HomeUncategorizedದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ ಜವಾಹರಲಾಲ್ ನೆಹರು ಪಾಪದ ಕೂಸು : ಸಚಿವ ಸಿ.ಟಿ.ರವಿ ಆರೋಪ

ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ ಜವಾಹರಲಾಲ್ ನೆಹರು ಪಾಪದ ಕೂಸು : ಸಚಿವ ಸಿ.ಟಿ.ರವಿ ಆರೋಪ

- Advertisement -
- Advertisement -

ಭಾರತ-ಪಾಕಿಸ್ತಾನ ವಿಭಜೆಗೆ ಕಾಂಗ್ರೆಸ್ಸೇ ಕಾರಣ. ಮೊಹಮದ್ ಆಲಿ ಜಿನ್ನಾ ಜೊತೆಗೆ ಸೇರಿಕೊಂಡು ದೇಶ ವಿಭಜನೆ ಮಾಡಿದರು. ವಿಭಜನೆಯ ಪಾಪದ ಕೂಸು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಗಂಭೀರ ಆರೋಪ ಮಾಡಿದರು.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ ಕಾಂಗ್ರೆಸ್ ನಾಯಕರು ಜಿನ್ನಾ ಜೊತೆ ಮಾಡಿಕೊಂಡ ಭಾಗವಾಗಿ ದೇಶ ವಿಭಜೆಯಾಯಿತು. ದೇಶ ವಿಭಜನೆಗೆ RSS ಮತ್ತು BJPಕಾರಣವಲ್ಲ. ಕಾಂಗ್ರೆಸ್ ಪಾಪದ ಕೂಸು ಎಂದು ದೂರಿದರು.

ನಾಥೂರಾಮ್ ಗೋಡ್ಸೆ ಒಂದು ಬಾರಿ ಗಾಂಧಿಯನ್ನು ಕೊಂದ. ಆತ ಮಾಡಿದ್ದು ಪಾಪದ ಕೆಲಸ. ಆದರೆ ಗಾಂಧಿ ಟೋಟಿ ಧರಿಸಿ ಗಾಂಧಿ ತತ್ವಗಳನ್ನು ನಿತ್ಯವೂ ಕೊಂದದ್ದು ಕಾಂಗ್ರೆಸ್. ಹಾಗೆ ನೋಡಿದರೆ ಗೋಡ್ಸೆ ಮಾಡಿದ ಕೃತ್ಯಕ್ಕಿಂತ ಕಾಂಗ್ರೆಸ್ ಮಾಡಿದ ಕೃತ್ಯವೇ ಹೆಚ್ಚು. ಗೂಡ್ಸೆ ಮಾಡಿದ್ದು ತಪ್ಪಾದರೆ ಕಾಂಗ್ರೆಸ್ ದೇಶಕ್ಕೆ ದ್ರೋಹ ಬಗೆದು ಮಹಾತಪ್ಪ ಮಾಡಿತು. ಗೋಡ್ಸೆ ಮಾಡಿದ ಅನ್ಯಾಯಕ್ಕಿಂತ ಕಾಂಗ್ರೆಸ್ ಮಾಡಿದ ಅನ್ಯಾಯ ದೊಡ್ಡದು ಎಂದು ಗೋಡ್ಸೆಯನ್ನು ಒಂದು ಹಂತದಲ್ಲಿ ಸಮರ್ಥನೆ ಮಾಡಿಕೊಂಡರು.

ಗಾಂಧಿ ಟೋಪಿ ಹಾಕಿದರೆ, ಖಾದಿ ಬಟ್ಟೆ ಧರಿಸಿದ ಮಾತ್ರಕ್ಕೆ ಗಾಂಧೀಜಿ ಆಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿಯನ್ನು ಕಟುವಾಗಿ ಟೀಕಿಸಿದರು. ದೇಶ ಮೊದಲ ನಂತರ ಪಕ್ಷ. ಆದರೆ ಕಾಂಗ್ರೆಸ್ ಗೆ ನೋಟು ಮೊದಲು ನಂತರ ದೇಶ. ರಾಹುಲ್ ಗಾಂಧಿ ಹತಾಶೆಯಿಂದ ಟೀಕೆ ಮಾಡುತ್ತಿದ್ದಾರೆ. ಅವರು ಹೇಳಿಕೆಗಳೆಲ್ಲವು ಅಪ್ರಬುದ್ಧತೆಯಿಂದ ಕೂಡಿವೆ ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಮುಂದಿನ ಪ್ರಧಾನಿಯಾಗಬಲ್ಲ ವ್ಯಕ್ತಿ ಎಂಬ ಪ್ರಶ್ನೆಗೆ ತಿರುಕನೋರ್ವ ಮುರುಕು ಗುಡಿಸಲಲ್ಲಿ ಕನಸು ಕಂಡನಂತೆ ಎಂದು ಗೇಲಿ ಮಾಡಿದರು.

ಮಹಾತ್ಮಗಾಂಧೀಜಿ ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಪೌರತ್ವ ನೀಡಬೇಕೆಂದು ಹೇಳಿದ್ದರು. ದೌರ್ಜನ್ಯ ನಡಯುತ್ತಿದ್ದ ನೋಡಿಕೊಂಡು ಸುಮ್ಮನಿರಲು ಸಾದ್ಯವಿಲ್ಲ. ಅಂದು ಗಾಂಧೀಜಿ ಕಂಡಿದ್ದ ಕನಸನ್ನು ಇಂದು ನಮ್ಮ ಸರ್ಕಾರ ನನಸು ಮಾಡಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಬಲಾಢ್ಯ ರಾಜಕಾರಣಿ. ಅವರನ್ನು ಯಾರಿಂದಲೂ ಆಟವಾಡಿಸಲು ಸಾಧ್ಯವಿಲ್ಲ. ಸಾಮರ್ಥ್ಯವಿರುವ ಯಡಿಯೂರಪ್ಪ ಅವರನ್ನು ಆಟವಾಡಿಸಲು ಆಗುವುದಿಲ್ಲ. ಅವರು ಬಲಿಷ್ಟವಾಗಿದ್ದು ಬೇರೆಯವರನ್ನು ಆಟವಾಡಿಸಬಲ್ಲ ಶಕ್ತಿ ಇದೆ.

ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ ದೆಹಲಿಯ ಚುನಾವಣೆ ಸಮೀಪದಲ್ಲಿದೆ. ಆ ಕಾರಣಕ್ಕೆ ವಿಳಂಬವಾಗಿದೆ. ಪಕ್ಷದ ಕೈಮಾಂಡ್ ಅಧ್ಯತೆ ಮೇಲೆ ವಿಷಯಗಳನ್ನು ಕೈಗೆತ್ತಿಕೊಳ್ಳಲಿದೆ. ಮುಖ್ಯ ವಿಷಯ ಬಂದಾಗ ಸಣ್ಣ ವಿಷಯಗಳು ಪಕ್ಕಕ್ಕೆ ಸರಿಯುತ್ತವೆ ಎಂದು ಸಂಪುಟ ವಿಸ್ತರಣೆಗೆ ಮಹತ್ವ ನೀಡಬೇಕಾದ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಪಕ್ಷದ ಹೈಕಮಾಂಡ್ ರೋಗಿಯನ್ನು ನೋಡಿಕೊಳ್ಳುತ್ತಿದೆ. ಮೊದಲು ಬಿಪಿ ಮತ್ತು ಶುಗರ್ ಕಂಟ್ರೋಲ್ ಮಾಡಿ ನಂತರ ಶಸ್ತ್ರಚಿಕಿತ್ಸೆ ಮಾಡುತ್ತಾರಲ್ಲವೇ? ಹಾಗೆ ಸಂಪುಟ ವಿಸ್ತರಣೆ ಎಂದು ಸಂಪುಟ ವಿಸ್ತರಣೆಯಲ್ಲಿ ಬಿಪಿ, ಶುಗರ್ ಹೆಚ್ಚಾಗಿದೆ ಎಂಬ ಸೂಚನೆ ನೀಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಂದೋರ್‌ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ಬೆದರಿಕೆ, ಚಿತ್ರಹಿಂಸೆ ಕಾರಣ?

0
ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಅವರನ್ನು ಬೆದರಿಸಿ ಚಿತ್ರಹಿಂಸೆ ನೀಡಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ವಿರೋಧ...