Homeಅಂಕಣಗಳುಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

ಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

- Advertisement -
- Advertisement -

ನಿಖಿಲ್ ಕೊಲ್ಫೆ |

ಪೊಳ್ಳು ರಾಷ್ಟ್ರೀಯತೆ ಮತ್ತು ಜನಪ್ರೀತಿಯಿಲ್ಲದ ಭೂಪಟ ಪ್ರೇಮ ಸರ್ವಾಧಿಕಾರದ ಒಂದು ಮುಖ್ಯ ಲಕ್ಷಣ. ಆಸ್ಟ್ರಿಯನ್ ಸಂಜಾತ ಅಡಾಲ್ಫ್ ಹಿಟ್ಲರ್ ಜರ್ಮನ್ ರಾಷ್ಟ್ರೀಯತೆ ಹೆಸರಿನಲ್ಲಿ ಜರ್ಮನಿಯಲ್ಲಿ ಅಧಿಕಾರ ಹಿಡಿದ. ಅವನ ಜರ್ಮನ್ ರಾಷ್ಟ್ರೀಯತೆಯಲ್ಲಿ ಯಹೂದಿಗಳಿಗೆ, ಜಿಪ್ಸಿಗಳಿಗೆ, ಪೋಲಿಷ್ ಸಂಜಾತರಿಗೆ, ಕರಿಯರು, ಮಿಶ್ರ ರಕ್ತದವರಿಗೆ ಸ್ಥಾನವಿರಲಿಲ್ಲ! ಶುದ್ಧರಕ್ತದವರೆಂದು ಅವನು ಭಾವಿಸಿದ್ದ ಅರ್ಯನ್ ಜನಾಂಗದವರಿಗೆ ಮಾತ್ರ ಸ್ಥಾನವಿತ್ತು.
ಅತ ಸುಳ್ಳು ದೇಶಪ್ರೇಮದ ಬೊಂಬಡ ಬಜಾಯಿಸಿದಾಗ ಎಲ್ಲರೂ ಅದಕ್ಕೆ ತಲೆದೂಗಿಸಿದರು. ಎಲ್ಲರೂ ದೇಶಕ್ಕಾಗಿ ಅದನ್ನು ತ್ಯಾಗ ಮಾಡಬೇಕು, ಇದನ್ನು ತ್ಯಾಗ ಮಾಡಬೇಕು ಎಂದು ಹೇಳಿದ. ಕೊನೆಗೆ ಜನರು ತಮ್ಮ ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಯಿತು.
ತನ್ನ ವಿಚಾರಗಳಿಗೆ ತಲೆಬಾಗುವವರು ಮಾತ್ರ. ದೇಶಪ್ರೇಮಿಗಳು, ಉಳಿದವರೆಲ್ಲ ದೇಶದ್ರೋಹಿಗಳೆಂದು ಆತನ ಭ್ರಮೆ. ಜನರನ್ನು ಪೋಲೆಂಡ್ ಸಹಿತ ನೆರೆಯ ದೇಶಗಳ ಮೇಲೆ ಎತ್ತಿಕಟ್ಟಿ ಆಕ್ರಮಣ ಮಾಡಿ ಜರ್ಮನಿಯನ್ನು ಭೂಪಟದಲ್ಲಿ ವಿಸ್ತರಿಸಿದ. ಅದರೆ, ಜನರದ್ದು ನಾಯಿಪಾಡಾಯಿತು.
ಇದೀಗ ಭಾರತದಲ್ಲಿ ದೇಶಪ್ರೇಮದ ಮತ್ತು ರಾಷ್ಟ್ರೀಯತೆಯ ಮಾತಾಗುತ್ತಿದೆ. ಈ ರಾಷ್ಟ್ರೀಯತೆಯಲ್ಲಿ ಮತೀಯ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ, ದಲಿತರಿಗೆ ಯಾವ ಸ್ಥಾನವಿದೆ? ರಾಷ್ಟ್ರೀಯತೆಯ ಹೆಸರಲ್ಲಿ ಮೇಲ್ಜಾತಿ ಪ್ರಾಬಲ್ಯ ಒಪ್ಪಿಕೊಳ್ಳಬೇಕೆ?
ನಮ್ಮಲ್ಲಿಯೂ ದೇಶಕ್ಕಾಗಿ ತ್ಯಾಗ ಮಾಡಿ, ಸಬ್ಸಿಡಿ ತ್ಯಾಗಮಾಡಿ ಇತ್ಯಾದಿ ಹೇಳಲಾಗುತ್ತದೆ. ಗಗನಕ್ಕೇರಿದ ತೈಲ, ಅನಿಲ ಬೆಲೆಯೂ ದೇಶಕ್ಕಾಗಿ ಮಾಡುವ ತ್ಯಾಗವಂತೆ!
ಇಲ್ಲಿ ಕೂಡಾ ಪಾಕಿಸ್ತಾನ, ಬಾಂಗ್ಲ, ನೇಪಾಳ, ಶ್ರೀಲಂಕಾ, ಬರ್ಮಾ ಒಳಗೊಂಡಂತಹ ಅಖಂಡ ಭಾರತದ ಸಾಮ್ರಾಜ್ಯಶಾಹಿ ಕಲ್ಪನೆಗೆ ನೀರುಣಿಸಿ ಬೆಳೆಸುವವರು ಇನ್ನೂ ಇದ್ದಾರೆ. ಭೂಪಟ ಮತ್ತು ಜನಪ್ರೇಮದ ವ್ಯತ್ಯಾಸವನ್ನು, ನಿಜವಾದ ದೇಶಪ್ರೇಮವನ್ನು ಸರ್ವಾಧಿಕಾರಿ ಪ್ರವೃತ್ತಿಯು ಎಂದಿಗೂ ತಿಳಿದುಕೊಳ್ಳಲಾರದು.
ಗಿಲೀಟಿನ ಸುಳ್ಳು ಪ್ರಚಾರ ಸರ್ವಾಧಿಕಾರದ ಮುಖ್ಯ ಲಕ್ಷಣಗಳಲ್ಲಿ ಇನ್ನೊಂದು. ನಾಜಿ ಜರ್ಮನಿಯಲ್ಲಿ ಗೊಬೆಲ್ಸ್ ಅದರ ರೂವಾರಿಯಾಗಿದ್ದ. ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಅವನ ನಿಲುವಾಗಿತ್ತು. ಅಪಪ್ರಚಾರವು ಅವರ ಪ್ರಚಾರದ ಇನ್ನೊಂದು ಮುಖ.
ಇಂದು ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಹಸಿಹಸಿ ಸುಳ್ಳುಗಳನ್ನು ಉತ್ಪಾದಿಸುವ ಕಾರ್ಖಾನೆಗಳೇ ನಡೆಯುತ್ತಿವೆ. ಅವುಗಳನ್ನು ಕಾಸಿಗಾಗಿ ಶೇರ್ ಮಾಡುವವರ ಪಡೆಗಳಿವೆ. ವಿದ್ವೇಷದ, ಅವಹೇಳನೆಯ ವೈಯುಕ್ತಿಕ ನಿಂದನೆಯ, ಅಶ್ಲೀಲವಾದ ಬೆದರಿಕೆಯ ಸಂದೇಶಗಳು ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರಿಂದ ಬರುತ್ತಿರುವುದು ಬರೇ ಕಾಕತಾಳೀಯ. ಅಗಿರಲಾರದು!
ಗಾಂಧಿ ಪದತಲದಲ್ಲಿ ಯುವಕ ಮೋದಿ, ಭೋಸರ ಪಕ್ಕದಲ್ಲಿ ವಂದನೆ ಸ್ವೀಕರಿಸುತ್ತಿರುವ ಮೋದಿ, ಭಗತ್ ಸಿಂಗ್‍ಗೆ ಜೈಲಿನಲ್ಲಿ ಮನೆಯೂಟ ನೀಡುತ್ತಿರುವ ಮೋದಿ ಇತ್ಯಾದಿಯಾಗಿ ನಾಜಿಗಳೇ ನಾಚುವಂತಹ ಫೊಟೋಷಾಪ್ ಸುಳ್ಳುಗಳನ್ನು ಹರಿದುಬಿಡಲಾಗುತ್ತದೆ. 1950ರಲ್ಲಿ ಅತ ಹುಟ್ಟಿದಾಗ ಅವರೆಲ್ಲಾ ಮಣ್ಣಲ್ಲಿ ಲೀನವಾಗಿಹೋಗಿದ್ದರೆಂಬ ಸ್ಪಷ್ಟ ಸತ್ಯವೂ ಗೋಚರವಾಗದ ಮುಗ್ಧ ಜನರು ಅವುಗಳನ್ನು ನಂಬುತ್ತಾರೆ. ಇದುವೇ ಗೋಬೆಲ್ಸ್ ತಂತ್ರ.
ಪ್ರಧಾನಿಯವರ ಸೆಲ್ಫಿಗಳಲ್ಲಿ ವ್ಯಕ್ತವಾಗುವ ಸೆಲ್ಫ್ ಮೋಹ ಗಾಬರಿ ಹುಟ್ಟಿಸುತ್ತದೆ. ಅವರು ಲಕ್ಷಾಂತರ ಟ್ವೀಟ್‍ಗಳಿಗೆ ಸ್ವತಃ ಪ್ರತಿಕ್ರಿಯಿಸುತ್ತಾರೆಂದು ನಂಬುವ ಮೂರ್ಖರೂ ಇದ್ದಾರೆ. ಇದು ಸಾಧ್ಯವೆ, ಮತ್ತೆ ಅವರು ಕೆಲಸ ಮಾಡುವುದು ಯಾವಾಗ, ಅವರ ಗಡಿಯಾರದಲ್ಲಿ ದಿನಕ್ಕೆ 48 ಗಂಟೆಗಳಿವೆಯೇ ಎಂದು ಯಾರೂ ಪ್ರಶ್ನೆ ಮಾಡಲು ಹೋಗುವುದಿಲ್ಲ. ಇಂತಹ ಕುರುಡು ನಂಬಿಕೆ, ವ್ಯಕ್ತಿ ವೈಭವೀಕರಣವೇ ಸರ್ವಾಧಿಕಾರಕ್ಕೆ ಮೆಟ್ಟಿಲು.
ಎಲ್ಲಾ ಸರ್ವಾಧಿಕಾರಿಗಳು ಹಿಂದಿನ ಆಡಳಿತವನ್ನು ದೂರಿ ಅಭಿವೃದ್ಧಿಯ ಮಂತ್ರವನ್ನು ಜಪಿಸಿದ್ದಾರೆ. ಹಿಟ್ಲರ್ ಮತ್ತು ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿಯಂತವರೂ ಹಿಂದೆ ಬಿದ್ದಿರಲಿಲ್ಲ. ತಮ್ಮ ತಮ್ಮ ದೇಶಗಳನ್ನು ಸಮೃದ್ಧಿಯ ಶಿಖರಕ್ಕೆ ಕೊಂಡೊಯ್ಯುವ ಭರವಸೆ ನೀಡಿ ವಿನಾಶದ ಪಾತಾಳಕ್ಕೆ ತಳ್ಳಿದರು. ಜನಕೇಂದ್ರಿತವಲ್ಲದ ಮತ್ತು ಮಿಲಿಟರಿ ಯಂತ್ರವನ್ನು ಬಲಪಡಿಸುವ ಕೈಗಾರಿಕೀಕರಣ ಅದಾಗಿತ್ತು. ಹೊಸ ರೀತಿಯ ಬಂದೂಕುಗಳು, ಫಿರಂಗಿಗಳು, ಟ್ಯಾಂಕ್‍ಗಳು, ಯುದ್ಧ ವಿಮಾನಗಳು, ಹಡಗುಗಳು, ಜಲಾಂರ್ಗಾಮಿಗಳು, ಸೋನಾರ್, ರಾಡಾರ್ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿ ವಿನಾಶದ ಸಲಕರಣೆಗಳು ಭಾರೀ ಪ್ರಮಾಣದಲ್ಲಿ ನಿರ್ಮಾಣವಾದವು. ಇಂದು ಮಧ್ಯಮ ವರ್ಗದ, ಅದರಲ್ಲೂ ಯುವಕರ ನೆಚ್ಚಿನ ಶೋಕಿಗಳಾಗಿರುವ ಮೋಟಾರ್ ಬೈಕ್ ನಿರ್ಮಾಣವಾದದ್ದು ಜರ್ಮನಿಯಲ್ಲಿ! ಸ್ಕೂಟರ್ ನಿರ್ಮಾಣವಾದದ್ದು ಇಟಲಿಯಲ್ಲಿ! ಅದೂ ಯುದ್ಧದ ಉದ್ದೇಶಕ್ಕಾಗಿ.
ನಮ್ಮಲ್ಲಿಯೂ ಯುದ್ಧಾಸ್ತ್ರಗಳ ಖಾಸಗಿ ನಿರ್ಮಾಣಕ್ಕೆ ಚಾಲನೆ ದೊರಕಿದೆ. ರಾಫೆಲ್ ಯುದ್ಧ ವಿಮಾನಗಳ ನಿರ್ಮಾಣ ಗುತ್ತಿಗೆ ಸಾರ್ವಜನಿಕ ವಲಯದ ಅನುಭವಿ ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್‍ಗೆ ಸಿಗದೇ ಅನುಭವವೇ ಇಲ್ಲದ ಅಂಬಾನಿಯ ಹೊಸ ಕಂಪೆನಿಯ ಪಾಲಾಗಿದೆ. ಡ್ರೋನ್ ನಿರ್ಮಾಣದ ಗುತ್ತಿಗೆಯದ್ದೂ ಅದೇ ಕತೆ! ಅಂಬಾನಿ, ಅದಾನಿ ಮುಂತಾದ ಆಗರ್ಭ ಶ್ರೀಮಂತರ ಬೃಹತ್ ಉದ್ದಿಮೆಗಳಿಗೆ ಲಾಭ ಮಾಡಿಕೊಡುವುದರಿಂದ ಸಾಮಾನ್ಯ ಜನರ ಅಭಿವೃದ್ಧಿ ಅಗುವುದು ಹೇಗೆ? ಬಂಡವಾಳ ಹೂಡಿಕೆಯ ಲಾಭ ಕೇವಲ ಉದ್ದಿಮೆಗಳಿಗೆ, ರಾಜಕೀಯ ಪಕ್ಷಗಳ ನಿಧಿಗೆ, ರಾಜಕಾರಣಿಗಳ ಜೇಬಿಗೆ ತಲುಪಿದರೆ ಸಾಕೆ? ರಕ್ಷಣಾ ವಲಯದಂತಹ ಸೂಕ್ಷ್ಮ ಕ್ಷೇತ್ರಗಳನ್ನೂ ಖಾಸಗಿ ಬಂಡವಾಳಗಾರರಿಗೆ ಬಿಟ್ಟುಕೊಡುತ್ತಿರುವುದು ಅಪಾಯಕಾರಿ ನಡೆ. ವಿಕೇಂದ್ರೀಕೃತವಾದ ಜನಪರ ಅಭಿವೃದ್ಧಿಗೆ ತಿಲಾಂಜಲಿ ಬಿಟ್ಟು, ದೊಡ್ಡ ಕೈಗಾರಿಕೆಗಳಿಗೆ ಭೂಮಿ ಒದಗಿಸಿಕೊಡುವ ರಿಯಲ್ ಎಸ್ಟೇಟ್ ದಂಧೆಗೆ ಇಳಿದು, ಅದಕ್ಕೆ ಅನುಕೂಲಕರವಾದ ರೈತವಿರೋಧಿ ಭೂಸ್ವಾಧೀನ ಕಾಯಿದೆಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬುದು ಅಪಾಯದ ಗಂಟೆಯನ್ನು ಮೊಳಗಿಸುತ್ತಿದೆಯೆ?
ಜನಾಂಗ ಜನಾಂಗಗಳನ್ನೇ ನಿರ್ನಾಮ ಮಾಡಿದ ಸರ್ವಾಧಿಕಾರಗಳೆಲ್ಲವೂ ಮೊದಲಿಗೆ ಎಲ್ಲರನ್ನು ಜೊತೆಗೊಯ್ಯುವ ಮಾತಾಡಿವೆ!
ಲಕ್ಷಾಂತರ ಯಹೂದಿಗಳನ್ನು ಯಾತನಾ ಶಿಬಿರಗಳಿಗೆ ತಳ್ಳಿ ಅಮಾನವೀಯವಾಗಿ ಮುಗಿಸಿದ ಹಿಟ್ಲರ್‍ಗೆ ಆರಂಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿಡಿತಹೊಂದಿದ್ದ ಯಹೂದಿಗಳು ಬೇಕಾಗಿದ್ದರು. ಅವನು ಅದಕ್ಕಾಗಿ ಅವರನ್ನು ಓಲೈಸಿದ್ದ ಕೂಡಾ. ಅತನ ಸರಕಾರ ಅವರಿಂದ ಬೇಕಾಬಿಟ್ಟಿ ಸಾಲ ಎತ್ತಿದ್ದ. ನಂತರ ಕೈಯೆತ್ತಿ ಅವರ ವಿರುದ್ಧ ಮುಗಿಬಿದ್ದಿದ್ದ.
ನಮ್ಮಲ್ಲಿಯೂ ಇಂತಹ ಮಾತುಗಳು ಕೇಳಿಬರುತ್ತಿವೆ. ಅದರೆ, ವ್ಯವಸ್ಥಿತವಾಗಿ ಸಂಕುಚಿತವಾದ, ಗಂಭೀರವಾದ ದಾಳಿಗಳು ನಿರಂತರವಾಗಿ ಬುದ್ಧಿಜೀವಿಗಳ ಮೇಲೆ, ದಲಿತರು, ಅಲ್ಪಸಂಖ್ಯಾತರ ಮೇಲೆ ನಡೆದುಕೊಂಡುಬಂದಿವೆ. ದನ ಸಾಗಾಟ, ಕಾಲಮೇಲೆ ಕಾಲುಹಾಕಿದ್ದು, ಕುದುರೆಯ ಮೇಲೆ ಕುಳಿತದ್ದು ಮುಂತಾದ ಕ್ಷುಲ್ಲಕ ಕಾರಣಗಳಿಗೆ ಮಾತ್ರವಲ್ಲ, ಕಾರಣವೇ ಇಲ್ಲದೇ ದಾಳಿಗಳು, ಕೊಲೆಗಳು, ಅತ್ಯಾಚಾರಗಳು ನಡೆದಿವೆ. ಜೊತೆಗೆ ಪ್ರತೀಕಾರ ಕೃತ್ಯಗಳೂ ಕೆಲವೊಮ್ಮೆ ನಡೆದಿವೆ. ತಾವು ಸಂತರೆಂದು ಹೇಳಿಕೊಳ್ಳುವವರು, ಸಂಸದರು ಕೂಡಾ ಕೊಚ್ಚಿ, ಕೊಲ್ಲಿ, ಬೆಂಕಿಹಚ್ಚಿ, ತಲೆಕಡಿಯಿರಿ, ದೇಶದಿಂದ ಓಡಿಸಿ ಇತ್ಯಾದಿ ಪ್ರಚೋದನಾತ್ಮಕ ಭಾಷೆಯಲ್ಲಿ ಎಗ್ಗಿಲ್ಲದೇ ಮಾತನಾಡುತ್ತಿದ್ದಾರೆ. ಎಲ್ಲರನ್ನೂ ಜೊತೆಗೊಯ್ಯುತ್ತೇವೆ ಎಂದು ಹೇಳುವವರು ಮಾತ್ರ ಇವುಗಳನ್ನು ಖಂಡಿಸದೇ, ಕ್ರಮ ಕೈಗೊಳ್ಳದೆ ಮೌನ ಅನುಮತಿ ನೀಡುತ್ತಿರುವಂತಿದೆ.
ಇದಲ್ಲದೇ ಸಂವಿಧಾನವನ್ನು ಬದಲಾಯಿಸುವ ಮಾತೂ ಕೇಳಿಬರುತ್ತಿದೆ. ಈ ಎಲ್ಲಾ ವಿಷಯಗಳನ್ನು ಮುಂದೆ ವಿವರವಾಗಿ ಚರ್ಚಿಸೋಣ. ಇದು ಕೇವಲ ಪರಿಚಯ ಮಾತ್ರ. ಭಾರತದಂತಹ ವೈವಿಧ್ಯಮಯ ವಿಶಾಲ ಜನಭರಿತ ದೇಶದಲ್ಲಿ ಸರ್ವಾಧಿಕಾರ ತರುವುದು ಸುಲಭದ ಕೆಲಸವೇನಲ್ಲ! ಹಿಂದೆ ಇಂದಿರಾಗಾಂಧಿಯವರ ಕಾಲದಲ್ಲಿ ಇಂತಹ ಪ್ರಯತ್ನ ನಡೆದಿತ್ತು ಮತ್ತು ಅದನ್ನು ಜನತೆಯ ಹೋರಾಟ ವಿಫಲಗೊಳಿಸಿತು ಎಂಬುದನ್ನು
ಮರೆಯದಿರೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಪೃಶ್ಯ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಸಿಗೆ ಸೇರಿಸಿದ್ದನ್ನು ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

ಆಗಸ್ಟ್‌ 18 2025ರಂದು ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಯನ್ನು ದಾಖಲಿಸಿತ್ತು. ರಾಜ್ಯ ಸರ್ಕಾರ...

ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ಪೌರತ್ವ ತ್ಯಜಿಸಿದ್ದಾರೆ: ಎಂಇಎ

ಕಳೆದ ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಜಾಗತಿಕ ಚಲನಶೀಲತೆ ಹೆಚ್ಚಾದಂತೆ ಮತ್ತು ವೈಯಕ್ತಿಕ ಆಯ್ಕೆಗಳು ವಲಸೆ ಪ್ರವೃತ್ತಿಯನ್ನು ರೂಪಿಸುತ್ತಿರುವುದರಿಂದ ವಾರ್ಷಿಕವಾಗಿ ಸಂಖ್ಯೆಗಳು ಗಮನಾರ್ಹವಾಗಿ ಬದಲಾಗಿವೆ...

ನಟ ದಿಲೀಪ್ ಖುಲಾಸೆ: ನ್ಯಾಯಾಲಯದ ಕಲಾಪವನ್ನು ವಿರೂಪಗೊಳಿಸಬೇಡಿ ಎಂದು ಮಾಧ್ಯಮ ಮತ್ತು ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾದೀಶೆ ಹನಿ ವರ್ಗೀಸ್ 

2017 ರಲ್ಲಿ ದಕ್ಷಿಣ ಭಾರತದ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಧೀಶೆ ಹನಿ ಎಂ ವರ್ಗೀಸ್, ತಮ್ಮ ತೀರ್ಪಿನ...

ರಾಜ್‌ಕೋಟ್‌ ಬಾಲಕಿ ಅತ್ಯಾಚಾರ ಪ್ರಕರಣ; ಆಕ್ರೋಶ ಹೊರಹಾಕಿದ ಶಾಸಕ ಜಿಗ್ನೇಶ್‌ ಮೇವಾನಿ; ಕಠಿಣ ಶಿಕ್ಷೆಗೆ ಆಗ್ರಹ

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಏಳು ವರ್ಷದ ಬಾಲಕಿ ಅತ್ಯಾಚಾರ ಹಾಗೂ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಧಿಸಿದಂತೆ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್‌ ಮೇವಾನಿ; ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಕುರಿತು...

ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹಧನ ನೀಡಲು BJP ಕಾರ್ಯಕರ್ತರ ಮನವಿ

ಮಂಡ್ಯ:  ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಶಾದಿ ಭಾಗ್ಯ’ದಂತೆ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದ ವತಿಯಿಂದ ರೂ.5ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರ ಮೂಲಕ...

ನಿವೃತ್ತಿ ನಿರ್ಧಾರ ಹಿಂತೆಗೆದುಕೊಂಡ ವಿನೇಶ್ ಫೋಗಟ್; ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ತಯಾರಿ

ಕುಸ್ತಿಪಟು ವಿನೇಶ್ ಫೋಗಟ್ ಸ್ಪರ್ಧಾತ್ಮಕ ಕ್ರೀಡೆಗೆ ಮರಳುವುದಾಗಿ ಘೋಷಿಸುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅನ್ನು ಗುರಿಯಾಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತ ಹೇಳಿಕೆ ಬಿಡುಗಡೆ ಮಾಡಿರುವ...

ಗುಜರಾತ್‌ನ ವಲ್ಸಾದ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಐವರು ಕಾರ್ಮಿಕರಿಗೆ ಗಾಯ

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಔರಂಗ ನದಿಗೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿನ ಗಿರ್ಡರ್ ಕುಸಿದಿದ್ದು, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ.  ಹಳೆಯ ಸೇತುವೆಗೆ ಸಮಾನಾಂತರವಾಗಿ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿರುವ ಕೈಲಾಶ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 8...

ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ: ಭಾರತದ ವಾಹನ-ಉಕ್ಕು ರಫ್ತಿನ ವೆಚ್ಚ ಹೆಚ್ಚಳ ಸಾಧ್ಯತೆ

ಸ್ಥಳೀಯ ಕೈಗಾರಿಕೆಗಳನ್ನು ರಕ್ಷಿಸುವ ಗುರಿಯ ಭಾಗವಾಗಿ, ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಏಷ್ಯಾದ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಹೆಚ್ಚಿನ ಸುಂಕ ಹೆಚ್ಚಳ ನಿರ್ಧಾರವನ್ನು ಮೆಕ್ಸಿಕೋ ಅನುಮೋದಿಸಿದೆ. ಮೆಕ್ಸಿಕನ್...

Cognizant ಕಂಪನಿಗೆ 99 ಪೈಸೆಗೆ ಒಂದು ಎಕರೆ ಭೂಮಿ: ವಿಶಾಖಪಟ್ಟಣದಲ್ಲಿ ತಾತ್ಕಾಲಿಕ ಕಛೇರಿ ಉದ್ಘಾಟನೆ

ಕಳೆದ ಜೂನ್‌ ನಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ Cognizant ಕಂಪನಿಯು 1582 ಕೋಟಿ ಹೂಡಿಕೆ ಮಾಡಿ 8 ಸಾವಿರ ಉದ್ಯೋಗ ಸೃಷ್ಠಿ ಮಾಡಲಾಗುವುದೆಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರ ಘೋಷಿಸಿತ್ತು....

ಅಲ್ಪಸಂಖ್ಯಾತ ಶಾಲೆಗಳಿಗೆ ಆರ್.ಟಿ.ಇ ಕಾಯ್ದೆಯಿಂದ ವಿನಾಯಿತಿ ತೀರ್ಪಿನ ವಿರುದ್ಧ ಅರ್ಜಿ; ಎನ್.ಜಿ.ಒಗೆ ದಂಡ ವಿಧಿಸಿದ ಸುಪ್ರೀಂ  

ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ನಿಬಂಧನೆಗಳಿಂದ ಅಲ್ಪಸಂಖ್ಯಾತ ಶಾಲೆಗಳಿಗೆ ವಿನಾಯಿತಿ ನೀಡಿದ್ದ, ತನ್ನ ಹಿಂದಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ಖಂಡಿಸಿದೆ.  ಜಸ್ಟೀಸ್ ಬಿ.ವಿ. ನಾಗರತ್ನ ಮತ್ತು...