Homeಮುಖಪುಟಸಿದ್ದಗಂಗ ಮಠದಲ್ಲಿ ಧ್ಯಾನ ಕೈಬಿಟ್ಟ ಪ್ರಧಾನಿ: ರಾಜಕೀಯ ಭಾಷಣ ಮಾಡಿದ ಮೋದಿ

ಸಿದ್ದಗಂಗ ಮಠದಲ್ಲಿ ಧ್ಯಾನ ಕೈಬಿಟ್ಟ ಪ್ರಧಾನಿ: ರಾಜಕೀಯ ಭಾಷಣ ಮಾಡಿದ ಮೋದಿ

- Advertisement -
- Advertisement -

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ಭೇಟಿ ನೀಡಿದ ಬಳಿಕ ಧ್ಯಾನ ಮಾಡುತ್ತಾರೆಂದು ಸುದ್ದಿಯಾಗಿತ್ತು. ಆದರೆ ಧ್ಯಾನ ಬಿಟ್ಟು ರಾಜಕೀಯ ಭಾಷಣ ಮಾಡಿದರು.

ಕೇಂದ್ರ ಸರ್ಕಾರ ಜಮ್ಮು-ಕಾಸ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದೆ. 370ನೇ ಕಾಲಂ ರದ್ದುಪಡಿಸಿ ಶಾಂತಿಯನ್ನು ಸ್ಥಾಪಿಸಿದ್ದೇವೆ. ಸದಾ ಆತಂಕವಾದಿಗಳ ಗೂಡಾಗಿದ್ದ ಜಮ್ಮುಕಾಶ್ಮೀರದಲ್ಲಿ ಇಂದು ಆತಂಕ ದೂರವಾಗಿದೆ. ಜನ ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿದ್ದೇವೆ ಎಂದು ಹೇಳಿಕೊಂಡರು.

ಬಹುಕಾಲದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಬಗೆಹರಿಸಿದ್ದೇವೆ. ರಾಮ ಮಂದಿರ ನಿರ್ಮಾಣಕ್ಕೆ ಪ್ರಶಸ್ತ ವಾತಾವರಣ ನಿರ್ಮಾಣವಾಗಿದೆ. ರಾಮಮಂದಿರವನ್ನು ನಿರ್ಮಿಸುತ್ತೇವೆ. ಎಂದು ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ ನಲ್ಲಿ ಅಂಗೀಕರಿಸಿದ್ದೇವೆ. ಅದನ್ನು ಜಾರಿಗೊಳಿಸಲು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ವಿರೋಧ ವ್ಯಕ್ಪತಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್ ಪಾಕಿಸ್ತಾನದ ವಿರುದ್ದ ಪ್ರತಿಭಟನೆ ಮಾಡುವುದು ಬಿಟ್ಟು ಸಂಸತ್ ವಿರುದ್ಧವೇ ಮಾತನಾಡುತ್ತಿದೆ ಎಂದು ಆರೋಪಿಸಿದರು.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್ಖರು, ಬೌದ್ಧರು, ಪಾರ್ಸಿಗಳು, ಕ್ರೈಸ್ತರು, ಜೈನರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅತ್ಯಾಚಾರ ನಡೆಯುತ್ತಿದೆ. ಹಿಂಸೆ ನೀಡಲಾಗುತ್ತಿದೆ. ಅವರಿಗೆ ಭಾರತದ ಪೌರತ್ವ ನೀಡುತ್ತೇವೆ ಎಂದರೆ, ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ದ್ವೇಷದ ವಾತಾವರಣವನ್ನು ವಿರೋಧ ಪಕ್ಷಗಳು ಹುಟ್ಟುಹಾಕುತ್ತಿವೆ ಎಂದು ಕಿಡಿಕಾರಿದರು.

ಪಾಕಿಸ್ತಾನದಲ್ಲಿ ದಲಿತರು, ಶೋಷಿತರ ಮೇಲೆ ಕ್ರೌರ್ಯ ನಡೆಯುತ್ತಿದ್ದರೂ ಕಾಂಗ್ರೆಸ್ 70 ವರ್ಷಗಳಿಂದ ಸುಮ್ಮನೆ ಕುಳಿತಿದೆ. ಹೋರಾಟವನ್ನೇ ಮಾಡುತ್ತಿಲ್ಲ.ಪಾಕಿಸ್ತಾನದ ಕರಾಳತನಕ್ಕೆ ಬೀಗಬಿದ್ದಿದೆ. ಕಾಂಗ್ರೆಸ್ ಮತ್ತು ಇತರರು ಪಾಕಿಸ್ತಾನದ ಹಿಂದೂಳಿಗೆ ಪೌರತ್ವ ನೀಡುವುದನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದಗಂಗಾ ಮಠದಲ್ಲಿ ಧಾರ್ಮಿಕ ವಿಷಯಗಳನ್ನು ಪ್ರಸ್ತಾಪಿಸುವುದನ್ನು ಬಿಟ್ಟು ಮೋದಿ ರಾಜಕಾರಣ ಮಾತನಾಡಲು ಬಳಸಿಕೊಂಡರು. ಮಕ್ಕಳಿಗೆ ರಾಜಕೀಯ ಭಾಷಣ ಮಾಡಿದರು. ಮಕ್ಕಳು ಭವಿಷ್ಯದ ಪ್ರಜೆಗಳು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಪ್ರಧಾನಿ ಮಕ್ಕಳು ಚನ್ನಾಗಿ ಓದಬೇಕು. ಉತ್ತಮ ಹುದ್ದೆಗಳನ್ನು ಹಿಡಿಯಬೇಕು. ದೇಶಕ್ಕೆ ಜಿಲ್ಲೆಗೆ ಕೀರ್ತಿ ತರಬೇಕು ಎಂಬಂತಹ ಒಂಂದೇ ಒಂದು ಮಾತನ್ನು ಹೇಳದೆ ಭಾಷಣ ಮುಗಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅದನ್ನೇ ಬರೆದು ಕೊಟ್ಟಿರಬೇಕು ಬರೆಯುವವರು.
    ಆಗಾದರೆ ದೆಹಲಿಯಲ್ಲಿ ಹೇಳಿದ್ದು ಏನು?
    ಪೌರತ್ವದ ಬಗ್ಗೆ ಚರ್ಚೆನೇ ಮಾಡಿಲ್ಲ ಎಂದು ಹೇಳಿ.
    ಕರ್ನಾಟಕದಲ್ಲಿ ಪಾಸು ಮಾಡಿದ್ದೇನೆ ಎಂದು

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...