HomeಅಂಕಣಗಳುSIRSIR ನಡೆಯುತ್ತಿರುವ ರಾಜ್ಯಗಳಲ್ಲೂ ಆನ್‌ಲೈನ್ ಫಾರಂ-6 ಮತ್ತು ಘೋಷಣಾ ಪತ್ರವನ್ನು ಪ್ರತ್ಯೇಕಿಸಿದ ಚು. ಆಯೋಗ

SIR ನಡೆಯುತ್ತಿರುವ ರಾಜ್ಯಗಳಲ್ಲೂ ಆನ್‌ಲೈನ್ ಫಾರಂ-6 ಮತ್ತು ಘೋಷಣಾ ಪತ್ರವನ್ನು ಪ್ರತ್ಯೇಕಿಸಿದ ಚು. ಆಯೋಗ

- Advertisement -
- Advertisement -

ಭಾರತೀಯ ಚುನಾವಣಾ ಆಯೋಗ (ಇಸಿಐ) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ನಡೆಯುತ್ತಿರುವ ರಾಜ್ಯಗಳಲ್ಲೂ, ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಫಾರಂ-6 ಮತ್ತು ಅದರ ಜೊತೆಗಿನ ‘ಘೋಷಣಾ ಪತ್ರವನ್ನು’ (ಡಿಕ್ಲರೇಷನ್) ತನ್ನ ಆನ್‌ಲೈನ್ ಆವೃತ್ತಿಯಲ್ಲಿ ಪ್ರತ್ಯೇಕಿಸಿದೆ.

ಇದಕ್ಕೂ ಮುನ್ನ, ಕಳೆದ ಸೆಪ್ಟೆಂಬರ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಫಾರಂ-6ರಿಂದ ಘೋಷಣಾ ಪತ್ರವನ್ನು ಪ್ರತ್ಯೇಕಿಸಲಾಗಿತ್ತು.

ಇದರೊಂದಿಗೆ, ಇನ್ನುಮುಂದೆ ಹೆಚ್ಚುವರಿ ‘ಘೋಷಣಾ ಪತ್ರವು’ ಯಾವುದೇ ರಾಜ್ಯದಲ್ಲಿ ಆನ್‌ಲೈನ್ ಫಾರಂ-6 ಭಾಗವಾಗಿ ಇರುವುದಿಲ್ಲ ಎಂದು ಚುನಾವಣಾ ಆಯೋಗ ಘೋಷಿಸಿದೆ.

ಇನ್ನುಮುಂದೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸುವಾಗ ಬಳಸುವ ಫಾರಂ-6ರ ಭಾಗವಾಗಿ ಘೋಷಣಾ ಪತ್ರವನ್ನು ಭರ್ತಿ ಮಾಡುವ ಬದಲು, ಅರ್ಜಿದಾರರು ಇದನ್ನು ಪ್ರತ್ಯೇಕವಾಗಿ ಸಲ್ಲಿಸಬೇಕಾಗುತ್ತದೆ ಎಂದು indiatoday.in ವರದಿ ಮಾಡಿದೆ.

ಹೆಚ್ಚುವರಿ ಘೋಷಣಾ ಪತ್ರವನ್ನು ಫಾರಂ-6ರೊಂದಿಗೆ ಜೋಡಿಸುವ ಕುರಿತು ಇಬ್ಬರು ಚುನಾವಣಾ ಆಯುಕ್ತರು ಕಳವಳ ವ್ಯಕ್ತಪಡಿಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ ಎಂದು ವರದಿ ಹೇಳಿದೆ.

ಈ ಬೆಳವಣಿಗೆಯು, ಚುನಾವಣಾ ಸಂಸ್ಥೆಯು ಪಾರದರ್ಶಕತೆಯನ್ನು ಹೆಚ್ಚಿಸುವ ಮತ್ತು ತನ್ನ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಹೊರಡಿಸಿರುವ ಹೊಸ ಆದೇಶಗಳ ಮೂಲಕ ಜಾರಿಗೆ ತರುತ್ತಿರುವ, ಆಡಳಿತಾತ್ಮಕ ಬದಲಾವಣೆಗಳ ಒಂದು ಭಾಗವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಎಸ್‌ಐಆರ್‌ಗೆ ಸಂಬಂಧಪಟ್ಟಂತೆ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳು ದೇಶದಾದ್ಯಂತ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿರುವ ನಡುವೆ ಈ ಬದಲಾವಣೆಗಳು ಆಗುತ್ತಿವೆ.

ಫಾರಂ-6 ಒಂದು ಚುನಾವಣಾ ಆಯೋಗ ಒಂದು ಶಾಸನಬದ್ದ ಅರ್ಜಿಯಾಗಿದೆ. ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬೇಕಾದರೆ ಕಾಯ್ದೆಗೆ ತಿದ್ದುಪಡಿ ತಂದು ಸಂಸತ್ತಿನ ಅನುಮೋದನೆ ಪಡೆಯುವುದು ಅತ್ಯಗತ್ಯವಾಗಿದೆ. ಆದರೆ, ಗ್ಯಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗ ಆನ್‌ಲೈನ್ ಫಾರಂ-6ನಲ್ಲಿ ಕಾನೂನು ಮೀರಿ ಎಸ್‌ಐಆರ್‌ಗೆ ಸಂಬಂಧಪಟ್ಟ ಹೆಚ್ಚುವರಿ ಕಾಲಂ ಸೇರಿಸಿದೆ ಎಂಬ ಆರೋಪ ಕೇಳಿ ಬಂದಿತ್ತು.

ಚುನಾವಣಾ ಆಯೋಗ ಗೌಪ್ಯವಾಗಿ ನಡೆಸಿದ ಈ ಅಕ್ರಮ ಬಯಲಾಗುತ್ತಿದ್ದಂತೆ ಬದಲಾವಣೆಯನ್ನು ಹಿಂಪಡೆದ ಆಯೋಗ, ಫಾರಂ-6ರ ಜೊತೆ ಹೆಚ್ಚುವರಿ ಘೋಷಣಾ ಪತ್ರವನ್ನು ಪರಿಚಯಿಸಿತ್ತು. ಅದಕ್ಕೂ ತೀವ್ರ ವಿರೋಧ ವ್ಯಕ್ತವಾದ ಬಳಿಕ, ಆ ಘೋಷಣಾ ಪತ್ರವನ್ನು ಹಂತ ಹಂತವಾಗಿ ಕೈಬಿಡುವ ಕೆಲಸವನ್ನು ಆಯೋಗ ಮಾಡುತ್ತಿದೆ. ಇದು ಹೋರಾಟಕ್ಕೆ ಸಿಕ್ಕ ಗೆಲುವು ಎನ್ನಬಹುದು.








ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಥಳಾಂತರಗೊಂಡ ಮತದಾರರು ಫಾರಂ-6 ಅಥವಾ ಎಸ್‌ಐಆರ್ ಎನ್ಯುಮರೇಷನ್ ಫಾರಂ ಸಲ್ಲಿಸಿದರೆ ಸುಳ್ಳು ಘೋಷಣೆ ಮಾಡಿದಂತಾಗುತ್ತದೆ, ಕಾನೂನು ಕ್ರಮ ಎದುರಿಸಬೇಕಾದೀತು : ಬಾಂಬೆ ಹೈಕೋರ್ಟ್

ವಾಸಸ್ಥಳ ಬದಲಾಯಿಸಿದ ಅಥವಾ ಸ್ಥಳಾಂತರಗೊಂಡ ಮತದಾರರು ಕೇವಲ 'ಫಾರಂ-8' ಅನ್ನು ಮಾತ್ರ ಭರ್ತಿ ಮಾಡಬಹುದು; ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ ಮೊದಲೇ ಭರ್ತಿ ಮಾಡಲಾದ ಗಣತಿ ನಮೂನೆ (enumeration form)...

ವಿಳಾಸ ಬದಲಿಸಿದ್ದಕ್ಕೆ ಫಾರಂ-8 ಸಲ್ಲಿಸಿದ್ದರೂ ಒಂದೇ ಕುಟುಂಬದ 6 ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ : ಮರುಸೇರ್ಪಡೆಗೆ ಬಾಂಬೆ ಹೈಕೋರ್ಟ್ ಆದೇಶ

ಗೋವಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದ ಒಂದೇ ಕುಟುಂಬದ ಆರು ಸದಸ್ಯರ ಹೆಸರುಗಳನ್ನು ಮರುಸೇರ್ಪಡೆಗೊಳಿಸುವಂತೆ ಬಾಂಬೆ ಹೈಕೋರ್ಟ್ ಗುರುವಾರ (ನ.5) ಭಾರತೀಯ ಚುನಾವಣಾ...

ಪ್ರಧಾನಿಗೆ ಪತ್ರ ಬರೆಯಿರಿ, ಸಂಸತ್ತಿನಲ್ಲಿ ಎಸ್‌ಐಆರ್ ಕುರಿತು ಚರ್ಚಿಸಿ: ರಾಹುಲ್‌ಗೆ ಅಮಿತ್ ಶಾ ಸವಾಲು

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚರ್ಚೆಯ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವೀಕರಿಸಿದ್ದಾರೆ. ಸಂಸತ್ತಿನಲ್ಲಿ ಚರ್ಚಿಸಲು ಗಂಭೀರವಾದ ವಿಷಯಗಳನ್ನು ಎತ್ತಿಕೊಳ್ಳುವಂತೆ ವಿಪಕ್ಷ ನಾಯಕರಿಗೆ ಅವರು ಸಲಹೆ...

ಫಾರಂ-7 ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ : ಸಿಎಂ ಡಿ.ಕೆ ಶಿವಕುಮಾರ್

ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಫಾರಂ-7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆ ನಡೆಸಲು ನಮ್ಮ ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂಡಿಯಾ ಒಕ್ಕೂಟ...

ಸಿಜೆಪಿ ನಾಯಕರಾದ ಸೌರವ್ ದಾಸ್ – ಅಶುತೋಷ್ ರಾಂಕಾ ವಿಚಾರಣೆ ನಡೆಸಿದ ಕ್ರೈಂ ಬ್ರಾಂಚ್

'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು, ಗುರುವಾರ (ನ.5) ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಮುಂದೆ ಹಾಜರಾದರು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ...

ಬೆಂಗಳೂರು : ಇಂಡಿಯಾ ಒಕ್ಕೂಟದಿಂದ ಬೃಹತ್ ‘ಮತ ಉಳಿಸಿ, ದೇಶ ಉಳಿಸಿ’ ಪ್ರತಿಭಟನೆ

'ಮತ ಉಳಿಸಿ, ದೇಶ ಉಳಿಸಿ' ಎಂಬ ಶಿರ್ಷಿಕೆಯಡಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಇಂಡಿಯಾ ಒಕ್ಕೂಟ'...

ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ, ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಅರ್ಹತೆ ಮತ್ತು ಪ್ರತಿಭೆಯ ಆಧಾರದಲ್ಲಿ ನೇಮಕಾತಿ ಮಾಡುವುದರ ಜೊತೆಗೆ, ಕರ್ನಾಟಕದ ಖಾಸಗಿ ಕಂಪನಿಗಳು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ನೀಡಬೇಕು. ಪ್ರತಿಭಾವಂತ ಕನ್ನಡಿಗರಿಗೆ ನೇಮಕಾತಿಯಲ್ಲಿ ಆದ್ಯತೆ ದೊರೆಯಬೇಕು ಎಂದು ಮುಖ್ಯಮಂತ್ರಿ ಡಿ.ಕೆ....

‘ನೀವು ನಮ್ಮೊಂದಿಗಿದ್ದೀರಾ, ಇಲ್ಲ ನಮ್ಮ ವಿರುದ್ಧ ಇದ್ದೀರಾ’: ಇರಾನ್ ತೈಲ ವ್ಯಾಪಾರಕ್ಕೆ ನೆರವು ಆರೋಪ; ಭಾರತ ಮೂಲದ ದಂಪತಿಗೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್: ಇರಾನ್‌ನ ತೈಲ ವ್ಯಾಪಾರಕ್ಕೆ ನೆರವು ನೀಡುವ ಮೂಲಕ ಅಮೆರಿಕದ ಆರ್ಥಿಕ ನಿರ್ಬಂಧಗಳನ್ನು ಉಲ್ಲಂಘಿಸಲು ಸಹಕರಿಸಿದ ಆರೋಪದ ಮೇಲೆ ಭಾರತ ಮೂಲದ ದಂಪತಿ ಮತ್ತು ಅವರೊಂದಿಗೆ ಸಂಪರ್ಕ ಹೊಂದಿರುವ ಹಲವು ಕಂಪನಿಗಳ ವಿರುದ್ಧ...

ಆರು ರಾಜ್ಯಗಳು – ಕೇಂದ್ರಾಡಳಿತ ಪ್ರದೇಶಗಳ ‘ಎಸ್‌ಎಸ್‌ಆರ್’ ಪ್ರಕ್ರಿಯೆ ಘೋಷಿಸಿದ ಚುನಾವಣಾ ಆಯೋಗ

ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಮಿಜೋರಾಂ, ಒಡಿಶಾ ಮತ್ತು ಸಿಕ್ಕಿಂಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Summary Revision -...

ಅಂಕಿತಾ ಭಂಡಾರಿ ಕೊಲೆ ಪ್ರಕರಣ : ರಾಜ್‌ಘಾಟ್‌ನಲ್ಲಿ ಧರಣಿ ಕುಳಿತಿದ್ದ ಪೋಷಕರನ್ನು ತೆರವುಗೊಳಿಸಿದ ಪೊಲೀಸರು

ಉತ್ತರಾಖಂಡದ ರೆಸಾರ್ಟ್‌ನಲ್ಲಿ ಕೊಲೆಯಾದ ಯುವತಿ ಅಂಕಿತಾ ಭಂಡಾರಿ ಪೋಷಕರು ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರಿಸಿದ್ದು, ಬುಧವಾರ (ನ.4) ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಗಾಂಧಿ ಸ್ಮಾರಕದ ಸಾರ್ವಜನಿಕ ದ್ವಾರದ ಬಳಿ ಧರಣಿ ಕುಳಿತಿದ್ದ ಅವರನ್ನು ಪೊಲೀಸರು...