Homeಎಕಾನಮಿಸರ್ಕಾರದ ಜಾಹಿರಾತುಗಳ ವೆಚ್ಚದ ಲೆಕ್ಕ ಕೇಳಿದ ವಾಕ್ಪಟು ಸಂಸದೆ ಮೆಹುವಾ

ಸರ್ಕಾರದ ಜಾಹಿರಾತುಗಳ ವೆಚ್ಚದ ಲೆಕ್ಕ ಕೇಳಿದ ವಾಕ್ಪಟು ಸಂಸದೆ ಮೆಹುವಾ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಸಂಸತ್ತಿನ ಕಲಾಪದ ಶೂನ್ಯವೇಳೆಯಲ್ಲಿ ಒಂದು ಪ್ರಶ್ಬೆ ಎತ್ತಿದ್ದಾರೆ ‘ಕೆಂಡಸಂಪಿಗೆ’ ಮಹುವಾ ಮೊಯಿತ್ರಾ, ಸರ್ಕಾರ ಜಾಹಿರಾತಿಗಾಗಿ ಖರ್ಚು ಮಾಡಿದ ವೆಚ್ಚದ ಲೆಕ್ಕ ಕೊಡಿ ಎಂದು ಆಗ್ರಹಿಸಿದ್ದಾರೆ…

ಸರ್ಕಾರ ಹಿಂದಿನ ಅವಧಿಯಲ್ಲಿ ಯಾವ್ಯಾವ ಮೀಡಿಯಾ ಹೌಸ್‍ಗೆ ಎಷ್ಟು ಮೊತ್ತದ ಜಾಹಿರಾತು ಕೊಟ್ಟದೆ ಎಂಬ ಲೆಕ್ಕ ಕೊಡಿ ಮತ್ತು ಇದರಲ್ಲಿ ಕೆಲವು ನಿರ್ದಿಷ್ಟ ಪ್ರಿಂಟ್ ಮೀಡಿಯಾಗಳನ್ನು ಹೊರತು ಪಡಿಸಲಾಗಿದೆಯೇ ಎಂಬುದರ ವಿವರ ನೀಡಿ ಎಂದು ಪಶ್ಚಿಮ ಬಂಗಾಳದ ಕೃಷ್ಣ ನಗರದ ಟಿಎಂಸಿಯ ಎಂಪಿ ಮಹುವಾ ಮೊಯಿತ್ರಾ ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ.

ಗುರುವಾರ ಸಂಸತ್ತಿನಲ್ಲಿ ಶೂನ್ಯ ಅವಧಿಯಲ್ಲಿ ಈ ಪ್ರಶ್ನೆ ಎತ್ತಿದ ಅವರು, ‘2014ರಿಂದ 2018ರ ಡಿಸೆಂಬರ್‍ವರೆಗೆ ಸರ್ಕಾರವು ಜಾಹಿರುತಾಗಳ ಮೇಲೆ ಸುಮಾರು 5,246 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಡಿಸೆಂಬರ್ 2018ರಲ್ಲಿ ಅಂದಿನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ( ರಾಜವರ್ಧನ ಸಿಂಗ್) ಸದನದಲ್ಲಿ ಹೇಳಿದ್ದರು. ಅದು ಕೇವಲ ಕೇಂದ್ರ ಸರ್ಕಾರದ ವೆಚ್ಚ. ಅದರಲ್ಲಿ ಪಿಎಸ್‍ಯುಗಳು (ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು) ವೆಚ್ಚ ಮಾಡಿದ್ದು ಸೇರಿಲ್ಲ. ನನ್ನ ನಂಬಿಕೆಯ ಪ್ರಕಾರ ಆ ವೆಚ್ಚವು ಸರ್ಕಾರ ಮಾಡಿದ ವೆಚ್ಚಕ್ಕಿಂತ ದೊಡ್ಡ ಪ್ರಮಾಣದಲ್ಲಿದೆ. ಇದೆಲ್ಲವೂ ತೆರಿಗೆದಾರನ ಹಣ ಎಂಬುದರ ಜೊತೆಗೆ, ಪಿಎಸ್‍ಯುಗಳು ವೆಚ್ಚ ಮಾಡಿದ್ದೂ ಸಾರ್ವಜನಿಕರ ತೆರಿಗೆ ಹಣವೇ ಆಗಿರುವುದರಿಂದ, ಒಟ್ಟಿನಲ್ಲಿ ಜಾಹಿರಾತಿಗಾಗಿ ವೆಚ್ಚ ಮಾಡಿದ ಹಣವೆಷ್ಟು ಎಂಬುದರ ಬಗ್ಗೆ ನಮಗೆ ಸ್ಪಷ್ಟ ಚಿತ್ರಣ ಬೇಕು’ ಎಂದು ಆಗ್ರಹಿಸಿದರು.

2014-15ರಲ್ಲಿ 979 ಕೋಟಿ ರೂ. ಇದ್ದುದು 2017-18ರ ಹೊತ್ತಿಗೆ 1,300 ಕೋಟಿಗೆ ಏರಿತು ಎಂದ ಅವರು, ಐದು ದೊಡ್ಡ ಮೀಡಿಯಾ ಸಂಸ್ಥೆಗಳನ್ನು ಹೆಸರಿಸಿ, ಇವು ಒಬ್ಬ ವ್ಯಕ್ತಿಯ ಮಾಲಿಕತ್ವದಲ್ಲಿವೆ ಅಥವಾ ಆತನ ಋಣದಲ್ಲಿವೆ ಎಂದರು…

ಮೊನ್ನೆ ತಾನೇ ಅದ್ಭುತ ಭಾಷಣ ಮಾಡಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದ ಈ ಸಂಸದೆ ಈ ಮತ್ತೆ ಮುಖ್ಯ ಪ್ರಶ್ನೆ ಎತ್ತುವ ಮೂಲಕ ಮೋದಿ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದಾರೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...