Homeಮುಖಪುಟಮಹಾರಾಷ್ಟ್ರ ಆಕರ್ಷಣೆಯ ಕೇಂದ್ರ ಬಿಂದುವಾದ ಠಾಕ್ರೆ ಕುಡಿ: ಸಿಎಂ ಆಗ್ತಾರಾ ಆದಿತ್ಯ ಠಾಕ್ರೆ..?

ಮಹಾರಾಷ್ಟ್ರ ಆಕರ್ಷಣೆಯ ಕೇಂದ್ರ ಬಿಂದುವಾದ ಠಾಕ್ರೆ ಕುಡಿ: ಸಿಎಂ ಆಗ್ತಾರಾ ಆದಿತ್ಯ ಠಾಕ್ರೆ..?

- Advertisement -
- Advertisement -

ಮಹಾರಾಷ್ಟ್ರದಲ್ಲಿ ಈಗ 29 ವರ್ಷದ ಆದಿತ್ಯ ಠಾಕ್ರೆ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಮೊಮ್ಮಗ. ಇದೇ ಮೊದಲ ಬಾರಿಗೆ ಬಾಳಾ ಠಾಕ್ರೆ ಮನೆತನದ ಕುಡಿ ಆದಿತ್ಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ಡಂಗುರ ಬಾರಿಸಿದ್ದಾರೆ. ಮುಂಬೈನ ವರ್ಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಆದಿತ್ಯ ಠಾಕ್ರೆಯ ಗೆಲುವು ಶಿವಸೇನೆಯನ್ನು ಉತ್ತುಂಗಕ್ಕೇರಿಸಿದೆ. ಮಹಾರಾಷ್ಟ್ರದಲ್ಲಿ ಈಗ ಕೇಳಿ ಬರುತ್ತಿರುವ ಮಾತೆಂದರೆ ಆದಿತ್ಯ ಠಾಕ್ರೆ ಸಿಎಂ ಆಗ್ತಾರಾ..? ಶಿವಸೇನೆಗೆ ಸಿಎಂ ಸ್ಥಾನ ದಕ್ಕುತ್ತಾ ಎಂಬುದೇ ಬಿಗ್‍ ಪ್ರಶ್ನೆ.

ವರ್ಲಿ ಕ್ಷೇತ್ರದಲ್ಲಿ ಎನ್‍ಸಿಪಿ ಅಭ್ಯರ್ಥಿ ಸುರೇಶ್‍ ಮಾನೆ ಅವರನ್ನು 67,427 ಮತಗಳ ಅಂತರದಲ್ಲಿ ಸೋಲಿಸಿ, ಆದಿತ್ಯ ಠಾಕ್ರೆ ವಿಜಯಿಯಾದರು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಶಿವಸೇನೆ, ಸಮಾನ ಅಧಿಕಾರ ಮತ್ತು ಸಮಪಾಲು ಎಂಬ ಷರತ್ತು ವಿಧಿಸಿ, ಘಟಬಂಧನ್ ಮಾಡಿಕೊಂಡು, ಕ್ಷೇತ್ರಗಳನ್ನು ಹಂಚಿಕೊಂಡಿದ್ದವು. ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳನ್ನು ಗೆದ್ದುಕೊಂಡಿವೆ. ಈಗ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿ ಸಿಎಂ ಆಗುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. ಠಾಕ್ರೆ ವಂಶದ ಕುಡಿ ಸಿಎಂ ಆಗ್ತಾರಾ, ಇಲ್ಲವೇ ಈ ಬಾರಿಯೂ ಬಿಜೆಪಿಗೆ ಸಿಎಂ ಸ್ಥಾನವನ್ನು ಶಿವಸೇನೆ ಬಿಟ್ಟುಕೊಟ್ಟು ಉದಾರತ್ವ ಮೆರೆಯುತ್ತಾ ಎಂಬುದು ಕುತೂಹಲ ಕೆರಳಿಸಿದೆ.

ಈ ಮಧ್ಯೆ ಏನೇ ಆಗಲಿ 50:50 ಒಪ್ಪಂದ ಮಾಡಿಕೊಂಡಿದ್ದೇವೆ. ಸಮಾನ ಅಧಿಕಾರ ಮತ್ತು ಸಮಪಾಲು ನಿಯಮದ ಪ್ರಕಾರ ಬಿಜೆಪಿ ನಡೆದುಕೊಳ್ಳಲಿ ಎಂದು ಶಿವಸೇನೆ ಬಿಜೆಪಿಯನ್ನು ಎಚ್ಚರಿಸಿದೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಿವಸೇನೆ ಅದಕ್ಕಾಗೇ ಆದಿತ್ಯ ಠಾಕ್ರೆಯನ್ನು ಸ್ಪರ್ಧೆಗಿಳಿಸಿದೆ ಎಂಬ ಚರ್ಚೆ ಸಾಮಾಜಿಕ ವಲಯದಲ್ಲಿ ನಡೆಯುತ್ತಿದೆ. ಈ ಬಗ್ಗೆ ಠಾಕ್ರೆ ಪ್ರತಿಕ್ರಿಯಿಸಿದ್ದು, ಸಿಎಂ ಸ್ಥಾನ ಮತ್ತು ಪಕ್ಷದ ಕೆಲ ವಿಷಯಗಳ ಬಗ್ಗೆ ಪಕ್ಷದ ಮುಖ್ಯಸ್ಥರ ತೀರ್ಮಾನವೇ ಅಂತಿಮ. ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.

ಆದಿತ್ಯ ಠಾಕ್ರೆ 20 ವರ್ಷದವರಿದ್ದಾಗಲೇ ಯುವ ಸೇನಾ ಘಟಕದ ನಾಯಕರಾಗಿದ್ದರು. ವಿದ್ಯಾರ್ಥಿ ವಿಂಗ್‍ನ ನಾಯಕನಾದ ಮೇಲೆ ಬುಕರ್ ಪ್ರಶಸ್ತಿ ವಿಜೇತ ರೋಹಿಂಟನ್ ಮಿಸ್ಟ್ರೀ ಅವರ ಪುಸ್ತಕವನ್ನು ಹರಿದು ಹಾಕಿದ್ದರು. ಆದಿತ್ಯ ಠಾಕ್ರೆ ಹಿಂದೂತ್ವದ ಗುರುತಾಗಿದ್ದಾರೆ. ಹಿಂದೂತ್ವದ ಅಜೆಂಡಾ ಮತ್ತು ಹಿಂದೂಗಳ ಪ್ರತಿನಿಧಿಯಂತೆ ಆದಿತ್ಯ ಕೆಲಸ ಮಾಡಲಿದ್ದಾರೆ ಎಂಬುದು ಪಕ್ಷದಲ್ಲಿ ಕೇಳಿ ಬರುತ್ತಿರುವ ಮಾತು.

ವರ್ಲಿ ಕ್ಷೇತ್ರದ ಅಭಿವೃದ್ಧಿ, ಎಲ್ಲಾ ಪಕ್ಷಗಳ ಜತೆ ಸಾಮರಸ್ಯದಿಂದ ಕೆಲಸ ಮಾಡುತ್ತೇನೆ. ಎಲ್ಲಾ ಸಂಸ್ಥೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವುದು ಮತ್ತು ಮಹಾರಾಷ್ಟ್ರದ ಬೆಳವಣಿಗೆಗಾಗಿ ದುಡಿಯುವುದಾಗಿ ಹೇಳಿದರು. ಅದೇನೇ ಇದ್ದರೂ, ಬಿಜೆಪಿ ಜತೆಗೆ ಮೈತ್ರಿ ಸೂತ್ರ ಅನುಸರಿಸಿರುವ ಶಿವಸೇನೆ ಸಿಎಂ ಹುದ್ದೆ ಪಡೆದು, ಶತಾಯಗತಾಯ ಅಧಿಕಾರಕ್ಕೇರುವ ತವಕದಲ್ಲಿದೆ. ಇತ್ತ ಬಿಜೆಪಿಯ ದೇವೇಂದ್ರ ಫಡ್ನವೀಸ್ ಕೂಡ ಸಿಎಂ ರೇಸ್‍ ಲ್ಲಿದ್ದು, ನಾನೇ ಸಿಎಂ ಎನ್ನು ವಿಶ್ವಾಸದಲ್ಲಿದ್ದಾರೆ. ಒಟ್ನಲ್ಲಿ ಸಿಎಂ ಗಾದಿಯ ಕಚ್ಚಾಟದ ಕೆಸರೆರಚಾಟ ಮೈತ್ರಿ ಪಕ್ಷಗಳ ಮೇಲೆ ಯಾವ ಪರಿಣಾಮ ಬೀರಲಿದೆಯೋ..?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಹಿಳೆಯನ್ನು ಗರ್ಭಧಾರಣೆ ಪೂರ್ಣಗೊಳಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ’: ಅಪ್ರಾಪ್ತೆಗೆ 30 ವಾರಗಳ ಗರ್ಭಧಾರಣೆ ಅಂತ್ಯಗೊಳಿಸಲು ಸುಪ್ರೀಂ ಅನುಮತಿ

ನವದೆಹಲಿ: 17 ವರ್ಷದ ಬಾಲಕಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ನ್ಯಾಯಾಲಯಗಳು ಮಹಿಳೆಯನ್ನು, ಅಪ್ರಾಪ್ತ ವಯಸ್ಕಳನ್ನು ಹೊರತುಪಡಿಸಿ, ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದೆ. ನ್ಯಾಯಮೂರ್ತಿಗಳಾದ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 30 ಸಾವು, 160 ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್: ಶುಕ್ರವಾರ ಇಸ್ಲಾಮಾಬಾದ್‌ನ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ವೇಳೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿ, 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಪಾಕಿಸ್ತಾನ ರಾಜಧಾನಿಯ ಶೆಹಜಾದ್ ಟೌನ್ ಪ್ರದೇಶದ...

ನಾಳೆ ದೊರೈರಾಜ್‌ ಅವರ ‘ನಮ್ಮ ಹಟ್ಟಿ’ ಆತ್ಮಕಥೆ ಬಿಡುಗಡೆ

ದಲಿತ ಚಳವಳಿಯ ಹಿರಿಯ ಮುಖಂಡರಾದ ತುಮಕೂರಿನ ಕೆ.ದೊರೈರಾಜ್‌ ಅವರ 'ನಮ್ಮಹಟ್ಟಿ' ಆತ್ಮಕಥೆ ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ. ಸರ್ಕಾರಿ ಅಧಿಕಾರಿಯಾಗಿದ್ದ ದೊರೈರಾಜ್‌ ಅವರು, ತಮ್ಮ ವಿದ್ಯಾರ್ಥಿ ಜೀವನದಿಂದಲೇ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡವರು....

‘ತಿರುಪತಿ ಲಡ್ಡುಗಳಲ್ಲಿ ರಾಸಾಯನಿಕಗಳಿಂದ ಮಾಡಿದ ತುಪ್ಪ ಬಳಸಲಾಗುತ್ತಿತ್ತು’: ವೈಎಸ್ಆರ್ಸಿಪಿ ಸರ್ಕಾರದ ವಿರುದ್ಧ ಆಂಧ್ರ ಸಿಎಂ ಆರೋಪ

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತುಪ್ಪ ಬಳಸಿ ತಯಾರಿಸಲಾಗುತ್ತಿತ್ತು, ಅದರಲ್ಲಿ ಬಾತ್ ರೂಂ(ಸ್ನಾನಗೃಹಗಳನ್ನು) ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬೆರೆಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶುಕ್ರವಾರ ಆರೋಪಿಸಿದ್ದಾರೆ. ಕರ್ನೂಲು...

ಜಲಂಧರ್‌ನ ಗುರುದ್ವಾರದ ಹೊರಗೆ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಪಂಜಾಬ್‌ನ ಜಲಂಧರ್‌ನಲ್ಲಿ ಶುಕ್ರವಾರ ಹಾಡಹಗಲೇ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಮಾಡೆಲ್ ಟೌನ್ ಪ್ರದೇಶದ ಗುರುದ್ವಾರದ ಬಳಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.  ಈ ಘಟನೆ ಬೆಳಿಗ್ಗೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿದ್ದ ಅವರನ್ನು...

ದೆಹಲಿ: ಜಲ ಮಂಡಳಿ ತೋಡಿದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು; ತನಿಖೆಗೆ ಆದೇಶಿಸಿದ ಸರ್ಕಾರ 

ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ದೆಹಲಿ ಜಲ ಮಂಡಳಿ (ಡಿಜೆಬಿ) ನಿರ್ಮಾಣ ಕಾರ್ಯಕ್ಕಾಗಿ ಅಗೆದ ಹೊಂಡಕ್ಕೆ ಬೈಕ್ ಬಿದ್ದು ಸವಾರನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ದೆಹಲಿ...

2025ರ ಬಿಹಾರ ವಿಧಾನಸಭಾ ಚುನಾವಣೆ ಪ್ರಶ್ನಿಸಿ ಜನ ಸುರಾಜ್ ಪಕ್ಷದಿಂದ ಅರ್ಜಿ: ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್ 

2025 ರ ಬಿಹಾರ ವಿಧಾನಸಭಾ ಚುನಾವಣೆಯ ನಡವಳಿಕೆ ಮತ್ತು ಫಲಿತಾಂಶವನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ರಾಜಕೀಯ...

ಗುಜರಾತ್‌| ನರ್ಸಿಂಗ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ; ಪ್ರಿನ್ಸಿಪಲ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಗುಜರಾತ್‌ನ ಖೇಡಾ ಜಿಲ್ಲೆಯ ನರ್ಸಿಂಗ್ ಕಾಲೇಜಿನ 19 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, "ಪುರಾವೆಗಳಿಲ್ಲದೆ ಮೇಡಂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಚಿತ್ರಹಿಂಸೆ ಉಲ್ಲೇಖಿಸುವ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾದ...

1.50 ಕೋಟಿ ರೂ. ಐಟಿ ದಂಡ ಪ್ರಶ್ನಿಸಿ ಟಿವಿಕೆ ಮುಖ್ಯಸ್ಥ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ 

ಚೆನ್ನೈ: 2015–16ರ ಮೌಲ್ಯಮಾಪನ ವರ್ಷದಲ್ಲಿ ಆದಾಯ ಬಹಿರಂಗಪಡಿಸದಿದ್ದಕ್ಕಾಗಿ 1.50 ಕೋಟಿ ರೂ. ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಪ್ರಶ್ನಿಸಿ ನಟ-ರಾಜಕಾರಣಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆದಾಯ...

ಮೇಘಾಲಯ ಗಣಿ ಸ್ಫೋಟ: ಸಾವನ್ನಪ್ಪಿದ ಮೂವರು ಅಸ್ಸಾಂ ಮೂಲದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಗುವಾಹಟಿ: ಮೇಘಾಲಯದ ಪಕ್ಕದ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಸಾವನ್ನಪ್ಪಿದ ಅಸ್ಸಾಂ ರಾಜ್ಯದ ಮೂವರು ಕಾರ್ಮಿಕರ ಕುಟುಂಬಗಳಿಗೆ  ಸರ್ಕಾರ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ, ಸಂತ್ರಸ್ತರು...