Homeಮುಖಪುಟಉತ್ತರ ರೈಲ್ವೆಗೆ 13 ಸಾವಿರ ಕೋಟಿ ರೂ., ದಕ್ಷಿಣಕ್ಕೆ ಕೇವಲ 59 ಕೋಟಿ ರೂ.: ಸದನದಲ್ಲಿ...

ಉತ್ತರ ರೈಲ್ವೆಗೆ 13 ಸಾವಿರ ಕೋಟಿ ರೂ., ದಕ್ಷಿಣಕ್ಕೆ ಕೇವಲ 59 ಕೋಟಿ ರೂ.: ಸದನದಲ್ಲಿ ಒಕ್ಕೂಟ ಸರ್ಕಾರದ ಅನ್ಯಾಯ ಬಿಚ್ಚಿಟ್ಟ ಸಂಸದೆ ಕನಿಮೋಳಿ

- Advertisement -
- Advertisement -

ತಮಿಳುನಾಡು ಸಂಸದೆ ಕನಿಮೋಳಿ ಅವರು ಒಕ್ಕೂಟ ಸರ್ಕಾರವು ದಕ್ಷಿಣ ಭಾರತಕ್ಕೆ ನೀಡುತ್ತಿರುವ ‘ಕಡಿಮೆ’ ಹಣ ಹಂಚಿಕೆ ಕುರಿತು ವ್ಯಂಗ್ಯವಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಅವರು 2022 ರ ಬಜೆಟ್ ಮೇಲಿನ ಚರ್ಚೆಯ ಬಗ್ಗೆ ಮಾತನಾಡುತ್ತಾ, “ಉತ್ತರ ಭಾರತದ ರೈಲ್ವೆಗೆ 13,200 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ, ಆದರೆ ದಕ್ಷಿಣಕ್ಕೆ 59 ಕೋಟಿ ರೂ ಮಾತ್ರ ನೀಡಲಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕನಿಮೋಳಿ ಅವರು ದಕ್ಷಿಣ ಮತ್ತು ಉತ್ತರ ಭಾರತಕ್ಕೆ ಬಜೆಟ್ ಹಂಚಿಕೆಯಲ್ಲಿ ಮಾಡಿರುವ ವ್ಯತ್ಯಾಸವನ್ನು ಹೇಳುತ್ತಿದ್ದಂತೆ, ಉಳಿದ ಸಂಸದರು “ನಾಚಿಕೆ, ಅವಮಾನ” ಎಂದು ಕೂಗುವ ಮೂಲಕ ಅವರ ಮಾತುಗಳಿಗೆ ಧ್ವನಿ ಸೇರಿಸಿ ಒಕ್ಕೂಟ ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾಗಕ್ಕೆ ನೀಡಿದ ಮೊತ್ತ ಮತ್ತು ಅದಕ್ಕೆ ವಿರುದ್ಧವಾಗಿ ಉತ್ತರಕ್ಕೆ ನೀಡಿರುವ ಮೂಲಸೌಕರ್ಯ ಸೌಲಭ್ಯಗಳಿಗೆ ನೀಡಲಾದ ಮೊತ್ತದ ನಡುವೆ ಭಾರಿ ವ್ಯತ್ಯಾಸವಿದೆ.

ಇದನ್ನೂ ಓದಿ: “ಹಿಂದಿ ತೆರಿಯಾದು ಪೊಡಾ (ಹಿಂದಿ ಗೊತ್ತಿಲ್ಲ, ಹೋಗೋ)” ಟೀಶರ್ಟ್ ವೈರಲ್;‌ ತಯಾರಿಕರಿಗೆ ಬೆದರಿಕೆ!‌ 

“ಉತ್ತರ ರೈಲ್ವೆಗೆ ಏನು ನೀಡಲಾಗಿದೆ ಮತ್ತು ದಕ್ಷಿಣವನ್ನು ಹೇಗೆ ಪರಿಗಣಿಸಲಾಗುತ್ತಿದೆ ಎಂಬುದರ ನಡುವಿನ ಅಸಮಾನತೆ ಮತ್ತು ವ್ಯತ್ಯಾಸಗಳನ್ನು ಪರಿಶೀಲಿಸಲು ನಾನು ಸಚಿವರನ್ನು ಕೇಳುತ್ತೇನೆ” ಎಂದು ಕನಿಮೋಳಿ ನೇರವಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಉದ್ದೇಶಿಸಿ ಟೀಕಿಸಿದ್ದಾರೆ.

“ನೀವು ಭಾರತವನ್ನು ಒಂದು ರಾಷ್ಟ್ರ ಎಂದು ಹೇಳುತ್ತಲೇ ಇರುತ್ತೀರಿ. ರೈಲ್ವೇ ಕೂಡ ಒಂದು ರಾಷ್ಟ್ರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಅವರು ಲೋಕಸಭೆಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ಅವರ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

2022-23ನೇ ಸಾಲಿನ ಬಜೆಟ್ ಕೇವಲ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿದೆ ಎಂದು ಹಲವರು ಟೀಕಿಸಿದ್ದಾರೆ. ಆದಾಗ್ಯೂ, ಮೂಲಸೌಕರ್ಯ ನಿಧಿಗಳನ್ನು ಸಮಾನ ರೀತಿಯಲ್ಲಿ ವಿತರಿಸಲಾಗುತ್ತಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಡಿಎಂಕೆ ಸಂಸದೆಯೂ ಆಗಿರುವ ಕನಿಮೋಳಿ ಅವರು, ರೈಲ್ವೇಯಲ್ಲಿ ಖಾಲಿ ಇರುವ ದೊಡ್ಡ ಹುದ್ದೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ದಕ್ಷಿಣ ಭಾರತೀಯರಿಗೆ ಈ ಉದ್ಯೋಗಗಳು ಸಿಗುವುದಿಲ್ಲ ಎಂದು ಹೇಳಿದ್ದಾರೆ. “ಅವರನ್ನು ದೂರವಿಡುವ ಪ್ರಯತ್ನ ನಡೆಯುತ್ತಿದೆ ಎಂದು ತೋರುತ್ತದೆ” ಎಂದು ಅವರು ಹೇಳಿದ್ದಾರೆ.

ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಎರಡನೇ ದಿನದಂದು ಲೋಕಸಭೆಯಲ್ಲಿ ರೈಲ್ವೆ ಸಚಿವಾಲಯದ ಅನುದಾನದ ಬೇಡಿಕೆಗಳ ಕುರಿತು ಚರ್ಚೆಗಳು ನಡೆದವು. ಸದನದ ಕಲಾಪವನ್ನು ರಾತ್ರಿ 11 ಗಂಟೆಯವರೆಗೆ ವಿಸ್ತರಿಸಲಾಯಿತು.

ಇದನ್ನೂ ಓದಿ: ಬಿಜೆಪಿ ಎಂದಿಗೂ ತಮಿಳು ಕೋಟೆಯನ್ನು ಭೇದಿಸಲು ಸಾಧ್ಯವಿಲ್ಲ: ಕನಿಮೋಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟ ಮಾಡುತ್ತಿದ್ದ ಯುವಕನಿಗೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...