Homeಮುಖಪುಟಲೋಕಸಭೆಯಲ್ಲಿ ಅಮಾನತುಗೊಂಡ ಸಂಸದರು ಕೇಳಿದ್ದ 27 ಪ್ರಶ್ನೆಗಳು ಡಿಲಿಟ್‌

ಲೋಕಸಭೆಯಲ್ಲಿ ಅಮಾನತುಗೊಂಡ ಸಂಸದರು ಕೇಳಿದ್ದ 27 ಪ್ರಶ್ನೆಗಳು ಡಿಲಿಟ್‌

- Advertisement -
- Advertisement -

ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಮಾತನಾಡುವಂತೆ ಪಟ್ಟು ಹಿಡಿದಿದ್ದ ಪ್ರತಿಪಕ್ಷದ ಒಟ್ಟು 141 ಸಂಸದರನ್ನು ಲೋಕಸಭೆ ಮತ್ತು ರಾಜ್ಯಸಭೆಯಿಂದ ಚಳಿಗಾಲದ ಅಧಿವೇಶನದ ಕೊನೆವರೆಗೆ ಅಮಾನತು ಮಾಡಲಾಗಿದೆ. ದೇಶದ ಇತಿಹಾಸಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಸಂಸದರನ್ನು ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಪ್ರತಿಪಕ್ಷದ ಸದಸ್ಯರು ಕೇಳಿದ 27 ಪ್ರಶ್ನೆಗಳನ್ನು ಮಂಗಳವಾರ ಕೇಳಬೇಕಾದ ಪ್ರಶ್ನೆಗಳ ಪಟ್ಟಿಯಿಂದ ಕೈಬಿಡಲಾಗಿದೆ.

ಲೋಕಸಭೆಯಲ್ಲಿ ಅಮಾನತುಗೊಂಡಿರುವ ಪ್ರತಿಪಕ್ಷ ಸದಸ್ಯರು ಕೇಳಿದ 27 ಪ್ರಶ್ನೆಗಳನ್ನು ಮಂಗಳವಾರ ಕೇಳಬೇಕಾದ ಪ್ರಶ್ನೆಗಳ ಪಟ್ಟಿಯಿಂದ ಅಳಿಸಲಾಗಿದೆ. ವಿವಿಧ ಇಲಾಖೆಯ ಸಚಿವರಿಗೆ ಪ್ರಶ್ನೆಯನ್ನು ಕೇಳಬೇಕಿದ್ದ ಸಂಸದರ ಪಟ್ಟಿಯಿಂದ ಕೂಡ ಮಾನತುಗೊಂಡ ಸಂಸದರ ಹೆಸರನ್ನು ತೆಗೆದುಹಾಕಲಾಗಿದೆ.

ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾದ  ಹನುಮಾನ್ ಬೇನಿವಾಲ್ ಅವರ ಹೆಸರನ್ನು ಸಹ ಅಳಿಸಲಾಗಿದೆ. ತೃಣಮೂಲ ಕಾಂಗ್ರೆಸ್‌ನ ಅಪರೂಪ ಪೊದ್ದಾರ್ ಮತ್ತು ಕಾಂಗ್ರೆಸ್‌ನ ರಮ್ಯಾ ಹರಿದಾಸ್ ಕೇಳಿದ ಎರಡು ನಕ್ಷತ್ರ(ಸ್ಟಾರ್) ಹಾಕಿದ ಪ್ರಶ್ನೆಗಳನ್ನು ಅಳಿಸಲಾಗಿದೆ ಮತ್ತು 25 ನಕ್ಷತ್ರರಹಿತ ಪ್ರಶ್ನೆಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಮಂತ್ರಿಗಳು ನಕ್ಷತ್ರ ಹಾಕಿದ ಪ್ರಶ್ನೆಗಳಿಗೆ ಮೌಖಿಕ ಉತ್ತರಗಳನ್ನು ನೀಡುತ್ತಾರೆ ಮತ್ತು ನಕ್ಷತ್ರ ಹಾಕದ ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನು ನೀಡುತ್ತಾರೆ.

ಸ್ಟಾರ್ ಮಾಡಿದ ಹಾಗೂ ಅನ್‌ಸ್ಟಾರ್ ಮಾಡಿದ ಪ್ರಶ್ನೆಗಳು ಎಂದರೇನು?

ಸಂಸದರಿಗೆ ಸದನದಲ್ಲಿ ನಕ್ಷತ್ರ ಚಿಹ್ನೆ ಇರುವ ಮೌಖಿಕ ಉತ್ತರ ಪಡೆಯಬಹುದಾದ ಪ್ರಶ್ನೆ ಕೇಳುವ ಅವಕಾಶವಿದೆ. ಈ ರೀತಿಯ ಪ್ರಶ್ನೆಗಳನ್ನು ಸ್ಟಾರ್ ಮಾಡಿದ ಇಲ್ಲವೇ ನಕ್ಷತ್ರ ಹಾಕಿದ ಪ್ರಶ್ನೆ ಎಂದು ಕರೆಯಲಾಗುತ್ತದೆ. ಲೋಕಸಭೆಯಲ್ಲಿ ಒಂದು ದಿನದ ಪ್ರಶ್ನೋತ್ತರ ಸಮಯದಲ್ಲಿ 20ಕ್ಕಿಂತ ಹೆಚ್ಚು ನಕ್ಷತ್ರ ಹಾಕಿದ ಪ್ರಶ್ನೆಗಳನ್ನು ಪರಿಗಣಿಸುವುದಿಲ್ಲ ಹಾಗೂ ರಾಜ್ಯಸಭೆಯಲ್ಲಿ ನಕ್ಷತ್ರ ಹಾಕಿದ 15 ಪ್ರಶ್ನೆಗಳನ್ನು ಅನುಮತಿಸಲಾಗುತ್ತದೆ. ಈ ಪ್ರಶ್ನೆಗಳಿಗೆ ಸಚಿವರು ಮೌಖಿಕವಾಗಿಯೇ ಉತ್ತರಿಸಬೇಕಿದೆ.

ನಕ್ಷತ್ರ ಹಾಕದ ಪ್ರಶ್ನೆ ಎಂದರೆ ಸಂಸದರ ಲಿಖಿತ ಉತ್ತರವನ್ನು ಕೇಳಿದ ಪ್ರಶ್ನೆಯಾಗಿದೆ. ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಸಂಸತ್ತಿನ ಮೇಜಿನ ಮೇಲೆ ಇರಿಸಲಾಗುತ್ತದೆ. ತದನಂತರ ಇಂತಹ ಪ್ರಶ್ನೆಗಳು ಪೂರಕ ಪ್ರಶ್ನೆಗಳಿಗೆ ಅವಕಾಶ ನೀಡುವುದಿಲ್ಲ. ಲೋಕಸಭೆಯಲ್ಲಿ ಲಿಖಿತ ಉತ್ತರಗಳಿಗಾಗಿ ಪ್ರತಿದಿನ 230 ಪ್ರಶ್ನೆಗಳನ್ನು ಆಯ್ಕೆಮಾಡಿದರೆ ರಾಜ್ಯಸಭೆಯಲ್ಲಿ ಈ ಪ್ರಶ್ನೆಗಳ ಮಿತಿ 160 ಆಗಿದೆ.

ಡಿಸೆಂಬರ್ 14ರಂದು ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಮಾತನಾಡುವಂತೆ ಪಟ್ಟು ಹಿಡಿದಿದ್ದ ರಾಜ್ಯಸಭೆಯ ಒಬ್ಬರು ಮತ್ತು ಲೋಕಸಭೆಯ 13 ಜನರು ಸೇರಿ ಒಟ್ಟು 14 ಸಂಸದರನ್ನು ಅಮಾನತು ಮಾಡಲಾಗಿತ್ತು. ಡಿ.18 ಸೋಮವಾರ ರಾಜ್ಯಸಭೆಯಿಂದ 45 ಮತ್ತು ಲೋಕಸಭೆಯಿಂದ 33 ಸಂಸದರು ಸೇರಿ 78 ಮಂದಿಯನ್ನು ಅಮಾನತು ಮಾಡಲಾಗಿತ್ತು.

ಗೃಹ ಸಚಿವರ ಪ್ರತಿಕ್ರಿಯೆಗೆ ಪ್ರತಿಪಕ್ಷಗಳ ಬೇಡಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಸಂಸತ್ತಿನ ಒಳಗಿನ ಭದ್ರತೆಯು ಸೆಕ್ರೆಟರಿಯೇಟ್ ವ್ಯಾಪ್ತಿಗೆ ಒಳಪಟ್ಟಿದೆ. ಕೇಂದ್ರವು ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ಲೋಕಸಭೆಯ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ಅಪರಿಚಿತರು ವೀಕ್ಷಕರ ಗ್ಯಾಲರಿಯಿಂದ ಹಠಾತ್ ಆಗಿ ಸಂಸದರು ಕುಳಿತುಕೊಳ್ಳುವ ಆಸನದ ಕಡೆಗೆ ನುಗ್ಗಿ ಘೋಷಣೆಗಳನ್ನು ಕೂಗುತ್ತಾ ಹಳದಿ ಬಣ್ಣದ ಗ್ಯಾಸ್ ಸ್ಪ್ರೇ ಮಾಡಿದ್ದರು. 2001ರ ಸಂಸತ್ ದಾಳಿಯ 22ನೇ ವರ್ಷದ ದಿನದಂದೇ ಈ ಭದ್ರತಾ ಲೋಪ ಸಂಭವಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 6 ಮಂದಿಯನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಸಂಸತ್ತಿನಲ್ಲಿ ಸಿಎಜಿ ವರದಿಗಳ ಮಂಡನೆಯಲ್ಲಿ ಗಣನೀಯ ಇಳಿಕೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

0
ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿ ಅಮಿತ್ ಶಾ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಗುಜರಾತ್‌ನ...