HomeUncategorizedಗುಜರಾತಿನ ರಾಷ್ಟ್ರನಾಯಕರ ಪಟ್ಟಿಯಲ್ಲಿ ಹಿಂದೂ ಮಹಾಸಭಾದ ವ್ಯಕ್ತಿಗೆ ಸ್ಥಾನ; ಸಂವಿಧಾನ ಶಿಲ್ಪಿ ಅಂಬೇಡ್ಕರ್‌‌ಗೆ ಸ್ಥಾನವಿಲ್ಲ!

ಗುಜರಾತಿನ ರಾಷ್ಟ್ರನಾಯಕರ ಪಟ್ಟಿಯಲ್ಲಿ ಹಿಂದೂ ಮಹಾಸಭಾದ ವ್ಯಕ್ತಿಗೆ ಸ್ಥಾನ; ಸಂವಿಧಾನ ಶಿಲ್ಪಿ ಅಂಬೇಡ್ಕರ್‌‌ಗೆ ಸ್ಥಾನವಿಲ್ಲ!

ದೇಶದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಬ್ರಿಟಿಷರ ಜೊತೆ ಕೈಗೂಡಿಸಿದ ಶಾಮ ಪ್ರಸಾದ ಮುಖರ್ಜಿ‌ಗೆ ಪಟ್ಟಿಯಲ್ಲಿ ಸ್ಥಾನ

- Advertisement -
- Advertisement -

ಅಂಬೇಡ್ಕರ್ ಬಗೆಗಿನ ಅಧಿಕಾರಶಾಹಿ ಅಸಹನೆಯ ಜೀವಂತ ನಿದರ್ಶನವಾದ ರಾಯಚೂರು ನ್ಯಾಯಾಧೀಶರು ಕೊಡುತ್ತಿರುವ ಸಮರ್ಥನೆಗಳು ಅಂಬೇಡ್ಕರ್ ಬಗೆಗಿನ ಅಸಹನೆ ಮತ್ತು ಜಾತಿ ಪೂರ್ವಗ್ರಹಗಳು ಕೇವಲ ಅವರಲ್ಲಿ ಮಾತ್ರವಲ್ಲದೆ ಹೈಕೋರ್ಟಿನಲ್ಲೂ ಸಾಂಸ್ಥಿಕವಾಗಿ ಬೇರುಬಿಟ್ಟಿದೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸುತ್ತದೆ. ಈ ಜಾತಿ ಪೂರ್ವಗ್ರಹ ಹಾಗೂ ದಲಿತ ಅಸಹನೆಗಳು ದೇಶದಲ್ಲಿ ಬ್ರಾಹ್ಮಣವಾದಿ ಬಿಜೆಪಿ-ಆರೆಸ್ಸೆಸ್ ಆಳ್ವಿಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹೆಚ್ಚುತ್ತಿದ್ದಂತೆ ಮತ್ತಷ್ಟು ಬೇರುಬಿಡುತ್ತಿದೆ. ಹಲವಾರು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ರಾಯಚೂರು ಪ್ರಕರಣ ಅದರ ಒಂದು ಆಯಾಮ ಮಾತ್ರ.

ಬ್ರಾಹ್ಮಣ್ಯ ವಾದಿ ಆಳ್ವಿಕೆಯ ಅಂಬೇಡ್ಕರ್ ದ್ವೇಷಕ್ಕೆ ಹಾಗೂ ಜಾತಿ ದುರಭಿಮಾನಗಳಿಗೆ ಹಲವಾರು ಹೆಡೆಗಳಿವೆ.
ಈಗ ದೇಶಾದ್ಯಂತ ದಲಿತ ಬಂಧು ಎಂದು ಪೋಸು ಹೊಡೆಯುತ್ತಿರುವ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿ 14 ವರ್ಷ ಆಳ್ವಿಕೆ ಮಾಡಿದಾಗಲೂ ಅಂಬೇಡ್ಕರ್ ಅವರನ್ನು ಕೋರ್ಟು-ಕಚೇರಿಗಳಿಗಿರಲಿ ಶಾಸನಸಭೆ ಮತ್ತು ಶಾಲೆಗಳಲ್ಲೂ ಬಿಟ್ಟುಕೊಂಡಿರಲಿಲ್ಲ.

ಇದನ್ನೂ ಓದಿ: ಅಂಬೇಡ್ಕರ್‌ಗೆ ಅವಮಾನ ಘಟನೆ: ಶೋಷಿತರ ಬಗ್ಗೆ ಹೆಪ್ಪುಗೊಂಡಿರುವ ಅಸಹನೆಯ ಚಿಕ್ಕ ಪ್ರತಿನಿಧಿ ಈ ನ್ಯಾಯಾಧೀಶರು!

ಈಗಲೂ ಅಂಬೇಡ್ಕರ್ ಅವರ ಫೋಟೋ ಅಲ್ಲಿನ ಕೋರ್ಟುಗಳಲ್ಲಿರಲಿ ಯಾವುದೇ ಸರ್ಕಾರೀ ಕಚೇರಿಗಳಲ್ಲೂ ಇಲ್ಲ!

ಕಾರಣವೇನು ಗೊತ್ತೇ?

ಬಿಜೆಪಿಯ ಗುಜರಾತಿನಲ್ಲಿ ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲವಂತೆ!!

2012ರಲ್ಲಿ ಅಂದರೆ ಮೋದಿಯವರು ಮುಖ್ಯಮಂತ್ರಿಯಾಗಿ 11 ವರ್ಷಗಳ ಕಾಲ ಆಡಳಿತ ಮಾಡಿ ದೇಶದ ಪ್ರಧಾನಿಯಾಗಲು ತಯಾರಾಗುತ್ತಿದ್ದಾಗ, ಗುಜರಾತಿನ ಭಾವ್ ನಗರದ ದಲಿತ ಕಾರ್ಯಕರ್ತ ದಹ್ಯ ಭಾಯ್ ಚೌಹಾಣ್‌ ಎಂಬವರು ಗುಜರಾತಿನ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಏಕಿಲ್ಲವೆಂದು ಒಂದು RTI ಅರ್ಜಿ ಹಾಕುತ್ತಾರೆ.

ಅದಕ್ಕೆ 2012ರ ಜನವರಿಯಲ್ಲಿ ಮೋದಿ ಸರ್ಕಾರ ಕೊಟ್ಟ ಉತ್ತರ ನೋಡಿದರೆ ಬಿಜೆಪಿಯ ಅಸಲೀ ಮುಖ ಸ್ಪಷ್ಟವಾಗುತ್ತದೆ: “ಮೋದಿ ಸರ್ಕಾರದ ಪ್ರಕಾರ ಗುಜರಾತಿನ ಸರ್ಕಾರೀ ಕಚೇರಿಗಳಲ್ಲಿ ಎಂಟು ಜನ ರಾಷ್ಟ್ರೀಯ ನಾಯಕರ ಫೋಟೋಗಳನ್ನು ಮಾತ್ರ ಹಾಕಬಹುದು”

ಇದನ್ನೂ ಓದಿ: ನ್ಯಾಯಾಂಗದ ನೇಮಕಾತಿಯನ್ನು ನೋಡಿ ಅಂಬೇಡ್ಕರ್‌ ಆತ್ಮ ಕೊರಗುತ್ತಿರಬಹುದು: ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್‌

ಯಾರು ಆ ಎಂಟು ಜನ?

  1. ಮಹಾತ್ಮ ಗಾಂಧಿ
  2. ಜವಾಹರ್‌ ಲಾಲ್‌ ನೆಹರೂ
  3. ಸರ್ದಾರ್ ಪಟೇಲ್
  4. ಹಾಲಿ ರಾಷ್ಟ್ರಪತಿ
  5. ಹಾಲೀ ಪ್ರಧಾನಿ
  6. ಭಾರತ್ ಮಾತಾ
  7. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ
  8. ಶಾಮ ಪ್ರಸಾದ ಮುಖರ್ಜಿ

ಅಗ್ರಮಾನ್ಯ ರಾಷ್ಟ್ರ ನಾಯಕ ಅಂಬೇಡ್ಕರ್ ಬಿಜೆಪಿಯ ಪಟ್ಟಿಯಲ್ಲಿ ಇಲ್ಲವೇ ಇಲ್ಲ!!

1990ರಲ್ಲಿ ಅಂಬೇಡ್ಕರ್ ಅವರಿಗೆ ವಿಪಿ ಸಿಂಗ್ ಭಾರತ ರತ್ನ ಪ್ರಶಸ್ತಿ ಕೊಡಲೂ ಹಾಗೂ ಸಂಸತ್ ಭವನದಲ್ಲಿ 1990ರಲ್ಲಿ ಅಂಬೇಡ್ಕರ್ ಫೋಟೋ ಅನಾವರಣ ಮಾಡಲು ತಾನು ಕಾರಣ ಎಂದು ಹೇಳಿಕೊಳ್ಳುವ ಬಿಜೆಪಿ 2012ರಲ್ಲಿ ಕೊಟ್ಟ ಉತ್ತರವಿದು. ಈ ಬಗ್ಗ ಹೆಚ್ಚಿನ ವಿವರಗಳಿಗೆ The Indian Express ನಲ್ಲಿ 2012ರ ಜನವರಿ 7 ರಂದು ಪ್ರಕಟವಾಗಿರುವ ವರದಿಯನ್ನು ಗಮನಿಸಿ.

ಇನ್ನು ಬಿಜೆಪಿಯ ರಾಷ್ಟ್ರ ನಾಯಕರ ಪಟ್ಟಿಯಲ್ಲಿರುವ ಶಾಮ ಪ್ರಸಾದ ಮುಖರ್ಜಿ ದೇಶದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಬ್ರಿಟಿಷರ ಜೊತೆ ಕೈಗೂಡಿಸಿದ ಸಾವರ್ಕರ್ ಅವರ ಹಿಂದೂ ಮಹಾ ಸಭಾದ ಅಧ್ಯಕ್ಷರಾಗಿದ್ದವರು. ದೇಶದ ಜನ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಹೋರಾಟ ನಡೆಸುತ್ತಿದ್ದಾಗ ಬಂಗಾಳದಲ್ಲಿ ಬ್ರಿಟಿಷರ ಮೇಲುಸ್ತುವಾರಿಯಲ್ಲಿ ಮುಸ್ಲಿಂ ಲೀಗ್ ಜೊತೆ ಸೇರಿ ಸರ್ಕಾರ ರಚಿಸಿದವರು. ಬಂಗಾಳದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಷರ ಪರವಾಗಿ ಹತ್ತಿಕ್ಕಲು ಯತ್ನಿಸಿದವರು.

ಇದನ್ನೂ ಓದಿ: ಅಂಬೇಡ್ಕರ್‌ ಅವರನ್ನು ಅರ್ಥಮಾಡಿಕೊಳ್ಳಲು ಮಾರ್ಕ್ಸ್ ವಾದದ ಹಿನ್ನೆಲೆ ನೆರವಾಗಿದೆ: ಜಸ್ಟಿಸ್ ಚಂದ್ರು 

ಸ್ವಾತಂತ್ಯಾನಂತರದಲ್ಲಿ ಹಿಂದೂ ಮಹಾ ಸಭಾ ಮತ್ತು ಆರೆಸ್ಸೆಸ್ ಗಳು ಗಾಂಧಿ ಹತ್ಯೆ ಪ್ರಕರಣದಲ್ಲಿ ಮೂಲೆ ಸೇರಿದಾಗ ಆರೆಸ್ಸೆಸ್ ತನ್ನ ರಾಜಕೀಯ ಅಸ್ಪೃಶ್ಯತೆಯನ್ನು ಕಳೆದುಕೊಳ್ಳಲು ಹುಟ್ಟುಹಾಕಿದ ರಾಜಕೀಯ ಪಕ್ಷವಾದ ಭಾರತೀಯ ಜನಸಂಘದ ಪ್ರಥಮ ಅಧ್ಯಕ್ಷರಾರಾದವರು. ಭಾರತೀಯ ಜನಸಂಘವೇ ಆ ನಂತರ 1980ರಲ್ಲಿ ಭಾರತೀಯ ಜನತಾ ಪಕ್ಷವಾಯಿತು.

ದೀನ್ ದಯಾಳ್ ಉಪಾಧ್ಯಾಯ ಅವರು ಭಾರತೀಯ ಜನಸಂಘಕ್ಕೆ ಆರೆಸ್ಸೆಸ್ ಎರವಲು ಕೊಟ್ಟಿದ್ದ ಹಿಂದುತ್ವ ಕಾರ್ಯಕರ್ತರು. ಆ ನಂತರ ಅದರ ಅಧ್ಯಕ್ಷರಾದವರು. ಅಂದರೆ ಸಾರಾಂಶದಲ್ಲಿ ದಲಿತ ವಿರೋಧಿ ಹಿಂದುತ್ವಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದನ್ನು ಬಿಟ್ಟರೆ ಈ ಇಬ್ಬರೂ ರಾಷ್ಟ್ರನಾಯಕರು ಹೇಗಾದಾರು?

ನಂತರ 2017ರಲ್ಲಿ ಅಂಬೇಡ್ಕರ್ ಅವರ 126ನೇ ಹುಟ್ಟುವರ್ಷವನ್ನು ದೇಶ ಆಚರಿಸುತ್ತಿದ್ದಾಗ ಆಗಿನ ಗುಜರಾತ್ ಶಾಸನ ಸಭೆಯ ಇಬ್ಬರು ಕಾಂಗ್ರೆಸ್ ಶಾಸಕರು ಈ ಕಾರಣಕ್ಕಾದರೂ ಅಂಬೇಡ್ಕರ್ ಫೋಟೋವನ್ನು ಗುಜರಾತಿನ ಶಾಲಾ-ಕಚೇರಿಗಳಲ್ಲಿ ಹಾಕಲು ಆದೇಶ ಮಾಡಬೇಕೆಂದು ಪತ್ರ ಬರೆದು ಬಿಜೆಪಿ ಮುಖ್ಯಮಂತ್ರಿ ವಿಜಯ್ ರುಪಾಣಿಯವರನ್ನು ಕೋರುತ್ತಾರೆ. ಆದರೆ ಆ ಬೇಡಿಕೆಯು ನೇರ ಕಸದ ಬುಟ್ಟಿಯನ್ನು ಸೇರುತ್ತವೆ. ಹೆಚ್ಚಿನ ವಿವರಗಳಿಗೆ ಆಸಕ್ತರು ವರದಿಯನ್ನು ಇಲ್ಲಿ ಗಮನಿಸಬಹುದು.

ಇದನ್ನೂ ಓದಿ: ಅಂಬೇಡ್ಕರ್‌ರವರಿಗೆ ಅಗೌರವ ತೋರಿದ ಜಡ್ಜ್ ವಜಾಕ್ಕೆ ಬಿಜೆಪಿ ಶಾಸಕ ಶಿವನಗೌಡ ನಾಯಕ ಆಗ್ರಹ

ಇದಕ್ಕಿಂತಲೂ ಆಘಾತಕಾರಿಯಾದ ಘಟನೆಯು 2020ರಲ್ಲಿ ನಡೆದಿದೆ. ಗುಜರಾತಿನ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಏಕೆ ಹಾಕಲಾಗುತ್ತಿಲ್ಲವೆಂದು ಕೇಳಿ ಗುಜರಾತಿನ ದಲಿತ್ ಅಧಿಕಾರ್ ಮಂಚ್‌ನ ಕೀರ್ತಿ ರಾಥೋಡ್‌ ಅವರು ಸರ್ಕಾರಕ್ಕೆ ಅರ್ಜಿ ಹಾಕಿದ್ದಾರೆ. ಅದಕ್ಕೆ 2020ರ ಡಿಸಂಬರ್‌ನಲ್ಲಿ ಉತ್ತರಿಸಿರುವ ಆಗಿನ ಬಿಜೆಪಿ ಮುಖ್ಯಮಂತ್ರಿ ವಿಜಯ್ ರುಪಾಣಿ ಅವರು, “ಸರ್ಕಾರಿ ಕಚೇರಿಗಳಲ್ಲಿ ಯಾವ ರಾಷ್ಟ್ರ ನಾಯಕರ ಫೋಟೋಗಳನ್ನು ತೂಗುಹಾಕಬೇಕೆಂಬ ಬಗ್ಗೆ 1996ರ ಸುತ್ತೋಲೆಯೊಂದಿದೆ. (ಪ್ರಥಮ ಬಿಜೆಪಿ ಸರ್ಕಾರ ಹೊರಡಿಸಿದ್ದು) ಅದರಲ್ಲಿ ರಾಷ್ಟ್ರ ನಾಯಕರ ಪಟ್ಟಿಯಲ್ಲಿ ಅಂಬೇಡ್ಕರ್ ಹೆಸರನ್ನು ಸೇರಿಸಲಾಗಿಲ್ಲ. ನಮ್ಮ ಸರ್ಕಾರ ಅದೇ ಪಟ್ಟಿಯನ್ನು ಮುಂದುವರೆಸುವ ತೀರ್ಮಾನ ಮಾಡಿದೆ”

ಅಂದರೆ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರನ್ನು ರಾಷ್ಟ್ರೀಯ ನಾಯಕರೂ ಎಂದು ಕೂಡ ಅಧಿಕೃತವಾಗಿ ಗುಜರಾತಿನಲ್ಲಿ ಪರಿಗಣಿಸುತ್ತಿಲ್ಲ. ಇದರ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ 2020ರ ಡಿಸಂಬರ್‌ನಲ್ಲಿ ಗುಜರಾತ್ ಸರ್ಕಾರದ ಸ್ಪಷ್ಟೀಕರಣ ಕೇಳಿದೆ. ಆದರೆ ಅದು ಉತ್ತರ ಕೊಡುವ ಗೋಜಿಗೂ ಹೋಗಿಲ್ಲ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ವರದಿಯನ್ನು ಇಲ್ಲಿ ಓದಬಹುದು.

ಇದು ಸಂಘಪರಿವಾರ ಮತ್ತು ಮೋದಿ ಸರ್ಕಾರಕ್ಕೆ ಅಂಬೇಡ್ಕರ್ ಬಗ್ಗೆ ಇರುವ ಅಸಹನೆಯ ಅಸಲೀ ಚಿತ್ರಣ. ಅಂಬೇಡ್ಕರ್ ಅವರನ್ನು ಪ್ರಾತಃಸ್ಮರಣೀಯ ಎನ್ನುತ್ತಲೇ ಸಂಧ್ಯಾ ಕಾಲದಲ್ಲಿ ಗುಪ್ತವಾಗಿ ಒಳಗಿಂದಲೇ ಹತ್ಯೆ ಮಾಡುವ ಸಂಘಪರಿವಾರದ ಅಸಲೀ ಹುನ್ನಾರಗಳನ್ನು ಈ ದೇಶದ ದಲಿತ ದಮನಿತರು ಅರಿಯುವರೇ?

ಇದನ್ನೂ ಓದಿ: ಅಂಬೇಡ್ಕರ್‌ಗೆ ಅಗೌರವ ತೋರಿದ ಜಡ್ಜ್‌ ವಿರುದ್ಧ ದೂರು ದಾಖಲು: ಶುಕ್ರವಾರ ಬೆಂಗಳೂರಿನ ವಿಧಾನಸೌಧ ಎದುರು ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಮ್ಮ ಸಂವಿಧಾನ ಶಿಲ್ಪಿಯನ್ನು ರಾಷ್ಟ್ರನಾಯಕ ಎಂದು ಒಪ್ಪಿಕೊಳ್ಳದ ಬಿ.ಜೆ.ಪಿ.ಯನ್ನು ಬೆಂಬಲಿಸುತ್ತಿರುವ ಅಹಿಂದ ವರ್ಗದ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು.

LEAVE A REPLY

Please enter your comment!
Please enter your name here

- Advertisment -

ಯುಎಪಿಎ ಕಾಯಿದೆಯಡಿ ಆರೋಪ ಹೊರಿಸಿದ ಮಾತ್ರಕ್ಕೆ ವಿದೇಶ ಪ್ರಯಾಣದ ಹಕ್ಕು ಕಸಿಯಲಾಗದು: ನತಾಶಾ ನರ್ವಾಲ್‌ಗೆ ದೆಹಲಿ ಹೈಕೋರ್ಟ್ ಅಭಯ

ಒಬ್ಬ ವ್ಯಕ್ತಿಯ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ (UAPA) ಯಂತಹ ಕಠಿಣ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಒಂದೇ ಕಾರಣಕ್ಕೆ, ಅವರ ವಿದೇಶ ಪ್ರಯಾಣದ ಮೂಲಭೂತ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು...

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ಅಭಿಜಿತ್ ದೀಪ್ಕೆಗೆ ‍‍ಜಾಮೀನು : ಪೊಲೀಸ್ ಕಸ್ಟಡಿಯಿಂದ ಬಿಡುಗಡೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಶನಿವಾರ (ಅಕ್ಟೋಬರ್ 17) ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ದೆಹಲಿಯ ಮಂದಿರ್ ಮಾರ್ಗ್ ಠಾಣೆ ಪೊಲೀಸರ ಕಸ್ಟಡಿಯಿಂದ ಬಿಡುಗಡೆಯಾಗಿದ್ದಾರೆ ಎಂದು...

ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಇಂಟರ್‌ನೆಟ್ ಬಳಕೆ ಮೂಲಭೂತ ಹಕ್ಕು : ಸುಪ್ರೀಂ ಕೋರ್ಟ್

ಮಹತ್ವದ ತೀರ್ಪಿನಲ್ಲಿ, ಸಂವಿಧಾನದ 21 ಮತ್ತು 19(1)(ಎ) ವಿಧಿಗಳ ಅಡಿಯಲ್ಲಿ ಇಂಟರ್‌ನೆಟ್ ಪಡೆಯುವ ಮತ್ತು ಬಳಸುವ ಹಕ್ಕನ್ನು ಸುಪ್ರೀಂ ಕೋರ್ಟ್ 'ಮೂಲಭೂತ ಹಕ್ಕು' ಎಂದು ಘೋಷಿಸಿದೆ. ಮಕ್ಕಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಈ...

ಸಿಜೆಐ ಸೂರ್ಯಕಾಂತ್ ವಿರುದ್ಧದ ಪೋಸ್ಟ್: ಕೇರಳ ಕಾಂಗ್ರೆಸ್ ಅಧ್ಯಕ್ಷರಿಗೆ ಎಸ್‌ಸಿಬಿಎ ಜಂಟಿ ಕಾರ್ಯದರ್ಶಿಯಿಂದ ಲೀಗಲ್ ನೋಟಿಸ್!

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರನ್ನು ಗುರಿಯಾಗಿಸಿ ಕೇರಳ ಕಾಂಗ್ರೆಸ್‌ನ ಅಧಿಕೃತ ಎಕ್ಸ್ (X) ಖಾತೆಯಿಂದ ಮಾಡಲಾಗಿತ್ತು ಎನ್ನಲಾದ ಪೋಸ್ಟ್‌ಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ (SCBA) ಜಂಟಿ...

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ನೇಹಾ ಬೋರಾ ಬಿಡುಗಡೆ : ಅಭಿಜಿತ್ ದೀಪ್ಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿರುವ ಪೊಲೀಸರು

ಶುಕ್ರವಾರ (ಅಕ್ಟೋಬರ್ 16) ಬಂಧಿತರಾಗಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ ಅವರನ್ನು ಶನಿವಾರ (ಅ.17) ಮುಂಜಾನೆ ಬಿಡುಗಡೆ ಮಾಡಲಾಗಿದ್ದು, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್...

ಬೆಂಗಳೂರಿನಲ್ಲಿ ತಿರಂಗ ಯಾತ್ರೆಗೆ ಪೊಲೀಸರ ಷರತ್ತುಬದ್ಧ ಅನುಮತಿ: ಪ್ರತಿಭಟನೆ, ಘೋಷಣೆಗಳಿಗೆ ನಿರ್ಬಂಧ

ಬೆಂಗಳೂರು: ದೆಹಲಿಯಲ್ಲಿ ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆ ವಿಚಾರವಾಗಿ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಅಕ್ಟೋಬರ್ 16ರಂದು ಟೌನ್ ಹಾಲ್‌ನಿಂದ ಬನ್ನಪ್ಪ ಪಾರ್ಕ್‌ನಲ್ಲಿರುವ ಕ್ವಿಟ್ ಇಂಡಿಯಾ ಸ್ಮಾರಕದವರೆಗೆ ಹಮ್ಮಿಕೊಂಡಿರುವ ತಿರಂಗ...

ಸುಪ್ರೀಂ ವಿಚಾರಣೆಗೆ ಸಜ್ಜಾಗುತ್ತಿದ್ದಂತೆ ಸಿಜೆಪಿಯ ತಿರಂಗಾ ಮೆರವಣಿಗೆ ಆರಂಭ; ಪೊಲೀಸರ ನೋಟಿಸ್ ಧಿಕ್ಕರಿಸಿ ತೆರಳುತ್ತಿದ್ದ ಅಭಿಜೀತ್ ದೀಪ್ಕೆ ವಶಕ್ಕೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಹಕ್ಕಿನ ಕುರಿತ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಜ್ಜಾಗುತ್ತಿದ್ದ ಬೆನ್ನಲ್ಲೇ, ದೆಹಲಿ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ‘ಲೆಹ್ರಾ ದೋ ತಿರಂಗಾ’...

‘ದಿಮಾಗಿ ನಕ್ಸಲ್’, ‘ದೇಶದ್ರೋಹಿ’ ಎಂದು ಪಟ್ಟ ಕಟ್ಟುವುದು ಅಧಿಕಾರ ಕಳೆದುಕೊಳ್ಳುವ ಭೀತಿಯ ಸಂಕೇತ”: ಮೋದಿ-ಅಮಿತ್ ಶಾ ವಿರುದ್ಧ ಪವನ್ ಖೇರಾ ವಾಗ್ದಾಳಿ!

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ತನ್ನ ನೀತಿಗಳು ಮತ್ತು ನಡೆಯನ್ನು ಪ್ರಶ್ನಿಸುವ ನಾಗರಿಕರಿಗೆ ‘ರಾಷ್ಟ್ರವಿರೋಧಿ’, ‘ಎಡಪಂಥೀಯ’ ಹಾಗೂ ‘ದಿಮಾಗಿ ನಕ್ಸಲ್’ ಎಂದು ಪಟ್ಟ ಕಟ್ಟುತ್ತಿರುವುದು ಅದರ ಅಧಿಕಾರ ಕಳೆದುಕೊಳ್ಳುವ ಭೀತಿಯನ್ನು ತೋರಿಸುತ್ತದೆ ಎಂದು...

ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೆ ಹೆಚ್ಚಿದ ನಿರ್ಬಂಧ: 25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ, ಸೆಂಟ್ರಲ್ ಪಾರ್ಕ್ ಬಂದ್

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)...

ಸಿಜೆಪಿಯ ತಿರಂಗಾ ಮೆರವಣಿಗೆ: ಸೆಂಟ್ರಲ್ ಪಾರ್ಕ್ ಮುಚ್ಚುವಿಕೆ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಮುಚ್ಚುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಕಾಕ್ರೋಚ್ ಜನತಾ ಪಾರ್ಟಿ...