Homeಮುಖಪುಟಇನ್ಸುಲಿನ್ ಎಂಬ ಹಾರ್ಮೋನ್‌ನ ಆವಿಷ್ಕಾರಕ್ಕೆ 100 ವರ್ಷ

ಇನ್ಸುಲಿನ್ ಎಂಬ ಹಾರ್ಮೋನ್‌ನ ಆವಿಷ್ಕಾರಕ್ಕೆ 100 ವರ್ಷ

- Advertisement -
- Advertisement -

ಸಾಂಕ್ರಾಮಿಕದ ನಡುವೆಯೂ 2021 ಜುಲೈ ಆರೋಗ್ಯ ಆವಿಷ್ಕಾರದ ಒಂದು ಸಂಭ್ರಮಾಚರಣೆಗೆ ಸಾಕ್ಷಿಯಾಗಿದೆ.
ಅಂದರೆ ಪ್ರಪಂಚದಾದ್ಯಂತ ಕೋಟ್ಯಾಂತರ ಜನರು ನರಳುತ್ತಿರುವ ಮಧುಮೇಹ, ಅದರಲ್ಲೂ ಮಕ್ಕಳಿಗೆ ತಗಲುವ ಟೈಪ್ 1 ಮಧುಮೇಹ ಕಾಯಿಲೆಯ ಉಪಶಮನಕ್ಕೆ ದಾರಿ ಮಾಡಿಕೊಟ್ಟ ಇನ್ಸುಲಿನ್ ಎಂಬ ಹಾರ್ಮೋನಿನ ಅವಿಷ್ಕಾರವಾದ ನೂರನೇ ವರ್ಷ ಇದು. ಈ ಅವಿಷ್ಕಾರ ಸಂಭವಿಸಿದ್ದು 1921ನೇ ಇಸವಿಯಲ್ಲಿ ಮತ್ತು ಟೊರೆಂಟೊ ವಿಶ್ವವಿದ್ಯಾಲಯದಲ್ಲಿ.

ಈ ಅವಿಷ್ಕಾರದ ಪ್ರಕ್ರಿಯೆ ಎಷ್ಟೊಂದು ರಂಜನೀಯವಾದದ್ದು ಹಾಗೂ ಉತ್ತೇಜನಕಾರಿಯಾದದ್ದೆಂದರೆ, ಇದನ್ನಾಧರಿಸಿದ ಅನೇಕ ಚಲನಚಿತ್ರಗಳ ನಿರ್ಮಾಣವಾದವು. ಈ ಚಲನಚಿತ್ರಗಳ ಮುಖ್ಯ ಪಾತ್ರಧಾರಿಗಳಿಗೆ ಸ್ಫೂರ್ತಿ ವಿಜ್ಞಾನಿ ಮತ್ತು ಸಂಶೋಧಕ ಫ್ರೆಡ್ರಿಕ್ ಬ್ಯಾಂಟಿಂಗ್. ಅವರ ಹೆಸರು ಕೂಡ ಇನ್ಸುಲಿನ್ ಆವಿಷ್ಕಾರದ ಸಮಾನಾರ್ಥಕ. ಅವರ ಜನ್ಮ ದಿನವಾದ ನವಂಬರ್ ಹದಿನಾಲ್ಕರಂದು ವಿಶ್ವ ಮಧುಮೇಹದ ದಿನವೆಂದು ಆಚರಿಸಲಾಗುತ್ತಿದೆ.

ಬ್ಯಾಂಟಿಂಗ್ ತನ್ನ ವೈದ್ಯಕೀಯ ಶಿಕ್ಷಣವನ್ನು ಡಿಸೆಂಬರ್ 1916ರಲ್ಲಿ ಟೊರೆಂಟೊ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಆದರೆ ಆ ಸಮಯದಲ್ಲಿ ಮೊದಲನೇ ಮಹಾಯುದ್ಧ ನಡೆಯುತ್ತಿದ್ದರಿಂದ ಅವರನ್ನು ತಕ್ಷಣ ಸೈನ್ಯದಲ್ಲಿನ ಸೇವೆಗೆ ನಿಯೋಜಿಸಲಾಯಿತು. 1918ರಲ್ಲಿ ಕಾಂಬ್ರಾಯ್ ಅನ್ನುವ ಸ್ಥಳದಲ್ಲಿ ನಡೆದ ಹೋರಾಟದಲ್ಲಿ ಅವರು ಗಾಯಗೊಂಡರು. ತಾವೇ ಗಾಯಗೊಂಡಿದ್ದರೂ ಸಹ ಇತರ ಗಾಯಗೊಂಡ ಸೈನಿಕರನ್ನು ಉಪಚರಿಸುವುದನ್ನು ಅವರು ನಿಲ್ಲಿಸಲಿಲ್ಲ. ಇದೇ ಕಾರಣಕ್ಕೆ ಅವರಿಗೆ ಮಿಲಿಟರಿ ಕ್ರಾಸ್ ಪ್ರಶಸ್ತಿಯನ್ನ ನೀಡಲಾಯಿತು. ಇದು ಅವರಲ್ಲಿದ್ದ ತಾತ್ವಿಕ ಮತ್ತು ಸೇವಾಮನೊಭಾವದ ಧೋರಣೆಯನ್ನ ಪ್ರತಿಬಿಂಬಿಸುತ್ತದೆ. ಈ ಮನೊಪ್ರವೃತ್ತಿ ಅವನ ಮುಂದಿನ ದಿನಗಳಲ್ಲಿ ಸಹಾಯಕ್ಕೆ ಬಂದಿತು. ಅವರು ಕೆನಡಾಗೆ ವಾಪಸ್ಸಾಗಿ ಮೂಳೆರೋಗದ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ತರಬೇತು ಪಡೆದರು ಮತ್ತು ಖಾಸಗಿಯಾಗಿ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿದರು. ಆದರೆ ಅದು ಅಷ್ಟೊಂದು ಯಶಸ್ಸನ್ನು ಕಾಣಲಿಲ್ಲ. ನಂತರ ಪಶ್ಚಿಮ ಒಂಟಾರಿಯೊ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿಧ್ಯಾರ್ಥಿಗಳಿಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಒಂದು ರಾತ್ರಿ ಬಹಳ ದಣಿದಿದ್ದರೂ, ಮಲಗುವ ಮುಂಚೆ ಪ್ಯಾನ್‌ಕ್ರಿಯಸ್ ಗ್ರಂಥಿಯ ಬಗ್ಗೆ ಲೇಖನವೊಂದನ್ನು ಓದಿ ಗಾಢವಾಗಿ ನಿದ್ರಿಸಿದರು. ಮಧ್ಯರಾತ್ರಿ ಎರಡು ಗಂಟೆಯ ವೇಳೆಗೆ ಕನಸೊಂದರ ಕಾರಣದಿಂದ ಎಚ್ಚರಗೊಂಡಾಗ ಅವರಿಗೆ ಹೊಸ ಹೊಳಪು ಮೂಡಿತ್ತು. ಪ್ಯಾನ್‌ಕ್ರಿಯಸ್ ಗ್ರಂಥಿಯ ನಾಳವನ್ನ ಬಿಗಿಯಾಗಿ ಕಟ್ಟಿದರೆ ಆ ಗ್ರಂಥಿಯಿಂದ ಆಹಾರ ಜೀರ್ಣವಾಗುವಂತೆ ಮಾಡುವ ಜೀವಕೋಶಗಳು ಅವನತಿಯಾಗುತ್ತಿದ್ದ ಲಕ್ಷಣಗಳು ಗೋಚರವಾದವೇ ಹೊರತು, ಐಲೆಟ್ಸ್ ಆಫ್ ಲಾಂಗರಾನ್ಸ್ (islets of Langerhans) ಎಂಬ, ಗ್ಲೂಕೋಸನ್ನು ದೇಹವನ್ನ ಚೇತೋಹಾರಿಯನ್ನಾಗಿಡುವ ಗ್ಲೈಕೋಜೆನ್ ಎಂಬ ವಸ್ತುವನ್ನಾಗಿ ಪರಿವರ್ತಿಸುವ ಜೀವಕೋಶಕ್ಕೆ ಯಾವುದೇ ಹಾನಿಯಾಗುತ್ತಿರಲಿಲ್ಲ ಎನ್ನುವುದನ್ನ ಅರಿತರು.

ಬ್ಯಾಂಟಿಂಗ್ ಅವರಿಗೆ ಸ್ಪಷ್ಟವಾಗಿ ಖಾತ್ರಿಯಾಗಿದ್ದು ಈ ಐಲೆಟ್‌ಗಳಲ್ಲಿ ಸಕ್ಕರೆಯ ಪ್ರಮಾಣವನ್ನ ಕಡಿಮೆ ಮಾಡುವಂತಹ ಗುಣ ಇದೆ ಎಂಬುದು. ಹಾಗಾಗಿ ಅದರಿಂದ ಹಾರ್ಮೋನನ್ನು ಬೇರ್ಪಡಿಸಿ, ಸಂಗ್ರಹಿಸಿ ಮತ್ತು ಸಂಸ್ಕರಿಸಿ ಮಧುಮೇಹ ರೋಗದ ಚಿಕಿತ್ಸೆಗೋಸ್ಕರ ಉಪಯೋಗಿಸಬಹುದು ಎಂಬುದನ್ನು ತಿಳಿದರು. ಈ ಆಲೋಚನೆ ಅವರನ್ನು ಸಂಪೂರ್ಣವಾಗಿ ಆವರಿಸಿಕೊಂಡು ಅದರ ಬಗ್ಗೆಯ ಚಿಂತನೆ ಅವರಿಗೊಂದು ಗೀಳಾಗಿ ಪರಿಣಮಿಸಿಬಿಟ್ಟಿತು.

ಟೊರೆಂಟೊ ವಿಶ್ವವಿದ್ಯಾಲಯದಲ್ಲಿ ಫಿಸಿಯಾಲಜಿ ಪ್ರೊಫೆಸರ್ ಆಗಿದ್ದ ಜೆ.ಜೆ.ಆರ್. ಮಾಕ್ಲಿಯಾಡ್ ಅವರನ್ನು ಸಂಪರ್ಕಿಸಿ ಈ ಹಾರ್ಮೋನನ್ನು ಬೇರ್ಪಡಿಸಲು ಪ್ರಯೋಗಗಳನ್ನ ಮಾಡಲು, ಅವರ ಪ್ರಯೋಗಾಲಯದಲ್ಲಿ ಅವಕಾಶಮಾಡಿಕೊಡಬೇಕೆಂದು ಬ್ಯಾಂಟಿಂಗ್ ಕೇಳಿಕೊಂಡರು. ಮೊದಮೊದಲಿಗೆ ಮಾಕ್ಲಿಯಾಡ್ ಇದರ ಬಗ್ಗೆ ಉದಾಸೀನರಾಗಿದ್ದರು. ಇದಕ್ಕೆ ಕಾರಣ ಅನೇಕ ಪ್ರಖ್ಯಾತ ವಿಜ್ಞಾನಿಗಳಾದ ನೌನಿನ್, ಮಿಂಕೊವಿಸ್ಕಿ, ಮೆರಿಂಗ್, ಓಪಿ, ಮತ್ತು ಸ್ಚಾಫರ್, ನಿಖೊಲಾಸ್ ಪಾಲಿಸ್ಕೊ ಈ ದಿಶೆಯಲ್ಲಿ ಯಶಸ್ಸನ್ನ ಕಾಣದೇ ವಿಫಲರಾಗಿದ್ದು.

ಮಾಕ್ಲಿಯಾಡ್ ಕೊನೆಗೂ ಬ್ಯಾಂಟಿಂಗ್ ಅವರಿಗೆ ಪ್ರಯೋಗಾಲಯವನ್ನ ಉಪಯೋಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಪ್ರಯೋಗಪ್ರಶುಗಳಾಗಿ ಕೆಲವು ನಾಯಿಗಳನ್ನೂ ಅವರಿಗೆ ಕೊಟ್ಟು, ಒಬ್ಬ ವಿದ್ಯಾರ್ಥಿ ಚಾರ್ಲ್ಸ್ ಬೆಸ್ಟ್ ಎನ್ನುವವರನ್ನ ಸಹಾಯಕನನ್ನಾಗಿ ಉಪಯೋಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಕೆಲವು ವಾರಗಳಿಗೆ ಮಾತ್ರ ಪ್ರಯೋಗಾಲಯವನ್ನ ಬಿಟ್ಟುಕೊಟ್ಟು, ಆ ಸಮಯದಲ್ಲಿ ಮಾಕ್ಲಿಯಾಡ್ ಸ್ಕಾಟ್ಲಂಡಿಗೆ ವಿಹಾರಕ್ಕಾಗಿ ಹೊರಟುಹೋದರು.

ಆ ಬೇಸಿಗೆಯಲ್ಲಿನ ಯಶಸ್ಸು

ಬ್ಯಾಂಟಿಂಗ್ ಮತ್ತು ಬೆಸ್ಟ್ 1921ರ ಮೇ ತಿಂಗಳ ಘೋರವಾದ ಶೆಖೆಯಲ್ಲಿ, ಅದೂ ಹವಾನಿಯಂತ್ರಣದ ಸೌಲಭ್ಯವಿಲ್ಲದ ಕಾಲದಲ್ಲಿ, ಅಪಕ್ವ ಪ್ರಯೋಗಗಳನ್ನು ಮಾಡುತ್ತಾ ಯಶಸ್ಸನ್ನು ಹೇಗೆ ಕಂಡುಕೊಂಡರು ಅನ್ನುವುದೊಂದು ಸ್ವಾರಸ್ಯಕರವಾದ ಕತೆ. ಪ್ರಯೋಗಗಳ ನಂತರ ಪ್ರಯೋಗಗಳು ವಿಫಲವಾಗತೊಡಗಿದವು. ನಾಯಿಗಳು ಸಾಯುತ್ತಲೇಹೋದವು. ಬ್ಯಾಂಟಿಂಗ್ ಈಗಕದ್ದು ಮುಚ್ಚಿ ಬೀದಿನಾಯಿಗಳನ್ನು ಹಿಡಿದು ತರುತ್ತಿದ್ದರು. ಶಸ್ತ್ರವೈದ್ಯರಾಗಿದ್ದರಿಂದ ಅವರು ನಾಯಿಗಳನ್ನ ತಮ್ಮ ಪ್ರಯೋಗಕ್ಕಾಗಿ ಛೇದಿಸುತ್ತಿದ್ದರೆ, ಜತೆಜತೆಯಲ್ಲೇ ಬೆಸ್ಟ್, ನಾಯಿಗಳ ರಕ್ತದಲ್ಲಿನ ಗ್ಲೂಕೋಸ್ ಅಂಶದ ಮಟ್ಟವನ್ನ ಅಳೆಯುತ್ತಿದ್ದರು.

ಪ್ಯಾನ್‌ಕ್ರಿಯಸ್‌ಅನ್ನು ನಾಯಿಗಳ ದೇಹದಿಂದ ತೆಗೆದುಬಿಟ್ಟಾಗ ನಾಯಿಗಳು ತೀವ್ರ ಮಧುಮೇಹಕ್ಕೆ ತುತ್ತಾಗುತ್ತಿದ್ದವು. ಪ್ಯಾನ್‌ಕ್ರಿಯಸ್‌ನಿಂದ ಬ್ಯಾಂಟಿಂಗ್ ಮತ್ತು ಬೆಸ್ಟ್ ಆ ನಿಗೂಢವಾದ ಗ್ರಂಥಿರಸವನ್ನ ಬೇರ್ಪಡಿಸಲು ಪ್ರಯತ್ನಿಸಿ ಅದನ್ನು ಮಧುಮೇಹದ ನಾಯಿಗಳಿಗೆ ಇಂಜೆಕ್ಟ್ ಮಾಡಿ ಆ ನಾಯಿಗಳ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆಯೇ ಎಂದು ನೋಡಿದರು. ನಿರಂತರ ವೈಫಲ್ಯಗಳ ನಂತರ ಜುಲೈ 1921ರ ಒಂದು ದಿನ ಚರಿತ್ರಾರ್ಹವಾಗಿ ಒಂದು ನಾಯಿಯ ರಕ್ತದ ಗ್ಲೂಕೋಸಿನ ಮಟ್ಟ ಕಡಿಮೆಯಾಗುತ್ತಾ ಬಂದಿತು.

ಮಾಕ್ಲಿಯಾಡ್ ತನ್ನ ರಜೆಯಿಂದ ಹಿಂದಿರುಗಿ ತಕ್ಷಣದಲ್ಲಿ ಈ ಫಲಿತಾಂಶಗಳನ್ನು ನಂಬಲಿಲ್ಲ. ಅವನಿಗೆ ನಂತರದಲ್ಲಿ ಇದರ ಬಗ್ಗೆ ವಿಶ್ವಾಸ ಮೂಡಿತು, ಮತ್ತು ಖಂಡಿತವಾಗಿ ಲಾಂಗರ್‌ಹಾನ್ಸ್‌ನ ಐಲೆಟ್‌ನಲ್ಲಿರುವ (islets of Langerhans) ಹಾರ್ಮೋನ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನ ಕಮ್ಮಿ ಮಾಡುತ್ತದೆ ಎನ್ನುವುದು ಸಾಬೀತಾಯಿತು.

ಬ್ಯಾಂಟಿಂಗ್ ಈ ಗ್ರಂಥಿರಸಕ್ಕೆ ಐಲೆಟಿನ್ (Isletin) ಎಂಬ ಹೆಸರನ್ನ ಸೂಚಿಸಿದರು. ಆದರೆ ಮಾಕ್ಲಿಯಾಡ್ ಇನ್ಸುಲಿನ್ ಅನ್ನುವ ಹೆಸರು ಚೆನ್ನಾಗಿರುತ್ತದೆ ಎಂದು ಅವನಿಗೆ ಮನವರಿಕೆ ಮಾಡಿಕೊಟ್ಟರು. ಕಾರಣ ಅದು ಲ್ಯಾಟಿನ್ ಪದ ಇನುಲಿನ್ಂದ ಬರುತ್ತದೆ ಮತ್ತು ಇನ್ಸುಲ ಅಂದರೆ ದ್ವೀಪ ಎಂದು. ಈ ಹೆಸರನ್ನ ಶಾರ್ಪಿ ಶಾಫರ್ ಅನ್ನುವ ವಿಜ್ಞಾನಿ ಬಹಳ ವರ್ಷಗಳ ಹಿಂದೆಯೇ ಸೂಚಿಸಿದ್ದರು.

ಜನವರಿ 1922ರಲ್ಲಿ ಮಾನವನ ಮೇಲೆ ಇನ್ಸುಲಿನ್‌ಅನ್ನು ಪ್ರಯೋಗಿಸಲು ಶುರುಮಾಡಿದರು. ಲಿಯಾನಾರ್ಡ್ ಥಾಮ್ಸನ್ ಎನ್ನುವ ಅತೀವವಾಗಿ ಮಧುಮೇಹದಿಂದ ಬಳಲುತ್ತಿದ್ದ ಹದಿನಾಲ್ಕು ವರ್ಷದ ಬಾಲಕನ ಮೇಲೆ ಪ್ರಯೋಗಿಸಲಾಯಿತು. ಅತ್ಯಾಶ್ಚರ್ಯಕರ ರೀತಿಯಲ್ಲಿ ಅವನ ದೇಹ ಅದಕ್ಕೆ ಪ್ರತಿಕ್ರಿಯಿಸಿತು. ಆದರೂ, ಮೊದಲ ಹಂತದಲ್ಲಿ ಮಾನವನ ಮೇಲಿನ ಪ್ರಯೋಗಗಳು ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ. ಕಾರಣ ಬ್ಯಾಂಟಿಂಗ್ ಮತ್ತು ಬೆಸ್ಟ್ ಅಪಕ್ವ ರೀತಿಯಲ್ಲಿ ಇನ್ಸುಲಿನ್‌ಅನ್ನು ಹೊರತೆಗೆಯುತ್ತಿದ್ದುದು ಎನ್ನುವುದು ಅವರಿಗೆ ಮನದಟ್ಟಾಯಿತು.

ಎಡ್ಮಂಟೊನ್ ಎಂಬ ಊರಿನವರಾದ ಜೇಮ್ಸ್ ಕಾಲಿಪ್ ಎಂಬ ಬಯೊಕೆಮಿಸ್ಟ್ ಒಬ್ಬರನ್ನು ಈ ಸಂಶೋಧನೆಗೆ ಸೇರಿಸಿಕೊಳ್ಳಲಾಯಿತು. ಅವರು ಹೊರತೆಗೆದ ಇನ್ಸುಲಿನ್‌ಅನ್ನು ಶುದ್ಧೀಕರಿಸಿ ಸಂಸ್ಕರಿಸಲು ಸಹಾಯ ಮಾಡಿದರು. ಇದರಿಂದ ಪ್ರತಿಕೂಲವಾದ ಪರಿಣಾಮಗಳನ್ನು, ಅಂದರೆ ಜ್ವರ, ಮತ್ತು ಇಂಜೆಕ್ಷನ್ ಚುಚ್ಚಿದ ಜಾಗದಲ್ಲಿ ಬಾವು ಆಗುವುದನ್ನ ತಡೆಯಲಾಯಿತು. ನಂತರ ಬಾಲ್ಯ ಮಧುಮೇಹದಿಂದ ಅಂದರೆ
ಟೈಪ್ 1 ಡಯಾಬಿಟಿಸ್‌ನಿಂದ ನರಳುತ್ತಿದ್ದ ಹಲವಾರು ಮಕ್ಕಳ ಜೀವವನ್ನ ಉಳಿಸುವಲ್ಲಿ ಈ ಆವಿಷ್ಕಾರ ಪರಿಣಾಮಕಾರಿಯಾಯಿತು. ಆಧುನಿಕ ಔಷಧಿಗಳ ಆವಿಷ್ಕಾರಗಳಲ್ಲಿ ಇದು ಅತ್ಯದ್ಭುತವಾದ ಮೈಲಿಗಲ್ಲಾಯಿತು.

ಟೊರೆಂಟೊ ವಿಶ್ವವಿದ್ಯಾಲಯ ಅಮೆರಿಕದ ’ಎಲಿ ಲಿಲ್ಲಿ’ ಎಂಬ ಔಷಧಿ ತಯಾರಕರಿಗೆ ಇನ್ಸುಲಿನ್‌ಅನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲು ಪರವಾನಗಿ ನೀಡಿತು. ಆ ಸಂಸ್ಥೆ ಒಂದು ವರ್ಷದಲ್ಲಿ ಇನ್ಸುಲಿನ್‌ಅನ್ನು ಜನಸಾಮಾನ್ಯರಿಗೆ ದೊರಕುವಂತೆ ಅನುಕೂಲ ಮಾಡಿಕೊಟ್ಟಿತು.

1921ರವರೆವಿಗೂ ಟೈಪ್ 1 ಮಧುಮೇಹ ತಗುಲಿದ ಮಕ್ಕಳ ಜೀವಾವಧಿ ಮೂರು ತಿಂಗಳಿಂದ ಹೆಚ್ಚೆಂದರೆ ಎರಡು-ಮೂರು ವರ್ಷದವರೆಗೆ ಮಾತ್ರ ಇರುತ್ತಿತ್ತು. ಅದು ಕೂಡ ಸಾಧ್ಯವಾಗುತ್ತಿದ್ದದ್ದು ಮಕ್ಕಳಿಗೆ ಅತೀವವಾದ ಹಸಿವಿನಲ್ಲೇ ಬಳಲುವಂತಹ ಆಹಾರವನ್ನ ಕೊಟ್ಟಾಗ ಮಾತ್ರ. ಆ ಮಕ್ಕಳು ಕೂಡ ಉಳಿಯುತ್ತಿದ್ದುದು ಡಯಾಬೆಟಿಕ್ ಕೋಮದಿಂದ ಅಸುನೀಗುವವರೆಗೂ. ಇನ್ಸುಲಿನ್ನಿನ ಅವಿಷ್ಕಾರದ ನಂತರ ಎಲ್ಲವೂ ಬದಲಾಯಿತು. ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದ ಮಕ್ಕಳ ಜೀವಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಳಿಸಲು ಸಾಧ್ಯವಾಯಿತು.

ಇನ್ಸುಲಿನ್‌ನ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿಯನ್ನ 1923ರಲ್ಲಿ ನೀಡಲಾಯಿತು. ಮಾನವನ ಮೇಲೆ ಪ್ರಯೋಗಿಸಿದ ಒಂದು ವರ್ಷದಲ್ಲೇ, ಆವಿಷ್ಕಾರವೊಂದಕ್ಕೆ ನೊಬೆಲ್ ಪ್ರಶಸ್ತಿ ದೊರಕಿರುವುದು ಚರಿತ್ರೆಯಲ್ಲೇ ಗಮನಾರ್ಹವಾದ ದಾಖಲೆ. ಆದರೂ ಈ ಪ್ರಶಸ್ತಿಯ ಬಗ್ಗೆ ಒಂದು ವಿವಾದ ತಲೆದೋರಿತು. ನೊಬೆಲ್ ಸಮಿತಿ ಪ್ರಶಸ್ತಿಯನ್ನ ಬ್ಯಾಂಟಿಂಗ್ ಮತ್ತು ಮಾಕ್ಲಿಯಾಡ್ ಇಬ್ಬರಿಗೂ ಸೇರಿ ನೀಡಿತು. ಬ್ಯಾಂಟಿಂಗ್ ಆಪಾದಿಸಿದ್ದು ಮಾಕ್ಲಿಯಾಡ್‌ಗೂ ಈ ಆವಿಷ್ಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು. ಅವರ ಬದಲಿಗೆ ಚಾರ್ಲ್ಸ್ ಬೆಸ್ಟ್‌ಗೆ ಅದು ನಿಜವಾಗಲೂ ಸಲ್ಲಬೇಕಾಗಿತ್ತು ಎಂದರು. ಅದೇ ಕಾರಣಕ್ಕೆ ತಮಗೆ ಬಂದ ಪ್ರಶಸ್ತಿಯ ಹಣವನ್ನ ಬೆಸ್ಟ್ ಜತೆ ಹಂಚಿಕೊಂಡರು. ಕಾಲಿಪ್ ಅವರ ಶುದ್ಧೀಕರಣದ ತಂತ್ರಜ್ಞಾನದಿಂದಲೇ ಇನ್ಸುಲಿನ್‌ಅನ್ನು ಬೃಹತ್ ಪ್ರಮಾಣದಲ್ಲಿ ಹೊರತರಲು ಸಾಧ್ಯವಾಗಿದ್ದು ಎಂದು ಆಗ್ರಹಿಸಿದ ಮಾಕ್ಲಿಯಾಡ್ ಕೂಡ ತಮಗೆ ಸಂದಾಯವಾದ ಪ್ರಶಸ್ತಿಯ ಹಣವನ್ನ ಕಾಲಿಪ್ ಜತೆ ಹಂಚಿಕೊಂಡರು. ಹೀಗಾಗಿ ಈ ಆವಿಷ್ಕಾರದ ಹಿರಿಮೆಗೆ ನಾಲ್ಕು ಜನರೂ ಪಾತ್ರರಾದರು.

ನಂತರ ಇನ್ಸುಲಿನ್ ಎಲ್ಲಾ ದೇಶಗಳಲ್ಲೂ ವಾಣಿಜ್ಯಿಕವಾಗಿ ದೊರಕುವಂತಾಯಿತು. ಮೊದಲು ಇನ್ಸುಲಿನ್‌ಅನ್ನು ಬಳಸಲು ಶುರುಮಾಡಿದ ದೇಶಗಳು ಕೆನಡ, ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳು. ಆ ಸಮಯದಲ್ಲಿ ಭಾರತ ಬ್ರಿಟಿಷ್ ಅಧಿಪತ್ಯದಲ್ಲಿ ಇದ್ದುದರಿಂದ, ಇನ್ಸುಲಿನ್ ಪಡೆಯುವಲ್ಲಿ ಸಫಲವಾಯಿತು. ಇಲ್ಲಿ ಎದ್ದ ದೊಡ್ಡ ಪ್ರಶ್ನೆಯೆಂದರೆ ಇನ್ಸುಲಿನ್ ಒಂದು ಪ್ರೋಟಿನ್ ರಾಸಾಯನಿಕ ಆಗಿದ್ದರಿಂದ ಉಷ್ಣವಲಯದ ದೇಶಗಳಲ್ಲಿ ಕೆಲಸ ಮಾಡುತ್ತದೆಯೊ ಇಲ್ಲವೋ ಎನ್ನುವುದು. ನಂತರ ಅನೇಕ ಸಂಶೋಧನಾ ಅಧ್ಯಯನಗಳು ಭಾರತದಿಂದ ಪ್ರಕಟಗೊಂಡವು. ರೆಫ್ರಿಜರೇಟರ್‌ನಲ್ಲಿ ಇಟ್ಟಾಗ ಇನ್ಸುಲಿನ್ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುವುದಿಲ್ಲ ಎನ್ನುವ ಅಂಶ ಕೂಡ ಸಾಬೀತಾಯಿತು.

ಇಂದು ಈ ಇನ್ಸುಲಿನ್‌ನ ಆವಿಷ್ಕಾರದ ನೂರು ವರ್ಷಗಳ ನಂತರ, ಟೈಪ್ 1 ಮಧುಮೇಹಕ್ಕೆ ತುತ್ತಾದ ಮಕ್ಕಳು ತೊಂಬತ್ತರಿಂದ ನೂರು ವರ್ಷಗಳವರೆಗೂ ಬದುಕುಳಿದಿರುವ ದಾಖಲೆಗಳಿವೆ. ಟೈಪ್ 1 ಮಧುಮೇಹದ ರೋಗಿಗಳಾಗಿರುವ ಮಕ್ಕಳಿಗೆ ಇನ್ಸುಲಿನ್ ಚಿಕಿತ್ಸೆಯಲ್ಲದೇ ಬೇರೆ ಯಾವುದೇ ವಿಧವಾದ ಚಿಕಿತ್ಸೆ ಇದುವರೆಗೂ ಆವಿಷ್ಕಾರಗೊಂಡಿಲ್ಲ.

ಇನ್ನೂ ಕೈಗೆಟುಕದ ಈ ಸಂಶೋಧನೆ

ಇಂದು ಇನ್ಸುಲಿನ್‌ಅನ್ನು ಕಂಡು ಹಿಡಿದಿದ್ದವರು ಬದುಕಿದ್ದಿದ್ದರೆ, ಅವರು ಬಹುಶಃ ಅಸಂತೋಷದಿಂದ ಇರುತ್ತಿದ್ದರು. ಅಂದರೆ ಅನೇಕ ಕಾರಣಗಳಿಗೆ ಟೈಪ್ 1 ಮಧುಮೇಹಕ್ಕೆ ತುತ್ತಾದ ಮಕ್ಕಳುಗಳು ಜೀವ ಕಳೆದುಕೊಳ್ಳುತ್ತಿವೆ.

ಅವುಗಳಲ್ಲಿ ಮೊದಲನೆಯದು, ಸಾಕಷ್ಟು ಇನ್ಸುಲಿನ್ ಪ್ರಪಂಚದಾದ್ಯಂತ ಸರಬರಾಜಾಗುತ್ತಿದ್ದರೂ ಕೂಡ, ಅದು ಅನೇಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಜನರಿಗೆ ಕೈಗೆಟುಕದಂತಾಗಿದೆ. ಎರಡನೆಯದಾಗಿ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂ ಕೂಡ ಅದರ ಅತಿಹೆಚ್ಚು ಬೆಲೆಯ ಕಾರಣದಿಂದು ಬಡವರ ಕೈಗೆಟುಕದಂತಾಗಿದೆ.

ನಾವು ಇನ್ಸುಲಿನ್‌ನ ಆವಿಷ್ಕಾರದ ನೂರನೇ ವರ್ಷವನ್ನ ಸಂಭ್ರಮಿಸುತ್ತಿರುವಾಗಲೇ, ಭಾರತದಲ್ಲಿನ ಟೈಪ್ 1 ಮಧುಮೇಹ ರೋಗ ತಗುಲಿದ 1.5 ಲಕ್ಷ ಮಕ್ಕಳಲ್ಲಿ ಒಂದು ಮಗುವೂ ಇನ್ಸುಲಿನ್ ಪಡೆಯಲು ಆರ್ಥಿಕವಾದ
ಅಸಮರ್ಥತೆಯ ಕಾರಣದಿಂದ ಸಾಯಬಾರದು ಎನ್ನುವ ಸಂಕಲ್ಪದ ಅಗತ್ಯವಿದೆ. ನಮ್ಮ ಆರೋಗ್ಯ ಇಲಾಖೆ ತಮ್ಮ ದೃಷ್ಟಿಯನ್ನು ಇದರ ಕಡೆಗೆ ಹರಿಸುವುದು ಅತ್ಯಗತ್ಯವಾಗಿದೆ.

ಖಂಡಿತವಾಗಿಯೂ ಇನ್ಸುಲಿನ್‌ಅನ್ನು ಆಹಾರದಂತೆಯೇ ಮೂಲಭೂತ ಹಕ್ಕನ್ನಾಗಿ ಪರಿಗಣಿಸಬೇಕು. ಈ ಸಂಕಲ್ಪವನ್ನ ನಮ್ಮ ಸರ್ಕಾರ ಮಾಡಿದರೆ ಇನ್ಸುಲಿನ್ ಆವಿಷ್ಕಾರದ ನೂರನೇ ವರ್ಷದ ಸಂಭ್ರಮವನ್ನ ವಿಜೃಂಭಣೆಯಿಂದ ಆಚರಿಸಿದಂತಾಗುತ್ತದೆ.

(JULY 04, 2021, ದ ಹಿಂದೂ ಪತ್ರಿಕೆಯ ಮ್ಯಾಗಜಿನ್‌ನಲ್ಲಿ ವಿ ಮೋಹನ್ ಅವರು ಬರೆದಿದ್ದ ’100 ಇಯರ್ಸ್ ಆಫ್ ಇನ್ಸುಲಿನ್ ಡಿಸ್ಕವರಿ’ ಲೇಖನವನ್ನು ಆಧರಿಸಿ ಕೆ ಶ್ರೀನಾಥ್ ಅವರು ಇದನ್ನು ಕನ್ನಡದಲ್ಲಿ ಸಿದ್ಧಪಡಿಸಿದ್ದಾರೆ)


ಇದನ್ನೂ ಓದಿ: ದೆಹಲಿ ಸೇರಿ 4 ರಾಜ್ಯಗಳಲ್ಲಿ ಲಸಿಕೆ ಕೊರತೆ: ವ್ಯಾಕ್ಸಿನೇಷನ್‌‌ ಕೇಂದ್ರಗಳಿಗೆ ಬಾಗಿಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...