- Advertisement -
- Advertisement -
ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದೆ.
ಜುಲೈ 10 ರಂದು ಮತದಾನ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ.

ಚುನಾವಣಾ ಆಯೋಗದ ಅಧಿಸೂಚನೆಯ ಪ್ರಕಾರ, ನಾಮಪತ್ರ ಸಲ್ಲಿಸಲು ಜೂನ್ 21 ಕೊನೆಯ ದಿನಾಂಕವಾಗಿದ್ದು, ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ.
ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳ ಮಾಹಿತಿ ಇಲ್ಲಿದೆ :
ಬಿಹಾರದ ರುಪೌಲಿ, ಪಶ್ಚಿಮ ಬಂಗಾಳದ ರಾಣಾಘಾಟ್ ದಕ್ಷಿಣ, ಬಾಗ್ಡಾ, ಮಾಣಿಕ್ತಾಲಾ, ರಾಯ್‌ಗಂಜ್, ತಮಿಳುನಾಡಿನ ವಿಕ್ರಾವಂಡಿ, ಮಧ್ಯಪ್ರದೇಶದ ಅಮರ್‌ವಾರ, ಉತ್ತರಾಖಂಡದ ಬದ್ರಿನಾಥ್, ಮಂಗಳೂರ್, ಪಂಜಾಬ್‌ನ ಜಲಂದರ್ ವೆಸ್ಟ್, ದೆಹ್ರಾ, ಹಿಮಾಚಲ ಪ್ರದೇಶದ ಹಮೀರ್‌ಪುರ್, ನಲಗಢ
ಇದನ್ನೂ ಓದಿ : ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ: ಕ್ರಮಕ್ಕೆ ಕಾಂಗ್ರೆಸ್ ಆಗ್ರಹ


