Homeಮುಖಪುಟಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಚಂಪೈ ಸೊರೇನ್

ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಚಂಪೈ ಸೊರೇನ್

- Advertisement -
- Advertisement -

ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಚಂಪೈ ಸೊರೇನ್ ಇಂದು (ಫೆ.2) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಂದಿನ 10 ದಿನಗಳಲ್ಲಿ ಅವರು ತಮ್ಮ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.

67 ವರ್ಷದ ಚಂಪೈ ಸೊರೇನ್ ಅವರನ್ನು ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್-ರಾಷ್ಟ್ರೀಯ ಜನತಾದಳದ 43 ಶಾಸಕರು ಬೆಂಬಲಿಸಿದ್ದಾರೆ. ಹಲವರು ಶಾಸಕರು ಇಂದು ತಮ್ಮ ಹೊಸ ನಾಯಕನೊಂದಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚಂಪೈ ಅವರ ಪ್ರಮಾಣ ವಚನವು ಈ ವಾರ ಜಾರ್ಖಂಡ್‌ನಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟನ್ನು ಅರ್ಧದಷ್ಟು ಪರಿಹರಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಆರು ಬಾರಿ ಶಾಸಕರಾಗಿರುವ ಮತ್ತು ಹೇಮಂತ್ ಸೊರೇನ್ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಚಂಪೈ ಸೊರೇನ್ ಅವರನ್ನು ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕಾಂಗ ಪಕ್ಷದ ನಾಯಕರಾಗಿ ಬುಧವಾರ ತಡರಾತ್ರಿ ಆಯ್ಕೆ ಮಾಡಲಾಗಿತ್ತು.

ಭೂ ಹಗರಣ ಪ್ರಕರಣದಲ್ಲಿ ಇಡಿಯಿಂದ ಬಂಧನವಾಗುವ ಮುನ್ನ ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕ ಹೇಮಂತ್ ಸೊರೇನ್ ತನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಚಂಪೈ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ‘ನಾವು ಮಧ್ಯಪ್ರವೇಶಿಸುತ್ತಿಲ್ಲ, ಹೈಕೋರ್ಟ್‌ಗೆ ಹೋಗಿ..’; ಸೊರೇನ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಾಯುವ ಮುನ್ನ ‘ಹೇ ರಾಮ್’ ಎಂದ ಮಹಾತ್ಮಾ ಗಾಂಧಿಯನ್ನು ಅನುಸರಿಸುತ್ತೇವೆ: ಪ್ರಿಯಾಂಕಾ ಗಾಂಧಿ

0
"ನಮ್ಮ ಪಕ್ಷವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತದೆ; ಅವರು ಸಾಯುವ ಮೊದಲು 'ಹೇ ರಾಮ್' ಎಂದು ಉಚ್ಚರಿಸಿದರು. ಆದರೆ, ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ವಿರೋಧಿ ಎಂದು ಆರೋಪಿಸುವುದು...