Homeಮುಖಪುಟಸಂಗ್ರೂರ್ ಜೈಲಿನಲ್ಲಿ ಕೈದಿಗಳ ನಡುವೆ ಘರ್ಷಣೆ: ಇಬ್ಬರು ಸಾವು, ಇಬ್ಬರ ಸ್ಥಿತಿ ಗಂಭೀರ

ಸಂಗ್ರೂರ್ ಜೈಲಿನಲ್ಲಿ ಕೈದಿಗಳ ನಡುವೆ ಘರ್ಷಣೆ: ಇಬ್ಬರು ಸಾವು, ಇಬ್ಬರ ಸ್ಥಿತಿ ಗಂಭೀರ

- Advertisement -
- Advertisement -

ಪಟಿಯಾಲದ ಸಂಗ್ರೂರ್ ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಇಬ್ಬರು ಕೈದಿಗಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ, ಘಟನೆಗೆ ಸಂಬಂಧಿಸಿದಂತೆ ಎಂಟು ಕೈದಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಮಲೇರ್‌ಕೋಟ್ಲಾದ ಮೊಹಮ್ಮದ್ ಹ್ಯಾರಿಸ್, ಕಲ್ಯಾಣ್‌ನ ಧರ್ಮಿಂದರ್ ಸಿಂಗ್ ಘೋರಾ, ಮಲೇರ್‌ಕೋಟ್ಲಾದ ಸೆಹಬಾಜ್ ಗೋಮಾ ಮತ್ತು ಹಮಿದಿಯ ಗಗನ್‌ದೀಪ್ ಸಿಂಗ್ ಮೇಲೆ ಆರೋಪಿಗಳ ಗುಂಪು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದೆ. ಧರ್ಮಿಂದರ್ ಘೋರಾ ಮತ್ತು ಮೊಹಮ್ಮದ್ ಹರೀಶ್ ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿ ನಡೆದ ಘರ್ಷಣೆಯಲ್ಲಿ ಗಂಭೀರ ಗಾಯಗೊಂಡಿದ್ದ ನಾಲ್ವರು ಕೈದಿಗಳನ್ನು ಆಸ್ಪತ್ರೆಗೆ ತರಲಾಗಿದ್ದು, ಇಬ್ಬರು ಆಗಲೇ ಸಾವನ್ನಪ್ಪಿದ್ದರು. ಇನ್ನಿಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟಿಯಾಲಯದ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಸಂಗ್ರೂರು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಜೈಲಿನೊಳಗೆ ಗ್ಯಾಂಗ್‌ ವಾರ್‌ ನಡೆದಿಲ್ಲ, ಕೊಲೆ ಮತ್ತು ಕೊಲೆ ಯತ್ನ ಸೇರಿದಂತೆ ಗಂಭೀರ ಅಪರಾಧಗಳ ಪ್ರಕರಣದಲ್ಲಿ ಬಂಧಿತ ಕೆಲವರ ನಡುವೆ ಘರ್ಷಣೆ ನಡೆದಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ತ್ವರಿತವಾಗಿ ಮಧ್ಯಪ್ರವೇಶಿಸಿದ್ದಾರೆ ಎಂದು ಪೊಲೀಸರು ಮತ್ತು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಸಂಗ್ರೂರ್ ಜೈಲಿನ ಡೆಪ್ಯುಟಿ ಸೂಪರಿಂಟೆಂಡೆಂಟ್ ಆದರ್ಶಪಾಲ್ ಸಿಂಗ್ ಅವರ ದೂರಿನ ಮೇರೆಗೆ ಘರ್ಷಣೆಗೆ ಸಂಬಂಧಿಸಿ ಪೊಲೀಸರು ಎಂಟು ಕೈದಿಗಳ ವಿರುದ್ಧ ಸೆಕ್ಷನ್ 302 (ಕೊಲೆ), 307 (ಕೊಲೆಗೆ ಯತ್ನ), 353, 186, 148 (ಗಲಭೆ), 149ರಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳನ್ನು ಅಮೃತಸರದ ರಸೂಲ್‌ಪುರ್ ಕುಲಾರ್‌ನ ಸಿಮ್ರಂಜಿತ್ ಸಿಂಗ್ ಅಲಿಯಾಸ್ ಜುಜರ್, ಸಂಗ್ರೂರಿನ ಭವಾನಿಗಢದ ಅಮನದೀಪ್ ಸಿಂಗ್ ಅಲಿಯಾಸ್ ಅಮರ್, ಸತ್ಗುರ್ ಸಿಂಗ್ ಐಲಾಸ್ ಲಾಲಿ, ಸಂಗ್ರೂರಿನ ಚಜ್ಜ್ಲಿ, ಸಂಗ್ರೂರಿನ  ಗುರ್ಧಿಯನ್ ಸಿಂಗ್ ಅಲಿಯಾಸ್ ಭೋಲಾ, ಫರೀದ್‌ಕೋಟ್‌ನ ಮಂಜಿಂದರ್ ಸಿಂಗ್ ಕಾಲಾ, ಅರ್ಷದೀಪ್ ಸಿಂಗ್ ಭಿಖಿ, ಸಿಮ್ರಂಜಿತ್ ಸಿಂಗ್ ಅಲಿಯಾಸ್ ಸಿಮ್ಮಿ ಮತ್ತು ತರ್ನ್ ತರನ್‌ನ ದಿಲ್‌ಪ್ರಿತ್ ಸಿಂಗ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಶುಕ್ರವಾರ ತಡರಾತ್ರಿ ತಮ್ಮ ಬ್ಯಾರಕ್‌ನಿಂದ ಹೊರಬಂದು ಜೈಲಿನಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ ಹಲ್ಲೆ ನಡೆಸಿ ನಂತರ ಕೆಲವು ಕೈದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಸಂಗ್ರೂರ್‌ನ ಎಸ್‌ಎಸ್‌ಪಿ ಸರ್ತಾಜ್ ಸಿಂಗ್ ಚಾಹಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಗುಂಪುಗಳ ನಡುವಿನ ದ್ವೇಷದಿಂದ ಕೃತ್ಯ ನಡೆದಿದೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲಾಯಿತು, ಆದರೆ ಇಬ್ಬರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಈ  ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಕನ್ನಡಿಗರಿಗೆ ಕೊಟ್ಟ ‘ಖಾಲಿ ಚೊಂಬಿ’ಗೆ ಕನ್ನಡಿಗರಿಂದ ‘ಖಾಲಿ ಕುರ್ಚಿ’ಯ ಉತ್ತರ: ಮೋದಿ ಸಭೆಯಲ್ಲಿ ಕುರ್ಚಿಗಳು ಖಾಲಿ-ಖಾಲಿ; ವಿಡಿಯೋ ಹಂಚಿಕೊಂಡ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಕೊಲೆ ಪ್ರಕರಣ: ಮೂವರ ಬಂಧನ

0
ಭಾರತಕ್ಕೆ ಚಿಕಿತ್ಸೆಗೆಂದು ಬಂದು ಕಳೆದ ವಾರ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅವರನ್ನು ಬುಧವಾರ ಕೋಲ್ಕತ್ತಾದಲ್ಲಿ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ. ಘಟನೆ ಬಗ್ಗೆ ಢಾಕಾದಲ್ಲಿ ಸುದ್ದಿಗೋಷ್ಠಿಯಲ್ಲಿ...