Homeಕರ್ನಾಟಕಕೆರೆಗೆ ಹಾರ: ಆ ರೈತನ ಆತ್ಮಹತ್ಯೆಗೆ ಸಿಗುವುದೇ ಪರಿಹಾರ?

ಕೆರೆಗೆ ಹಾರ: ಆ ರೈತನ ಆತ್ಮಹತ್ಯೆಗೆ ಸಿಗುವುದೇ ಪರಿಹಾರ?

- Advertisement -
- Advertisement -

| ಸೋಮಶೇಖರ್ ಚಲ್ಯ |

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ರೈತರೊಬ್ಬರು ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರನ್ನೂ ದಂಗುಬಡಿಸಿದೆ. ತಮಿಳು ಸಿನೆಮಾ ಕತ್ತಿಯಲ್ಲಿ ನಾಡಿನ ಜನರ ಗಮನ ಸೆಳೆಯಲು ರೈತರು ವಿಡಿಯೋ ಮಾಡಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಆಘಾತಕಾರಿ ದೃಶ್ಯವಿತ್ತು. ಅದನ್ನು ಹೋಲುವ ಈ ಘಟನೆಯು ತಾಲೂಕಿನ ಐತಿಹಾಸಿಕ ಗ್ರಾಮ ಅಘಲಯದಲ್ಲಿ ನಡೆದಿದೆ.

ಎರಡು ದಿನದ ಹಿಂದೆ ಸುರೇಶ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಇಂದು ಅಂದರೆ ಜೂನ್ 17ರಂದು ಗೊತ್ತಾಗಿದೆ.  ಅದಾದ ನಂತರ ಅವರು ಮಾಡಿಟ್ಟ ವಿಡಿಯೋ ಕಂಡು ಬಂದಿದೆ. ಕೆಲವೇ ಗಂಟೆಗಳಲ್ಲಿ ಅದು ವೈರಲ್ ಆಗಿದ್ದು, ಇಂದು ಸಂಜೆ ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದಾಗ, ಅವರಿಗೂ ವಿಡಿಯೋ ತಲುಪಿದೆ. ಸಭೆಯಲ್ಲಿ ಮುಖ್ಯಮಂತ್ರಿಯವರು ಇದನ್ನು ಪ್ರಸ್ತಾಪಿಸಿ ಮಾತನಾಡಿದ್ದಾರೆ.

ಸುರೇಶ್, ಅತ್ಮಹತ್ಯೆಗೆ ಶರಣಾದ ರೈತ

ನಮ್ಮ ಊರಿನಲ್ಲಿ ನೀರಿಲ್ಲ ಕೆರೆಗಳಿಗೆ ನೀರು ತುಂಬಿಸಿ ಎಂದು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ರೈತ ಸುರೇಶ್ ರೈತರ ಸಮಸ್ಯೆಗಳನ್ನು ಮತ್ತೊಮ್ಮೆ ಚರ್ಚೆಗೆ ತಂದಿದ್ದಾರೆ. ಸಮ್ಮಿಶ್ರ ಸರ್ಕಾರದ ಬಹು ದೊಡ್ಡ ಭರವಸೆಯಾಗಿದ್ದ ಸಾಲ ಮನ್ನಾದ ಕುರಿತು ಸರ್ಕಾರ ರಚನೆಯಾದಾಗಿನಿಂದಲೂ ಚರ್ಚೆ ನಡೆಯುತ್ತಲೇ ಇದೆ. ಮಾಧ್ಯಮಗಳು ಕೂಡ ಅದೇ ವಿಷಯದ ಸುತ್ತ ಆಗಾಗ ಚರ್ಚೆ ನಡೆಸುತ್ತಿವೆ.

ಮಂಡ್ಯ ಎಂದರೆ ರೈತರಿಗೆ ಸ್ವರ್ಗ, ನೀರಿನ ಸಮಸ್ಯೆಯಿಲ್ಲ, ಸಂಪದ್ಭರಿತ ಜಿಲ್ಲೆ, ಆದರೂ ಅಲ್ಲಿಯ ರೈತರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ರೈತರು ಸೋಮಾರಿಗಳು ಎಂಬ ಮೇಲ್ಪದರದ ಅಭಿಪ್ರಾಯಗಳು ವ್ಯಾಪಕವಾಗಿವೆ. ಆದರೆ ಅಲ್ಲಿಯ ರಿಯಾಲಿಟಿಯೇ ಬೇರೆ. ರಾಜ್ಯದಲ್ಲೇ ಅತೀ ಹೆಚ್ಚು ಭೂವಿಭಜನೆಯಾಗಿ ಅತಿ ದೊಡ್ಡ ಸಂಖ್ಯೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿರುವುದು ಈ ಜಿಲ್ಲೆಯಲ್ಲಿ. ನಿಮಗೆ ಆಶ್ಚರ್ಯವೆನಿಸಬಹುದು. ಇಂದಿಗೂ, ಮಂಡ್ಯದ ಶೇ.51 ಭಾಗಕ್ಕೆ ನೀರಾವರಿ ಸೌಲಭ್ಯವೇ ಇಲ್ಲ. ಆ ಪ್ರದೇಶಗಳು ಮಳೆಯನ್ನೇ ಅವಲಂಬಿಸಿವೆ. ಹಾಗಿದ್ದರೂ ಮಳೆ ನೀರನ್ನು ಸಂಗ್ರಹಿಸುವ ಸಾಮಥ್ರ್ಯವೂ ಕೆರೆ-ಕಟ್ಟೆಗಳಲ್ಲಿ ಕಡಿಮೆಯಾಗುತ್ತಿದೆ. ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮದ್ದೂರು ತಾಲ್ಲೂಕಿನ ಒಂದಷ್ಟು ಪ್ರದೇಶ ಬಿಟ್ಟರೆ ಕೆ.ಆರ್.ಪೇಟೆ, ಮಳವಳ್ಳಿ, ನಾಗಮಂಗಲಗಳ ಬಹುಪಾಲು ಪ್ರದೇಶದಲ್ಲಿ ನೀರಾವರಿ ಭೂಮಿ ಕಾಣಲು ಸಾಧ್ಯವಿಲ್ಲ. ಇದನ್ನು ಗುರುತಿಸಿಯೇ ಸುಮಲತಾ ತಮ್ಮ ಚುನಾವಣಾ ಪ್ರಚಾರದಲ್ಲಿ ಕೆರೆ-ಕಟ್ಟೆಗಳ ಹೂಳೆತ್ತಿಸುವ ವಿಚಾರವನ್ನು ಹೆಚ್ಚು ಬಳಸಿಕೊಂಡಿದ್ದರು.

ಇಡೀ ರಾಜ್ಯದಲ್ಲಿ ಕೆರೆ-ಕಟ್ಟೆಗಳಲ್ಲಿ ಹೂಳು ತುಂಬಿಕೊಂಡು, ಕೆರೆಗಳೆಲ್ಲವೂ ಮೈದಾನಗಳಾಗಿ ವರ್ಷಗಳೇ ಕಳೆದಿವೆ. ಒಂದೆಡೆ ಹೂಳು ತುಂಬಿದ್ದರೆ, ಮೊತ್ತೊದೆಡೆ ಕಾಲಕ್ಕೆ ಸರಿಯಾಗಿ ಮಳೆಯೂ ಆಗದೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಸುರೇಶ್ ಹೇಳುವಂತೆ 100-150 ಅಡಿಗಳಿಗೆ ನೀರು ಸಿಗುತ್ತಿದ್ದ ಅಂರ್ತಜಲದ ಮಟ್ಟ 1500 ಅಡಿಗಳಿಗೂ ಆಳಕ್ಕೆ ಕುಸಿದಿದೆ. ಹೀಗಿರುವ ಸಂದರ್ಭದಲ್ಲಿಯೂ ಕೆರೆಯ ಹೂಳನ್ನು ತೆಗೆದು ಬೀಳುವ ಅಷ್ಟೋ-ಇಷ್ಟೋ ಮಳೆಯ ನೀರನ್ನಾದರೂ ಸಂಗ್ರಹಿಸುವಂತಹ ಕೆಲಸಕ್ಕೆ ಯಾವ ಸರ್ಕಾರಗಳೂ ಮುಂದಾಗುತ್ತಿಲ್ಲ.

ಕೆರೆಗಳ ಕೋಡಿಗಳ ಮಟ್ಟಕ್ಕೆ ಹೂಳು ತುಂಬಿಕೊಂಡಿದ್ದರೂ ಯಾವ ಶಾಸಕ-ಸಂಸದರಿಗೂ ಕೆರೆಗಳ ಹೂಳೆತ್ತುವುದು ಆದ್ಯತೆಯ ಕೆಲಸ ಎಂದೆನಿಸಿಯೇ ಇಲ್ಲ. ನೀರಿನ ಸಮಸ್ಯೆಯಷ್ಟೇ ಅಲ್ಲದೆ ಬಿತ್ತನೆ ಬೀಜ, ಬೆಳೆಗಳ ಮಾರುಕಟ್ಟೆ ಬೆಲೆ, ವೈಜ್ಞಾನಿಕ ಕೃಷಿಗಳಂತಹ ಹಲವಾರು ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಆದರೆ ಆಳುವ ಪಕ್ಷಕ್ಕೆ ಇದಾವುದರ ಅರಿವೂ ಇದ್ದಂತಿಲ್ಲ. ಮಂಡ್ಯದ ಅಷ್ಟೂ ಜನ ಶಾಸಕರು ಅದೇ ಪಕ್ಷದವರಾಗಿದ್ದಾರೆ. ಆದರೂ ಈ ಜಿಲ್ಲೆಗೆ ಯಾವ ಪ್ರಯೋಜನವೂ ಇಲ್ಲ.

ಮದ್ದೂರಿನ ಶಾಸಕ ಹಾಗೂ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಜನ ಸಮಸ್ಯೆ ಹೇಳಿಕೊಳ್ಳಲು ಹೋದರೆ ‘ಇಲ್ಲೇನ್ ಮೆಡೆಗಾರಿಕೆ ಮಾಡೋಕೆ ಬಂದಿದ್ದೀರಾ’ ಎಂದು ಜನರನ್ನು ಪಾವಸ್ಸು ಕಳಿಸುವಂತಹ ಮಟ್ಟಕ್ಕೂ, ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ‘ಯಾವುದೇ ಕಾರಣಕ್ಕೂ ಮಂಡ್ಯದ ಶಾಸಕರು ಕ್ಷೇತ್ರದಲ್ಲಿ ಕೆಲಸ ಮಾಡಬಾರದು, ಜನ ಓಟಾಕಿ ಗೆಲ್ಲಿಸಿರುವ ಸುಮಲತಾ ಇಂದಲೇ ಕೆಲಸ ಮಾಡಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಇಂತಹ ಅಪ್ರಬುದ್ಧ ಜನಪ್ರತಿನಿಧಿಗಳು ತಮಗೂ ಅದೇ ಜನ ಓಟಾಕಿದ್ದಾರೆ ಎಂದು ಮರೆತಿದ್ದಾರೆ. ಈ ರೀತಿಯ ಶಾಸಕರನ್ನು ಹೊಂದಿರುವ ಜಿಲ್ಲೆಯಲ್ಲಿ ಕೆರೆಗಳು ಮೈದಾನಗಳೂ ಆಗಬಹುದು. ಊರುಗಳು ಸ್ಮಶಾನಗಳಾಗಬಹುದು.

ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬಳಲಿದ್ದ ರೈತ ಸುರೇಶ್, ತಮ್ಮ ಆತ್ಮಹತ್ಯೆ ಮುಂಚಿನ ವಿಡಿಯೋದಲ್ಲಿ ನಮ್ಮ ಕುಮಾರಣ್ಣನಿಗೆ ಇನ್ನು ನಾಲ್ಕು ವರ್ಷ ಅವಕಾಶ ಕೊಡಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ‘ಯಡಿಯೂರಪ್ಪ ಸಾರ್, ನೀವು ಕುಮಾರಣ್ಣನ ಸರ್ಕಾರಕ್ಕೆ ತೊಂದರೆ ಕೊಡಬೇಡಿ. ನಿಮಗೆ ಅದೃಷ್ಟ ಇದ್ದರೆ ನಿಮಗೂ ಮುಂದಿನ ಸಾರಿ ಮುಖ್ಯಮಂತ್ರಿ ಆಗುವ ಅವಕಾಶ ಸಿಗುತ್ತದೆ’ ಎಂದಿದ್ದಾರೆ. ಸಿದ್ದರಾಮಯ್ಯ & ಡಿಕೆಶಿಯವರಿಂದಲೂ ಎಚ್‍ಡಿಕೆಗೆ ಬೆಂಬಲ ಕೇಳಿದ್ದಾರೆ.

ಜೆಡಿಎಸ್ ಪಕ್ಷದ ಸರ್ಕಾರದ ಮೇಲಿನ ಅವರ ಕಾಳಜಿಯ ಕಾಲು ಭಾಗದಷ್ಟು ಕರ್ತವ್ಯಪ್ರಜ್ಞೆ ಸರ್ಕಾರಕ್ಕಿದೆಯೇ ಎಂಬ ಪ್ರಶ್ನೆಯನ್ನು ವಿಡಿಯೋ ನೋಡಿದವರು ಕೇಳುವಂತಿದೆ. ಸಾಲಮನ್ನಾ ಒಂದೇ ರೈತರ ಸಮಸ್ಯೆಗೆ ಪರಿಹಾರವಂಬಂತೆ ಬಿಂಬಿಸಿ ಎಲ್ಲಾ ಸರ್ಕಾರಗಳು ಸಾಲ ಮನ್ನಾದ ಬೊಬ್ಬೆ ಹೊಡೆಯುತ್ತಾ ಕಾಲ ಕಳೆಯುತ್ತವೆ. ರೈತ ಸಮಸ್ಯೆಯಲ್ಲಿ ಸಾಲವೂ ಒಂದಾಗಿದೆಯೇ ಹೊರತು ಸಾಲವೊಂದೇ ಸಮಸ್ಯೆಯಲ್ಲ ಹಾಗೂ ಸಾಲ ಮನ್ನಾ ಒಂದೇ ರೈತರಿಗೆ ಪರಿಹಾರವಲ್ಲ ಎಂಬದನ್ನು ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯ ಗ್ರಾಮದ ರೈತನ ಆತ್ಮಹತ್ಯೆ ಮುಂಚಿನ ವಿಡಿಯೋ ಮತ್ತೊಮ್ಮೆ ಸಾಬೀತು ಮಾಡಿದೆ.

ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲೆಂದೇ ಓಟು ಹಾಕಿದಂತಿದ್ದ ಮಂಡ್ಯ ಜಿಲ್ಲೆಯ ಜನರಿಗೆ ಲೋಕಸಭಾ ಚುನಾವಣೆಯ ನಂತರವೂ ಅಭಿಮಾನ ಕಡಿಮೆಯಾಗಿಲ್ಲ. ಆದರೆ, ಅವರ ನೈಜ ಸಮಸ್ಯೆಗಳಿಗೆ ಈ ಸರ್ಕಾರವು ಪರಿಹಾರ ಕಲ್ಪಿಸುತ್ತದೆಯೇ ಎಂಬುದು ಈಗ ಉಳಿದಿರುವ ಪ್ರಶ್ನೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...