Homeಮುಖಪುಟಎಬಿಜಿ ಶಿಪ್‌ಯಾರ್ಡ್ ಮತ್ತು ನಿರ್ದೇಶಕರುಗಳಿಂದ 28 ಬ್ಯಾಂಕ್‌ಗಳಿಗೆ 22,842 ಕೋಟಿ ರೂ. ವಂಚನೆ: ಸಿಬಿಐ

ಎಬಿಜಿ ಶಿಪ್‌ಯಾರ್ಡ್ ಮತ್ತು ನಿರ್ದೇಶಕರುಗಳಿಂದ 28 ಬ್ಯಾಂಕ್‌ಗಳಿಗೆ 22,842 ಕೋಟಿ ರೂ. ವಂಚನೆ: ಸಿಬಿಐ

- Advertisement -
- Advertisement -

28 ಬ್ಯಾಂಕ್‌ಗಳಿಗೆ 22,842 ಕೋಟಿ ರೂ. ವಂಚಿಸಿದ ಅತಿದೊಡ್ಡ ಬ್ಯಾಂಕ್‌‌‌ ವಂಚನೆ ಆರೋಪದ ಮೇಲೆ ಎಬಿಜಿ ಶಿಪ್‌ಯಾರ್ಡ್ ಮತ್ತು ಅದರ ನಿರ್ದೇಶಕರಾದ ರಿಷಿ ಅಗರ್ವಾಲ್, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್ ವಿರುದ್ಧ ಕೇಂದ್ರೀಯ ತನಿಖಾ ದಳವು ಶನಿವಾರ ಪ್ರಕರಣ ದಾಖಲಿಸಿದೆ.

ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಎಬಿಜಿ ಗ್ರೂಪ್‌ನ ಪ್ರಮುಖ ಕಂಪನಿಯಾಗಿದ್ದು, ಇದು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿಯಲ್ಲಿ ತೊಡಗಿದೆ. ಗುಜರಾತಿನ ದಹೇಜ್ ಮತ್ತು ಸೂರತ್‌ನಲ್ಲಿ ಈ ಹಡಗುಕಟ್ಟೆಗಳಿವೆ.

ಇದನ್ನೂ ಓದಿ: ಕೋವಿಡ್‌ ಅವಧಿಯಲ್ಲಿ ಮೋದಿಯ ವಾರಣಾಸಿ ಕಂಡ ಸಾವು ನೋವು: ಬೆಚ್ಚಿಬೀಳಿಸುವ ವರದಿ ಬಹಿರಂಗ

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಪ್ರಕಾರ, ಕಂಪನಿಯು ಬ್ಯಾಂಕ್‌ಗೆ ₹ 2,925 ಕೋಟಿ, ಐಸಿಐಸಿಐ ಬ್ಯಾಂಕ್‌ಗೆ ₹ 7,089 ಕೋಟಿ, ಐಡಿಬಿಐ ಬ್ಯಾಂಕ್‌ಗೆ ₹ 3,634 ಕೋಟಿ, ಬ್ಯಾಂಕ್ ಆಫ್ ಬರೋಡಾಕ್ಕೆ ₹ 1,614 ಕೋಟಿ, ಪಿಎನ್‌ಬಿಗೆ ₹ 1,244 ಮತ್ತು ಐಒಬಿಗೆ ₹ 1,228 ಕೋಟಿ ಬಾಕಿ ಇದೆ. ಬ್ಯಾಂಕ್‌ಗಳು ಬಿಡುಗಡೆ ಮಾಡಿದ ಹಣವನ್ನು ಬಿಡುಗಡೆ ಮಾಡಿದ ಉದ್ದೇಶಗಳಿಗೆ ಬಿಟ್ಟು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಸಿಬಿಐ ಹೇಳಿದೆ.

ಎಸ್‌ಬಿಐ ಬ್ಯಾಂಕ್ ಈ ಬಗ್ಗೆ ಮೊದಲ ಬಾರಿಗೆ ನವೆಂಬರ್ 8, 2019 ರಂದು ದೂರು ದಾಖಲಿಸಿತ್ತು, ಅದರ ಮೇಲೆ ಸಿಬಿಐ ಮಾರ್ಚ್ 12, 2020 ರಂದು ಕೆಲವು ಸ್ಪಷ್ಟೀಕರಣಗಳನ್ನು ಕೇಳಿತ್ತು.

ಅದೇ ವರ್ಷ ಆಗಸ್ಟ್‌ನಲ್ಲಿ ಎಸ್‌ಬಿಐ ಮತ್ತೇ ಹೊಸ ದೂರನ್ನು ಸಲ್ಲಿಸಿತ್ತು. ಒಂದೂವರೆ ವರ್ಷಗಳ ಕಾಲ “ಪರಿಶೀಲನೆ” ಮಾಡಿದ ನಂತರ, ಫೆಬ್ರವರಿ 7, 2022 ರಂದು ಎಫ್‌ಐಆರ್ ದಾಖಲಿಸುವ ದೂರಿನ ಮೇಲೆ ಸಿಬಿಐ ಕ್ರಮ ಕೈಗೊಂಡಿದೆ. ಕಂಪನಿಯು 28 ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯಗಳನ್ನು ಪಡೆದಿದ್ದು, ಇದರಲ್ಲಿ ಎಸ್‌ಬಿಐ ₹ 2468.51 ಕೋಟಿ ಮಾನ್ಯತೆ ಹೊಂದಿದೆ ಎಂದು ಬ್ಯಾಂಕ್‌ ಹೇಳಿದೆ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಕಣದಲ್ಲಿರುವ ಹಲವು ಅಭ್ಯರ್ಥಿಗಳ ಮೇಲೆ ಗಂಭೀರ ಅಪರಾಧ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...