, ಉಪವಾಸ ಮಾಡೋರು ಬಹಳ ಶ್ರದ್ಧೆಯಿಂದ ಆಹಾರ ನೀರು ಸೇವಿಸದೇ ಉಪವಾಸ ಮಾಡೋರು. ಈಗಿನವರದು ತೋರ್ಪಡಿಕೆಯ ಉಪವಾಸ. ಸೇರೂವರೆ ಉಪ್ಪಿಟ್ಟು ತಿಂದು, ಚೆಂಬೂವರೆ ಕಾಫಿ ಕುಡಿದು ಉಪವಾಸ ಮಾಡ್ತಾರೆ “ ಈ ಮಾತು ಅಕ್ಷರಶಃ ಮೋದಿ ಟೀಂಗೆ ಅನ್ವಯವಾಗುತ್ತೆ. ಮಹಾಭಾರತದ ‘ಉತ್ತರ ಕುಮಾರ’ ಪದೇ ಪದೇ ನೆನಪಾಗುತ್ತಿದ್ದಾನೆ!!
– ಓದು ಸಿದ್ದೇಗೌಡ
- Advertisement -