Homeಅಂತರಾಷ್ಟ್ರೀಯಶಾಪವೇ ವರವಾದಾಗ: ಇರಾನಿನ ಸಿನೆಮಾ, ಒಂದು ಪರಿಚಯ

ಶಾಪವೇ ವರವಾದಾಗ: ಇರಾನಿನ ಸಿನೆಮಾ, ಒಂದು ಪರಿಚಯ

- Advertisement -
- Advertisement -

ನಾನು ಪದೇಪದೇ ಹೇಳುವುದು, ನಮ್ಮ ಕಲೆಗೆ ನಮ್ಮ ಸಮಾಜ, ನಮ್ಮ ಜೀವನ ಪ್ರೇರಣೆಯಾಗಬೇಕು ಹಾಗೂ ನಮ್ಮ ಜೀವನಕ್ಕೆ ಕಲೆಯು ಪ್ರೇರಣೆಯಾಗಬೇಕು.

ಭಾರತೀಯ ಚಿತ್ರರಂಗದ ಮುಂಚೂಣಿಯಲ್ಲಿರುವುದು ಹಿಂದಿ ಚಿತ್ರರಂಗ, ಅದನ್ನು ಬಾಲಿವುಡ್ ಎಂದು ಕರೆಯಲಾಗುತ್ತದೆ. ತಮಿಳು ಚಿತ್ರರಂಗಕ್ಕೆ ಕಾಲಿವುಡ್, ತೆಲುಗಿಗೆ ಟಾಲಿವುಡ್, ಮಲೆಯಾಳಮ್‍ಗೆ ಮಾಲಿವುಡ್ ಹಾಗೂ ಕನ್ನಡ ಚಿತ್ರರಂಗಕ್ಕೆ ಸ್ಯಾಂಡಲ್‍ವುಡ್ ಎಂದೂ ಕರೆಯಲಾಗುತ್ತದೆ. ಈ ರೀತಿಯ ನಾಮಕರಣಕ್ಕೆ ಅನೇಕರ ಆಕ್ಷೇಪಣೆಯಿದೆ, ಆ ಆಕ್ಷೇಪಣೆಗೆ ಸೂಕ್ತ ಕಾರಣಗಳೂ ಇವೆ. ಆದರೆ ಹೀಗೇಕೆ ಕರೆಯಲಾಗುತ್ತದೆ? ಈ ‘ವುಡ್’ ಎನ್ನುವುದು ನಮ್ಮ ಚಿತ್ರರಂಗಕ್ಕೆ ಯಾವ ಕಾರಣಕ್ಕೆ ಥಳುಕುಹಾಕಿಕೊಂಡಿತು? ಅದಕ್ಕೂ ಕಾರಣಗಳಿವೆಯಲ್ಲವೇ?

ಭಾರತದ ಎಲ್ಲಾ ಚಿತ್ರರಂಗಗಳಿಗೆ ತಮ್ಮದೇ ಆದ ವಿಶಿಷ್ಟತೆಗಳಿದ್ದರೂ, ಅವರಂತೆ (ಹಿಂದಿ ಚಿತ್ರರಂಗಕ್ಕೆ ಹಾಲಿವುಡ್‍ನ ಸಿನೆಮಾದಂತಹ ಚಿತ್ರಗಳನ್ನು ಮಾಡಬೇಕು, ಕನ್ನಡದ ಸಿನೆಮಾಗಳು ಹಿಂದಿ, ತೆಲುಗು ಸಿನೆಮಾಗಳಂತೆ ಆಗಿರಲು ಪ್ರಯತ್ನಿಸುತ್ತವೆ) ಆಗಿರಬೇಕು ಎನ್ನುವ ಆಕಾಂಕ್ಷೆಯಂತೂ ಖಂಡಿತ ಕಾಣಿಸಿಕೊಳ್ಳುತ್ತದೆ, ಆ ರೀತಿಯ ಒಂದು aspirational quality ಚಿತ್ರಗಳಲ್ಲಿ, ಕಲಾವಿದರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನೇ ಕೆಲವರು ಅನುಕರಣೆಯೆಂದೂ ಕರೆಯುತ್ತಾರೆ. ಇದು ಸರಿಯೋ ತಪ್ಪೋ ಎನ್ನುವುದು ಬೇರೆ ವಿಷಯ. ಆದರೆ ಈ ಅಂಶದಿಂದಲೇ ಅನೇಕರಿಗೆ ನಮ್ಮ ಚಿತ್ರಗಳು ಅಪಥ್ಯವೂ ಆಗುತ್ತವೆ. ಆದರೆ ಇದು ಸಹಜವೂ ಅಲ್ಲವೇ? ಅಷ್ಟೊಂದು ಅಭಿವೃದ್ಧಿ ಹೊಂದಿರುವ ಯಾವುದೇ ಒಂದು ಚಿತ್ರರಂಗದ ಚಿತ್ರಗಳನ್ನು ನಾವು ನೋಡಿದಾಗ ಅದರಂತೆ ಮಾಡಲು ಇಚ್ಛಿಸುವುದು ಸಹಜವೆಂದು ಹೇಳಿದರೂ ಕೆಲವು ಬಾರಿ ಇದು ಒಂದು ದೊಡ್ಡ ಸಮಸ್ಯೆಗೆ ಎಡೆಮಾಡಬಹುದು; ಅದುವೆ ಅನುಕರಣೆ ಹಾಗೂ ನಮ್ಮೊಳಗೆ, ನಮ್ಮ ಸಮಾಜದೊಳಗೆ ಇಣುಕುವ ಪ್ರವೃತ್ತಿಯನ್ನು, ನಮ್ಮ ಆಳದ ಪ್ರತಿಭೆಯನ್ನು ಹೊರಹೊಮ್ಮಿಸುವುದಕ್ಕೆ ಅಡ್ಡಿಯಾಗಬಲ್ಲದು.

ಆದರೆ ಒಂದುವೇಳೆ, ಎಲ್ಲರ ದೊಡ್ಡಪ್ಪನಾಗಿರುವ ಹಾಲಿವುಡ್ ಚಿತ್ರಗಳನ್ನು ನೋಡದೇ ಇದ್ದರೆ? ಏನಾಗಬಹುದು. ಇರಾನ್‍ನಲ್ಲಿ ಆಗಿದ್ದು ಅದೆ. (ಇದು ನನ್ನ ಪ್ರಾಕಲ್ಪನೆಯಷ್ಟೆ, ಇದಕ್ಕೆ ಇನ್ನೂ ಹಲವಾರು ಆಯಾಮಗಳಿವೆ ಎನ್ನುವುದು ನನಗೆ ಅರಿವಿದೆ.) ಅಮೆರಿಕದೊಂದಿಗೆ ಇದ್ದ ಹಗೆತನ, 70ರ ದಶಕಕ್ಕಿಂತ ಮುನ್ನ ಇದ್ದ ರಾಜಾಡಳಿತ, ಇರಾನಿನ ಕ್ರಾಂತಿ, ತದನಂತರ ಅಸ್ತಿತ್ವದಲ್ಲಿ ಬಂದ ಇಸ್ಲಾಮಿಕ್ ರಾಷ್ಟ್ರ ಇವೆಲ್ಲವುಗಳು ಒಂದು ರೀತಿಯಲ್ಲಿ ಹಾಲಿವುಡ್‍ನ ಸಿನೆಮಾಗಳು ಇರಾನಿನ ಜನತೆಗೆ ಲಭ್ಯವಾಗದಂತೆ ನೋಡಿಕೊಂಡವು. ಹಾಲಿವುಡ್ ಸಿನೆಮಾಗಳನ್ನು ನೋಡದೇ ಇರುವುದರಿಂದ ಒಂದು ಸಿನೆಮಾ ಹೀಗಿರಬೇಕು ಎಂದು ಹಾಲಿವುಡ್ ವಿಶ್ವಕ್ಕೇ ತೋರಿಸಿದ್ದು ಇರಾನಿನ ಸಿನೆಮಾಸಕ್ತರಿಗೆ ಕಾಣಲಿಲ್ಲ.

ಈ ಕಾರಣದಿಂದ ಇರಾನಿನ ನಿರ್ದೇಶಕರ ಹುಡುಕಾಟ ಆಂತರಿಕವಾಯಿತು. ಇದರೊಂದಿಗೆ ದೇಶದಲ್ಲಿ ಹೇರಿಕೆಯಾಗಿದ್ದ ಕಟ್ಟುನಿಟ್ಟಿನ ಸೆನ್ಸಾರ್ ಕೂಡ ಇವರ ಹುಡುಕಾಟದ ದಿಕ್ಕನ್ನು ಬದಲಿಸಿತು; ಈ ನಿರ್ದೇಶಕರಿಗೆ ಸೆನ್ಸಾರ್ ರಾಜಕೀಯ ಕಥೆಯನ್ನು ಹೇಳಲು ಅಡ್ಡಿಯಾದರೂ,(ಅನೇಕರು ಜೈಲುವಾಸ ಅನುಭವಿಸಿದ್ದಾರೆ) ಹಿಂಸೆ, ಲೈಂಗಿಕತೆ ಮುಂತಾದವುಗಳನ್ನು ತೋರಿಸಬಾರದು ಎನ್ನುವುದು ಸಮಸ್ಯೆಯಾಗಲಿಲ್ಲ.
ಕಥೆಗಳನ್ನು ಹೇಳುವ ರೀತಿ ಮತ್ತು ಯಾವ ಕಥೆಗಳನ್ನು ಹೇಳಬೇಕು ಎನ್ನುವುದು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಈ ಎರಡು ಅಂಶಗಳು ಇರಾನಿನ ಚಿತ್ರಗಳು ವಿಶ್ವಕ್ಕೆ ಸಿನೆಮಾದ ಒಂದು ಹೊಸ ವ್ಯಾಕರಣವನ್ನು ಪರಿಚಯಿಸುವಂತೆ ಮಾಡಿದವು.

ಇಗ ಇರಾನಿನ ಸಿನೆಮಾದ ಇತಿಹಾಸ ಮತ್ತು ಅದರ ಬೆಳವಣಿಗೆಗೆ ಹೋಗದೆ ಅಲ್ಲಿಯ ಕೆಲವು ಚಿತ್ರಗಳ ಉದಾಹರಣೆ ತೆಗೆದುಕೊಳ್ಳುವ.
‘ಟೇಸ್ಟ್ ಆಫ್ ಚೆರಿ’ ಎನ್ನುವುದು ಇರಾನಿನ ಅತ್ಯಂತ ಯಶಸ್ವಿ ಮತ್ತು ಪ್ರಮುಖ ನಿರ್ದೇಶಕ ಅಬ್ಬಾಸ್ ಕಿಯರಸ್ತಾಮಿ ನಿರ್ದೇಶಿಸಿದ ಚಿತ್ರ. ಈ ಚಿತ್ರದಲ್ಲಿ ಒಬ್ಬ ಇರಾನಿ ವ್ಯಕ್ತಿ ಒಂದು ಜೀಪಿನಲ್ಲಿ ಸುತ್ತಾಡುತ್ತಿದ್ದಾನೆ. ಅವನು ನಿದ್ರೆಗುಳಿಗೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಯೋಚನೆಯಲ್ಲಿದ್ದಾನೆ. ಒಂದು ಗುಂಡಿಯನ್ನು ತೋಡಿ, ಅದರಲ್ಲಿಳಿದು ನಿದ್ರೆಮಾತ್ರೆಗಳನ್ನು ಸೇವಿಸಿ ಸತ್ತಮೇಲೆ ತನ್ನನ್ನು ಯಾರಾದರೂ ಹೂಳಬೇಕು ಅಥವಾ ಮಣ್ಣುಮಾಡಬೇಕು ಎನ್ನುವುದು ಅವನ ಬಯಕೆ. ಆ ಬಯಕೆಯನ್ನು ಯಾರಾದರೂ ಪೂರೈಸಬಲ್ಲರೋ ಎನ್ನುವ ಹುಡುಕಾಟದಲ್ಲಿದ್ದಾನೆ ಅವನು. ಈ ಹುಡುಕಾಟದಲ್ಲಿ ಕೆಲವರನ್ನು ಭೇಟಿಯಾಗುತ್ತಾನೆ, ಅವರೊಂದಿಗೆ ಸಂಭಾಷಿಸುತ್ತಾನೆ; ಇಷ್ಟೇ ಆ ಚಿತ್ರ.

ಚಿತ್ರದಲ್ಲಿ ಯಾವುದೇ ಹಿನ್ನೆಲೆ ಸಂಗೀತವಿಲ್ಲ, ಉದ್ದುದ್ದ ಸಂಭಾಷಣೆಗಳಿವೆ, ಜೀಪು ಚಲಿಸುವ, ಎದುರಿನ ರಸ್ತೆಯ, ರಸ್ತೆಬದಿಯ ಉದ್ದುದ್ದ ಶಾಟ್‍ಗಳಿವೆ. ಆದರೂ ಒಂದು ಸಲವೂ ಬೋರ್ ಹೊಡೆಸುವುದಿಲ್ಲ, ಆ ಉದ್ದುದ್ದದ ಶಾಟ್‍ಗಳು, ಸಂಭಾಷಣೆಗಳು, ಮುಖಗಳು. ಇವೆಲ್ಲವೂ ಜೀವನದ ಅರ್ಥದ ಹುಡುಕಾಟದಲ್ಲಿರುವಂತೆ ಭಾಸವಾಗುತ್ತದೆ.

‘ದಿ ಆ್ಯಪಲ್'(1998) ಎನ್ನುವುದು 17 ವರ್ಷದ ಬಾಲಕಿ ಸಮಿರ ಮಖ್ಮಲ್‍ಬಫ್ ನಿರ್ದೇಶಿಸಿದ ಚಿತ್ರ. ಅತ್ಯಂತ ಧಾರ್ಮಿಕನಾದ ಒಬ್ಬ ವ್ಯಕ್ತಿ ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಮನೆಯಲ್ಲಿಯೇ ಕೂಡಿಹಾಕಿದ್ದಾನೆ. ಹನ್ನೆರಡು ವರ್ಷಗಳ ತನಕ ಈ ಪುಟ್ಟಬಾಲಕಿಯರು ಹೊರಜಗತ್ತನ್ನೇ ನೋಡಿಲ್ಲ. ಆಗ ಪಕ್ಕದವರೊಬ್ಬರು ಕೆಲವು ಸಾಮಾಜಿಕ ಕಾರ್ಯಕರ್ತೆಯರಿಗೆ ಇದರ ಬಗ್ಗೆ ತಿಳಿಸಿದಾಗ, ಅವರು ಬಂದು ಅವರನ್ನು ಸೆರೆವಾಸದಿಂದ ಬಿಡುಗಡೆ ಮಾಡುತ್ತಾರೆ. ಈ ಘಟನೆ ಮತ್ತು ಆ ಬಾಲಕಿಯರು ಹೊರಜಗತ್ತಿಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದೇ ಈ ಚಿತ್ರ. ಆ ಬಾಲಕಿಯರ ತಂದೆತಾಯಿ ವಿಲನ್‍ಗಳಾಗಿರಬೇಕಿತ್ತು ಎನ್ನುವುದು ನಮ್ಮ ಅಪೇಕ್ಷೆಯಾಗಿತ್ತು; ಆದರೆ ಹಾಗಾಗುವುದಿಲ್ಲ, ಅವರನ್ನು ವಿಲನ್‍ಗಳಂತೆ ಬಿಂಬಿಸದೇ ಸಾಮಾನ್ಯ ವ್ಯಕ್ತಿಗಳಂತೆ ನೋಡುವಂತೆ ಮಾಡುವುದೂ ಈ ಚಿತ್ರದ ಯಶಸ್ಸು.

ಈ ಚಿತ್ರದ ಮತ್ತು ಇತರ ಇರಾನಿನ ಚಿತ್ರಗಳ ವೈಶಿಷ್ಟವೇನೆಂದರೆ, ಸಾಕ್ಷ್ಯಚಿತ್ರದ ಮತ್ತು ಸಿನೆಮಾದ ನಡುವೆ ಇರುವ ಗೆರೆಯನ್ನು ಇಲ್ಲವಾಗಿಸುವುದು. ಇದು ಸಾಕ್ಷ್ಯಚಿತ್ರವೂ ಹೌದು ಹಾಗೂ ಚಲನಚಿತ್ರವೂ ಹೌದು. ಹಾಗೂ ಇಂತಹ ಚಿತ್ರಗಳಲ್ಲಿ ಇವೆರಡರ ಘರ್ಷಣೆಯಾಗುವುದಿಲ್ಲ, ಇವೆರಡರ ನಡುವೆ ಇರುವುದು ಹುಸಿ ವೈರುಧ್ಯ ಎನ್ನುವುದನ್ನು ಇರಾನಿನ ಅನೇಕ ಚಲನಚಿತ್ರಗಳು ತೋರಿಸಿಕೊಡುತ್ತವೆ.

ನನಗೆ ಇಷ್ಟವಾದ ಇನ್ನೊಬ್ಬ ನಿರ್ದೇಶಕಿಯ ಚಿತ್ರ ‘ದ ಬ್ಲೂ ವೇಲಡ್’ (ರುಸಾರಿ ಅಬಿ). ರಖ್‍ಶಾನ್ ಬನಿ-ಎತೆಮಾದ್ ನಿರ್ದೇಶಿಸಿದ ಈ ಚಿತ್ರದಲ್ಲಿ ಒಬ್ಬ ಟೊಮಾಟೊ ಸಾಸ್ ಕಾರ್ಖಾನೆಯ ಮಾಲೀಕ ಮತ್ತು ಕಾರ್ಖಾನೆಯಲ್ಲಿ ಕೆಲಸ ಮಾಡುವ ಒಬ್ಬ ಮಹಿಳೆಯ ಪ್ರೇಮದ ಕಥೆಯನ್ನು ಹೇಳಲಾಗಿದೆ. ಈ ಚಿತ್ರವನ್ನು ನೋಡುತ್ತಿದ್ದಾಗ, ಒಂದು ಸಿನೆಮಾ ನೋಡಿದಂತೆ ಭಾಸವಾಗದೆ, ನಮ್ಮ ಪಕ್ಕದೂರಿನಲ್ಲಿ ಆದ ಘಟನೆಗಳನ್ನು ನೋಡಿದಂತೆ ಭಾಸವಾಗುತ್ತದೆ. ವಯಸ್ಸಾದ ಕಾರ್ಖಾನೆಯ ಮಾಲೀಕ, ಅವನ ಮಕ್ಕಳು, ಅಳಿಯಂದಿರು ಇವರೆಲ್ಲರೂ ನಮ್ಮೂರಿನವರಾಗೇ ಕಂಡು, ಮಕ್ಕಳ ಮತ್ತು ಅಳಿಯಂದಿರಿಗೆ ಈ ಪ್ರೇಮಪ್ರಕರಣದೊಂದಿಗೆ ಇರುವ ಸಮಸ್ಯೆಯೂ ಬೇರೆ ಲೋಕದ್ದು ಎನಿಸುವುದಿಲ್ಲ. ಇದರರ್ಥ ಚಿತ್ರದ ನಿರ್ದೇಶಕಿಯು ವಿಶ್ವದ ಎಲ್ಲಾ ಜನರಿಗೂ ತಟ್ಟಲಿ ಎಂದು ಕಥೆಯನ್ನಾಗಲಿ ಅಥವಾ ಕಥೆಯನ್ನು ಹೇಳುವ ಶೈಲಿಯನ್ನಾಗಲಿ ಆಯ್ಕೆ ಮಾಡಿಕೊಂಡಿಲ್ಲ. ತನ್ನ ಕಥೆ(ತಾನಿರುವ ಸಮಾಜ) ಮತ್ತು ಶೈಲಿಗೆ ಸಂಪೂರ್ಣ ಪ್ರಾಮಾಣಿಕತೆ ಬದ್ಧತೆಯನ್ನು ಪ್ರದರ್ಶಿಸಿದಿಂದಲೇ ವಿಶ್ವದ ಇನ್ನೊಂದು ಮೂಲೆಯಲ್ಲಿ ಕುಳಿತವರಿಗೆ ತಟ್ಟಿದ್ದು.

ಮೊಹ್ಸೆನ್ ಮಖ್ಮಲ್‍ಬಫ್ ಅವರ ‘ಸೈಕ್ಲಿಸ್ಟ್’ ಎನ್ನುವ ಚಿತ್ರದಲ್ಲಿ ಇರಾನಿನಲ್ಲಿ ವಾಸಿಸುತ್ತಿರುವ ಒಬ್ಬ ಅಫ್ಘಾನಿ ನಿರಾಶ್ರಿತ ತನ್ನ ಹೆಂಡತಿಯ ಚಿಕಿತ್ಸೆಗೆ ಹಣ ಒದಗಿಸಲೆಂದು ಒಂದು ವಾರ ನಿಲ್ಲಿಸದೇ ಸೈಕಲ್ ತುಳಿಯುವ ಸಾಹಸಕ್ಕೆ ಕೈಹಾಕಿದ್ದಾನೆ. ಇಂತಹವುಗಳನ್ನು ಎಷ್ಟು ನೋಡಿಲ್ಲ ನಮ್ಮ ದೇಶದಲ್ಲಿ, ಆದರೆ ಇವರ ಕಥೆಗಳು ಚಿತ್ರವಾಗಿದ್ದು ತುಂಬಾ ಕಡಿಮೆ. ಒಂದು ವೇಳೆ ಚಿತ್ರವಾದರೂ, ಆ ಕಥೆಯನ್ನು ಸೈಕಲ್ ತುಳಿಯುವ ವ್ಯಕ್ತಿಗೆ ಮತ್ತು ಅವನ ಪರಿಸ್ಥಿತಿ, ಸನ್ನಿವೇಶಕ್ಕಷ್ಟೇ ಮೀಸಲಿಡದೆ ಅಲ್ಲಿ ಮತ್ತೊಂದು ಆಯಾಮವನ್ನು ತಂದುಬಿಡುತ್ತಾರೆ. ಸಿನೆಮಾ ಅಂದರೆ ಅಲ್ಲಿ ಟ್ವಿಸ್ಟ್ ಆ್ಯಂಡ್ ಟರ್ನ್‍ಗಳು ಇರಲೇಬೇಕೆಂದು ಇಂತಹವರ ಕಥೆಗಳಲ್ಲೂ ಇನ್ನೊಂದನ್ನು ತುರುಕಿ, ಸಮಾಜವನ್ನು ಪರಿಶೀಲಿಸುವ, ಪ್ರಶ್ನಿಸುವ, ಆಳಕ್ಕೆ ಹೋಗುವ ಉದ್ದೇಶವನ್ನು ಸುಲಭವಾಗಿ ಮೊಟಕುಗೊಳಿಸಲಾಗುತ್ತದೆ.

ಇದೇ ಇರಾನಿನ ಸಿನೆಮಾಗಳ ಶ್ರೇಷ್ಠತೆ. ಆ ಸಿನೆಮಾಗಳು ಯಾರನ್ನೂ ಸಂತೋಷಪಡಿಸಲು ಹೊರಡುವುದಿಲ್ಲ; ಸಿನೆಮಾದ ನಾವು ಕಲಿತ ಯಾವ ಸಿದ್ಧಾಂತಗಳನ್ನು ಸಂತೋಷಪಡಿಸುವ ಪ್ರಯತ್ನ ಮಾಡುವುದಿಲ್ಲ; ವಿಷಯದ ಆಳಕ್ಕೆ ಹೋಗುವುದು, ಸರಳವಾಗಿ ಅವುಗಳನ್ನು ಚಿತ್ರಿಸುವುದೇ ಆ ಕಥೆಗಾರರ ಉದ್ದೇಶ. ದೇವನೂರ ಮಹಾದೇವರ ಕಥೆ ‘ಅಮಾಸ’ ಇಲ್ಲಿ ನನಗೆ ನೆನಪಾಗುತ್ತಿದೆ. ಯಾವುದೋ ಒಂದು ಹಳ್ಳಿಯಲ್ಲಿ ಒಂದು ದೇವಸ್ಥಾನದ ಆವರಣದಲ್ಲಿ ಬೆಳೆಯುತ್ತಿರುವ ಅನಾಥಬಾಲಕ ಈ ಅಮಾಸ. ಅಮಾಸ ಕೊನೆಯವರೆಗೂ ಅಮಾಸನಾಗಿಯೇ ಇರುತ್ತಾನೆ. ಅವನ ಕುಣಿತ ನೋಡಿ, ಅವನ ಹಾವಭಾವ ನೋಡಿ, ಅವನ ಪ್ರಸಿದ್ಧಿ ಎಲ್ಲೆಡೆ ತಲುಪಿ ‘ಓಹ್, ಇವನು ಆ ಜಮೀನದಾರನ ಮಗ, ಆ ವರ್ಷ ನೆರೆ ಬಂದಾಗ, ಹಂಗಾಗಿತ್ತು, ನೋಡಿ, ಅನಾಥನಾದ ಕಂದ’ ಎಂದು ಹೇಳಿ, ಕೊನೆಯಲ್ಲಿ ಅವನನ್ನು ಆ ಜಮೀನುದಾರರಿಗೆ ಕೊಂಡೊಯ್ಯುವಂತಹ ತಿರುವನ್ನು ಪಡೆದುಕೊಳ್ಳುವುದಿಲ್ಲ ಅಮಾಸನ ಕಥೆ. ಅ ಕಾರಣಕ್ಕಾಗೇ ಅಮಾಸ ನಮಗೆ ತಟ್ಟುವುದು. ಅಮಾಸನಂತೆ ಇರಾನಿನ ಚಿತ್ರಗಳಲ್ಲಿ ಬರುವ ಪಾತ್ರಗಳೂ ತಟ್ಟುತ್ತಲೇ ಇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಮಾಡದಿದ್ದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ: ಮಾದಿಗ ಸಮುದಾಯದ ನಿರ್ಣಯ

ಮಾ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾದಿಗ ಸಮುದಾಯಕ್ಕೆ ಸರ್ಕಾರಿ ನೇಮಕಾತಿಯಲ್ಲಿ ಶೇ.6 ಒಳಮೀಸಲಾತಿಯನ್ನು ಹಂಚಿಕೆ ಮಾಡದಿದ್ದರೆ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ...

ಗುರುಗ್ರಾಮ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಮೂವರು ಮಹಿಳಾ ಐಪಿಎಸ್ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ ಸುಪ್ರೀಂ

ಗುರುಗ್ರಾಮ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಬುಧವಾರ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ.  ಸಿಜೆಐ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ...

ಗೋವಾ | 25 ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಬಿಜೆಪಿ ಕೌನ್ಸಿಲರ್ ಮಗನ ಬಂಧನ

ಗೋವಾದ ಕುರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯ್ಕ್ ಅವರ ಮಗ ಸೋಹಮ್ ನಾಯ್ಕ್ (20) ಎಂಬಾತನನ್ನು ಸುಮಾರು 25ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಕ್ಷಿಣ ಗೋವಾ ಪೊಲೀಸರು ಬಂಧಿಸಿದ್ದಾರೆ.  ಆರೋಪಿ...

ಇರಾನ್‌ ಕದನ ವಿರಾಮಕ್ಕೆ 15 ಅಂಶಗಳ ಪ್ರಸ್ತಾಪ ಮುಂದಿಟ್ಟ ಟ್ರಂಪ್

ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭಗೊಂಡು ನಾಲ್ಕು ವಾರಗಳು ಪೂರ್ಣಗೊಳ್ಳುವಾಗ, ಈವರೆಗೆ ಸುಮಾರು 2000 ಜೀವಗಳನ್ನು ಬಲಿ ಪಡೆದ ಹಾಗೂ ಜಾಗತಿಕವಾಗಿ ಇಂಧನ ಸಮಸ್ಯೆಯನ್ನು ಹುಟ್ಟು ಹಾಕಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಇರಾನ್‌ ಮುಂದೆ...

ಗುಜರಾತ್: ತೀವ್ರ ವಿರೋಧದ ನಡುವೆಯೂ ಏಕರೂಪ ನಾಗರೀಕ ಸಂಹಿತೆ ಮಸೂದೆ ಅಂಗೀಕಾರ; ಇದು ‘ಮುಸ್ಲಿಂ ವಿರೋಧಿ’ ಎಂದ ಕಾಂಗ್ರೆಸ್

ಗುಜರಾತ್ ವಿಧಾನಸಭೆ ಮಂಗಳವಾರ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಅಂಗೀಕರಿಸಿದೆ. ಇದು ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ಸಾಮಾನ್ಯ ಕಾನೂನು ಚೌಕಟ್ಟನ್ನು ರಚಿಸುವ ಗುರಿಯನ್ನು...

ಅಜಿತ್ ಪವಾರ್ ಸಾವಿನ ಕುರಿತು ಹಲವು ಅನುಮಾನ : ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಈ ಹಿಂದೆ ಸರಣಿ ಸುದ್ದಿಗೋಷ್ಠಿಗಳನ್ನು ನಡೆಸಿದ್ದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, ಮಂಗಳವಾರ (ಮಾ.24) ಬೆಂಗಳೂರಿನ...

ಇಂಧನ ಕೊರತೆ ವದಂತಿ: ಆತಂಕದಿಂದ ಕುಕ್ಕರ್, ಹಾಲಿನ ಡಬ್ಬಿ, ನೀರಿನ ಬಕೆಟ್ ಗಳಲ್ಲಿ ಇಂಧನ ಸಂಗ್ರಹಣೆಗೆ ಮುಂದಾದ ಜನರು

ಇಂಧನ ಕೊರತೆಯ ವದಂತಿಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಜನರು ಕುಕ್ಕರ್, ಅಡುಗೆ ಪಾತ್ರೆ, ಹಾಲಿನ ಡಬ್ಬಿಗಳು, ನೀರಿನ ಟ್ಯಾಂಕರ್, ನೀರಿನ ಬಕೆಟ್ ಮತ್ತು ಬ್ಯಾರೆಲ್‌ಗಳಂತಹ ಅಡುಗೆ ಸಲಕರಣೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು...

ಪಂಜಾಬ್: ಮಹಿಳೆಗೆ ಲೈಂಗಿಕ ಶೋಷಣೆ, ಬೆದರಿಕೆ ಆರೋಪ; ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಬಂಧನ 

ಕಳೆದ ಸೆಪ್ಟೆಂಬರ್‌ನಿಂದ ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಅವರನ್ನು ಪಂಜಾಬ್ ಪೊಲೀಸರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸನೂರ್‌ನಿಂದ ಮೊದಲ ಬಾರಿಗೆ ಶಾಸಕರಾಗಿರುವ ಪಠಣಮಜ್ರಾ...

ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ : ಕಾಂಗ್ರೆಸ್ ಆರೋಪ

ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಿರುವನಂತಪುರಂ ಜಿಲ್ಲೆಯ ನೇಮಮ್...

2026ರ ಮೊದಲ 74 ದಿನಗಳಲ್ಲಿ 170 ಕಸ್ಟಡಿ ಸಾವುಗಳು ವರದಿ; ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ 

2026 ರ ಮೊದಲ 74 ದಿನಗಳಲ್ಲಿ (ಜನವರಿ 1 ರಿಂದ ಮಾರ್ಚ್ 15 ರವರೆಗೆ) ಭಾರತದಾದ್ಯಂತ ಒಟ್ಟು 170 ಕಸ್ಟಡಿ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ. ಗೃಹ...