Homeಮುಖಪುಟ3/4 ರಷ್ಟು ಭಾರತೀಯರು OTTಯಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಬಯಸುತ್ತಾರೆ

3/4 ರಷ್ಟು ಭಾರತೀಯರು OTTಯಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಬಯಸುತ್ತಾರೆ

ಆ್ಯಪ್ ಡಿಸ್ಟ್ರಿಬ್ಯೂಷನ್ ಪ್ಲಾಟ್‌ಫಾರ್ಮ್ ಮೊಮ್ಯಾಜಿಕ್ ನಡೆಸಿದ ಸಮೀಕ್ಷೆಯಲ್ಲಿ 54 ಪ್ರತಿಶತದಷ್ಟು ಗ್ರಾಹಕರು ಇನ್ನೂ ಥಿಯೇಟರ್ ಹಾಲ್‌ಗಳಲ್ಲಿ ಪಾನೀಯಗಳು ಮತ್ತು ತಿಂಡಿಗಳನ್ನು ಪಡೆದುಕೊಳ್ಳುತ್ತಾರೆ ಎಂದು ತಿಳಿದಿದೆ. 44 ಪ್ರತಿಶತದಷ್ಟು ಜನರು ಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

- Advertisement -
- Advertisement -

ನಾಲ್ಕು ಭಾರತೀಯರಲ್ಲಿ ಮೂವರು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರವನ್ನು ನೋಡಲು ಬಯಸುತ್ತಾರೆ. ಕೇವಲ ನಾಲ್ಕರಲ್ಲಿ ಒಬ್ಬರು  ಸಿನೆಮಾ ಹಾಲ್‌ಗೆ ಹೋಗಲು ಇಷ್ಟಪಡುತ್ತಾರೆ ಎಂದು ಹೊಸ ಸಮೀಕ್ಷೆಯೊಂದು ಶುಕ್ರವಾರ ತಿಳಿಸಿದೆ.

ಕೊರೊನಾ ಕಾರಣದಿಂದ ಚಿತ್ರಮಂದಿರಗಳು ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಚಿತ್ರಮಂದಿರಗಳು ತೆರೆದರೆ ಸಿನಿಮಾ ವೀಕ್ಷಕರ ಮನಸ್ಥಿತಿ ಹೇಗಿರುತ್ತದೆ ಎಂದು ತಿಳಿಯಲು ನಡೆಸಿದ ಸಮೀಕ್ಷೆ ಇದಾಗಿದೆ.

ಆ್ಯಪ್ ಡಿಸ್ಟ್ರಿಬ್ಯೂಷನ್ ಪ್ಲಾಟ್‌ಫಾರ್ಮ್ ಮೊಮ್ಯಾಜಿಕ್ ನಡೆಸಿದ ಸಮೀಕ್ಷೆಯಲ್ಲಿ 54 ಪ್ರತಿಶತದಷ್ಟು ಗ್ರಾಹಕರು ಇನ್ನೂ ಥಿಯೇಟರ್ ಹಾಲ್‌ಗಳಲ್ಲಿ ಪಾನೀಯಗಳು ಮತ್ತು ತಿಂಡಿಗಳನ್ನು ಪಡೆದುಕೊಳ್ಳುತ್ತಾರೆ ಎಂದು ತಿಳಿದಿದೆ. 44 ಪ್ರತಿಶತದಷ್ಟು ಜನರು ಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

“ಶೇಕಡಾ 71 ರಷ್ಟು ಜನರು ಚಿತ್ರಮಂದಿರದಲ್ಲಿ ನೋಡುವುದಕ್ಕೆ ಟಿಕೆಟ್ ದರ ಒಂದು ಪ್ರಮುಖ ಅಂಶವೆಂದು ತಿಳಿದಿದೆ. ನಂತರ 27 ಪ್ರತಿಶತದಷ್ಟು ಜನರು ಟಿಕೆಟ್ ದರ ಪ್ರಮುಖವಲ್ಲ ಎಂದು ಹೇಳಿದ್ದಾರೆ” ಎಂದು ಮೊಮಾಜಿಕ್ ಟೆಕ್ನಾಲಜೀಸ್ ಸಿಇಒ ಮತ್ತು ಸಂಸ್ಥಾಪಕ ಅರುಣ್ ಗುಪ್ತಾ ಹೇಳಿದ್ದಾರೆ.

75 ರಷ್ಟು ಮಂದಿ ಪ್ರತಿಕ್ರಿಯಿಸಿದ್ದು, ಚಲನಚಿತ್ರ ಮಂದಿರದಲ್ಲಿ ಆಸನಗಳ ನಡುವೆ ಸಾಮಾಜಿಕ ದೂರವಿರುವುದು ಒಟ್ಟಾರೆ ನೋಡುವ ಅನುಭವದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರೆ, ಕೇವಲ 23 ಪ್ರತಿಶತದಷ್ಟು ಜನರು ಮಾತ್ರ ತಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ, “ಶೇಕಡಾ 72 ರಷ್ಟು ಗ್ರಾಹಕರು ಚಲನಚಿತ್ರ ಮಂದಿರಕ್ಕಿಂತ ಹೆಚ್ಚಾಗಿ, ಮನೆಯಲ್ಲಿ ವೀಕ್ಷಿಸಲು ದೊಡ್ಡ ಪರದೆಯ ಟಿವಿ ಮತ್ತು ಹೋಮ್ ಥಿಯೇಟರ್ ಖರೀದಿಸಲು ಹೂಡಿಕೆ ಮಾಡುವುದಾಗಿ ಹೇಳಿದರು” ಎಂದು ಗುಪ್ತಾ ಹೇಳಿದರು.

ಕುಟುಂಬದೊಂದಿಗೆ ಮತ್ತೆ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸುತ್ತೀರಾ ಎಂಬ ಪ್ರಶ್ನೆಗೆ 44 ಪ್ರತಿಶತದಷ್ಟು ಗ್ರಾಹಕರು ತಾವು ಉತ್ಸುಕರಾಗಿದ್ದೇವೆಂದು ಹೇಳಿದರೆ, 26 ಪ್ರತಿಶತದಷ್ಟು ಜನರು ಹೆಚ್ಚು ಉತ್ಸುಕರಾಗಲಿಲ್ಲ, ಆದರೆ 15 ಪ್ರತಿಶತದಷ್ಟು ಜನರು ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಬೇಸರದಿಂದಿದ್ದಾರೆ.

ಹಲವಾರು ಚಲನಚಿತ್ರ ನಿರ್ಮಾಪಕರು ಮುಂದಿನ ತಿಂಗಳುಗಳಲ್ಲಿ ತಮ್ಮ ಚಲನಚಿತ್ರಗಳನ್ನು ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಡಿಸ್ನಿ + ಹಾಟ್‌ಸ್ಟಾರ್ ತನ್ನ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಏಳು ಮುಖ್ಯವಾಹಿನಿಯ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ.

ಈ ವರ್ಷದ ಮಾರ್ಚ್ 13 ರಿಂದ ಮಾರಣಾಂತಿಕ ಕೊರೊನಾವೈರಸ್‌ನಿಂದಾಗಿ ಚಲನಚಿತ್ರೋದ್ಯಮ ಸ್ಥಗಿತಗೊಂಡಿದೆ.


ಇದನ್ನೂ ಓದಿ: ಕೊರೊನಾ ಸಂಕಟ : ಸಿನಿಮಾ ಮಂದಿಯ ಪೀಕಲಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತು: ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಎಂದ ಬಾಬಾ ರಾಮ್‌ದೇವ್, ಬಾಲಕೃಷ್ಣ

0
ಇಂದು (ಏ.16) ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಅಲೋಪತಿ ಔಷಧಿಗಳ ವಿರುದ್ಧ...