HomeಅಂಕಣಗಳುSIRವಿಳಾಸ ಬದಲಿಸಿದ್ದಕ್ಕೆ ಫಾರಂ-8 ಸಲ್ಲಿಸಿದ್ದರೂ ಒಂದೇ ಕುಟುಂಬದ 6 ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್...

ವಿಳಾಸ ಬದಲಿಸಿದ್ದಕ್ಕೆ ಫಾರಂ-8 ಸಲ್ಲಿಸಿದ್ದರೂ ಒಂದೇ ಕುಟುಂಬದ 6 ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ : ಮರುಸೇರ್ಪಡೆಗೆ ಬಾಂಬೆ ಹೈಕೋರ್ಟ್ ಆದೇಶ

- Advertisement -
- Advertisement -

ಗೋವಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದ ಒಂದೇ ಕುಟುಂಬದ ಆರು ಸದಸ್ಯರ ಹೆಸರುಗಳನ್ನು ಮರುಸೇರ್ಪಡೆಗೊಳಿಸುವಂತೆ ಬಾಂಬೆ ಹೈಕೋರ್ಟ್ ಗುರುವಾರ (ನ.5) ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಆದೇಶಿಸಿದೆ.

ನ್ಯಾಯಮೂರ್ತಿ ವಾಲ್ಮೀಕಿ ಮೆನೆಜೆಸ್ ಮತ್ತು ನ್ಯಾಯಮೂರ್ತಿ ಅಮಿತ್ ಜಮ್‌ಸಾಂದೇಕರ್ ​​ಅವರ ವಿಭಾಗೀಯ ಪೀಠವು ಹೀಗೆ ಹೇಳಿದೆ:

"ನಾವು ಅರ್ಜಿಯನ್ನು ಪುರಸ್ಕರಿಸುತ್ತೇವೆ… 'ಎಸ್‌ಐಆರ್' ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದರಿಂದ, ಪ್ರಸ್ತುತ ಅರ್ಜಿಯ ವಿಚಾರಣೆಯನ್ನು ಮುಂದೂಡಬೇಕೆಂಬ ಭಾರತೀಯ ಚುನಾವಣಾ ಆಯೋಗದ ವಾದವನ್ನು ನಾವು ತಿರಸ್ಕರಿಸಿದ್ದೇವೆ… ಇದು 'ಎಸ್‌ಐಆರ್'ಗೆ ಸಂಬಂಧಿಸಿದ್ದಲ್ಲ… ಆದ್ದರಿಂದ, ಗೋವಾದ ಸಾಂತಾಕ್ರೂಝ್ ಕ್ಷೇತ್ರಕ್ಕೆ ಸಂಬಂಧಿಸಿದ ಬಿಎಲ್‌ಒ ಅವರು, ಇಂದಿನಿಂದ 10 ದಿನಗಳ ಒಳಗಾಗಿ ಅರ್ಜಿದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬೇಕೆಂದು ನಾವು ಆದೇಶಿಸುತ್ತೇವೆ."

ಚುನಾವಣಾ ಆಯೋಗ ಕೋರಿದಂತೆ, ಈ ಆದೇಶದ ಜಾರಿಗೆ ಎರಡು ವಾರಗಳ ಕಾಲ ತಡೆ ನೀಡಲು ಪೀಠವು ನಿರಾಕರಿಸಿದೆ.

ವಿಳಾಸ ಬದಲಾವಣೆಗಾಗಿ ಫಾರಂ-8 ಸಲ್ಲಿಸಿದ್ದರೂ.. ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಸಾಲಗಾಂವ್ಕರ್ ಕುಟುಂಬದ ಸದಸ್ಯರೊಬ್ಬರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ಹೊರಬಿದ್ದಿದೆ. ಎಸ್‌ಐಆರ್ ಮಾರ್ಗಸೂಚಿಗಳ ಅಡಿಯಲ್ಲಿ, ಮತದಾರರು ಫಾರಂ-8ರ ಜೊತೆಗೆ ಮೊದಲೇ ಭರ್ತಿ ಮಾಡಿದ ಎನ್ಯುಮರೇಶನ್ ಫಾರಂ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿತ್ತು.

ಅರ್ಜಿದಾರರು ಎನ್ಯುಮರೇಶನ್ ಸಲ್ಲಿಸಲು ನಿರಾಕರಿಸಿದಾಗ, ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲು ಉದ್ದೇಶಿಸಲಾದ ಫಾರಂ-6 ಭರ್ತಿ ಮಾಡುವಂತೆ ಅವರನ್ನು ಕೇಳಲಾಗಿತ್ತು.

ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಉಲ್ಲೇಖಿಸಲಾದ ಪ್ರದೇಶದಲ್ಲೇ ಸದರಿ ಮತದಾರರು (ಸಹಿ ಮಾಡುವವರು) ಮುಂದುವರಿದು ವಾಸಿಸುತ್ತಿದ್ದಾರೆ ಎಂಬ ‘ಘೋಷಣಾ ಪತ್ರ’ವನ್ನು ಎನ್ಯುಮರೇಶನ್ ಫಾರಂ ಒಳಗೊಂಡಿರುವುದನ್ನು ಗಮನಿಸಿದ ನ್ಯಾಯಾಧೀಶರು, ಚುನಾವಣಾ ಆಯೋಗದ ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಾಗರಿಕರು ಸುಳ್ಳು ಘೋಷಣೆಗಳನ್ನು ಮಾಡುವಂತೆ ಚುನಾವಣಾ ಆಯೋಗವು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದ ನ್ಯಾಯಪೀಠವು, ಮತದಾರರು ತಮ್ಮ ವಾಸಸ್ಥಳವನ್ನು ಬದಲಾಯಿಸಿದ್ದರೆ, ಅವರು ಕಡ್ಡಾಯವಾಗಿ ಎನ್ಯುಮರೇಶನ್ ಫಾರಂಗಳನ್ನು ಸಲ್ಲಿಸಬೇಕೆಂದು ಕೇಳಲು ಸಾಧ್ಯವಿಲ್ಲ ಎಂದು ಹೇಳಿದೆ.

"ಮತದಾರರೊಬ್ಬರು ತಮ್ಮ ವಿಳಾಸ ಬದಲಾಗಿದೆ ಎಂದು ಹೇಳುತ್ತಾ ಫಾರಂ-8ರೊಂದಿಗೆ ನಿಮ್ಮ ಬಳಿ ಬಂದರೆ, 'ನೋಡಿ, ಕರಡು ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ, ಆದ್ದರಿಂದ ನೀವು ಈಗ ಫಾರಂ 6 (ಹೊಸ ಮತದಾರರ ಸೇರ್ಪಡೆಗಾಗಿ) ಅನ್ನು ಭರ್ತಿ ಮಾಡಬೇಕು' ಎಂದು ನೀವು ಆ ವ್ಯಕ್ತಿಗೆ ಹೇಳಲು ಸಾಧ್ಯವಿಲ್ಲ. ನಿಮ್ಮ ಎನ್ಯುಮರೇಶನ್ ಫಾರಂ ಮೂಲಭೂತವಾಗಿ, ಒಬ್ಬ ವ್ಯಕ್ತಿಯು ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಉಲ್ಲೇಖಿಸಲಾದ ವಿಳಾಸದಲ್ಲೇ ಮುಂದುವರಿದು ವಾಸಿಸುತ್ತಿದ್ದಾನೆ ಎಂಬ ಘೋಷಣೆಯನ್ನು ಹೊಂದಿರುತ್ತದೆ. ಆದರೆ ಯೋಚಿಸಿ, ಯಾರಾದರೂ ತಮ್ಮ ವಾಸಸ್ಥಳವನ್ನು ಬದಲಾಯಿಸಿದ್ದರೆ, ಆ ಮೊದಲೇ ಭರ್ತಿ ಮಾಡಿದ ಎನ್ಯುಮರೇಶನ್ ಫಾರಂ ಅನ್ನು ಸಲ್ಲಿಸುವಂತೆ ಹೇಳುವ ಮೂಲಕ ಅವರು ಸುಳ್ಳು ಘೋಷಣೆ ಮಾಡುವಂತೆ ನೀವು ಅವರನ್ನು ಒತ್ತಾಯಿಸಲು ಹೇಗೆ ಸಾಧ್ಯ? ಆ ವ್ಯಕ್ತಿ ಕೇವಲ ಫಾರಂ 8 ಅನ್ನು ಏಕೆ ನೀಡಬಾರದು? ಏಕೆಂದರೆ ಹೇಗೆ ನೋಡಿದರೂ ಅವರ ಹೆಸರು ಅಸ್ತಿತ್ವದಲ್ಲಿರುವ ಪಟ್ಟಿಯಲ್ಲಿದೆ, ಅವರು ಕೇವಲ ತಮ್ಮ ವಿಳಾಸವನ್ನು ಬದಲಾಯಿಸಿಕೊಳ್ಳಲು ಬಯಸುತ್ತಿದ್ದಾರೆ ಅಷ್ಟೆ.. ಹಾಗಿದ್ದಾಗ ಎನ್ಯುಮರೇಶನ್ ಫಾರಂ ಅನ್ನು ಕಡ್ಡಾಯಗೊಳಿಸುವುದು ಏಕೆ?" ಎಂದು ನ್ಯಾಯಮೂರ್ತಿ ಮೆನೆಜಸ್ ಅವರು ಪ್ರಶ್ನಿಸಿದ್ದಾರೆ. 

ಒಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠವು, ನಿಯಮ 12 ಆಕ್ಷೇಪಣೆಗಳು ಮುಂತಾದವುಗಳಿಗೆ ಅವಕಾಶ ಕಲ್ಪಿಸುತ್ತದೆ ಮತ್ತು ಆ ನಿಬಂಧನೆಯ ಮೊರೆ ಹೋಗುವಾಗ, ನಾಗರಿಕರು ಕಡ್ಡಾಯವಾಗಿ ಮೊದಲೇ ಭರ್ತಿ ಮಾಡಿದ ಎನ್ಯುಮರೇಶನ್ ಫಾರಂ ಅನ್ನು ಸಲ್ಲಿಸುವ ಬದಲಿಗೆ ನೇರವಾಗಿ ಫಾರಂ 8 ಅನ್ನು ಏಕೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಸುದೀರ್ಘವಾಗಿ ಪ್ರಶ್ನಿಸಿದೆ.

"ಯಾರಾದರೂ ಒಂದು ನಿರ್ದಿಷ್ಟ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದಾದಾಗ, ಆ ಮೊದಲೇ ಭರ್ತಿ ಮಾಡಿದ ಎನ್ಯುಮರೇಶನ್ ಫಾರಂ ಅನ್ನು ಸಲ್ಲಿಸುವ ಮೂಲಕ ಆ ವ್ಯಕ್ತಿ ಏಕೆ ಸುಳ್ಳು ಘೋಷಣೆ ಮಾಡಬೇಕು? ಅದು ಸುಳ್ಳು ಘೋಷಣೆಯಾಗುತ್ತದೆ ಏಕೆಂದರೆ ಸದರಿ ಎನ್ಯುಮರೇಶನ್ ಫಾರಂ ಅಡಿಯಲ್ಲಿ, 'ಎಕ್ಸ್ ವ್ಯಕ್ತಿಯು ಇಲ್ಲೇ ಮುಂದುವರಿದು ವಾಸಿಸುತ್ತಿದ್ದಾನೆ' ಎಂಬ ಘೋಷಣೆ ಇರುತ್ತದೆ... ಮುಖ್ಯ ವಿಷಯವೆಂದರೆ ಅಂತಹ ಸುಳ್ಳು ಘೋಷಣೆಯನ್ನು ಮಾಡಲು ನೀವು ಯಾರನ್ನೂ ಒತ್ತಾಯಿಸುವಂತಿಲ್ಲ. ಅಲ್ಲದೆ, ಯಾವುದೇ ನಾಗರಿಕರು ನಿಮ್ಮ ಈ ಎನ್ಯುಮರೇಶನ್ ಫಾರಂಗೆ ಸಹಿ ಮಾಡಬಾರದು... ಅವರು ಸಹಿ ಮಾಡಲೇಬಾರದು... ಯಾರಾದರೂ ಆ ನಿರ್ದಿಷ್ಟ ಕ್ಷೇತ್ರ ಅಥವಾ ವಾರ್ಡ್‌ನಲ್ಲಿ ವಾಸಿಸುತ್ತಿಲ್ಲ ಎಂದಾದಾಗ, ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅವರು ಹೇಗೆ ತಾನೇ ಅರ್ಜಿ ಸಲ್ಲಿಸಲು ಸಾಧ್ಯ?" ಎಂದು ನ್ಯಾಯಪೀಠವು ಹೇಳಿದೆ. 














ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿಗೆ ಪತ್ರ ಬರೆಯಿರಿ, ಸಂಸತ್ತಿನಲ್ಲಿ ಎಸ್‌ಐಆರ್ ಕುರಿತು ಚರ್ಚಿಸಿ: ರಾಹುಲ್‌ಗೆ ಅಮಿತ್ ಶಾ ಸವಾಲು

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚರ್ಚೆಯ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವೀಕರಿಸಿದ್ದಾರೆ. ಸಂಸತ್ತಿನಲ್ಲಿ ಚರ್ಚಿಸಲು ಗಂಭೀರವಾದ ವಿಷಯಗಳನ್ನು ಎತ್ತಿಕೊಳ್ಳುವಂತೆ ವಿಪಕ್ಷ ನಾಯಕರಿಗೆ ಅವರು ಸಲಹೆ...

ಫಾರಂ-7 ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ : ಸಿಎಂ ಡಿ.ಕೆ ಶಿವಕುಮಾರ್

ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಫಾರಂ-7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆ ನಡೆಸಲು ನಮ್ಮ ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂಡಿಯಾ ಒಕ್ಕೂಟ...

ಸಿಜೆಪಿ ನಾಯಕರಾದ ಸೌರವ್ ದಾಸ್ – ಅಶುತೋಷ್ ರಾಂಕಾ ವಿಚಾರಣೆ ನಡೆಸಿದ ಕ್ರೈಂ ಬ್ರಾಂಚ್

'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು, ಗುರುವಾರ (ನ.5) ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಮುಂದೆ ಹಾಜರಾದರು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ...

ಬೆಂಗಳೂರು : ಇಂಡಿಯಾ ಒಕ್ಕೂಟದಿಂದ ಬೃಹತ್ ‘ಮತ ಉಳಿಸಿ, ದೇಶ ಉಳಿಸಿ’ ಪ್ರತಿಭಟನೆ

'ಮತ ಉಳಿಸಿ, ದೇಶ ಉಳಿಸಿ' ಎಂಬ ಶಿರ್ಷಿಕೆಯಡಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಇಂಡಿಯಾ ಒಕ್ಕೂಟ'...

ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ, ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಅರ್ಹತೆ ಮತ್ತು ಪ್ರತಿಭೆಯ ಆಧಾರದಲ್ಲಿ ನೇಮಕಾತಿ ಮಾಡುವುದರ ಜೊತೆಗೆ, ಕರ್ನಾಟಕದ ಖಾಸಗಿ ಕಂಪನಿಗಳು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ನೀಡಬೇಕು. ಪ್ರತಿಭಾವಂತ ಕನ್ನಡಿಗರಿಗೆ ನೇಮಕಾತಿಯಲ್ಲಿ ಆದ್ಯತೆ ದೊರೆಯಬೇಕು ಎಂದು ಮುಖ್ಯಮಂತ್ರಿ ಡಿ.ಕೆ....

‘ನೀವು ನಮ್ಮೊಂದಿಗಿದ್ದೀರಾ, ಇಲ್ಲ ನಮ್ಮ ವಿರುದ್ಧ ಇದ್ದೀರಾ’: ಇರಾನ್ ತೈಲ ವ್ಯಾಪಾರಕ್ಕೆ ನೆರವು ಆರೋಪ; ಭಾರತ ಮೂಲದ ದಂಪತಿಗೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್: ಇರಾನ್‌ನ ತೈಲ ವ್ಯಾಪಾರಕ್ಕೆ ನೆರವು ನೀಡುವ ಮೂಲಕ ಅಮೆರಿಕದ ಆರ್ಥಿಕ ನಿರ್ಬಂಧಗಳನ್ನು ಉಲ್ಲಂಘಿಸಲು ಸಹಕರಿಸಿದ ಆರೋಪದ ಮೇಲೆ ಭಾರತ ಮೂಲದ ದಂಪತಿ ಮತ್ತು ಅವರೊಂದಿಗೆ ಸಂಪರ್ಕ ಹೊಂದಿರುವ ಹಲವು ಕಂಪನಿಗಳ ವಿರುದ್ಧ...

ಆರು ರಾಜ್ಯಗಳು – ಕೇಂದ್ರಾಡಳಿತ ಪ್ರದೇಶಗಳ ‘ಎಸ್‌ಎಸ್‌ಆರ್’ ಪ್ರಕ್ರಿಯೆ ಘೋಷಿಸಿದ ಚುನಾವಣಾ ಆಯೋಗ

ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಮಿಜೋರಾಂ, ಒಡಿಶಾ ಮತ್ತು ಸಿಕ್ಕಿಂಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Summary Revision -...

ಅಂಕಿತಾ ಭಂಡಾರಿ ಕೊಲೆ ಪ್ರಕರಣ : ರಾಜ್‌ಘಾಟ್‌ನಲ್ಲಿ ಧರಣಿ ಕುಳಿತಿದ್ದ ಪೋಷಕರನ್ನು ತೆರವುಗೊಳಿಸಿದ ಪೊಲೀಸರು

ಉತ್ತರಾಖಂಡದ ರೆಸಾರ್ಟ್‌ನಲ್ಲಿ ಕೊಲೆಯಾದ ಯುವತಿ ಅಂಕಿತಾ ಭಂಡಾರಿ ಪೋಷಕರು ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರಿಸಿದ್ದು, ಬುಧವಾರ (ನ.4) ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಗಾಂಧಿ ಸ್ಮಾರಕದ ಸಾರ್ವಜನಿಕ ದ್ವಾರದ ಬಳಿ ಧರಣಿ ಕುಳಿತಿದ್ದ ಅವರನ್ನು ಪೊಲೀಸರು...

40% ಕಮಿಷನ್ ಜಾಹೀರಾತು : ಸಿದ್ದರಾಮಯ್ಯ, ಡಿಕೆಶಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಿದ ಹೈಕೋರ್ಟ್

ʼಶೇಕಡ 40 ಕಮಿಷನ್ ಸರ್ಕಾರ’ ಎಂದು ಆರೋಪಿಸಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನೀಡಿದ್ದ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ (ನ.4) ರದ್ದುಪಡಿಸಿದೆ. ಕರ್ನಾಟಕ...

‘ಔಪಚಾರಿಕ ಬಂಧನವಲ್ಲ, ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಲೆಕ್ಕ’: ಸುಪ್ರೀಂ ಮಹತ್ವದ ತೀರ್ಪು; ನಾಲ್ವರು ಆರೋಪಿಗಳ ಬಿಡುಗಡೆಗೆ ಆದೇಶ

ನವದೆಹಲಿ: ಪೊಲೀಸರು ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಸಾಂವಿಧಾನಿಕ ಗಡುವು ಆರಂಭವಾಗುತ್ತದೆ. ಔಪಚಾರಿಕವಾಗಿ ಬಂಧನ ದಾಖಲಿಸಿದ ಸಮಯದಿಂದ ಈ ಅವಧಿಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ...