Homeಮುಖಪುಟಅಡ್ವಾಣಿ-ಜೋಶಿ ಇಬ್ಬರನ್ನೂ ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಲಾಗಿದೆ: ವಿಎಚ್‌ಪಿ ಸ್ಪಷ್ಟನೆ

ಅಡ್ವಾಣಿ-ಜೋಶಿ ಇಬ್ಬರನ್ನೂ ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಲಾಗಿದೆ: ವಿಎಚ್‌ಪಿ ಸ್ಪಷ್ಟನೆ

- Advertisement -
- Advertisement -

2024ರ ಜನವರಿಯಲ್ಲಿ ನಡೆಯುವ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ರಾಮಮಂದಿರ ಟ್ರಸ್ಟ್ ಸಿದ್ಧತೆ ಮಾಡಿಕೊಂಡಿದ್ದು, ದೇಶದ ಹಲವು ಗಣ್ಯರಿಗೆ ಆಹ್ವಾನ ನೀಡುತ್ತಿದೆ. ಆದರೆ, ವಿವಾದಿತ ರಾಮಜನ್ಮ ಭೂಮಿ ಸಲುವಾಗಿ ದೇಶದಾದ್ಯಂತ ರಥಯಾತ್ರೆ ನಡೆಸಿದ ಬಿಜೆಪಿ ಹಿರಿಯರಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರನ್ನು ಉದ್ಘಾಟನೆಗೆ ಬರದಂತೆ ಸೂಚನೆ ನೀಡಲಾಗಿದ ಎಂಬ ಸುದ್ದಿ ಇಂದು ಭಾರಿ ಸದ್ದು ಮಾಡಿತ್ತು.

‘ಇಬ್ಬರೂ ನಾಯಕರಿಗೆ ವಯಸ್ಸಾಗಿರುವ ಕಾರಣಕ್ಕೆ ಹಾಗೂ ಜನವರಿಯಲ್ಲಿ ಇಲ್ಲಿ ಕೊರೆಯುವ ಚಳಿಯಿರುವ ಕಾರಣಕ್ಕೆ ಬರದಂತೆ ವಿನಂತಿಸಲಾಗಿದೆ’ ಎಂದು ರಾಮ ಮಂದಿರ ಟ್ರಸ್ಟ್ ಮಾಧ್ಯಮಗಳಿಗೆ ತಿಳಿಸಿದ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಸ್ಪಷ್ಟನೆ ನೀಡಿದೆ.

ಅಡ್ವಾಣಿಯವರಿಗೆ ಈಗ 96 ವರ್ಷವಾಗಿದ್ದು, ಜೋಶಿ ಅವರಿಗೆ 89 ವರ್ಷಗಳನ್ನು ಪೂರೈಸಿದ್ದಾರೆ. ಇವರಿಬ್ಬರೂ 80ರ ದಶಕದಲ್ಲಿ ದೇಶದಾದ್ಯಂತ ರಾಮ ಜನ್ಮಭೂಮಿ ಚಳವಳಿಯನ್ನು ಮುಂದೆ ನಿಂತು ಮುನ್ನಡೆಸಿದವರು. 1990ರಲ್ಲಿ ಅಡ್ವಾಣಿಯವರು ರಾಮಜನ್ಮ ಭೂಮಿ ಚಳವಳಿಗೆ ಬೆಂಬಲ ಪಡೆಯಲು ಗುಜರಾತ್‌ನ ಸೋಮನಾಥದಿಂದ ಉತ್ತರ ಪ್ರದೇಶದ ಅಯೋಧ್ಯೆ ವರೆಗೆ ವಿವಾದಾತ್ಮಕ ‘ರಥಯಾತ್ರೆ’ ನಡೆಸಿದರು. ಈ ಯಾತ್ರೆಯು ಉತ್ತರ ಭಾರತದ ಹಲವಾರು ನಗರಗಳಲ್ಲಿ ಕೋಮುಗಲಭೆಗೆ ಕಾರಣವಾಯಿತು. ಎರಡು ವರ್ಷಗಳ ನಂತರ, ಡಿಸೆಂಬರ್ 6, 1992 ರಂದು ಅಯೋಧ್ಯೆಯ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಾಗ, ಈ ಇಬ್ಬರೂ ಜನ ಸಂಘದ ನಾಯಕರು ಸ್ಥಳದಲ್ಲಿಯೇ ಇದ್ದರು.

ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಮಮಂದಿರ ಚಳವಳಿಯ ಮುಂಚೂಣಿ ನಾಯಕರಾದ ಅಡ್ವಾಣಿ ಮತ್ತು ಜೋಶಿ ಅವರನ್ನು ಆಹ್ವಾನಿಸಲಾಗಿದೆ ಎಂದು ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. ‘ನಾವು ರಾಮ ಜನ್ಮ ಭೂಮಿ ಹೋರಾಟದ ಬಗ್ಗೆ ಮಾತನಾಡಿದ್ದೇವೆ. ಇಬ್ಬರೂ ಹಿರಿಯರು ಕಾರ್ಯಕ್ರಮಕ್ಕೆ ಬರಲು ತಮ್ಮ ಕೈಲಾದಷ್ಟು ಪ್ರಯತ್ನಿಸುವುದಾಗಿ ಹೇಳಿದ್ದಾರೆ’ ಎಂದು ಕುಮಾರ್ ಹೇಳಿದ್ದಾರೆ. ವಿಎಚ್‌ಪಿಯು ಬಿಜೆಪಿಯ ಸೈದ್ಧಾಂತಿಕ ಪೋಷಕ ಗುಂಪುಗಳಾದ ಸಂಘ ಪರಿವಾರದ ಒಂದು ಭಾಗವಾಗಿದೆ.

ರಾಮಮಂದಿರ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದಿಂದ ಇಬ್ಬರನ್ನು ದೂರವಿಡಲು ತಿಳಿಸಲಾಗಿದೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಹೇಳಿಕೆಯ ನಂತರ ವಿಎಚ್‌ಪಿ ಸ್ಪಷ್ಟನೆ ನೀಡಿದೆ. ‘ಇಬ್ಬರೂ ನಮ್ಮ ಕುಟುಂಬದ ಹಿರಿಯರು ಮತ್ತು ಅವರ ವಯಸ್ಸನ್ನು ಪರಿಗಣಿಸಿ, ಅವರನ್ನು ಬರದಂತೆ ವಿನಂತಿಸಲಾಯಿತು, ಅದನ್ನು ಇಬ್ಬರೂ ಒಪ್ಪಿಕೊಂಡರು’ ಎಂದು ರೈ ನಿನ್ನೆ ಸುದ್ದಿಗಾರರಿಗೆ ತಿಳಿಸಿದರು,
ಈ ಟೀಕೆಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಒಂದು ಹಂತದಲ್ಲಿ ಬಿಜೆಪಿ ನಾಯಕತ್ವವು ಪಕ್ಷವನ್ನು ಮುನ್ನಡೆಸಿದ ಹಿರಿಯ ನಾಯಕರನ್ನು ನಿರ್ಲಕ್ಷಿಸುವ ಮೂಲಕ ಅವಮಾನಿಸಿದೆ ಎಂದು ಹಲವರು ಆರೋಪಿಸಿದ್ದಾರೆ.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಈ ಭವ್ಯ ಸಮಾರಂಭಕ್ಕೆ ಆರು ಪ್ರಾಚೀನ ಶಾಲೆಗಳ ಆಚಾರ್ಯರು, ಸುಮಾರು 4,000 ಸಂತರು ಮತ್ತು 2,200 ಇತರೆ ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ರೈ ನಿನ್ನೆ ಹೇಳಿದ್ದರು. ಅತಿಥಿಗಳು ಕಾಶಿ ವಿಶ್ವನಾಥ ಮತ್ತು ವೈಷ್ಣೋದೇವಿಯಂತಹ ಪ್ರಮುಖ ದೇವಾಲಯಗಳ ಮುಖ್ಯಸ್ಥರನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ; ಗಂಡ ಬಲಾತ್ಕರಿಸಿದರೂ ಅತ್ಯಾಚಾರವೇ: ಗುಜರಾತ್‌ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...