Homeಮುಖಪುಟಮಿಜೋರಾಂನಲ್ಲಿ ಬುಡಕಟ್ಟು ಜನಾಂಗದಿಂದ ಪ್ರತಿಭಟನೆ: ಮೋದಿ, ಬಿರೇನ್ ಸಿಂಗ್ ಪ್ರತಿಕೃತಿ ಸುಟ್ಟು ಆಕ್ರೋಶ

ಮಿಜೋರಾಂನಲ್ಲಿ ಬುಡಕಟ್ಟು ಜನಾಂಗದಿಂದ ಪ್ರತಿಭಟನೆ: ಮೋದಿ, ಬಿರೇನ್ ಸಿಂಗ್ ಪ್ರತಿಕೃತಿ ಸುಟ್ಟು ಆಕ್ರೋಶ

- Advertisement -
- Advertisement -

ಮಿಜೋರಾಂನಲ್ಲಿ ಬುಧವಾರ ಐಜ್ವಾಲ್‌ನಲ್ಲಿ ಝೋ ರಿಯೂನಿಫಿಕೇಶನ್ ಆರ್ಗನೈಸೇಶನ್ (ZORO) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಿದ್ದಾರೆ.

ಮಣಿಪುರದಲ್ಲಿ ಝೋ ಬುಡಕಟ್ಟು ಜನಾಂಗದವರ ಒಗ್ಗಟ್ಟು ಪ್ರದರ್ಶಿಸಲು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮೋದಿ ಹಾಗೂ ಬಿರೇನ್ ಸಿಂಗ್ ಪ್ರತಿಕೃತಿಗೆ ಬೆಂಕಿ ಹಚ್ಚಲಾಯಿತು.

ಸುಮಾರು 300 ಜನರು ಮಣಿಪುರ ಸಿಎಂ ಬಿರೇನ್ ಸಿಂಗ್, ಪ್ರಧಾನಿ ಮೋದಿ ಮತ್ತು ಡೇವಿಡ್ ಥೀಕ್ ಕೊಲೆಗಾರನ ಪ್ರತಿಕೃತಿಯನ್ನು ಸುಟ್ಟಿದ್ದಾರೆ. ನೆರೆಯ ರಾಜ್ಯ ಮಣಿಪುರದಲ್ಲಿ ತಮ್ಮ ಸಹವರ್ತಿ ಬುಡಕಟ್ಟು ಜನಾಂಗದವರಿಗೆ ಬೆಂಬಲ ಸೂಚಿಸಲು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜನರ ಸಾಮೂಹಿಕ ಆಕ್ರೋಶದ ಸಂಕೇತವಾಗಿ ರಾಜ್ಯ ನಾಯಕರ ಪ್ರತಿಕೃತಿಗಳಿಗೂ ಬೆಂಕಿ ಇಡಲಾಯಿತು.

ZORO ಎನ್ನುವ ಜನಪ್ರಿಯ ಸಂಸ್ಥೆಯು ಈ ಹಿಂದೆ ಮೇ ಕೊನೆಯ ವಾರದಲ್ಲಿ ರ್ಯಾಲಿಯನ್ನು ಆಯೋಜಿಸಿತ್ತು. ಈ ವೇಳೆ ಅವರು ಜನಾಂಗೀಯ ಝೋ ಬುಡಕಟ್ಟುಗಳನ್ನು ಶಾಂತಿಯುತ ವಿಧಾನಗಳ ಮೂಲಕ ಒಂದು ಆಡಳಿತಾತ್ಮಕ ಸೆಟಪ್ ಅಡಿಯಲ್ಲಿ ತರಲು ಝೋ ಬುಡಕಟ್ಟುಗಳ ಮರು-ಏಕೀಕರಣಕ್ಕಾಗಿ ಕ್ರಮಗಳನ್ನು ತಗೆದುಕೊಳ್ಳುವ ಹಲವಾರು ನಿರ್ಣಯಗಳನ್ನು ಅಂಗೀಕರಿಸಿದರು.

ಬುಧವಾರ ರ್ಯಾಲಿಯಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಒಂದು ನಿರ್ಣಯವೆಂದರೆ, ”ಮಣಿಪುರದಲ್ಲಿ ತಮ್ಮ ಜೀವ, ಆಸ್ತಿ, ಜೀವನೋಪಾಯಗಳನ್ನು ಕಳೆದುಕೊಂಡಿರುವ ತಮ್ಮ ಸಹೋದರ ಸಹೋದರಿಯರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವುದು, ಅವರ ಉಳಿವಿಗಾಗಿ ಹೋರಾಟ ಮಾಡುವುದು ಮತ್ತು ಪ್ರತ್ಯೇಕ ಆಡಳಿತದ ಬೇಡಿಕೆ ಇರಿಸುವುದಾಗಿದೆ.

ಎರಡನೆಯದು, ”ಮಣಿಪುರದಲ್ಲಿ ಝೋ ಜನಾಂಗೀಯ ಜನರಿಗೆ ಪ್ರತ್ಯೇಕ ಆಡಳಿತವನ್ನು ನೀಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡುವುದು. ಅದರ ಮೂರನೇ ನಿರ್ಣಯವು ಪ್ರಪಂಚದಾದ್ಯಂತ ಝೋ ಜನಾಂಗೀಯ ಜನರ ಏಕತೆಯ ಕಡೆಗೆ ಕೆಲಸ ಮಾಡುವುದು.”

ರ್ಯಾಲಿಯಲ್ಲಿ, ZORO ಅಧ್ಯಕ್ಷ ಆರ್. ಸಾಂಗ್ಕಾವಿಯಾ ಅವರು, ”ಕುಕಿ ಬುಡಕಟ್ಟು ಜನಾಂಗದವರನ್ನು ಮಣಿಪುರದ ರಾಜ್ಯ ನಾಯಕರು ನಿರ್ಲಕ್ಷಿಸಿರುವ ವಿವಿಧ ವಿಧಾನಗಳನ್ನು ಎತ್ತಿ ತೋರಿಸಿದರು. ಈ ಹಿಂಸಾಚಾರ ನಡೆಯುತ್ತಿದ್ದರೂ ಕೇಂದ್ರ ಸರ್ಕಾರದ ಮೌನವಾಗಿರುವುದನ್ನು ಪ್ರಶ್ನಿಸಿದರು. ”ಭಾರತವು ಝೋ ಜನರನ್ನು ವಿದೇಶಿಯರಂತೆ ಪರಿಗಣಿಸುತ್ತದೆಯೇ ಅದು ನಮ್ಮನ್ನು ಈ ಮಟ್ಟಿಗೆ ನಿರ್ಲಕ್ಷಿಸಿದೆಯೇ?” ಎಂದು ಅಮಸಧಾನ ಹೊರಹಾಕಿದರು.

ಝೋ ರಿಯೂನಿಫಿಕೇಶನ್ ಆರ್ಗನೈಸೇಶನ್ ರೆಫ್ಯೂಜಿಯ ಕಾರ್ಯದರ್ಶಿ ರಿನಿ ರಾಲ್ಟೆ ಕೂಡ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದಾರೆ. ”ಕೇಂದ್ರ ಸರ್ಕಾರದ ಮೌನಕ್ಕಾಗಿ ನಮ್ಮ ಕೋಪವನ್ನು ವ್ಯಕ್ತಪಡಿಸಲು ನಾವು ಒಟ್ಟಾಗಿ ಬರುತ್ತಿದ್ದೇವೆ” ಎಂದು ತಿಳಿಸಿದರು.

”ಪ್ರಧಾನಿ ಈ ಸಂದರ್ಭದಲ್ಲಿ ಮಾತನಾಡಬೇಕಿತ್ತು, ಅವರ ಒಂದು ಸಮಾಧಾನದ ಮಾತು ಶಾಂತಿಯನ್ನು ತರಬಹುದು, ಅವರು ಇಲ್ಲಿಯವರೆಗೆ ಏಕೆ ಮಾತನಾಡುತ್ತಿಲ್ಲ? ಅವರಿಗೆ ಧ್ವನಿ ಇಲ್ಲ, ಬಾಯಿ ಇಲ್ಲ, ಜವಾಬ್ದಾರಿಯನ್ನು ನಿರ್ವಹಿಸಲು ಬೆನ್ನುಮೂಳೆ ಇಲ್ಲ, ಆದ್ದರಿಂದ ನಾವು ಇಂದು ಐಜ್ವಾಲ್‌ನಲ್ಲಿ ZORO ಆಗಿ ಮಣಿಪುರದ ನಮ್ಮ ಸಹೋದರ ಸಹೋದರಿಯರೊಂದಿಗೆ ಒಗ್ಗಟ್ಟಿನಿಂದ ಒಗ್ಗೂಡುತ್ತಿದ್ದೇವೆ” ಎಂದರು.

ಈ ಬುಡಕಟ್ಟು ಜನರು ಪ್ರತ್ಯೇಕ ಆಡಳಿತವನ್ನು ಹೊಂದಲು ತಮ್ಮ ಹಕ್ಕಿಗಾಗಿ ಮಾತ್ರ ಒತ್ತಾಯಿಸುತ್ತಿದ್ದಾರೆ ಎಂದು ರಾಲ್ಟರ್ ಹೇಳಿದರು. ಮೈತಿ ಸಮುದಾಯವು ಇನ್ನು ಮುಂದೆ ಆದಿವಾಸಿಗಳಿಂದಿಗೆ ಹೊಂದಾಣಿಕೆಯಿಂದ ಇರುವುದಿಲ್ಲ, ಹಾಗಿದ್ದಾರೆ ಒಟ್ಟಿಗೆ ಇರುವುದರಲ್ಲಿ ಅರ್ಥವೇನಿದೆ? ಪ್ರತ್ಯೇಕತೆ ಅವರಿಗೆ ಇರುವ ಏಕೈಕ ಆಯ್ಕೆಯಾಗಿದೆ” ಎಂದು ರಾಲ್ಟೆ ಹೇಳಿದರು.

ಮಣಿಪುರ ಹಿಂಸಾಚಾರದ ಬಗ್ಗೆ ಮೌನವಾಗಿರುವುದನ್ನು ಪ್ರದರ್ಶಿಸಲು ಪ್ರಧಾನ ಮಂತ್ರಿಯ ಪ್ರತಿಕೃತಿಯಲ್ಲಿ ಅವರ ತುಟಿಗಳ ಮೇಲೆ ಟೇಪ್‌ ಅಂಟಿಸಿ ಗುರುತಿಸಲಾಗಿತ್ತು. ಏಕೆಂದರೆ ಇದು ಪ್ರಧಾನಿಯ ಮೌನದ ಸಂಕೇತವಾಗಿತ್ತು.

ಇನ್ನು ಮಣಿಪುರ ಮುಖ್ಯಮಂತ್ರಿ ಸಿಂಗ್ ಪ್ರತಿಕೃತಿಗೆ “ಮಾಫಿಯಾ ಗಾಡ್‌ಫಾದರ್” ಎಂಬ ಬಿರುದನ್ನು ನೀಡಲಾಯಿತು. ಸಿಂಗ್ ಅವರ ಪ್ರತಿಕೃತಿ ದಹನವು “ಅವರು ಸಾಯಲು ಅರ್ಹರು” ಎಂಬ ಪ್ರದರ್ಶನವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರತಿಕೃತಿಗೆ ಬೆಂಕಿ ಇಡುತ್ತಿದಂತೆಯೇ ಮೋದಿ ಹಾಗೂ ಸಿಂಗ್ ವಿರುದ್ಧ ಮಣಿಪುರಿ ಭಾಷೆಯಲ್ಲಿ ಶಾಪಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ZORO ಹಂಚಿಕೊಂಡ ಮಾಹಿತಿಯ ಪ್ರಕಾರ, ಮಣಿಪುರದಲ್ಲಿ ಸಾವಿನ ಸಂಖ್ಯೆ 124ಕ್ಕಿಂತ ಹೆಚ್ಚಾಗಿದೆ. 60 ಕಾಣೆಯಾಗಿದ್ದಾರೆ, ಬುಡಕಟ್ಟು ಸಂಸ್ಥೆಯ ಪ್ರಕಾರ 290 ಹಳ್ಳಿಗಳನ್ನು ಸುಡಲಾಗಿದೆ. 357 ಚರ್ಚ್‌ಗಳು ಮತ್ತು ಕ್ವಾರ್ಟರ್‌ಗಳು ಸುಟ್ಟುಹೋಗಿವೆ ಮತ್ತು ಸುಮಾರು 41,425 ಜನರು ಸ್ಥಳಾಂತರಗೊಂಡಿದ್ದಾರೆ.ಇ

ಇದನ್ನೂ ಓದಿ: ಇನ್ನೂ ಸುಡುತ್ತಿರುವ ಮಣಿಪುರ; ಸಣ್ಣಸಣ್ಣ ಸಮುದಾಯಗಳ ಬಗ್ಗೆ ಪ್ರಭುತ್ವದ ನಿರ್ಲಜ್ಜ ನಿರ್ಲಕ್ಷ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...