Homeಕರೋನಾ ತಲ್ಲಣ35 ಲಕ್ಷ ಕೊರೊನಾ! ಪ್ರಕರಣಗಳು: ಜಾಗತಿಕವಾಗಿ ಹೊಸ ದಾಖಲೆ ನಿರ್ಮಿಸಿದ ಭಾರತ

35 ಲಕ್ಷ ಕೊರೊನಾ! ಪ್ರಕರಣಗಳು: ಜಾಗತಿಕವಾಗಿ ಹೊಸ ದಾಖಲೆ ನಿರ್ಮಿಸಿದ ಭಾರತ

- Advertisement -
- Advertisement -

ಕಳೆದ 24 ಗಂಟೆಗಳಲ್ಲಿ 78,761 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 35 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ತಿಳಿಸಿದೆ.

ಈ ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೆ, ಒಂದು ದಿನದಲ್ಲಿ ಇಷ್ಟು ಅತಿ ಹೆಚ್ಚು ಪ್ರಕರಣಗಳನ್ನು ಜಗತ್ತಿನ ಯಾವ ದೇಶವೂ ದಾಖಲಿಸಿರಲಿಲ್ಲ.

ಎಎಫ್‌ಪಿ ಲೆಕ್ಕಾಚಾರದ ಪ್ರಕಾರ, ಈ ಹಿಂದೆ, ಜುಲೈ 17 ರಂದು 77,638 ದೈನಂದಿನ ಪ್ರಕರಣಗಳ ದಾಖಲೆಯೊಂದಿಗೆ ಅಮೇರಿಕಾ ಈ ದಾಖಲೆಯನ್ನು ನಿರ್ಮಿಸಿತ್ತು.

ಕಳೆದ 24 ಗಂಟೆಗಳಲ್ಲಿ, ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ 948 ಸಾವುಗಳು ಸಂಭವಿಸಿದ್ದು, ಒಟ್ಟು ಸಾವುಗಳ ಸಂಖ್ಯೆ 63,498 ಕ್ಕೆ ಏರಿದೆ. ಈವರೆಗೆ ಸುಮಾರು 27 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಇಂದಿನವರೆಗೆ ಚೇತರಿಕೆ ದರ ಶೇಕಡಾ 76.6 ರಷ್ಟಿದೆ.

ಇದನ್ನೂ ಓದಿ: ಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? – ಡಾ.ವಾಸು ಎಚ್‌.ವಿ

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಕುರಿತ ಪ್ರಮುಖ ಅಂಶಗಳು:

  • ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ರಾಷ್ಟ್ರಗಳ ಪೈಕಿ, ಅಮೇರಿಕಾ ಮತ್ತು ಬ್ರೆಜಿಲ್ ನಂತರದಲ್ಲಿ, ಭಾರತವು ಮೂರನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. ಆಗಸ್ಟ್ 4 ರಿಂದ ದೇಶದಲ್ಲಿ ಅತಿ ಹೆಚ್ಚು ಏಕದಿನ ಪ್ರಕರಣಗಳು ದಾಖಲಾಗಿದೆ.
  • 35 ಲಕ್ಷ ಪ್ರಕರಣಗಳನ್ನು ದಾಟಲು ಭಾರತಕ್ಕೆ 213 ದಿನಗಳು ಬೇಕಾಯಿತು. ಕಳೆದ ಒಂದು ವಾರದಲ್ಲಿ ದೇಶವು 5 ಲಕ್ಷ ಪ್ರಕರಣಗಳನ್ನು ದಾಖಲಿಸಿದೆ.
  • ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಈ ಐದು ರಾಜ್ಯಗಳಲ್ಲಿ ಅತಿ ಹೆಚ್ಚು ಸಾವುಗಳು ದಾಖಲಾಗಿವೆ.
  • ಸೆಪ್ಟೆಂಬರ್ 7 ರಿಂದ ಮೆಟ್ರೊ ಸೇವೆಗಳನ್ನು ಪುನರಾರಂಭಿಸಲು ಸರ್ಕಾರವು ನಾಲ್ಕನೇ ಹಂತದ ಅನ್‌ಲಾಕ್ ಮಾರ್ಗಸೂಚಿಗಳನ್ನು ಶನಿವಾರ ಪ್ರಕಟಿಸಿದೆ. ಕಂಟೈನ್‌ಮೆಂಟ್ ವಲಯಗಳ ಹೊರಗೆ ಲಾಕ್‌ಡೌನ್‌ಗಳನ್ನು ವಿಧಿಸಲಾಗುವುದಿಲ್ಲ ಎಂದು ರಾಜ್ಯಗಳಿಗೆ ತಿಳಿಸಲಾಗಿದೆ.
  • ಸೆಪ್ಟೆಂಬರ್ 21 ರಿಂದ ಹೊಸ ನಿಯಮಗಳ ಭಾಗವಾಗಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಕ್ರೀಡೆ, ಧಾರ್ಮಿಕ ಮತ್ತು ಇತರ ಕಾರ್ಯಕ್ರಮಗಳನ್ನು 100 ಜನರ ಮಿತಿಯೊಂದಿಗೆ ಅನುಮತಿಸಲಾಗುವುದು. ಶಾಲೆಗಳು, ಕಾಲೇಜುಗಳು, ಈಜುಕೊಳಗಳು ಮತ್ತು ಒಳಾಂಗಣ ಚಿತ್ರಮಂದಿರಗಳಿಗೆ ನಿರ್ಭಂದ. ಅನ್ಲಾಕ್ 4 ಎಂದು ಕರೆಯಲ್ಪಡುವ ಈ ಹಂತವು ಸೆಪ್ಟೆಂಬರ್ 30 ರವರೆಗೆ ಜಾರಿಯಲ್ಲಿರುತ್ತದೆ.
  • ರೋಗದ ಹರಡುವಿಕೆಯ ಸೂಚಕವಾಗಿರುವ ಭಾರತದ ಸಕಾರಾತ್ಮಕ ದರವು ಇಂದು ಬೆಳಿಗ್ಗೆ ಶೇಕಡಾ 7.46 ರಷ್ಟಿದೆ; ಸಾವಿನ ಪ್ರಮಾಣವು ಶೇಕಡಾ 1.79 ರಷ್ಟಿದೆ.
  • ಸುಮಾರು 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತ, ಇದುವರೆಗೆ 4.14 ಕೋಟಿ ಮಾದರಿಗಳನ್ನು ಪರೀಕ್ಷಿಸಿದೆ; ನಿನ್ನೆಯಿಂದ ಇಲ್ಲಿಯವರೆಗೆ 10.55 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ.
  • ಕಳೆದ ನಾಲ್ಕು ದಿನಗಳಿಂದ ದೇಶವು 75,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದೆ. ಇದು ಗುರುವಾರ 77,266 ಪ್ರಕರಣಗಳೊಂದಿಗೆ ಅತಿದೊಡ್ಡ ಏಕದಿನ ಏರಿಕೆಯನ್ನು ದಾಖಲಿಸಿದೆ.
  • ಭಾರತದ ಕೊರೊನಾ ವೈರಸ್ ಪ್ರಕರಣಗಳು ಮತ್ತು ಸಾವುಗಳು, ಜಾಗತಿಕ ಸರಾಸರಿಗೆ ಹೋಲಿಸಿದರೆ (ಪ್ರತಿ ದಶಲಕ್ಷ ಜನಸಂಖ್ಯೆಗೆ) ಅತ್ಯಂತ ಕಡಿಮೆ ಎಂದು ಕೊರೊನಾ ಕುರಿತು ಉನ್ನತ ಮಟ್ಟದ ಮಂತ್ರಿಗಳ ಗುಂಪಿಗೆ (GoM) ಶನಿವಾರ ಸುದ್ದಿ ಸಂಸ್ಥೆ ಪಿಟಿಐ ತಿಳಿಸಲಾಗಿದೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.
  • ವಿಶ್ವಾದ್ಯಂತ, ಇದುವರೆಗೆ 25 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 8 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೊರೊನಾ ವಿಚಾರದಲ್ಲಿ ತಬ್ಲೀಘಿಗಳನ್ನು ’ಬಲಿಪಶು’ ಮಾಡಲಾಗಿದೆ: ಬಾಂಬೆ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...