- Advertisement -
- Advertisement -
ಸರ್ ಹದಿನೈದು ದಿನವಾದರೂ ನೀವು ಕಸ್ಟಡಿಯಲ್ಲಿರುವುದರ ಕುರಿತು ಏನಾದರೂ ಹೇಳುತ್ತೀರಾ ಎಂಬ ಪತ್ರಕರ್ತನ ಪ್ರಶ್ನೆಗೆ ಪಿ ಚಿದಂಬರಂ 5% ಎಂದು ಕೊಟ್ಟ ಉತ್ತರ ಈಗ ಎಲ್ಲಾ ಕಡೆ ವೈರಲ್ ಆಗಿದೆ.
ಏನಿದು 5% ಎಂದು ಪತ್ರಕರ್ತ ಮರುಪ್ರಶ್ನೆ ಹಾಕುತ್ತಾನೆ. ಆಗ ಚಿದಂಬರಂ ಮತ್ತೆ 5% ಅಂದ್ರೆ ಗೊತ್ತಿಲ್ವ, ಮರೆತೋಯ್ತ ಎಂದು ನಗುತ್ತಾ ಹೇಳುತ್ತಾರೆ. ಅಷ್ಟರಲ್ಲಿ ಪತ್ರಕರ್ತನಿಗೂ ಅರಿವಾಡಿ ಜಿಡಿಪಿನಾ? ಎನ್ನುತ್ತಾರೆ.. ಎಲ್ಲರೂ ನಗುತ್ತಾರೆ..
ನರೇಂದ್ರ ಮೋದಿಯವರ ಆಳ್ವಿಕೆಯಲ್ಲಿ ದೇಶದ ಅರ್ಥವ್ಯವಸ್ಥೆ ಕುಸಿಯುತ್ತಿದ್ದು, ಜಿಡಿಪಿ ಪಾತಾಳಕ್ಕೆ ಬಿದ್ದಿದೆ. ಆರು ವರ್ಷದಲ್ಲೇ ಕನಿಷ್ಟ ಶೇ.5%ಕ್ಕೆ ತಲುಪಿದೆ. ಹಾಗಾಗಿ ಅದನ್ನು ಮರೆಮಾಚಲು ನನ್ನನ್ನು ಕಸ್ಟಡಿಯಲ್ಲಿಟ್ಟಿದ್ದಾರೆ ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ತಮ್ಮ ಉತ್ತರ ಹೇಳಿರುವುದನ್ನು ಬಹಳಷ್ಟು ಜನ ಹಂಚಿಕೊಂಡಿದ್ದಾರೆ.