Homeಕರ್ನಾಟಕಲತಾ ಮಂಗೇಶ್ಕರ್‌‌ ಮೇಲೆ ಶಾರುಖ್‌ ಉಗುಳಿದರೆಂದು ಸುಳ್ಳು ಹಬ್ಬಿಸಿದ ಬಿಜೆಪಿ ನಾಯಕರು!

ಲತಾ ಮಂಗೇಶ್ಕರ್‌‌ ಮೇಲೆ ಶಾರುಖ್‌ ಉಗುಳಿದರೆಂದು ಸುಳ್ಳು ಹಬ್ಬಿಸಿದ ಬಿಜೆಪಿ ನಾಯಕರು!

- Advertisement -
- Advertisement -

ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಅಂತಿಮ ಸಂಸ್ಕಾರ ಸರ್ಕಾರಿ ಗೌರವಗಳೊಂದಿಗೆ ಮುಂಬೈನಲ್ಲಿ ಭಾನುವಾರ ನಡೆಯಿತು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ಗೌರವ ಸಲ್ಲಿಸುವಾಗ ಲತಾ ಮಂಗೇಶ್ಕರ್‌ ಅವರ ಮೇಲೆ ಉಗುಳಿದ್ದಾರೆ. ರಾಷ್ಟ್ರಧ್ವಜಕ್ಕೂ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹಾಗೂ ಬಿಜೆಪಿ ಬೆಂಬಲಿಗರು ಸುಳ್ಳು ಹಬ್ಬಿಸಿ ದ್ವೇಷ ಹರಡಲು ಯತ್ನಿಸಿದ್ದಾರೆ.

ಇಸ್ಲಾಮಿಕ್ ಆಚರಣೆಯಂತೆ ಶಾರುಖ್‌ ಗೌರವ ಸಲ್ಲಿಸಿದ್ದಾರೆ. ಆದರೆ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಖಾನ್ ಮಂಗೇಶ್ಕರ್ ಮೇಲೆ “ಉಗುಳುದ್ದಾರೆ” ಎಂದು ಬಿಂಬಿಸುತ್ತಿದ್ದಾರೆ.

ಬಿಜೆಪಿ ಹರಿಯಾಣದ ರಾಜ್ಯ ಉಸ್ತುವಾರಿ ಅರುಣ್ ಯಾದವ್ ಅವರು ಈ ಆರೋಪವನ್ನು ಮಾಡಿದವರಲ್ಲಿ ಮೊದಲಿಗರಾಗಿದ್ದಾರೆ. “ಕ್ಯಾ ಇಸ್ನೆ ತುಕಾ ಹೈ (ಅವರು ಉಗುಳಿದ್ದಾರಾ)?” ಎಂದು ಟ್ವೀಟ್ ಮಾಡಿರುವ ಅವರು ವಿಡಿಯೊ ತುಣಕನ್ನು ಲಗತ್ತಿಸಿದ್ದಾರೆ. ಯಾದವ್ ಅವರು ಸುಳ್ಳು, ಪ್ರಚೋದನಕಾರಿ ಟ್ವೀಟ್‌ ಮಾಡಿದ್ದರೂ ಯಾದವ್‌‌ ಅವರನ್ನು ಬಿಜೆಪಿ ನಾಯಕರ್‍ಯಾರು ಸಮರ್ಥಿಸಿಯೂ ಇಲ್ಲ, ಖಂಡಿಸಿಯೂ ಇಲ್ಲ ಎಂದು ದಿ ವೈರ್‌ ವರದಿ ಮಾಡಿದೆ.

ಮತ್ತೊಬ್ಬ ಬಿಜೆಪಿ ನಾಯಕ, ಪಕ್ಷದ ಉತ್ತರ ಪ್ರದೇಶ ವಕ್ತಾರ ಪ್ರಶಾಂತ್ ಉಮ್ರಾವ್ ಕೂಡ ಇದೇ ರೀತಿ ಆರೋಪ ಮಾಡಿದ್ದಾರೆ.

ಇತರ ಬಲಪಂಥೀಯ ಹಿಂದೂ ಸಾಮಾಜಿಕ ಮಾಧ್ಯಮ ಬಳಕೆದಾರರೂ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಶಾರುಖ್‌ ಖಾನ್‌ ಉಗುಳಿದ್ದಾರೆ ಎಂದು ಬಿಂಬಿಸಿರುವ ವಿಡಿಯೊ ವೈರಲ್ ಆಗುತ್ತಿದೆ.

ಹಲವಾರು ಜನರು ಯಾದವ್ ಮತ್ತು ಇತರರಿಗೆ ಪ್ರತಿಕ್ರಿಯಿಸಿದ್ದಾರೆ. ಖಾನ್ ಅವರ ಕ್ರಮವು ಏನನ್ನು ಸೂಚಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇಸ್ಲಾಮಿಕ್ ಪದ್ಧತಿಗಳ ಬಗ್ಗೆ ಅರಿವಿಲ್ಲದ ಯಾದವ್‌ ಅವರಿಗೆ ಪಾಠ ಮಾಡಿದ್ದಾರೆ. ಮಂಗೇಶ್ಕರ್ ಅವರ ಅಂತ್ಯಕ್ರಿಯೆಯಲ್ಲಿ ಶಾರುಖ್‌ ಖಾನ್ ಅವರು ಗೌರವ ಸಲ್ಲಿಸಿರುವುದನ್ನು ಖಾನ್‌ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಜೊತೆಗೆ ‘ಪಿಕ್‌ ಆಫ್‌ ದಿ ಡೇ’ ಎಂದೂ ಅಭಿಮಾನಿಗಳು ಬಣ್ಣಿಸಿದ್ದಾರೆ.

ಬಿಜೆಪಿಯು ಈ ಘಟನೆಯನ್ನು ಕೋಮುವಾದಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಆರೋಪಿಸಿದೆ. ಇದು ಅತ್ಯುನ್ನತ ಮೂರ್ಖತನವಲ್ಲ- ಇದು ಅತ್ಯಂತ ದುಷ್ಟತನವಾಗಿದೆ ಎಂದು ಸಿಪಿಐಎಂ ಟೀಕಿಸಿದೆ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ‘ಮಸೀದಿ ಕಟ್ಟಿಸು’ ಎಂದು ಅಖಿಲೇಶ್‌ಗೆ ವೃದ್ಧ ಛೀಮಾರಿ ಹಾಕಿಲ್ಲ; ಅವರು ಹೇಳಿದ್ದು EVM ಬಗ್ಗೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫ್ರಾನ್ಸ್‌ನಲ್ಲಿ ಭುಗಿಲೆದ್ದ ಜನಾಕ್ರೋಶ: ಬೆಲೆ ಏರಿಕೆ ಹಾಗೂ ಸಾರ್ವಜನಿಕ ಸೇವೆಗಳ ಕಡಿತ ವಿರೋಧಿಸಿ ಬೃಹತ್ ಪ್ರತಿಭಟನೆ; ಹಿಂಸಾಚಾರದಲ್ಲಿ 1,800ಕ್ಕೂ ಅಧಿಕ ಮಂದಿ ವಶ!

ಜೀವನ ವೆಚ್ಚದ ಭಾರಿ ಏರಿಕೆ, ಕುಸಿದುಬೀಳುತ್ತಿರುವ ಶಾಲಾ-ಕಾಲೇಜುಗಳ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೇವೆಗಳ ಕಡಿತವನ್ನು ಖಂಡಿಸಿ ಫ್ರಾನ್ಸ್‌ನಾದ್ಯಂತ ಶನಿವಾರ ಲಕ್ಷಾಂತರ ಜನರು ರಸ್ತೆಗಿಳಿದು ನಡೆಸಿದ ಬೃಹತ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿದ್ಯಾರ್ಥಿ...

ಪ.ಬಂಗಾಳ : ದುರ್ಗಾ ಪೂಜೆಗಳಲ್ಲಿ ಎಡಪಕ್ಷಗಳ ಪುಸ್ತಕ ಮಳಿಗೆಗಳ ಮೇಲೆ ದಾಳಿ

ಶನಿವಾರ (ಅಕ್ಟೋಬರ್ 17) ಸಂಜೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನ (ಕೆಎಂಸಿ) ತಂಡವೊಂದು ನಾಲ್ಕು ದಿನಗಳ ಹಿಂದೆ ಜಾದವ್‌ಪುರದಲ್ಲಿ ಸ್ಥಾಪಿಸಲಾಗಿದ್ದ ಪುಸ್ತಕ ಮಳಿಗೆಯನ್ನು ಧ್ವಂಸಗೊಳಿಸಲು ಆಗಮಿಸಿದಾಗ, ಕೇಂದ್ರ ಸಶಸ್ತ್ರ ಪಡೆಗಳು ಮತ್ತು ಪೊಲೀಸರು ಆ...

ಎಸ್‌ಐಆರ್ ಗೊಂದಲ: ರದ್ದಾಗಿರುವ ಮತದಾರರನ್ನು ಮರಳಿ ಸೇರಿಸಲು ‘ಫಾರ್ಮ್ 6’ ತಿದ್ದುಪಡಿಗೆ ಮಹಾರಾಷ್ಟ್ರ ಪ್ರಸ್ತಾಪ; ಜೈಲು ಶಿಕ್ಷೆಯ ಭೀತಿಯಲ್ಲಿ ಜನರು!

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಹೆಸರು ರದ್ದಾಗಿರುವ ಹಳೆಯ ಮತದಾರರನ್ನು ಮರಳಿ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿ ಭಾರಿ ಆಡಳಿತಾತ್ಮಕ ಮತ್ತು ಕಾನೂನು ತೊಡಕು ಎದುರಾಗಿದೆ. ಎಸ್‌ಐಆರ್ ಪರಿಷ್ಕರಣೆಯಲ್ಲಿ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ : ಬೆಂಗಳೂರಿನ ಟೌನ್‌ಹಾಲ್ ಬಳಿ ಪ್ರತಿಭಟಿಸಿದವರ ಬಂಧನ, ಬಿಡುಗಡೆ

ಶನಿವಾರ (ಅಕ್ಟೋಬರ್ 17) ಬೆಂಗಳೂರಿನ ಟೌನ್ ಹಾಲ್ ಬಳಿ ಮತದಾರರ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸಿದ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...

ಆಂಧ್ರದಲ್ಲಿ ಮುಂದುವರಿದ ಟಿಡಿಪಿ-ವೈಎಸ್‌ಆರ್‌ಸಿಪಿ ಸಂಘರ್ಷ : ಪರಿಸ್ಥಿತಿ ಹತೋಟಿಗೆ ತರಲು ಗಾಳಿಯಲ್ಲಿ ಗುಂಡು ಹಾರಿಸಿದ ಕಡಪಾ ಪೊಲೀಸರು

ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಶನಿವಾರ (ಅಕ್ಟೋಬರ್ 17) ಆಂಧ್ರ ಪ್ರದೇಶದಲ್ಲಿ ರಾಜಕೀಯ ಸಂಘರ್ಷಗಳು ಮುಂದುವರಿದಿವೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್‌ಸಿಪಿ) ಭದ್ರಕೋಟೆಯಾಗಿರುವ ವೈಎಸ್ಆರ್ ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ...

ಮಧ್ಯಪ್ರದೇಶ: ದೇವಸ್ಥಾನದ ಬಳಿ ಭಕ್ತರ ಮೇಲೆ ಹರಿದ ಲಾರಿ; 14 ಸಾವು, ಹಲವರಿಗೆ ಗಂಭೀರ ಗಾಯ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಶೀತಲಾ ಮಾತಾ ದೇವಸ್ಥಾನದ ಬಳಿ ನವರಾತ್ರಿ ಉತ್ಸವದ ಸಂಭ್ರಮದಲ್ಲಿದ್ದ ಭಕ್ತಾದಿಗಳ ಮೇಲೆ ಅತಿವೇಗವಾಗಿ ಬಂದ ಲಾರಿಯೊಂದು ನುಗ್ಗಿದ ಪರಿಣಾಮ ಕನಿಷ್ಠ 14 ಜನರು ದಾರುಣವಾಗಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ...

ಕೋಲ್ಕತ್ತಾ ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ಕಾಲ್ತುಳಿತ : ಮೃತರ ಸಂಖ್ಯೆ 19ಕ್ಕೆ ಏರಿಕೆ; ಏಳು ಮಂದಿಯ ಬಂಧನ

ಕೋಲ್ಕತ್ತಾದ ಸಮುದಾಯ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಶನಿವಾರ (ಅ.17) ಸಂಜೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಸುಮಾರು 25 ಮಂದಿ ಗಾಯಗೊಂಡಿದ್ದು, ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ...

ಯುಎಪಿಎ ಕಾಯಿದೆಯಡಿ ಆರೋಪ ಹೊರಿಸಿದ ಮಾತ್ರಕ್ಕೆ ವಿದೇಶ ಪ್ರಯಾಣದ ಹಕ್ಕು ಕಸಿಯಲಾಗದು: ನತಾಶಾ ನರ್ವಾಲ್‌ಗೆ ದೆಹಲಿ ಹೈಕೋರ್ಟ್ ಅಭಯ

ಒಬ್ಬ ವ್ಯಕ್ತಿಯ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ (UAPA) ಯಂತಹ ಕಠಿಣ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಒಂದೇ ಕಾರಣಕ್ಕೆ, ಅವರ ವಿದೇಶ ಪ್ರಯಾಣದ ಮೂಲಭೂತ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು...

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ಅಭಿಜಿತ್ ದೀಪ್ಕೆಗೆ ‍‍ಜಾಮೀನು : ಪೊಲೀಸ್ ಕಸ್ಟಡಿಯಿಂದ ಬಿಡುಗಡೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಶನಿವಾರ (ಅಕ್ಟೋಬರ್ 17) ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ದೆಹಲಿಯ ಮಂದಿರ್ ಮಾರ್ಗ್ ಠಾಣೆ ಪೊಲೀಸರ ಕಸ್ಟಡಿಯಿಂದ ಬಿಡುಗಡೆಯಾಗಿದ್ದಾರೆ ಎಂದು...

ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಇಂಟರ್‌ನೆಟ್ ಬಳಕೆ ಮೂಲಭೂತ ಹಕ್ಕು : ಸುಪ್ರೀಂ ಕೋರ್ಟ್

ಮಹತ್ವದ ತೀರ್ಪಿನಲ್ಲಿ, ಸಂವಿಧಾನದ 21 ಮತ್ತು 19(1)(ಎ) ವಿಧಿಗಳ ಅಡಿಯಲ್ಲಿ ಇಂಟರ್‌ನೆಟ್ ಪಡೆಯುವ ಮತ್ತು ಬಳಸುವ ಹಕ್ಕನ್ನು ಸುಪ್ರೀಂ ಕೋರ್ಟ್ 'ಮೂಲಭೂತ ಹಕ್ಕು' ಎಂದು ಘೋಷಿಸಿದೆ. ಮಕ್ಕಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಈ...