ಈ ಹಿಂದೆ 2 ಜಿ ಸ್ಪೆಕ್ಟ್ರಮ್ ಹಗರಣದಂತಹ ವಿಷಯಗಳನ್ನು ಕೈಗೆತ್ತಿಕೊಂಡಿರುವ ಪ್ರಮುಖ ಸಂಸದೀಯ ಸಮಿತಿಗಳಲ್ಲಿ ಒಂದಾದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC)ಯು, ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟನ್ನು ನಿಭಾಯಿಸಲು ಸ್ಥಾಪಿಸಲಾದ ಹೊಸ ಪಿಎಂ ಕೇರ್ ನಿಧಿಯನ್ನು ಪರಾಮರ್ಶಿಸುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
ಸಮಿತಿಯ ಅಧ್ಯಕ್ಷರಾದ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರದ ಬಗ್ಗೆ ಯೋಚಿಸಿ ತಮ್ಮ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಂಡು ಪ್ರಮುಖ ವಿಷಯದ ಬಗ್ಗೆ ಒಮ್ಮತ ಕಂಡುಕೊಳ್ಳಬೇಕೆಂದು ಸದಸ್ಯರಿಗೆ ಮನವಿ ಮಾಡಿದರು.
ಬಿಜು ಜನತಾದಳ ಮತ್ತು ಡಿಎಂಕೆ ಸದಸ್ಯರು ಈ ಪ್ರಸ್ತಾಪವನ್ನು ಅನುಮೋದಿಸಿದರೂ, ಆಡಳಿತಾರೂಢ ಬಿಜೆಪಿಯ ಸದಸ್ಯರೆ ಹೆಚ್ಚಿದ್ದ ಸಭೆಯಲ್ಲಿ ಪಿಎಂ ಕೇರ್ಸ್ ಬಗ್ಗೆ ಪರಿಶೀಲನೆ ನಡೆಸುವ ಚೌಧರಿ ಅವರ ಪ್ರಸ್ತಾಪವನ್ನು ವಿರೋಧಿಸಿದರು ಎಂದು ಮೂಲಗಳು ತಿಳಿಸಿವೆ.
ಪಿಎಂ ಕೇರ್ಸ್ ಹಣದ ಖರ್ಚಿನ ಬಗ್ಗೆ ಬಿಜೆಪಿ ಸದಸ್ಯರಿಗೆ ಆತಂಕವಿರುವ ಕಾರಣಕ್ಕಾಗಿ ಸಂಸದೀಯ ಸಮಿತಿಯ ಪರಿಶೀಲನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ವೈಯಕ್ತಿಕ ಮತ್ತು ಖಾಸಗಿ ವಲಯದ ದೇಣಿಗೆಗಳನ್ನು ಸೆಳೆಯಲು ರಾಷ್ಟ್ರೀಯ ತುರ್ತು ಪರಿಸ್ಥಿತಿಗಾಗಿ ಸ್ಥಾಪಿಸಲಾದ ಪಿಎಂ ಕೇರ್ಸ್ ನಿಧಿಯನ್ನು ಸರ್ಕಾರದ ಲೆಕ್ಕಪರಿಶೋಧಕರಿಂದ ಪರಿಶೀಲಿಸಲಾಗುವುದಿಲ್ಲ. ಅದನ್ನು ಸ್ವತಂತ್ರ ಲೆಕ್ಕ ಪರಿಶೋಧಕರು ನೋಡುತ್ತಾರೆ ಎಂದು ಸರ್ಕಾರ ಹೇಳಿದೆ.
ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ತೆಗೆದುಹಾಕಿದ ನಂತರ ಸಮಿತಿ ಇದೇ ಮೊದಲು ಸಭೆಸೇರಿದ್ದು, ಬೇರೆ ಸಂಸದೀಯ ಸಮಿತಿಯ ಸಭೆಗೆ ಭಾಗವಹಿಸದ ಬಿಜೆಪಿಯ ಎಲ್ಲಾ ಸದಸ್ಯರು ಈ ಸಭೆಯಲ್ಲಿ ಬಹುತೇಕ ಪೂರ್ಣ ಹಾಜರಾತಿ ಖಚಿತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಕಾರಣದಿಂದಾಗಿ, ಸಂಸದೀಯ ಸಮಿತಿಯು ವಿಶ್ವದ ಅತಿದೊಡ್ಡ ಲಾಕ್‌ಡೌನ್‌ಗಳಲ್ಲಿ ಸರ್ಕಾರದ ಪ್ರತಿಕ್ರಿಯೆ ಹೇಗಿತ್ತು ಹಾಗೂ ಅದು ಹೇಗೆ ಬಿಕ್ಕಟ್ಟನ್ನು ನಿಭಾಯಿಸುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಹಾಗೂ ವಿಶ್ಲೇಷಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೊರೊನಾಗೆ ಲಸಿಕೆ ಮುಂದಿನ ವರ್ಷವೇ ಸಾಧ್ಯ: ಸಂಸದೀಯ ಸಮಿತಿಗೆ ವಿಜ್ಞಾನಿಗಳ ಹೇಳಿಕೆ