HomeUncategorizedಅದಾನಿ ಕಂಪನಿಗಳಲ್ಲಿ 27.73 ಕೋಟಿ ಉದ್ಯೋಗಿಗಳ ಪಿಎಫ್‌ ಹಣ ಹೂಡಿಕೆ; ಮಲ್ಲಿಕಾರ್ಜುನ ಖರ್ಗೆ ವಿರೋಧ

ಅದಾನಿ ಕಂಪನಿಗಳಲ್ಲಿ 27.73 ಕೋಟಿ ಉದ್ಯೋಗಿಗಳ ಪಿಎಫ್‌ ಹಣ ಹೂಡಿಕೆ; ಮಲ್ಲಿಕಾರ್ಜುನ ಖರ್ಗೆ ವಿರೋಧ

27.73 ಕೋಟಿ ಇಪಿಎಫ್‌ಒ ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಕಸಿದುಕೊಳ್ಳಬೇಡಿ. ನಿಮ್ಮ ಪರಮ ಮಿತ್ರರಿಗೆ ಲೈಫ್‌ಲೈನ್ ಒದಗಿಸಲು ಉದ್ಯೋಗಿಗಳ ಜೀವಮಾನದ ಉಳಿತಾಯವನ್ನು ಅಪಾಯಕ್ಕೆ ತಳ್ಳಬೇಡಿ - ಖರ್ಗೆ

- Advertisement -
- Advertisement -

ಹಿಂಡೆನ್‌ ಬರ್ಗ್ ವರದಿಯ ನಂತರ ಹಲವಾರು ದೊಡ್ಡ ಹೂಡಿಕೆದಾರರು ಅದಾನಿ ಗ್ರೂಪ್ ಶೇರುಗಳಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಅದಾನಿಯ ಉದ್ಯಮ ಸಾಮ್ರಾಜ್ಯ ಕುಸಿದಿದೆ. ಆದರೆ ಭಾರತದ ಅತ್ಯಂತ ದೊಡ್ಡ ನಿವೃತ್ತಿ ನಿಧಿಯಾಗಿರುವ ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ)ಯು ಅದಾನಿ ಎಂಟರ್ಪ್ರೈಸಸ್  ಸೇರಿದಂತೆ ಅದಾನಿ ಗ್ರೂಪ್‌ನ ಎರಡು ಕಂಪನಿಗಳ ಶೇರುಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿದೆ. ಮುಂದಿನ ವಾರ ಸಭೆ ಸೇರಲಿರುವ ಇಪಿಎಫ್ಒ ಟ್ರಸ್ಟಿಗಳು ತಮ್ಮ ಹೂಡಿಕೆ ವಿಧಾನವನ್ನು ಮರುಪರಿಶೀಲಿಸದಿದ್ದರೆ, ಕನಿಷ್ಠ ಈ ವರ್ಷದ ಸೆಪ್ಟಂಬರ್‌ವರೆಗೂ ಸಂಸ್ಥೆಯ ಹೂಡಿಕೆ ಮುಂದುವರಿಸಲಿದೆ ಎನ್ನಲಾಗಿದೆ.

ಈ ಮೂಲಕ ಕೇಂದ್ರ ಸರ್ಕಾರ ಇಪಿಎಫ್‌ಒ ಉದ್ಯೋಗಿಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್ ಮಾಡಿದ್ದು, ”27.73 ಕೋಟಿ ಇಪಿಎಫ್‌ಒ ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಕಸಿದುಕೊಳ್ಳಬೇಡಿ. ನಿಮ್ಮ ಪರಮ ಮಿತ್ರರಿಗೆ ಲೈಫ್‌ಲೈನ್ ಒದಗಿಸಲು ಉದ್ಯೋಗಿಗಳ ಜೀವಮಾನದ ಉಳಿತಾಯವನ್ನು ಅಪಾಯಕ್ಕೆ ತಳ್ಳಬೇಡಿ! ಜೆಪಿಸಿ ತನಿಖೆಗೆ ಹೆದರಬೇಡಿ. ಪ್ರಜಾಪ್ರಭುತ್ವವನ್ನು ಅನರ್ಹಗೊಳಿಸಬೇಡಿ! ನಿಮ್ಮ ಸರ್ಕಾರ 140 ಕೋಟಿ ಭಾರತೀಯರಿಗೆ ಉತ್ತರಿಸುವಂತೆ ಮಾಡಿ” ಎಂದು ಒತ್ತಾಯಿಸಿದ್ದಾರೆ.

ದೇಶದ ಎರಡನೇ ಅತಿದೊಡ್ಡ ಬ್ಯಾಂಕೇತರ ಸಂಸ್ಥೆಯಾಗಿರುವ ಇಪಿಎಫ್ಒ ತನ್ನ ಈಕ್ವಿಟಿ ಹೂಡಿಕೆಗಳ ಶೇ.85ರಷ್ಟು ಮೊತ್ತವನ್ನು ನಿಫ್ಟಿ 50 ಜೊತೆ ಜೊಡಣೆಗೊಂಡಿರುವ ಇಟಿಎಫ್‌ಗಳಲ್ಲಿ ತೊಡಗಿಸುತ್ತದೆ. ಅದಾನಿ ಎಂಟರ್ಪ್ರೈಸಸ್ ಕಳೆದ ಸೆಪ್ಟಂಬರ್‌ನಲ್ಲಿ ನಿಫ್ಟಿ 50 ಶೇರುಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಈ ವರ್ಷದ ಸೆಪ್ಟಂಬರ್‌ವರೆಗೆ ನಿಫ್ಟಿ 50ರಲ್ಲಿ ಮುಂದುವರಿಯಲಿದೆ.

ಇಪಿಎಫ್ಒ ಔಪಚಾರಿಕ ವಲಯದ 27.73 ಕೋಟಿ ಉದ್ಯೋಗಿಗಳ ಹಣ ಸುರಕ್ಷಿತವಾಗಿದ್ದರೆ ಅವರ ವೃದ್ಧಾಪ್ಯ ನಿರ್ವಹಣೆ ಸುಲಭವಾಗುತ್ತದೆ. ಆದರೆ ಆ ನಿಧಿಯ ಶೇ.15ರಷ್ಟನ್ನು ಎನ್ಎಸ್ಇ ನಿಫ್ಟಿ 50 ಮತ್ತು ಬಿಎಸ್ಇ ಸೆನ್ಸೆಕ್ಸ್ ಜೊತೆ ಜೋಡಣೆಗೊಂಡಿರುವ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್)ಗಳಲ್ಲಿ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಅಪಾಯದಲ್ಲಿ ಇಪಿಎಫ್‌ಒ ಉದ್ಯೋಗಿಳು

ಅದಾನಿ ಗ್ರೂಪ್ ಶೇರುಗಳಲ್ಲಿ ಇಫಿಎಫ್ಒ ಹೂಡಿಕೆಗಳ ಕುರಿತು ಸುದ್ದಿಸಂಸ್ಥೆಯು ಕಳುಹಿಸಿದ್ದ ಪ್ರಶ್ನಾವಳಿಗಳಿಗೆ ಕೇಂದ್ರ ಭವಿಷ್ಯನಿಧಿ ಆಯುಕ್ತರಾದ ನೀಲಂ ಶಮಿ ರಾವ್ ಅವರು ಉತ್ತರಿಸಿಲ್ಲ. ಜನರ ವೃದ್ಧಾಪ್ಯ ಉಳಿತಾಯದ ಸುರಕ್ಷತೆಗಾಗಿ ಅದಾನಿ ಗ್ರೂಪ್ ಶೇರುಗಳಲ್ಲಿ ಹೊಸದಾಗಿ ಹೂಡಿಕೆ ಮಾಡದಂತೆ ಸಂಸ್ಥೆಯು ತನ್ನ ಫಂಡ್ ಮ್ಯಾನೇಜರ್‌ಗಳಿಗೆ ಸೂಚಿಸಿದೆಯೇ? ನಿಫ್ಟಿ 50 ಜೊತೆ ಜೋಡಣೆಗೊಂಡಿರುವ ಹೂಡಿಕೆಗಳನ್ನು ಹಿಂದೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆದಿದೆಯೇ? ಎಂಬ ಪ್ರಶ್ನೆಗಳಿಗೆ ಕೇಂದ್ರ ಭವಿಷ್ಯನಿಧಿ ಆಯುಕ್ತರು ಉತ್ತರಿಸಿಲ್ಲ.

”ಅದಾನಿ ಗ್ರೂಪ್ ಶೇರುಗಳಲ್ಲಿ ಪಿಎಫ್‌ ಹಣ ಹೂಡಿಕೆ ಮಾಡಿರುವ ಬಗ್ಗೆ ತಮಗೆ ತಿಳಿದಿಲ್ಲ” ಎಂದು ಇಪಿಎಫ್ಒ ಟ್ರಸ್ಟಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯುವ ಮಂಡಳಿಯ ಸಭೆಯಲ್ಲಿ ಈ ವಿಷಯವು ಪ್ರಸ್ತಾವಗೊಳ್ಳಬಹುದು ಎಂದು  ಅವರು ಹೇಳಿದ್ದಾರೆ.

ಇದನ್ನೂ ಓದಿ; ಪಾನ್-ಆಧಾರ್ ಜೋಡಣೆ ಶುಲ್ಕವಾಗಿ 4,000 ಕೋಟಿ ರೂಗೂ ಅಧಿಕ ಸಂಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...